ಸರ್ಕಾರಿ ಬಸ್‌ಗಳಿಗೆ ಡೀಸೆಲ್‌, ನೌಕರರ ಸಂಬಳ, ಪಿಂಚಣಿ; 4,150.38 ಕೋಟಿ ರು. ಬಾಕಿ ಉಳಿಸಿಕೊಂಡ ಸರ್ಕಾರ

ಬೆಂಗಳೂರು; ಕರ್ನಾಟಕ ರಾಜ್ಯ ಸಾರಿಗೆಯ ನಾಲ್ಕು ನಿಗಮಗಳಲ್ಲಿ ಡೀಸೆಲ್‌, ನೌಕರರ ಸಂಬಳ ಸೇರಿದಂತೆ ಇನ್ನಿತರೆ ಬಾಬ್ತುಗಳಲ್ಲಿ  2023ರ ಅಕ್ಟೋಬರ್‌ ಅಂತ್ಯಕ್ಕೆ 4,150.38 ಕೋಟಿ ರು. ಬಾಕಿ ಇರುವುದು ಇದೀಗ ಬಹಿರಂಗವಾಗಿದೆ.

 

ಶಕ್ತಿ ಯೋಜನೆ ಕುರಿತು ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಹಲವು ಶಾಸಕರು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪಾವತಿಸಲು ಬಾಕಿ ಇರುವ ಹಣಕಾಸಿನ ವಿವರಗಳನ್ನು ಮುಂದಿಟ್ಟಿದ್ದಾರೆ.

 

ಅಲ್ಲದೇ ಶಕ್ತಿ ಯೋಜನೆಗೆ ಸಾರಿಗೆ ಇಲಾಖೆಗೆ ಹಣ ಪಾವತಿಸಲು ಸರ್ಕಾರ ತನ್ನ ಹಂತದಲ್ಲಿ ಬಾಕಿ ಇರಿಸಿಕೊಂಡಿದೆ. ಜೂನ್‌ 2023ರಿಂದ ಮಾರ್ಚ್‌ 2024ರವರೆಗೆ ಅಂದಾಜಿಸಿರುವ ವಾಸ್ತವಿಕ ವೆಚ್ಚ 4,377.96 ಕೋಟಿ ರು.  ಎಂದು ಅಂದಾಜಿಸಿತ್ತು.  2023-24ನೇ ಸಾಲಿನ ಆಯವ್ಯಯದಲ್ಲಿ ಒದಗಿಸಿರುವ 2,800.00 ಕೋಟಿ ರು.ಗಳ ಅನುದಾನ ಹೊರತುಪಡಿಸಿ 1,577.96 ಕೋಟಿ ರು.ಗಳನ್ನು ಹೆಚ್ಚುವರಿಯಾಗಿ ಒದಗಿಸಬೇಕು ಎಂಬ ಪ್ರಸ್ತಾವನೆಯು ಹಣಕಾಸು ಇಲಾಖೆಯ ಪರಿಶೀಲನೆಯಲ್ಲಿದೆ ಎಂಬ ಸಂಗತಿಯನ್ನೂ ಉತ್ತರದಲ್ಲಿ ಉಲ್ಲೇಖಿಸಿದ್ದಾರೆ.

 

ಕೆಎಸ್‌ಆರ್‍‌ಟಿಸಿಯಲ್ಲಿ ಡೀಸೆಲ್‌, ಸಂಬಳ ಮತ್ತು ಇತ್ಯಾದಿಗಳಿಗೆ ಅಕ್ಟೋಬರ್‍‌ 2023ರ ಅಂತ್ಯಕ್ಕೆ ಭವಿಷ್ಯ ನಿಧಿ 807.99 ಕೋಟಿ ರು., ನಿವೃತ್ತ ನೌಕರರ ಬಾಕಿ 85.55 ಕೋಟಿ ರು., ಸಿಬ್ಬಂದಿಗಳ ಬಾಕಿ ಪಾವತಿ 83.01 ಕೋಟಿ ರು., ಸರಬರಾಜುದಾರರ ಬಿಲ್‌ ಪಾವತಿ 24.40 ಕೋಟಿ ರು., ಡೀಸೆಲ್‌ ಬಿಲ್‌ ಪಾವತಿ 164.57 ಕೋಟಿ ರು., ಎಂವಿಸಿ ಕ್ಲೈಮ್ಸ್‌ 48.60 ಕೋಟಿ, ಇತರೆ ಬಿಲ್‌ಗಳು 51.49 ಕೋಟಿ ರು ಸೇರಿ ಒಟ್ಟಾರೆ 1,265.61 ಕೋಟಿ ರು. ಬಾಕಿ ಇದೆ.

 

ಬಿಎಂಟಿಸಿಯಲ್ಲಿ ಡೀಸೆಲ್‌ 101.34 ಕೋಟಿ ರು., ಹಾಲಿ, ನಿವೃತ್ತ ನೌಕರರ ಬಾಕಿ 210.06 ಕೋಟಿ ರು., ಇತ್ಯಾದಿ 896.70 ಕೋಟಿ ರು. ಸೇರಿ 1,106.76 ಕೋಟಿ ರು. ಅಕ್ಟೋಬರ್‍‌ ಅಂತ್ಯಕ್ಕೆ ಇರುವುದು ಉತ್ತರದಿಂದ ಗೊತ್ತಾಗಿದೆ.

 

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಡೀಸೆಲ್‌ 103.53 ಕೋಟಿ ರು., ನಿವೃತ್ತಿ ನೌಕರರ ಬಾಕಿ 99.62 ಕೋಟಿ ರು., ಹಾಲಿ ನೌಕರರ ಬಾಕಿ 148.08 ಕೋಟಿ ರು., ಭವಿಷ್ಯ ನಿಧಿ ಬಾಕಿ 766.88 ಕೋಟಿ ರು., ಇತರೆ ಬಾಕಿ303.70 ಕೋಟಿ ರು. ಸೇರಿ ಒಟ್ಟಾರೆ 1,421.81ಕೋಟಿ ರು ಬಾಕಿ ಇರುವುದು ತಿಳಿದು ಬಂದಿದೆ.

 

ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ ಭವಿಷ್ಯ ನಿಧಿ 99.70 ಕೋಟಿ ರು., ನಿವೃತ್ತ ನೌಕರರ ಬಾಕಿ 84.16 ಕೋಟಿ ರು., ಸಿಬ್ಬಂದಿಗಳ ಬಾಕಿ ಪಾವತಿ 39.22 ಕೋಟಿ ರು., ಸರಬರಾಜುದಾರ ಬಿಲ್‌ ಪಾವತಿ 14.80 ಕೋಟಿ ರು., ಇಂಧನ ಬಾಕಿ ಪಾವತಿ 85.00 ಕೋಟಿ ರು., ಎಂವಿಸಿ ಕ್ಲೈಮ್ಸ್‌ 28.32 ಕೋಟಿ ರು., ಇತರೆ ಬಿಲ್‌ 5.00 ಕೋಟಿ ರು. ಸೇರಿ ಒಟ್ಟಾರೆ 356.20 ಕೋಟಿ ರು. ಸೇರಿ ಒಟ್ಟಾರೆಯಾಗಿ ಅಕ್ಟೋಬರ್‍‌ ಅಂತ್ಯಕ್ಕೆ 4,150.38 ಕೋಟಿ ರು. ಬಾಕಿ ಇದೆ ಎಂದು ವಿವರಗಳನ್ನು ಒದಗಿಸಿದ್ದಾರೆ.

 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 3,169.09 ಲಕ್ಷ ಫಲಾನುಭವಿಗಳೀಗೆ ಸರ್ಕಾರದಿಂದ 62511.66 ಲಕ್ಷ ರು. ಸಹಾಯಧನ ಬಿಡುಗಡೆಯಾಗಿದೆ. ಬಿಎಂಟಿಸಿಯಲ್ಲಿ 3,425.01 ಲಕ್ಷ ಫಲಾನುಭವಿಗಳಿಗೆ 29465.09 ಲಕ್ಷ ರು. ಸಹಾಯ ಧನ ಬಿಡುಗಡೆಯಾಗಿದೆ.

 

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಿಂದ 2,456.63 ಲಕ್ಷ ಫಲಾನುಭವಿಗಳೀಗೆ 41746.46 ಲಕ್ಷ ರು ಸಹಾಯಧನ ಬಿಡುಗಡೆಯಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 1,506.98 ಲಕ್ಷ ಫಲಾನುಭವಿಗಳಿಗೆ 33221.78 ಲಕ್ಷ ರು ಸೇರಿ 166945.00 ಲಕ್ಷ ರು. ಸಹಾಯ ಧನ ಬಿಡುಗಡೆಯಾಗಿದೆ.

 

ಶಕ್ತಿ ಯೋಜನೆಯಿಂದ ರಾಜ್ಯದಲ್ಲಿ ರಸ್ತೆ ಸಾರಿಗೆ ಸಂಸ್ಥೆಗಳ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕೆಎಸ್‌ಆರ್‍‌ಟಿಸಿಗೆ 90 ಹೊಸ ಕರ್ನಾಟಕ ಸಾರಿಗೆ ಬಸ್‌ಗಳನ್ನು ಸೇರ್ಪಡೆಗೊಳಿಸಲಾಗಿದೆ. ನಿಗಮಕ್ಕೆ ವಿಶೇಷ ಬಂಡವಾಳ ನೆರವಿನಡಿ 100 ಕೋಟಿ ರು. ಅನುದಾನ ಒದಗಿಸಿರುವ ಸರ್ಕಾರವು  ಸಾಮಾನ್ಯ ಮಾದರಿಯ ಒಟ್ಟು 250 ಹೊಸ ಬಸ್‌ ವಾಹನಗಳನ್ನು ಖರೀದಿಸಲು ಅನುಮೋದನೆ ನೀಡಿದೆ. 25 ಹೊಸ ಸಾಮಾನ್ಯ ಬಸ್‌ಗಳನ್ನು ಡಿಸೆಂಬರ್‍‌ ಅಂತ್ಯದೊಳಗೆ ಸೇರ್ಪಡೆಗೊಳಿಸಲಿದೆ ಎಂಬ ಮಾಹಿತಿ ಒದಗಿಸಿದ್ದಾರೆ.

 

ಕೆಎಸ್ಆರ್‍‌ಟಿಸಿಗೆ ಮಾಸಿಕವಾಗಿ ಅಧಿಕಾರಿಗಳು, ಆಡಳಿತ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ, ಚಾಲಕ, ನಿರ್ವಾಹಕ, ಚಾಲಕ ಕಂ ನಿರ್ವಾಹಕರಿಗೆ ಮಾಸಿಕ 138.83 ಕೋಟಿ ರು. ವೇತನ ನೀಡಬೇಕಿದೆ. ಬಿಎಂಟಿಸಿಗೆ 133.22 ಕೋಟಿ ರು., ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 86.01 ಕೋಟಿ ರು., ಕಲ್ಯಣ ಕರ್ನಾಟಕ ಸಾರಿಗೆ ನಿಗಮಕ್ಕೆ 77.99 ಕೋಟಿ ರು. ಸೇರಿ ಒಟ್ಟಾರೆ 436.05 ಕೋಟಿ ರು. ಮಾಸಿಕ ವೆಚ್ಚ ಮಾಡಬೇಕಿದೆ.

 

ಶಕ್ತಿ ಯೋಜನೆಯಿಂದಾಗಿ ಒಟ್ಟು ಪ್ರತಿ ದಿನ ಸರಾಸರಿ ಮಹಿಳಾ ಪ್ರಯಾಣಿಕರ ಸಂಖ್ಯೆ ನಾಲ್ಕು ನಿಗಮಗಳಲ್ಲಿ 61.12 ಲಕ್ಷ ರು., ಪ್ರತಿ ದಿನದ ಟಿಕೆಟ್‌ ಮೌಲ್ಯ 15.13 ಕೋಟಿ ಸೇರಿ ಅಂದಾಜು ವಾರ್ಷಿಕವಾಗಿ 5,525.58 ಕೋಟಿ ರ. ವೆಚ್ಚವಾಗಲಿದೆ. ಶಕ್ತಿ ಯೋಜನೆಗೆ ಜೂನ್ 2023ರಿಂದ ಅಕ್ಟೋಬರ್‍‌ ಅಂತ್ಯಕ್ಕೆ ನಾಲ್ಕು ಸಾರಿಗೆ ನಿಗಮಗಳಿಗೆ ಒಟ್ಟಾರೆ 137470.99 ಲಕ್ಷ ರು. ಬಿಡುಗಡೆಗೊಳಿಸಲಾಗಿದೆ.

 

2023ರ ಜೂನ್‌ 11ರಿಂದ 2023ರ ನವೆಂಬರ್‍‌ 30ರ ಅಂತ್ಯಕ್ಕೆ ನಾಲ್ಕು ನಿಗಮಗಳಿಗೆ 252162.71 ಲಕ್ಷ ರು. ವೆಚ್ಚವಾಗಿದೆ ಎಂದು ಸರ್ಕಾರಕ್ಕೆ ಕಳಿಸಿದೆ. ಈ ಪೈಕಿ  ಈ ಯೋಜನೆಯಡಿಯಲ್ಲಿ 2023ರ ಜೂನ್‌ 11ರಿಂದ 2023ರ ನವೆಂಬರ್‍‌ 30ರ ಅಂತ್ಯಕ್ಕೆ ನಾಲ್ಕು ನಿಗಮಗಳಿಗೆ 166945.00 ಲಕ್ಷ ರು. ಸಾರಿಗೆ ಇಲಾಖೆಗೆ  ಸಹಾಯಧನ ಬಿಡುಗಡೆಯಾಗಿದೆ.

 

ಶಕ್ತಿ ಯೋಜನೆ ಜಾರಿ ನಂತರ ಕೆಎಸ್‌ಆರ್‍‌ಟಿಸಿಗೆ 2023-24ನೇ ಸಾಲಿನಲ್ಲಿ 12.57 ಕೋಟಿ ರು., ಬಿಎಂಟಿಸಿಗೆ 5.39 ಕೋಟಿ ರು., ವಾಯುವ್ಯ ಕರ್ನಾಟಕ ಸಾರಿಗೆಗೆ 6.60 ಕೋಟಿ ರು., ಕಲ್ಆಣ ಕರ್ನಾಟಕ ಸಾರಿಗೆ 5.92 ಕೋಟಿ ರು. ಪ್ರತಿ ದಿನ ಸರಾಸರಿ ಆದಾಯ ಗಳಿಸಿದೆ.

 

2022-23ರಲ್ಲಿ ಕೆಎಸ್‌ಆರ್‍‌ಟಿಸಿಗೆ 9.21 ಕೋಟಿ ರು., ಬಿಎಂಟಿಸಿಗೆ 4.44 ಕೋಟಿ ರು., ವಾಯುವ್ಯ ಕರ್ನಾಟಕ ಸಾರಿಗೆಗೆ 4.73 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 4.36 ಕೋಟಿ ರು. ಪ್ರತಿ ದಿನ ಸರಾಸರಿ ಆದಾಯ ಬಂದಿತ್ತು. ಒಟ್ಟಾರೆ ಪ್ರತಿ ದಿನ ಸರಾಸರಿ 30.48 ಕೋಟಿ ಆದಾಯ ಬಂದಂತಾಗಿದೆ.

 

ಶಕ್ತಿ ಯೋಜನೆ ಜಾರಿಯಿಂದಾಗಿ ಕೆಎಸ್‌ಆರ್‍‌ಟಿಸಿಗೆ ಹಿಂದಿನ ವರ್ಷಕ್ಕೆ ಹೋಲಿಸಿದರೆ 3.36 ಕೋಟಿ ರು., ಬಿಎಂಟಿಸಿಗೆ 0.95 ಕೋಟಿ ರು., ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 1.87 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 1.56 ಕೋಟಿ ರು. ಆದಾಯ ಹೆಚ್ಚಿದೆ. ಒಟ್ಟಾರೆಯಾಗಿ ಜೂನ್‌ನಿಂದ ನವೆಂಬರ್ ಅಂತ್ಯಕ್ಕೆ 7.74 ಕೋಟಿಯಷ್ಟೇ ಪ್ರತಿ ದಿನ ಸರಾಸರಿ  ಆದಾಯ ಬಂದಿದೆ.

the fil favicon

SUPPORT THE FILE

Latest News

Related Posts