ಖನಿಜ ನಿಧಿ ಟ್ರಸ್ಟ್‌ನಲ್ಲಿ 4,118.17 ಕೋಟಿ ರು. ಇದ್ದರೂ ಅರಣ್ಯ ದಿನಗೂಲಿ ನೌಕರರಿಗೆ ವೇತನವಿಲ್ಲ

ಬೆಂಗಳೂರು; ರಾಜ್ಯದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ ಅಡಿಯಲ್ಲಿ ಮೇ 2023ರವರೆಗೆ ಬಳ್ಳಾರಿ ಜಿಲ್ಲೆಯಲ್ಲಿ 1,979.43 ಕೋಟಿ ರು ಸೇರಿ ಒಟ್ಟು 4,118.17 ಕೋಟಿ ರು. ಸಂಗ್ರಹವಾಗಿದ್ದರೂ 2020-21ನೇ ಸಾಲಿನಲ್ಲಿ ಕೂಡ್ಲಿಗಿ ವಿಧಾನಸಭೆ ಕ್ಷೇತ್ರದಲ್ಲಿ ದಿನಗೂಲಿ ಬಡನೌಕರರಿಗೆ 2 ವರ್ಷಗಳಿಂದಲೂ ವೇತನವೇ ಪಾವತಿಯಾಗಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

 

ಡಿಎಂಎಫ್‌ ಯೋಜನೆಯಡಿಯಲ್ಲಿ ಕೂಡ್ಲಿಗಿ ವಿಧಾನಸಭೆ ಕ್ಷೇತ್ರದಲ್ಲಿ ವಿವಿಧ ಅರಣ್ಯ ಕಾಮಗಾರಿಗಳನ್ನು ನಿರ್ವಹಿಸಿ ಮುಗಿಸಿರುವ ದಿನಗೂಲಿ ಬಡನೌಕರರಿಗೆ 2 ವರ್ಷಗಳು ಕಳೆದರೂ ಸಹ ವೇತನ ಪಾವತಿಯಾಗಿಲ್ಲದಿರುವ ಕುರಿತು ಶಾಸಕ ಡಾ ಎನ್‌ ಟಿ ಶ್ರೀನಿವಾಸ್‌ ಅವರು ನಿಯಮ 73 ಅಡಿ ಗಮನ ಸೆಳೆಯುವ ಸೂಚನೆ ಪ್ರಸ್ತಾಪಿಸಿದ್ದರು.

 

‘ಅರಣ್ಯ ಕೆಲಸಗಳನ್ನು ನಿರ್ವಹಿಸಿ ಮುಗಿಸಿರುವ ದಿನಗೂಲಿ ಬಡ ನೌಕರರಿಗೆ 2 ವರ್ಷಗಳು ಮುಗಿದಿದ್ದರೂ ಸಹ ಇದುವರೆಗೂ ವೇತನವನ್ನು ಪಾವತಿಸಿರುವುದಿಲ್ಲ. ಇದರಿಂದಾಗಿ ದಿನಗೂಲಿ ನೌಕರರು ತಮ್ಮ ದೈನಂದಿನ ಜೀವನಕ್ಕಾಗಿ ಬೇಕಾಗಿರುವ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲಾ ಶುಲ್ಕವನ್ನು ಪಾವತಿಸಲು ಪರದಾಡುತ್ತಿದ್ದಾರೆ,’ ಎಂದು ಗಮನಸೆಳೆಯುವ ಸೂಚನೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಈ ಕುರಿತು ಅರಣ್ಯ ಇಲಾಖೆಯ ಎ ಶಾಖೆಯ ಅಧಿಕಾರಿಗಳು 2023ರ ಜುಲೈ 13ರಂದು  ಚರ್ಚಿಸಿದ್ದಾರಾದರೂ ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆಗೆ ಅವಕಾಶ ದೊರೆತಿರಲಿಲ್ಲ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಮೇಲ್‌ ಮೂಲಕ ಉತ್ತರ ಕೋರಿದ್ದರು ಎಂದು ತಿಳಿದು ಬಂದಿದೆ.

 

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಖನಿಜಗಳ ಮೇಲೆ ಸಂಗ್ರಹವಾಗಿರುವ ರಾಜಧನದ ಮೇಲೆ ಜಿಲ್ಲಾ ಖನಿಜ ಟ್ರಸ್ಟ್‌ ಅಡಿಯಲ್ಲಿ ಸಂಗ್ರಹಿಸಿದ ಡಿಎಂಎಫ್‌ ಮೊತ್ತದಲ್ಲಿ 3,932.45 ಕೋಟಿ ರು. ಮೊತ್ತಕ್ಕೆ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ. ಅದರಲ್ಲಿ 12,132 ಕಾಮಗಾರಿಗಳನ್ನು ಕೈಗೊಂಡು 1,885.95 ಕೋಟಿ ರು .ಮೊತ್ತ ವಿನಿಯೋಗಿಸಿ 5,159 ಕಾಮಗಾರಿಗಳು ಪೂರ್ಣಗೊಂಡಿರುವುದು ತಿಳಿದು ಬಂದಿದೆ.

 

ಸರ್ಕಾರವು 2021ರ ಡಿಸೆಂಬರ್‌ 1ರಂದು ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ )ನಿಯಮಗಳು 2021ರನ್ನು ಜಾರಿಗೆ ತಂದಿದ್ದು ಸದರಿ ನಿಯಮ 31-4 (13) ಮತ್ತು ನಿಯಮ 31-ಝಡ್‌ ಎ (3) ರಲ್ಲಿ ನದಿಪಾತ್ರದ ಮರಳು ಗಣಿಗಾರಿಕೆಗಯಿಂದ ಸಂಗ್ರಹವಾದ ರಾಜಧನದ ಮೊತ್ತದಲ್ಲಿ ಶೇ.25ರಷ್ಟು ಮೊತ್ತವನ್ನು ಸಂಬಂಧಿಸಿದ ಗ್ರಾಮ ಪಂಚಾಯ್ತಿಗಳಿಗೆ ಹಾಗೂ ಶೇ.25ರ ಮೊತ್ತವನ್ನು ಆಯಾ ತಾಲೂಕಿನ ಉಳಿದ ಗ್ಋಆಮ ಪಂಚಾಯ್ತಿಗಳೀಗೆ ನೀಡಲು ಅವಕಾಶ ಕಲ್ಪಿಸಿದೆ.

 

ಕಳೆದ ಸಾಲಿನಲ್ಲಿ ರಾಜ್ಯದಲ್ಲಿ ಮರಳು ಗಣಿಗಾರಿಕೆಯಿಂದ ಸಂಗ್ರಹವಾದ ರಾಜಧನ ಶೇ.25ರಷ್ಟು ಮೊತ್ತವ 412.02 ಲಕ್ಷ ರು.ಗಳನ್ನುಸ ಂಬಮಧ ಪಟ್ಟ ಗ್ರಾಮ ಪಂಚಾಯ್ತಿಗಳಿಗೆ ಬಿಡುಗಡೆ ಮಾಡಿದೆ. ಡಿಎಂಎಫ್‌ ಟಿ 2016ರ ನಿಯಮ 18(2)ರಂತೆ ಡಿಎಂಎಫ್‌ ನಿಧಿಯ6ಲ್ಲಿ ಎಂಡೋಮೆಂಟ್‌ ಮತ್ತು ಆಡಳಿತಾತ್ಮಕ ವೆಚ್ಚವನ್ನು ಹೊರತುಪಡಿಸಿ ಉಳಿದ ಶೇ.85ರಷ್ಟು ಮೊತ್ತವನ್ನು 60;40ರ ಅನುಪಾತದಲ್ಲಿ ಗಣಿಬಾಧಿತ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಿದೆ ಎಂದು ಗೊತ್ತಾಗಿದೆ.

 

ಬಳ್ಳಾರಿಯಲ್ಲಿ 1,979.43 ಕೋಟಿ ರು., ವಿಜಯನಗರ (ಹೊಸಪೇಟೆ)ಯಲ್ಲಿ 463.70 ಕೋಟಿ ರು., ಕಲ್ಬುರ್ಗಿಯಲ್ಲಿ 518.60 ಕೋಟಿ ರು., ಚಿತ್ರದುರ್ಗದಲ್ಲಿ 436.50 ಕೋಟಿ ರು., ಬಾಗಲಕೋಟೆಯಲ್ಲಿ 106.07ಕೋಟಿ ರು., ತುಮಕೂರು ಜಿಲ್ಲಿ 48.01 ಕೋಟಿ ರು., ಕೊಪ್ಪಳದಲ್ಲಿ 66.55 ಕೋಟಿ ಸಂಗ್ರಹವಾಗಿದೆ.

 

ರಾಯಚೂರಿನಲ್ಲಿ 59.58 ಕೋಟಿ ರು., ಚಿಕ್ಕಬಳ್ಳಾಪುರದಲ್ಲಿ 61.78 ಕೋಟಿ ರು., ರಾಮನಗರದಲ್ಲಿ 50.51 ಕೋಟಿ, ಬೆಂಗಳೂರು ನಗರ ಜಿಲ್ಲೆಯಲ್ಲಿ 52.51 ಕೋಟಿ , ಬೆಳಗಾವಿಯಲ್ಲಿ 46.22 ಕೋಟಿ , ಬೆಂಗಳೂರು ಗ್ರಾಮಾಂತರದಲ್ಲಿ 46.22 ಕೋಟಿ, ಚಾಮರಾಜನಗರದಲ್ಲಿ 30.92 ಕೋಟಿ, ಹಾಸನದಲ್ಲಿ 21.37 ಕೋಟಿ, ಉತ್ತರ ಕನ್ನಡದಲ್ಲಿ 15.85 ಕೋಟಿ ವಸೂಲಾಗಿದೆ.

 

ಕೋಲಾರದಲ್ಲಿ 15.48 ಕೋಟಿ, ದಕ್ಷಿಣ ಕನ್ನಡದಲ್ಲಿ 14.80 ಕೋಟಿ, ಚಿಕ್ಕಮಗಳೂರಿನಲ್ಲಿ 15.14 ಕೋಟಿ, ಉಡುಪಿಯಲ್ಲಿ 14.17 ಕೋಟಿ, ಗದಗ್‌ನಲ್ಲಿ 9.92 ಕೋಟಿ, ಧಾರವಾಡದಲ್ಲಿ 9.15 ಕೋಟಿ, ಮಂಡ್ಯದಲ್ಲಿ 8.06 ಕೋಟಿ, ಹಾವೇರಿಯಲ್ಲಿ 7.70 ಕೋಟಿ, ದಾವಣಗೆರೆಯಲ್ಲಿ 7.05 ಕೋಟಿ, ವಿಜಯಪುರದಲ್ಲಿ 5.73 ಕೋಟಿ, ಶಿವಮೊಗ್ಗದಲ್ಲಿ 3.87 ಕೋಟಿ, ಮೈಸೂರಿನಲ್ಲಿ 3.01 ಕೋಟಿ, ಕೊಡಗು 1.71 ಕೋಟಿ, ಬೀದರ್‌ನಲ್ಲಿ 2.12 ಕೋಟಿ, ಯಾದಗಿರಿಯ್ಲಿ 1.46 ಕೋಟಿ ರು ಸೇರಿ 4,118.17 ಕೋಟಿ ಸಂಗ್ರಹವಾಗಿದೆ.

 

ಕುಡಿಯುವ ನೀರು ಕಾಮಗಾರಿ, ಮಾಲಿನ್ಯ ನಿಯಂತ್ರಣಮಂಡಳಿಲ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ, ವಿಕಲಚೇತನರ ಕಲ್ಯಾಣ, ಕೌಶಲ್ಯಾಭಿವೃದ್ಧಿ, ಭೌತಿಕ ಮೂಲ ಸೌಕರ್ಯ, ನೀರಾವರಿ, ಇಂಧನ, ಜಲಾನಯನ, ಸೇರಿ ಇನ್ನಿತರೆ ಕಾಮಗಾರಿಗಳೀಗೆ ಈ ಪೈಕಿ 1,885.95 ಕೋಟಿ ರು. ಖರ್ಚಾಗಿದೆ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts