ಬೆಂಗಳೂರು; ಸಂಘ ಪರಿವಾರದ ಅಂಗ ಸಂಸ್ಥೆಯೂ ಸೇರಿದಂತೆ ರಾಜ್ಯದ ವಿವಿಧ ಖಾಸಗಿ ಸಂಘ ಸಂಸ್ಥೆಗಳಿಗೆ ಗೋಮಾಳವನ್ನು ನಿಯಮ ಮತ್ತು ಕಾನೂನುಬಾಹಿರವಾಗಿ 212 ಎಕರೆ ಮಂಜೂರು ಮಾಡಿ ಹೊರಡಿಸಿರುವ ಆದೇಶವನ್ನು ತಡೆಹಿಡಿದಿರುವ ಕಾಂಗ್ರೆಸ್ ಸರ್ಕಾರವು ಚಾಣಕ್ಯ ವಿಶ್ವವಿದ್ಯಾಲಯಕ್ಕೆ ನೀಡಿರುವ ಅಂದಾಜು 300 ಕೋಟಿ ರು. ಬೆಲೆಬಾಳುವ 116 ಎಕರೆ 16 ಗುಂಟೆ ಜಮೀನನ್ನು ಹಿಂಪಡೆಯುವುದರ ಬಗ್ಗೆ ಯಾವುದೇ ತೀರ್ಮಾನವನ್ನು ಇದುವರೆಗೂ ಕೈಗೊಂಡಿಲ್ಲ.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ ಸಿ ಎನ್ ಅಶ್ವಥ್ ನಾರಾಯಣ್ ಅವರು 2021ನೇ ಸಾಲಿನ ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದ್ದ ಹೊತ್ತಿನಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಸೇರಿದಂತೆ ಪ್ರತಿಪಕ್ಷ ಕಾಂಗ್ರೆಸ್ ಶಾಸಕರೆಲ್ಲರೂ ಒಕ್ಕೊರಲಿನಿಂದ ಈ ವಿಧೇಯಕವನ್ನು ವಿರೋಧ ಪಡಿಸಿದ್ದರ. ಅಲ್ಲದೇ ಈ ವಿಧೇಯಕವನ್ನು introduction ನೀಡಲು ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿದ್ದರು.
ಇದೀಗ 2 ತಿಂಗಳ ಅವಧಿಯನ್ನು ಪೂರ್ಣಗೊಳಿಸಿರುವ ಕಾಂಗ್ರೆಸ್ ಸರ್ಕಾರವು ಸಂಘ ಪರಿವಾರದ ಹಿನ್ನೆಲೆ ಹೊಂದಿರುವ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಕನಿಷ್ಠ ದರದಲ್ಲಿ ನೀಡಿರುವ 116 ಎಕರೆ 16 ಗುಂಟೆ ಜಮೀನನ್ನು ಹಿಂಪಡೆಯುವುದರ ಬಗ್ಗೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಜಮೀನು ನೀಡಿದ್ದರ ಸಂಬಂಧ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಸದನದಲ್ಲಿ ಮಾತನಾಡಿದ್ದನ್ನು ‘ದಿ ಫೈಲ್’ ಕ್ರೋಢೀಕರಿಸಿ ಇಲ್ಲಿ ನೀಡಿದೆ.
116 ಎಕರೆ 16 ಗುಂಟೆಯನ್ನು 50 ಕೋಟಿ ರುಪಾಯಿಗೆ ಕೆಐಎಡಿಬಿಯವರು ಸ್ವಾಧೀನ ಮಾಡಿರುವ ಜಮೀನನ್ನು ಕೊಟ್ಟಿದ್ದಾರೆ. ಕೆಎಐಡಿಬಿಯವರು ಸ್ವಾಧೀನ ಮಾಡಿರುವ ಜಮೀನನ್ನು ಕೊಟ್ಟಿದ್ದಾರೆ. ಏಕೆ ಕೊಟ್ಟೀರಿ? ಇದೊಂದು ಖಾಸಗಿ ವಿಶ್ವವಿದ್ಯಾಲಯ. ಏನು ಸರ್ಕಾರಿ ವಿಶ್ವವಿದ್ಯಾಲಯವೇ? ಖಾಸಗಿ ವಿಶ್ವವಿದ್ಯಾಲಯಕ್ಕೆ ಕೊಟ್ಟಿರುವ ಉದ್ಧೇಶವಾದರೂ ಏನು? what is the purpose of this university ? No it is impossible ಈ ಬಿಲ್‌ನ್ನು ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. introduction ಕೊಡುವುದು ಬೇಡ
ಈಗ ಈ ವಿಧೇಯಕವನ್ನು ಚಾಣಕ್ಯ ಯುನಿವರ್ಸಿಟಿ ಎಂಬ ಒಂದು ಖಾಸಗಿ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡುವುದಕ್ಕಾಗಿ ತಂಧಿರುವುದು. ಕೆಎಐಡಿಬಿಯು ಯಾಔ ಉದ್ದೇಶಕ್ಕಾಗಿ ಜಮೀನು ಅಕ್ವೇರ್ ಮಾಡಿದೆ? ಇಂಡಸ್ಟ್ರೀ ಮಾಡಲು ತೆಗೆದುಕೊಂಡಿರುವುದು. ಜಮೀನು ಇರುವುದು ಎಲ್ಲಿ? ದೇವನಹಳ್ಳಿ ಬಳಿ ಇರುವ ಏರೋ ಸ್ಪೇಸ್ ಪಕ್ಕದಲ್ಲಿರುವ ಜಮೀನನ್ನು ತೆಗೆದುಕೊಂಡಿರುವುದು. ಕೆಐಡಿಬಿಯಿಂದ 116 ಎಕರೆ 16 ಗುಂಟೆ ಜಾಗವನ್ನು ನೀವು ಎಷ್ಟು ದರಕ್ಕೆ ಕೊಟ್ಟೀದ್ದೀರಿ? ಯಾವ ಉದ್ಧೇಶಕ್ಕೆಂದು ಜಮೀನನ್ನು ಅಕ್ವೇರ್ ಮಾಡಿದಿರಿ. ಆ ಉದ್ದೇಶಕ್ಕೆ ವಿರುದ್ಧವಾಗಿ ಒಂದು ಖಾಸಗಿ ವಿಶ್ವವಿದ್ಯಾಲಯಕ್ಕೆ 50 ಕೋಟಿ ರು.ಗಳಿಗೆ ಜಮೀನನ್ನು ಮಾರಾಟ ಮಾಡಿದ್ದೀರಿ.
ಕೆಐಡಿಬಿಯವರು ಎಷ್ಟು ದರಕ್ಕೆ ತೆಗೆದುಕೊಂಡಿದ್ದಾರೆ? ಒಂದು ಎಕರೆಗೆ ಒಂದೂವರೆ ಕೋಟಿಗಳನ್ನು ಕೊಟ್ಟು ರೈತರಿಂದ ಲ್ಯಾಂಡ್ ಅಕ್ವೇರ್ ಮಾಡಿದ್ದಾರೆ. ಒಂದು ಎಕರೆಗೆ ಒಂದೂವರೆ ಕೋಟಿ ಎಂದರೆ 116 ಎಕರೆ 16 ಗುಂಟೆ ಜಮೀನಿಗೆ ಎಷ್ಟಾಯಿತು? 175 ಕೋಟಿ ರು. ಆಗುತ್ತದೆ. ಇಂಡಸ್ಟ್ರೀಗಳಿಗೆ ನೀವು ಲ್ಯಾಂಡ್ ಅಲಾಟ್ ಮಾಡಬೇಕಾಧರೆ 5ರಿಂದ 10 ಪಟ್ಟು ಜಮೀನನ್ನು ಡೆವಲೆಪ್ ಮಾಢಿ ಕೊಡುತ್ತೀರಿ. ಆ ರೀತಿ ಲೆಕ್ಕ ಹಾಕಿದರೆ ಆ ಪ್ರಾಪರ್ಟಿಯ ವ್ಯಾಲ್ಯು ಕನಿಷ್ಠ 300 ಕೋಟಿ ಆಗುತ್ತದೆ. ಕೈಗಾರಿಕೆ ಅಭಿವೃದ್ಧಿ ಮಾಡುವ ಉದ್ದೇಶದಿಂದ ಅಕ್ವೈರ್ ಮಾಡಿದ ಜಮೀನನ್ನು ಖಾಸಗಿ ವಿಶ್ವವಿದ್ಯಾಲಯದವರಿಗೆ ಕೊಡಲು ಬರುವುದಿಲ್ಲ. ಇದು ನಂಬರ್ 1.
ಎರಡನೆಯದಾಗಿ ಇದು ಕಾನೂನಿಗೆ ಮತ್ತು ಉದ್ದೇಶಕ್ಕೆ ವಿರುದ್ಧವಾದದು.
ರೈತರಿಂದ ಜಮೀನನ್ನು ಅಕ್ವೈರ್ ಮಾಡಿಕೊಳ್ಳುವಾಗ ಎಷ್ಟು ದರ ನೀಡಿದ್ದೀರಿ? ಒಂದು ಎಕರೆಗೆ ಒಂದೂವರೆ ಕೋಟಿ ರುಪಾಯಿ.ಇದೇ ಜಮೀನು, ಯಾವ ಜಮೀನನ್ನು ಖಾಸಗಿ ವಿಶ್ವವಿದ್ಯಾಲಯಕ್ಕೆ ಕೊಡುತ್ತಿದ್ದಾರೆ? ಅದೇ ಜಮೀನನ್ನು ಒಂದು ಎಕರೆಗೆ ಒಂದೂವರೆ ಕೋಟಿ ರು.ಗಳನ್ನು ಕೊಟ್ಟು ಅಕ್ವೈರ್ ಮಾಡಿಕೊಂಡಿದ್ದಾರೆ. 116 ಎಕರೆ 16 ಗುಂಟೆ ಎಂಧರೆ….ಯಾರ ಸ್ವತ್ತು ಅದು? ಸರ್ಕಾರದ ದುಡ್ಡು, ಅ ರೀತಿ ಎಷ್ಟು ಜನರಿಗೆ ಕೊಟ್ಟೀದ್ದೀರಿ.
ಚಾಣಕ್ಯ ವಿವಿಗೆ 116 ಎಕರೆ ಬಳುವಳಿ; ಆರೆಸ್ಸೆಸ್ ಓಲೈಸಲು ಇಲಾಖೆ ಟಿಪ್ಪಣಿ ಬದಿಗಿರಿಸಿತ್ತೇ?
ನೋ ಹಾಗೆ ಕೊಡಲು ಬರುವುದಿಲ್ಲ. ಅಕ್ವೈರ್ ಮಾಡಿರುವದು ಏತಕ್ಕೋಸ್ಕರ, ನಿಮಗೆ ಗೊತ್ತಿಲ್ಲ ಕೇಳಿ ಜಮೀನನ್ನು ಕೆಐಎಡಿಬಿಯಿಂದ 50 ಕೋಟಿ ರು.ಗಳಿಗೆ ಕೊಟ್ಟಿರುವಂತದ್ದು. ಜಮೀನು ಕೊಟ್ಟಿರುವುದರಲ್ಲಿಯೇ ಸ್ಕ್ಯಾಂಡಲ್ ಆಗಿದೆಯಲ್ಲ, ಸರ್ಕಾರಕ್ಕೆ ನಷ್ಟವಾಗುತ್ತಿದೆಯಲ್ಲ. ಯುನಿವರ್ಸಿಟಿ ಈಸ್ ಕಮಿಂಗ್ ಆನ್ ವಿಚ್ ಲ್ಯಾಂಡ್? ಅಭಿವೃದ್ಧಿ ಕಾರ್ಯಗಳಿಗೆ ದುಡ್ಡಿಲ್ಲವೆಂದು ಹೇಳುತ್ತಿದ್ದೀರಿ. 300 ಕೋಟಿ ರು.ಗಳು ಸರ್ಕಾರಕ್ಕೆ ನಷ್ಟವಾಗುತ್ತಿದೆಯಲ್ಲ, ಇದನ್ನು ಒಪ್ಪಬೇಕಾ?
ಯು ಟೆಲ್ ಮಿ,ದಿ ಲ್ಯಾಂಡ್ ಬಿಲಾಂಗ್ಸ್ ಟು ವೂಂ? ಯಾರು ವಿಶ್ವವಿದ್ಯಾಲಯವನ್ನು ತೆರೆಯುತ್ತಿದ್ದಾರೋ ಅವರಿಗೆ ಸೇರಿದ್ದಾ? ಕೆಐಎಡಿಬಿ ಜಮೀನಲ್ಲವಾ? ರೈತರಿಂದ ಅಕ್ವೈರ್ ಮಾಢಿಕೊಂಡಿರುವ ಜಮೀನಲ್ಲವೇ? ಎಷ್ಟು ಕೊಟ್ಟಿದ್ದೀರಿ ಒಂದು ಎಕರೆಗೆ. 50 ಕೋಟಿ ರು.ಗಳಿಗೆ ಇದನ್ನು ಕೊಡಬೇಕಾದ ಅಗತ್ಯವೇನಿದೆ? ಮೂಲ ಉದ್ದೇಶಕ್ಕೆ ವಿರುದ್ಧವಾಗಿ ಈ ಬಿಲ್ ತಂದಿದ್ದೀರಿ?
ನಾನು ಯುನಿವರ್ಸಿಟಿ ಬರುವುದಕ್ಕೆ, ಖಾಸಗಿ ವಿಶ್ವವಿದ್ಯಾಲಯ ಮಾಡುವುದಕ್ಕೆ, ಚಾಣಕ್ಯ ವಿಶ್ವವಿದ್ಯಾಲಯ ಮಾಡುವುದಕ್ಕೆ ನನ್ನದೇನೂ ತಕರಾರು ಇಲ್ಲ. ಆಧರೆ ಸರ್ಕಾರ ದಿನಾಂಕ 28-04-2021ರಲ್ಲಿ ಏರೋಸ್ಪೇಸ್ ಪಾರ್ಕ್ ಪಕ್ಕದಲ್ಲಿರುವ ಜಮೀನನ್ನು ನೀಡಲು ಹೊರಟಿದೆ. ಇದು ಯಾವ ಜಮೀನು, ಅದು ಕೆಐಎಡಿಬಿಯಿಂದ ಇಂಡಸ್ಟ್ರಿಗಳಿಗೋಸ್ಕರ ಅಕ್ವೈರ್ ಆಘಿರತಕ್ಕಂತಹ ಜಮೀನು. ಅದು ಗೌರ್ನ್‌ಮೆಂಟ್ ಜಮೀನು. ಅದಕ್ಕೆ ಒಂದೂವರೆ ಕೋಟಿ ರುಪಾಯಿಗಳ ಪರಿಹಾರವನ್ನು ನೀಡಿ ಆ ಜಮೀನನ್ನು ಅಕ್ವೈರ್ ಮಾಡಿಕೊಂಡಿದ್ದಾರೆ.