ಹಿಂದೂಮಹಾಸಭಾ, ವಾಟಾಳ್‌, ಕೆಆರ್‍‌ಎಸ್‌, ಪ್ರಜಾಕೀಯ, ಕಲ್ಯಾಣ ರಾಜ್ಯ ಪ್ರಗತಿ ಸೇರಿ 110 ಪಕ್ಷಗಳಿಗಿಲ್ಲ ಮಾನ್ಯತೆ

ಬೆಂಗಳೂರು; ಅಖಿಲ ಭಾರತ ಹಿಂದೂ ಮಹಾಸಭಾ, ಅಂಬೇಡ್ಕರ್‍‌ ಹೆಸರಿನಲ್ಲಿರುವ ಪಕ್ಷಗಳು, ಕನ್ನಡ ಚಳವಳಿ ವಾಟಾಳ್‌, ಕರ್ನಾಟಕ ರಾಷ್ಟ್ರಸಮಿತಿ, ಸರ್ವೋದಯ ಕರ್ನಾಟಕ, ಕರ್ನಾಟಕ ರಾಜ್ಯ ರೈತ ಸಂಘ, ಉತ್ತಮ ಪ್ರಜಾಕೀಯ ಪಕ್ಷ ಸೇರಿದಂತೆ ಕರ್ನಾಟಕದಲ್ಲಿ ಒಟ್ಟಾರೆ 110 ಪಕ್ಷಗಳು ಮಾನ್ಯತೆ ಪಡೆದಿಲ್ಲ ಎಂದು ರಾಜ್ಯ ಚುನಾವಣೆ ಆಯೋಗವು ಅಧಿಸೂಚನೆ ಹೊರಡಿಸಿದೆ.

 

2023ರ ಡಿಸೆಂಬರ್‍‌ 14ರಂದು ರಾಜ್ಯ ಚುನಾವಣೆ ಆಯೋಗವು ಹೊರಡಿಸಿರುವ ಅಧಿಸೂಚನೆಯಲ್ಲಿ ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮಾನ್ಯತೆ ಪಡೆಯದ ಪಕ್ಷಗಳ ಪಟ್ಟಿ

 

ಅಖಿಲ ಭಾರತೀಯ ಮುಸ್ಲೀಂ ಲೀಗ್‌, ಆಲ್‌ ಇಂಡಿಯಾ ಜನರಕ್ಷಾ ಪಾರ್ಟಿ, ಆಲ್‌ ಇಂಡಿಯಾ ಉಲಮ ಕಾಂಗ್ರೆಸ್‌, ಅಂಬೇಡ್ಕರ್‍‌ ಜನತಾ ಪಾರ್ಠಿ, ಅಂಬೇಡ್ಕರ್‍‌ ನ್ಯಾಷನಲ್‌ ಕಾಂಗ್ರೆಸ್‌, ಅವಿರತ್‌ ನ್ಯಾಷನಲ್‌ ಸೇವಾ ಪಾರ್ಟಿ, ಬಡವರ ಶ್ರಮಿಕರ ರೈತರ ಕಾಂಗ್ರೆಸ್‌ ಪಾರ್ಟಿ, ಬೆಂಗಳೂರು ನವ ನಿರ್ಮಾಣ ಪಾರ್ಟ, ಭಾರತೀಯ ಜನಶಕ್ತಿ ಕಾಂಗ್ರೆಸ್‌, ಭಾರತೀಯ ಬೆಳಕು ಪಾರ್ಟಿ, ಭಾರತೀಯ ಪ್ರಜ್ಞಾವಂತ ಕಾಂಗ್ರೆಸ್‌, ಭಾರತೀಯ ಡಾ ಬಿ ಆರ್‍‌ ಅಂಬೇಡ್ಕರ್‍‌ ಜನತಾ ಪಾರ್ಟಿ, ಭಾರತೀಯ ಪೀಪಲ್ಸ್‌ ಪಾರ್ಟಿ, ಭಾರತೀಯ ಪ್ರಜಾ ಐಕ್ಯತಾ ಪಾರ್ಟಿ, ಭಾರತೀಯ ಪ್ರಜಾ ಪಕ್ಷ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ,

 

ಭಾರತೀಯ ರಾಷ್ಟ್ರೀಯ ಮಹಿಳೆ ಸರ್ವೋದಯ ಕಾಂಗ್ರೆಸ್‌, ಬೃಹತ್‌ ಭಾರತೀಯ ಕಲ್ಯಾಣ ಪಕ್ಷ, ಚಾಲೆಂಜರ್ಸ್‌ ಪಾರ್ಟಿ, ಕಂಟ್ರಿ ಸಿಟಿಜನ್‌ ಪಾರ್ಟಿ, ಡೆಮೋಕ್ರಾಟಿಕ್‌ ಪ್ರಜಾ ಕ್ರಾಂತಿ ಪಾರ್ಟಿ ಸೆಕ್ಯೂಲರಿಸ್ಟ್‌ ಪಾರ್ಟಿ, ದೇಶ್‌ ಪ್ರೇಮ್‌ ಪಾರ್ಟಿ, ದಿಗ್ವಿಜಯ ಭಾರತ ಪಾರ್ಟಿ, ಡಾ ಅಂಬೇಡ್ಕರ್‍‌ ಪೀಪಲ್ಸ್‌ ಪಾರ್ಟಿ, ಡಾ ಅಂಬೇಡ್ಕರ್‍‌ ಸಮಾಜವಾದಿ ಡೆಮೋಕ್ರಾಟಿಕ್ ಪಾರ್ಟಿ, ಇಂಜಿನಿಯರ್ಸ್‌ ಪಾರ್ಟಿ, ಗ್ರಾಜ್ಯುಯೇಟ್‌ ಇಂಡಿಯಾ ಪಾರ್ಟಿ, ಇಂಡಿಯನ್‌ ಲೇಬರ್‍‌ ಪಾರ್ಟಿ (ಅಂಬೇಡ್ಕರ್‍‌ ಪುಲೇ), ಇಂಡಿಯನ್‌ ಮೂವ್‌ಮೆಂಟ್‌ ಪಾರ್ಟಿ, ಇಂಡಿಯನ್‌ ನ್ಯಾಷನಲ್‌ ಯೂತ್‌ ಪಾರ್ಟಿ, ಇಂಡಿಯನ್‌ ನ್ಯೂ ಕಾಂಗ್ರೆಸ್‌ ಪಾರ್ಟಿ, ಜೈ ವಿಜಯ ಭಾರತಿ ಪಕ್ಷ, ಜನಸಾಮಾನ್ಯರ ಪಾರ್ಟಿ (ಕರ್ನಾಟಕ), ಜನಸ್ಪಂದನ ಪಾರ್ಟಿ, ಜನ ಸ್ವರಾಜ್ಯ ಪಾರ್ಟಿ, ಜನಹಿತ ಪಕ್ಷ

 

ಜನತಾದಳ (ಅಹಿಂಸಾವಾದಿ), ಜನತಾ ಪಕ್ಷ, ಕಲ್ಯಾಣ್‌ ಕರ್ನಾಟಕ ಪಾರ್ಟಿ, ಕಲ್ಯಾಣ ಕ್ರಾಂತಿ ಪಾರ್ಟಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ಕನ್ನಡ ಚಳುವಳಿ ವಾಟಾಳ ಪಕ್ಷ, ಕನ್ನಡ ದೇಶದ ಪಕ್ಷ, ಕನ್ನಡ ಪಕ್ಷ, ಕರ್ನಾಟಕ ಜನಸೇವೆ ಪಾರ್ಟಿ, ಕರ್ನಾಟಕ ಜನತಾ ಪಕ್ಷ, ಕರ್ನಾಟಕ ಕಾರ್ಮಿಕರ ಪಕ್ಷ, ಕನ್ನಡ ಮಕ್ಕಳ ಪಕ್ಷ, ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ, ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ), ಕರ್ನಾಟಕ ಪ್ರಜಾ ವಿಕಾಸ ಪಾರ್ಟಿ, ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಾಷ್ಟ್ರಸಮಿತಿ, ಕರ್ನಾಟಕ ಸಮತ ಪಕ್ಷ, ಕರ್ನಾಟಕ ಸ್ವಾಭಿಮಾನಿ ರೈತರ ಕಾರ್ಮಿಕರ ಪಾರ್ಟಿ, ಕರ್ನಾಟಕ ಸ್ವರಾಜ್ಯ ಪಾರ್ಟಿ

 

ಕರುನಾಡ ಪಾರ್ಟಿ, ಕರುನಾಡಗ ತಮಿಳರ್‍‌ ಕಚ್ಚಿ, ಲೋಕಸತ್ತಾ ಪಕ್ಷ, ಮಾಥರಮ್‌ ಪಾರ್ಟಿ, ಮಹಿಳಾ ಪ್ರಧಾನ ಪಕ್ಷ, ಮಾನವ ಪಾರ್ಟಿ, ನಮ್ಮ ಕಾಂಗ್ರೆಸ್‌, ನ್ಯಾಷನಲ್‌ ಅಪ್ನೀ ಪಾರ್ಟಿ, ನ್ಯಾಷನಲ್‌ ಡೆವಲಪ್‌ಮೆಂಟ್‌ ಪಾರ್ಟಿ, ನ್ಯಾಷನಲ್‌ ಸಮಾಜವಾದಿ ಕಾಂಗ್ರೆಸ್‌, ನವ ಭಾರತ್‌ ಸೇನಾ, ನ್ಯೂ ಇಂಡಿಯಾ ಯುನೈಟೆಡ್‌ ಪಾರ್ಟಿ, ಪ್ರಹಾರ ಜನಶಕ್ತಿ ಪಾರ್ಟಿ, ಪ್ರಜಾ ಪರಿವರ್ತನ್‌ ಪಾರ್ಟಿ, ಪ್ರಜಾ ರೈತ ರಾಜ್ಯ ಪಕ್ಷ, ರೈತ ಭಾರತ ಪಾರ್ಟಿ, ರಕ್ಷಕ ಸೇನಾ, ರಾಣಿ ಚೆನ್ನಮ್ಮ ಪಾರ್ಟಿ, ರಾಷ್ಟ್ರೀಯ ಆರಕ್ಷಕ್‌ ಮಂಚ್‌, ರಾಷ್ಟ್ರೀಯ ಜನಹಿತ ಪಾರ್ಟಿ, ರಾಷ್ಟ್ರೀಯ ಜನಕ್ರಾಂತಿ ಪಾರ್ಟಿ,

 

ರಾಷ್ಟ್ರೀಯ ಜನಸಂಭಾವನಾ ಪಾರ್ಟಿ, ರಾಷ್ಟ್ರೀಯ ಸಮಾಜ ಪಕ್ಷ, ರಿಪಬ್ಲಿಕ್‌ನ ಪಾರ್ಟಿ ಆಫ್‌ ಇಂಡಿಯಾ, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಕರ್ನಾಟಕ), ರಿಪಬ್ಲಿಕ್‌ ಸೇನೆ, ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ), ಸಾಮಾನ್ಯ ಜನತಾ ಪಾರ್ಟಿ (ಲೋಕ ತಾಂತ್ರಿಕ್‌), ಸರ್ವ ಜನತಾ ಪಾರ್ಟಿ, ಸಾರ್ವಜನಿಕ ಆದರ್ಶ ಸೇನೆ, ಸರ್ವೋದಯ ಕರ್ನಾಟಕ ಪಕ್ಷ, ಶುಭ ಕರ್ನಾಟಕ, ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ, ಸೋಷಿಯಲಿಸ್ಟ್‌ ಯುನಿಟಿ ಸೆಂಟರ್‍‌ ಆಫ್‌ ಇಂಡಿಯಾ, ಸೂರ್ಯ ಜನಸೇವಾ ಪಾರ್ಟಿ, ಸ್ವರಾಜ್‌ ಇಂಡಿಯಾ, ಸ್ವಯಂ ಕೃಷಿ ಪಾರ್ಟಿ, ಟಿಪ್ಪು ಸುಲ್ತಾನ್‌ ಪಾರ್ಟಿ, ತುಳುವೆರೆ ಪಕ್ಷ, ಯೂನಿವರ್ಸ್ ಸಿಟಿಜನ್‌ ಪಾರ್ಟಿ

 

ಉತ್ತಮ ಪ್ರಜಾಕೀಯ ಪಾರ್ಟಿ, ಉತ್ತರ ಜನಶಕ್ತಿ ಸೇನಾ, ಉತ್ತರ ಕರ್ನಾಟಕ ಪಾರ್ಟಿ, ವಿಚಾರ ಜಾಗೃತಿ ಕಾಂಗ್ರೆಸ್‌ ಪಕ್ಷ, ವಿಜಯ ಜನತಾ ಪಾರ್ಟಿ, ವೋಟರ್ಸ್‌ ಇಂಡಿಪೆಂಡೆಂಡ್‌ ಪಾರ್ಟಿ, ವೆಲ್ಫೇರ್‍‌ ಪಾರ್ಟಿ ಆಫ್‌ ಇಂಡಿಯಾ, ಯಂಗ್‌ ಇಂಡಿಯನ್‌ ಕಾಂಗ್ರೆಸ್‌ ಪಾರ್ಟಿ, ಯಂಗ್‌ ಸ್ಟಾರ್‍‌ ಎಂಪವರ್‍‌ಮೆಂಟ್‌ ಪಾರ್ಟಿ, ಯೂತ್‌ ಇಂಡಿಯಾ ಪೀಸ್‌ ಪಾರ್ಟಿ, ಯುವ ಕರ್ನಾಟಕ ಪಕ್ಷವು ಮಾನ್ಯತೆ ಪಡೆಯದೇ ಇರುವ ಪಟ್ಟಿಯಲ್ಲಿವೆ.

 

ರಾಜ್ಯ ಅಥವಾ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷವಾಗಲು, ಒಂದು ಪಕ್ಷವು ಒಂದು ನಿರ್ದಿಷ್ಟ ಕನಿಷ್ಠ ಶೇಕಡಾವಾರು ಮತದಾನದ ಮಾನ್ಯ ಮತಗಳನ್ನು ಪಡೆದುಕೊಳ್ಳಬೇಕು ಅಥವಾ ಕಳೆದ ಚುನಾವಣೆಯ ಸಂದರ್ಭದಲ್ಲಿ ನಿರ್ದಿಷ್ಟ ರಾಜ್ಯ ವಿಧಾನಸಭೆ ಅಥವಾ ಲೋಕಸಭೆ ಸ್ಥಾನಗಳ ಸಂಖ್ಯೆಗಳನ್ನಾಧರಿಸುತ್ತದೆ.

 

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕನಿಷ್ಠ ಶೇ 6 ಮತಗಳ ಪಾಲು ಹೊಂದಿರಬೇಕು ಮತ್ತು ಕನಿಷ್ಠ 2 ಶಾಸಕರಿರಬೇಕು. ಆ ರಾಜ್ಯದಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ 6% ಮತ-ಪಾಲನ್ನು ಹೊಂದಿದ್ದಾರೆ ಮತ್ತು ಆ ರಾಜ್ಯದಿಂದ ಕನಿಷ್ಠ ಒಬ್ಬ ಸಂಸದ ಇರಬೇಕು ಎಂಬುದು ಸೇರಿದಂತೆ ಹಲವು ಮಾನದಂಡಗಳಿವೆ.

SUPPORT THE FILE

Latest News

Related Posts