Friday | March 27, 2026 |

ಸಾಲ; 2,888 ಮಂದಿ ನಾಪತ್ತೆ, ಅಸಲು ಬಡ್ಡಿ ಸೇರಿ 1,733 ಕೋಟಿ ಬಾಕಿ, ಬಹಿರಂಗವಾಗದ ಅಪೆಕ್ಸ್‌ ಗ್ರಾಹಕರ ಹೆಸರು

Support THE-FILE

spot_img

ಬೆಂಗಳೂರು; ರಾಜ್ಯದ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಮರು ಪಾವತಿ ಮಾಡದಿರುವ ಸಾಲದ ಅಸಲು 1,400 ಕೋಟಿ ರು., ಬಡ್ಡಿ 333 ಕೋಟಿ ರು. ಇದೆ. ಸಾಲ ಪಡೆದವರ ಪೈಕಿ 2,888 ಮಂದಿ ಪತ್ತೆಯಾಗಿಲ್ಲ.

ಇದು ವಿಧಾನ ಪರಿಷತ್‌ ಸದಸ್ಯ ಡಿ ಎಸ್‌ ಅರುಣ್‌ ಅವರು ಕೇಳಿರುವ ಪ್ರಶ್ನೆಗೆ  ಸಹಕಾರ ಸಚಿವ ಕೆ ಎನ್‌ ರಾಜಣ್ಣ ಅವರು ನೀಡಿರುವ ಉತ್ತರ.

ಅಪೆಕ್ಸ್‌ ಬ್ಯಾಂಕ್‌ನಲ್ಲಿ 37 ಮಂದಿ ನಾಪತ್ತೆಯಾಗಿದ್ದು 127.79 ಲಕ್ಷ ಅಸಲು ಮ್ತು 68.71 ಲಕ್ಷ  ಬಡ್ಡಿ ಸೇರಿ ಒಟ್ಟು 196.5 ಲಕ್ಷ ಗಳು ಮರುಪಾವತಿಯಾಗಿಲ್ಲ ಎಂದು ಸಚಿವರು ನೀಡಿರುವ ಉತ್ತರದಿಂದ ತಿಳಿದುಬಂದಿದೆ.

ರಾಜ್ಯದ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಮರು ಪಾವತಿ ಮಾಡದೇ ಪತ್ತೆಯಾಗದವರ ಸಂಖ್ಯೆ ಮತ್ತು ಹೆಸರಿನ ಪಟ್ಟಿಯನ್ನು ಒದಗಿಸಿರುವ ಸಚಿವ ಕೆ ಎನ್‌ ರಾಜಣ್ಣ ಅವರು ಅಪೆಕ್ಸ್‌ ಬ್ಯಾಂಕ್‌ನಲ್ಲಿ ಸಾಲ ಪಡೆದು ಪತ್ತೆಯಾಗದವರ ಹೆಸರುಗಳನ್ನು ಬಹಿರಂಗಪಡಿಸದೇ ಗ್ರಾಹಕರ ಹೆಸರನ್ನು ಮುಚ್ಚಿಟ್ಟಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಅಪೆಕ್ಸ್‌ ಬ್ಯಾಂಕ್‌ನಿಂದ ಸಾಲ ಪಡೆದು ನಾಪತ್ತೆಯಾದವರ ಹೆಸರುಗಳನ್ನು ಬಹಿರಂಗಪಡಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ವಿಶೇಷವೆಂದರೆ ಕೆ ಎನ್‌ ರಾಜಣ್ಣ ಅವರು ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 2 ಸಾವಿರ ಕೋಟಿಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿತ್ತು ಎಂಬ ಬಲವಾದ ಆರೋಪ ಕೇಳಿ ಬಂದಿತ್ತು.

ಮರು ಪಾವತಿ ಮಾಡದೇ ಪತ್ತೆಯಾಗದವರು

ಪಟ್ಟಣ ಸಹಕಾರ ಬ್ಯಾಂಕ್‌ಗಳ ಪೈಕಿ ಬೆಂಗಳೂರು ನಗರದಲ್ಲಿ 2,485 ವ್ಯಕ್ತಿಗಳಿದ್ದಾರೆ. ಮೈಸೂರಿನಲ್ಲಿ 132, ಕಲ್ಬುರ್ಗಿಯಲ್ಲಿ ಶೂನ್ಯ, ಬೆಳಗಾವಿಯಲ್ಲಿ 15 ಮಂದಿ ಇದ್ದಾರೆ. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನಲ್ಲಿ 37 ಮಂದಿ, ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ 29, ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 158 ಮಂದಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಲ್ಲಿ 13 ಒಟ್ಟು 2,888 ಮಂದಿ ನಾಪತ್ತೆಯಾಗಿರುವುದು ಕೆ ಎನ್‌ ರಾಜಣ್ಣ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ಪಟ್ಟಣ ಸಹಕಾರ ಬ್ಯಾಂಕ್‌ಗಳ ಪೈಕಿ ಬೆಂಗಳೂರು ನಗರದಲ್ಲಿರುವ ಬ್ಯಾಂಕ್‌ಗಳಲ್ಲಿ ಪತ್ತೆಯಾಗದ 2,485 ಮಂದಿಯಿಂದ ಅಸಲು 1,400 ಕೋಟಿ ರು ಅಸಲು ಮತ್ತು 596.72 ಲಕ್ಷ ರು., ಮೈಸೂರಿನಲ್ಲಿ 132 ಮಂದಿಯಿಂದ 24.1 ಲಕ್ಷ ಅಸಲು ಮತ್ತು 32.38 ಬಡ್ಡಿ, ಬೆಳಗಾವಿಯಲ್ಲಿ 15 ಮಂದಿಯಿಂದ 17.24 ಲಕ್ಷ ರು ಅಸಲು ಮತ್ತು 24.44 ಲಕ್ಷ ಬಡ್ಡಿ ವಸೂಲಾಗಬೇಕಿದೆ.

ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದ 29 ಗ್ರಾಹಕರಿದಂದ 14.24 ಲಕ್ಷ ರು ಅಸಲು ಮತ್ತು 24.85 ಲಕ್ಷ ರು. ಬಡ್ಡಿ, ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್‌ನಿಂದ 158 ಮಂದಿಯಿಂದ 141.61 ಲಕ್ಷ ಅಸಲು ಮತ್ತು 178.16 ಲಕ್ಷ ಬಡ್ಡಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ 13 ಮಂದಿಯಿಂದ 54.82 ಲಕ್ಷ ರು. ಅಸಲು, 41.09 ಲಕ್ಷ ಬಡ್ಡಿ ವಸೂಲಾಗಬೇಕಿದೆ.

ಮಂಡ್ಯ ಸಿಟಿ ಕೋ ಆಪರೇಟೀವ್‌ ಬ್ಯಾಂಕ್‌, ಕೊಡಗು ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ್‌, ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್‌, ಬೆಂಗಳೂರಿನ ದೀಕ್‌ ಸಹಕಾರಿಬ fಯಾಂಕ್‌, ಜನತಾ ಕೋ ಆಪರೇಟೀವ್ ಬ್ಯಾಂಕ್‌, ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌, ಬೆಂಗಳೂರು ಗ್ರಾಮಾಂತರದ ದಿ ಟೌನ್‌ ಕೋ ಆಪರೇಟೀವ್‌ ಸಹಕಾರಿ ಬ್ಯಾಂಕ್‌, ದೊಡ್ಡಬಳ್ಳಾಪುರ ದಿ ಟೆಕ್ಸ್‌ಟೈಲ್ ಮ್ಯಾನುಫ್ಯಾಕ್ಟರ್‌ ಕೋ ಆಪರೇಟೀವ್‌ ಬ್ಯಾಂಕ್‌, ಗ್ರಾಹಕರ ಹೆಸರುಗಳನ್ನು ಒದಗಿಸಿದೆ.

ಗುರುರಾಘವೇಂದ್ರ ಬ್ಯಾಂಕ್‌ ಹಗರಣ; 20 ವರ್ಷದಿಂದಲೂ ಅವ್ಯವಹಾರ, ಕಣ್ಮುಚ್ಚಿ ಕುಳಿತಿದ್ದ ಸರ್ಕಾರ

ಈ ಮೊತ್ತಗಳ ಪೈಕಿ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಬೆಂಗಳೂರು ಇದರ ಅಸಲು 1,400 ಕೋಟಿ ರು., ಹಾಗೂ ಬಡ್ಡಿ 323.73 ಕೋಟಿ ರು. ಇದೆ. ಬಡ್ಡಿಯನ್ನು ಎವರ್‍‌ ಗ್ರೀನ್‌ ಕ್ರೆಡಿಟ್‌ ಎಂಬುದಾಗಿ ಮತ್ತು 1,400 ಕೋಟಿ ರು. ಸಾಲವನ್ನು ಅನುತ್ಪಾದಕ ಆಸ್ತಿ ನಷ್ಟ ಎಂದು ಘೋಷಿಸಿದೆ.

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌; 1,400 ಕೋಟಿ ರು. ಮೊತ್ತದ ಸಾಲ ಅನುತ್ಪಾದಕ ಆಸ್ತಿ ಎಂದು ಘೋಷಣೆ

2020ರ ಮಾರ್ಚ್‌ 31ರಿಂದ ಈ ಸಾಲದ ಖಾತೆಗಳಿಗೆ ಬಡ್ಡಿ ವಿಧಿಸಿರುವುದಿಲ್ಲ ಎಂದು ಗೊತ್ತಾಗಿದೆ.

Hot this week

ನರೇಗಾ ವಸತಿ ಕಾಮಗಾರಿಗಳಲ್ಲಿ ಮೋಸದ ಪಾವತಿ; ಚೆಕ್ ಡ್ಯಾಂ ಕಾಮಗಾರಿಯೇ ಇಲ್ಲ, ಆದರೂ ಹಣ ಪಾವತಿ

ಬೆಂಗಳೂರು; 847 ಸಂಖ್ಯೆ ವಸತಿ  ಕಾಮಗಾರಿಗಳಲ್ಲಿ  ಮೋಸದ ಪಾವತಿಗಳಾಗಿರುವುದನ್ನು ಭಾರತದ ಲೆಕ್ಕ...

42,750 ಕೋಟಿ ದೀರ್ಘಾವಧಿ ಸಾಲ, 4,516 ಕೋಟಿ ಆದಾಯ ಕೊರತೆ; ಎಸ್ಕಾಂಗಳ ಆರ್ಥಿಕ ಸ್ಥಿತಿ ಅನಾವರಣ

ಬೆಂಗಳೂರು; ವಿದ್ಯುತ್ ಸರಬರಾಜು ಕಂಪನಿಗಳು ಇದುವರೆಗೆ ಒಟ್ಟಾರೆ 42,750 ಕೋಟಿಗಳಷ್ಟು ದೀರ್ಘಾವಧಿ...

ಹಿಂದುಳಿದ ವರ್ಗ ವಸತಿ ಶಾಲೆ ಕಟ್ಟಡಗಳು ಶಿಥಿಲ; ಕಟ್ಟಡಗಳ ದುರಸ್ತಿಗೂ ಅನುದಾನವಿಲ್ಲ, ‘ಕೈ’ ಎತ್ತಿದ ಸರ್ಕಾರ

ಬೆಂಗಳೂರು;  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ಶಾಲೆಗಳು ಶಿಥಿಲಗೊಂಡಿದ್ದರೂ...

ನರೇಗಾ ಕಾಮಗಾರಿಗಳ ಆರಂಭದ ದಿನಾಂಕವೂ ಇಲ್ಲ, ದತ್ತಾಂಶವೂ ಇಲ್ಲ; 1,007.83 ಕೋಟಿ ರು. ವೆಚ್ಚದ ಕಾಮಗಾರಿಗಳು ಅಪೂರ್ಣ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿಗಳ ಪೈಕಿ ಒಂದು ವ‍ರ್ಷಕ್ಕಿಂತಲೂ ಹೆಚ್ಚು...

ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳ ಕುಟುಂಬ ಸದಸ್ಯರ ಉದ್ಯಮ, ಹಣಕಾಸಿನ ವ್ಯವಹಾರ; ಸದನಕ್ಕೆ ಒದಗಿಸಬಹುದೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಖಿಲ ಭಾರತ...

Topics

ನರೇಗಾ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಿಯಮ ಉಲ್ಲಂಘನೆ; 86.67 ಕೋಟಿ ರು ಅಕ್ರಮ ಪತ್ತೆ ಹಚ್ಚಿದ ಸಿಎಜಿ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಮಾನವ ಸಂಪನ್ಮೂಲ ಬಳಕೆಗಾಗಿ ಮಾಡಿಕೊಂಡಿದ್ದ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಡೆದಿದ್ದ...

ಮೋಸದ ವಹಿವಾಟು, ಹೆಚ್ಚಿನ ಪಾವತಿ, ಅಕ್ರಮ ವೆಚ್ಚ; ನರೇಗಾದ ಮತ್ತೊಂದು ಮುಖ ಬಯಲು ಮಾಡಿದ ಸಿಎಜಿ

ಬೆಂಗಳೂರು; ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡಿದ್ದ ಕಾಮಗಾರಿಗಳು...

ಗೃಹಜ್ಯೋತಿ; 23,823.06 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ, ಎಸ್ಕಾಂಗಳಿಗೆ 631.75 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

  ಬೆಂಗಳೂರು; ಗೃಹ ಜ್ಯೋತಿ ಯೋಜನೆ ಅನುಷ್ಠಾನಗೊಳಿಸಿರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸರ್ಕಾರವು...

Related Articles

Popular Categories

error: Content is protected !!