ಠೇವಣಿ ಇಟ್ಟು ಮರೆತ ಸರ್ಕಾರಿ ಇಲಾಖೆಗಳು; 28.96 ಕೋಟಿ ರುಪಾಯಿಗೆ ಯಾರೂ ದಿಕ್ಕೇ ಇಲ್ಲ

ಬೆಂಗಳೂರು; ರಾಜ್ಯದ ಸರ್ಕಾರಿ ಇಲಾಖೆಗಳು ಮತ್ತು ವಿವಿಧ ನ್ಯಾಯಾಲಯಗಳು ಸರ್ಕಾರಿ ಸ್ವಾಮ್ಯ ಮತ್ತು ಖಾಸಗಿ ವಲಯದಲ್ಲಿರುವ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿ ಆ ನಂತರ ಕ್ಲೈಮ್‌ ಮಾಡದೇ ಇರುವ ಮೊತ್ತವು 28.96 ಕೋಟಿಯಷ್ಟಿದೆ ಎಂಬ ಮಾಹಿತಿಯೂ ಇದೀಗ ಬಹಿರಂಗವಾಗಿದೆ.

 

ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಕ್ಲೈಮ್ ಮಾಡದ ಠೇವಣಿಗಳು ಡಿಸೆಂಬರ್ 2020 ಮತ್ತು ಫೆಬ್ರವರಿ 2023 ರ ನಡುವೆ ಶೇಕಡಾ 70 ಕ್ಕಿಂತ ಹೆಚ್ಚು ಬೆಳೆದಿರುವ ಹೊತ್ತಿನಲ್ಲಿಯೇ ರಾಜ್ಯದ ಹಲವು ಜಿಲ್ಲಾಧಿಕಾರಿಗಳೂ ಮತ್ತು ವಿವಿಧ ಇಲಾಖೆ, ನಿಗಮ ಮಂಡಳಿಗಳ ಹೆಸರಿನಲ್ಲಿರುವ ಖಾತೆಯಲ್ಲಿ ಹಣವಿದ್ದರೂ ಕ್ಲೈಮ್‌ ಮಾಡದೇ ಇರುವ ಪಟ್ಟಿಯೂ ಮುನ್ನೆಲೆಗೆ ಬಂದಿದೆ.

 

ರಾಜ್ಯಮಟ್ಟದ ಬ್ಯಾಂಕರ್‍‌ಗಳ ಸಮಿತಿ (ಎಸ್‌ಎಲ್‌ಬಿಸಿ)ಯು ಈ ಕುರಿತು ರಾಜ್ಯ ಸರ್ಕಾರಕ್ಕೆ 2023ರ ಜುಲೈ 31ರಂದು ಮಾಹಿತಿ ಒದಗಿಸಿದೆ. ಇದನ್ನಾಧರಿಸಿ ಆರ್ಥಿಕ ಇಲಾಖೆಯು ರಾಜ್ಯ ಸರ್ಕಾರದ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ಸೇರಿದಂತೆ ಇಲಾಖೆಗಳ ಮುಖ್ಯಸ್ಥರಿಗೆ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಆರ್‍‌ ವಿಶಾಲ್‌ ಅವರು 2023ರ ಆಗಸ್ಟ್‌ 18ರಂದು ಟಿಪ್ಪಣಿ ಹೊರಡಿಸಿದ್ದಾರೆ.

ಆದರೆ ಇದುವರೆಗೂ ಇಲಾಖೆಗಳು ಕ್ರಮ ವಹಿಸಿಲ್ಲ. ಹೀಗಾಗಿ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಅವರು ಇಲಾಖೆಗಳ ಜತೆ ಸಭೆಗಳನ್ನು ನಡೆಸಿದ್ದಾರೆ ಎಂದು ಗೊತ್ತಾಗಿದೆ.

 

ಡಾ ವಿಶಾಲ್‌ ಅವರು ಬರೆದಿರುವ ಪತ್ರದ ಪ್ರತಿ ಮತ್ತು ಠೇವಣಿ ಮೊತ್ತವನ್ನು ಕ್ಲೈಮ್‌ ಮಾಡದೇ ಇರುವ ಬ್ಯಾಂಕ್‌ಗಳ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಎಸ್​ಬಿಐ, ಕೆನರಾ, ಆಕ್ಸಿಸ್‌, ಹೆಚ್‌ಡಿಎಫ್‌ಸಿ, ಯುಕೋ, ಇಂಡಿಯನ್‌ ಓವರ್‍‌ಸೀಸ್‌ ಬ್ಯಾಂಕ್‌ನಲ್ಲಿ ಅತಿ ಹೆಚ್ಚು ನಿಷ್ಕ್ರಿಯ ಖಾತೆಗಳು ಮತ್ತು ಹಣ ಇರುವುದು ಪಟ್ಟಿಯಿಂದ ತಿಳಿದು ಬಂದಿದೆ.

 

ಈ ಬ್ಯಾಂಕ್‌ಗಳಲ್ಲಿ ಸಹಾಯಕ ಆಯುಕ್ತರು, ರಿಜಿಸ್ಟ್ರಾರ್‍‌ ಜನರಲ್‌, ಎಕ್ಸಿಕ್ಯೂಟಿವ್‌ ಇಂಜಿನಿಯರ್ಸ್‌, ಸಿವಿಲ್‌ ಮತ್ತು ಪ್ರಧಾನ ನ್ಯಾಯಾಧೀಶ, ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಟೆಂಡರ್‍‌ ಮೊತ್ತ, ಎಸ್ಕ್ರೋ ಖಾತೆ, ತಹಶೀಲ್ದಾರ್‍‌ಗಳ ಹೆಸರಿನಲ್ಲಿ ಠೇವಣಿ ಇರಿಸಿರುವುದು ಗೊತ್ತಾಗಿದೆ.

 

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಯಾದಗಿರಿ, ಬೆಳಗಾವಿ, ತುಮಕೂರು, ಕಲ್ಬುರ್ಗಿ, ಬೀದರ್‍‌, ಕೊಪ್ಪಳ, ವಿಜಯಪುರ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಶಾಖೆಗಳಲ್ಲಿ ಠೇವಣಿ ಖಾತೆಗಳು ನಿಷ್ಟ್ರೀಯಗೊಂಡಿವೆ ಎಂಬುದು ಪಟ್ಟಿಯಿಂದ ತಿಳಿದು ಬಂದಿದೆ.

 

ಎಸ್‌ಬಿಐ ಪಟ್ಟಿ

 

ಅಸಿಸ್ಟಂಟ್‌ ಕಮಿಷನರ್‍‌ (ಖಾತೆ ಸಂಖ್ಯೆ 5207491819- ಹುಮನಾಬಾದ್‌) 97.01 ಲಕ್ಷ ರು.

 

ಕೆಯುಡಿಎಫ್‌ಸಿ (3012169406- ಹಾವೇರಿ-ರಾಣೆಬೆನ್ನೂರು) 1.94 ಕೋಟಿ

 

ಎಸ್‌ಡಬ್ಲ್ಯೂಎಸ್‌ಎಂ ಕೆಆರ್‍‌ಡಬ್ಲೂಎಸ್‌ (5400115104-ವಿಧಾನಸೌಧ)3,01,19940 ರು.

 

ಜಿಲ್ಲಾಧಿಕಾರಿ ತುಮಕೂರು (6404037907-ಸಿದ್ದಗಂಗಾ ಎಕ್ಷಟೆನ್ಷನ್‌) 1,70,19,424 ರು.

 

ಜಿಲ್ಲಾಧಿಕಾರಿ, ಆಶ್ರಯ ಯೋಜನೆ(5402472485-ರಾಘವೇಂದ್ರ ನಗರ ತುಮಕೂರು)1,36,01,225 ರು.

 

ನೆಮ್ಮದಿ ಯೋಜನೆ (6405743987-ಬಳ್ಳಾರಿ) 1,10,97,403 ರು.

 

ಪೆನ್ಷನ್‌ ಫಂಡ್‌ ( 5400558320-ಮೈಸೂರು ಮಹಾನಗರಪಾಲಿಕೆ)99,10,226 ರು.

 

ಡೆಪ್ಯುಟಿ ಕಮಿಷನರ್‍‌ ನಗರಪಾಲಿಕೆ (6200718941-ಕಲ್ಬುರ್ಗಿ)91,61,742 ರು

 

ಟೆಂಡರ್‍‌ ಮೊತ್ತ (6407676883-ಟಿ ನರಸೀಪುರ-ಮೈಸೂರು)88,88,957 ರು.

 

ಪ್ರಾದೇಶಿಕ ಆಯುಕ್ತರು ಬೆಳಗಾವಿ (64039339344)82,90,307 ರು

 

ಜಿಲ್ಲಾಧಿಕಾರಿ, ಕಲ್ಬುರ್ಗಿ (5207656639) 80,16,134 ರು.

 

ಎಸ್ಕ್ರೋ ಖಾತೆ ಬಿಎಂಪಿ (1044534275-ಬೆಂಗಳೂರು ನಗರ) 69,82,694 ರು.

 

ಜಿಲ್ಲಾಧಿಕಾರಿ ( 240100187054-ಬೆಂಗಳೂರು ನಗರ) 19,97,287 ರು.

 

 

 

ಕೆನರಾ ಬ್ಯಾಂಕ್‌ ಪಟ್ಟಿ

 

ಎಕ್ಸಿಕ್ಯೂಟಿವ್‌ (28273070000061-ಕೊಪ್ಪಳ) 12,23,853 ರು.

 

ರಿಜಿಸ್ಟ್ರಾರ್‍‌ ಜನರಲ್‌ ( 4264020001485-ಬೆಂಗಳೂರು ಕೆಎಸ್‌ಎಫ್‌ಸಿ ) 66,28,588 ರು.

 

ಡೆಪ್ಯುಟಿ ಕಮಿಷನರ್‍‌ (409101201784-ಬೆಂಗಳೂರು ಮಾಗಡಿ ರಸ್ತೆ) 62,44,596 ರು.

 

ಎಕ್ಸಿಕ್ಯೂಟಿವ್‌ ( 2827301000742-ಬೆಂಗಳೂರು ಮಲ್ಲೇಶ್ವರಂ ) 59,46,651 ರು.

 

ಕೆಆರ್‍‌ಡಿಸಿಎಲ್‌ ಬೆಂಗಳೂರು ( 2827401000690-ಬೆಂಗಳೂರು ಕೆಎಸ್‌ಎಫ್‌ಸಿ) 57,75,762 ರು.

 

ಎಕ್ಸಿಕ್ಯೂಟಿವ್ ಇಂಜಿನಿಯರ್‍‌ ( 1295301000022-ವಕ್ಕಲಕೇರಿ-ಕೋಲಾರ) 48,98,773 ರು.

 

ಬಿಬಿಎಂಪಿ ಆಯುಕ್ತರು (4832010024622-ಬೆಂಗಳೂರು ಸಂಜಯನಗರ ) 47,73,898 ರು.

 

ಜಿಲ್ಲಾಧಿಕಾರಿ (80022001194910-ವಿಜಯಪುರ )43,69,023 ರು.

 

ಎ ಆರ್‍‌ ಓ ಶಾಂತಿನಗರ ( 4182010045205-ಬೆಂಗಳೂರು) 40,50,801 ರು.

 

ಪ್ರಧಾನ ಸಿವಿಲ್‌ ನ್ಯಾಯಾಧೀಶ ( 4164050005328-ಬೆಂಗಳೂರು ವಸಂತನಗರ) 39,81,879 ರು.

 

 

ಯುಕೋ ಬ್ಯಾಂಕ್‌

 

ಎಕ್ಸಿಕ್ಯೂಟಿವ್ ಇಂಜಿನಿಯರ್‍‌ (240100196223-ಬೆಂಗಳೂರು ನಗರ) 4,53,632 ರು.

 

ಜಿಲ್ಲಾಧಿಕಾರಿ ( 240100187046-ಜಿಲ್ಲಾನಿಧಿ ಬೆಂಗಳೂರು ನಗರ ) 13,28,915 ರು.

 

ಜಿಲ್ಲಾಧಿಕಾರಿ ( 240100187054 -ಬೆಂಗಳೂರು ನಗರ ) 19, 97, 287 ರು.

 

ಆಕ್ಸಿಸ್‌ ಬ್ಯಾಂಕ್‌

 

ತಹಶೀಲ್ದಾರ್‍‌ (343010100046303- ತುಮಕೂರು ತಾಲೂಕು) 43,83,799 ರು.

 

ಆಯುಕ್ತರು (911010039218601-ಹಾಸನ ) 61, 01, 472 ರು

 

ತಹಶೀಲ್ದಾರ್‍‌ (912010014646536-ಬಸವಕಲ್ಯಾಣ ಬೀದರ್‍‌) 14, 48,142 ರು.

 

ಬ್ಯಾಂಕ್‌ ಆಫ್ ಇಂಡಿಯಾ

 

ಜಿಲ್ಲಾಧಿಕಾರಿ (847510100010260-ಕೊಪ್ಪಳ) 12,23,853 ರು

 

ಡಿಸಿಎಫ್‌ ( 110010110004648-ಬೆಳಗಾವಿ-ಸಾಮಾಜಿಕ ಅರಣ್ಯ) 7,63,033 ರು.

 

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ( 843310110001418-ಮೈಸೂರು ) 7, 57,970 ರು.

 

ಇಂಡಿಯಾ ಬ್ಯಾಂಕ್‌

 

ಆಯುಕ್ತರು (331402010035950-ಮೈಸೂರು ಮಹಾನಗರಪಾಲಿಕೆ) 1,09,36,096 ರು.

 

ಬೆಂಗಳೂರು ಗ್ರಾಮಾಂತರ ಜಿ.ಪಂ (002410011112819-ಬೆಂಗಳೂರು ನಗರ) 54,22,422 ರು.

 

ಜಿಲ್ಲಾಧಿಕಾರಿ (392002010011333-ಮಲ್ಲೇಶ್ವರಂ ಬೆಂಗಳೂರು ನಗರ ) 32,22,597 ರು.

 

ಮುಖ್ಯ ಲೆಕ್ಕಾಧಿಕಾರಿ ( 520101006705606-ದಕ್ಷಿಣ ಕನ್ನಡ ) 21, 19, 831 ರು.

 

ಉಪ ವಿಭಾಗಾಧಿಕಾರಿ (455402010003143-ಆಶ್ರಯ-ಗುಲ್ಬರ್ಗಾ ) 20,49,887 ರು.

 

ಹೆಚ್‌ಡಿಎಫ್‌ಸಿ

 

ಉಪ ವಿಭಾಗಾಧಿಕಾರಿ (50100002377780-ಯಾದಗಿರಿ) 1,32,85,949 ರು.

 

ಬ್ಯಾಂಕ್‌ ಆಫ್‌ ಮಹಾರಾಷ್ಟ್ರ

 

ಜಿಲ್ಲಾಧಿಕಾರಿ ( 20158205782-ಜಯಲಕ್ಷ್ಮಿಪುರಂ ಮೈಸೂರು ) 12, 03, 629 ರು.

 

ಇಂಡಿಯನ್‌ ಬ್ಯಾಂಕ್‌

 

ಜಿಲ್ಲಾಧಿಕಾರಿ ( 540270595-ಹಾಸನ ) 44, 57, 779 ರು.

 

ಡಿಸಿಎಫ್‌ ( 538671478-ಕೊಡಗು-ಮಡಿಕೇರಿ ) 12, 88, 063 ರು.

 

ಇಂಡಿಯನ್‌ ಓವರ್‍‌ ಸೀಸ್‌ ಬ್ಯಾಂಕ್‌

 

ಜಿಲ್ಲಾಧಿಕಾರಿ ( 161101000002140- ಬೆಳಗಾವಿ ) 39, 12, 356 ರು

 

 

“ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಫೆಬ್ರವರಿ 2023 ರ ಅಂತ್ಯದ ವೇಳೆಗೆ, ಸಾರ್ವಜನಿಕ ವಲಯದ ಬ್ಯಾಂಕ್‌ಗಳು 10 ರವರೆಗೆ ಕಾರ್ಯನಿರ್ವಹಿಸದ ಠೇವಣಿಗಳಿಗೆ ಸಂಬಂಧಿಸಿದಂತೆ ಆರ್‍‌ಬಿಐ ಗೆ ವರ್ಗಾಯಿಸಲಾದ ಹಕ್ಕು ಪಡೆಯದ ಠೇವಣಿಗಳ ಒಟ್ಟು ಮೊತ್ತ ವರ್ಷಗಳು ಅಥವಾ ಅದಕ್ಕಿಂತ ಹೆಚ್ಚು, ₹35,012 ಕೋಟಿಗಳಷ್ಟಿತ್ತು ಎಂದು ಹಣಕಾಸು ಸಚಿವಾಲಯದ ರಾಜ್ಯ ಸಚಿವ ಭಾಗವತ್ ಕರದ್ ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದರು.

 

ಡೇಟಾ, ಕ್ಲೈಮ್ ಮಾಡದ ಠೇವಣಿಗಳ ಮೊತ್ತವು ಡಿಸೆಂಬರ್ 2020 ರ ಅಂತ್ಯದಲ್ಲಿ ₹ 20,000 ಕೋಟಿ ಮತ್ತು ಡಿಸೆಂಬರ್ ಅಂತ್ಯದಲ್ಲಿ ಸುಮಾರು ₹ 15,000 ಕೋಟಿ ಎಂದು ತೋರಿಸಿದೆ. ಫೆಬ್ರವರಿ 2023 ಮತ್ತು ಡಿಸೆಂಬರ್ 2019 ರ ನಡುವೆ ಶೇಕಡಾ 133 ರಷ್ಟು ಏರಿಕೆಯಾಗಿತ್ತು.

 

ಖಾತೆದಾರರ ಮರಣ ಮತ್ತು ಅವರ ಕಾನೂನು ಉತ್ತರಾಧಿಕಾರಿಗಳಿಗೆ ಖಾತೆಯ ಬಗ್ಗೆ ಜ್ಞಾನದ ಕೊರತೆಯಂತಹ ಅಂಶಗಳಿಂದಾಗಿ ಕ್ಲೈಮ್ ಮಾಡದ ಮೊತ್ತಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಒಂದು ವರ್ಷಕ್ಕಿಂತ ಹೆಚ್ಚು ಕಾಲ ಯಾವುದೇ ಕಾರ್ಯಾಚರಣೆಗಳಿಲ್ಲದಿದ್ದಲ್ಲಿ ಬ್ಯಾಂಕ್‌ಗಳು ವಾರ್ಷಿಕ ಖಾತೆಗಳ ಪರಿಶೀಲನೆ ಮಾಡುತ್ತದೆ.

 

ಬ್ಯಾಂಕ್‌ಗಳಲ್ಲಿ ಕ್ಲೈಮ್ ಮಾಡದೆ ಇರುವ ಸಾವಿರಾರು ಕೋಟಿ ರೂಪಾಯಿಗಳ ಮೊತ್ತವನ್ನು ಗುರುತಿಸಲು ಕೇಂದ್ರ ಬ್ಯಾಂಕ್ ಇತ್ತೀಚೆಗೆ ಪೋರ್ಟಲ್ ಅನ್ನು ಪ್ರಾರಂಭಿಸಿದಾಗ ಆರ್‌ಬಿಐ ತೆಗೆದುಕೊಂಡ ಕ್ರಮದ ನಂತರ ಹಣಕಾಸು ಸಚಿವರು ಆದೇಶ ಹೊರಡಿಸಿದ್ದರು.

 

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ 35,000 ಕೋಟಿ ರೂ.ಗೂ ಹೆಚ್ಚು ಕ್ಲೈಮ್ ಮಾಡದ ಮೊತ್ತವಿದೆ. ಇಂತಹ ಒಟ್ಟು ಹಣ ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಎಂದು ಹೇಳಲಾಗುತ್ತಿದೆ. ‘ತೆರಿಗೆ ಸ್ವರ್ಗ’ ಮತ್ತು ಹಣದ ‘ರೌಂಡ್ ಟ್ರಿಪ್ಪಿಂಗ್’ ಜವಾಬ್ದಾರಿಯುತ ಆರ್ಥಿಕ ಪರಿಸರ ವ್ಯವಸ್ಥೆಗೆ ಬೆದರಿಕೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts