ಬೆಂಗಳೂರು; 2023-24ನೇ ಸಾಲಿನಲ್ಲಿ ಸರ್ಕಾರಿ ಅಧಿಕಾರಿ, ನೌಕರರ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಮೂರು ಬಾರಿ ಅವಧಿ ವಿಸ್ತರಿಸಿ ಹೊರಡಿಸಿದ್ದ ಸುತ್ತೋಲೆಯನ್ನೂ ಉಲ್ಲಂಘಿಸಿ ಸಿಬ್ಬಂದಿ ಆಡಳಿತ ಸುಧಾರಣೆ, ಅಬಕಾರಿ, ಪ್ರಾಥಮಿಕ ಪ್ರೌಢಶಾಲೆ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಂದ ವರ್ಗಾವಣೆ ಆದೇಶಗಳು ಹೊರಬೀಳುತ್ತಲೇ ಇವೆ.
ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ಅವಧಿಯನ್ನು ಮೂರನೇ ಬಾರಿಗೆ ವಿಸ್ತರಿಸಿ ಹೊರಡಿಸಿದ್ದ ಸುತ್ತೋಲೆಯನ್ನೂ ಬದಿಗೊತ್ತಿ 2023ರ ಜುಲೈ 8 ಅಂತ್ಯಕ್ಕೆ 63 ಅಧಿಕಾರಿ, ನೌಕರರನ್ನು ವರ್ಗಾವಣೆಗೊಳಿಸಿರುವ ಆದೇಶಗಳು ಹೊರಬಿದ್ದಿವೆ. ಜುಲೈ 4 ಮತ್ತು 7ರಂದೇ ಈ ಎಲ್ಲಾ ಆದೇಶಗಳು ಹೊರಬಿದ್ದಿರುವುದು ಗೊತ್ತಾಗಿದೆ. ಈ ಆದೇಶ, ಅಧಿಸೂಚನೆ ಪ್ರತಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಬಹುತೇಕ ಇಲಾಖೆಗಳು ಜುಲೈ 3ರಂದು ಹೊರಡಿಸಿದ್ದ ಸುತ್ತೋಲೆಗಳನ್ನು ಉಲ್ಲಂಘಿಸಿದ್ದರೂ ಹಿಂದಿನ ದಿನಾಂಕವನ್ನು ನಮೂದಿಸಿ ವರ್ಗಾವಣೆ ಆದೇಶ, ಅಧಿಸೂಚನೆಗಳನ್ನು ಹೊರಡಿಸುತ್ತಿರುವುದೂ ತಿಳಿದು ಬಂದಿದೆ.
ಕಾಸಿಗಾಗಿ ಪೋಸ್ಟಿಂಗ್ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ಪಕ್ಷದ ಟೀಕೆಗಳ ನಡುವೆಯೂ ಸುತ್ತೋಲೆ ಬದಿಗಿರಿಸಿ ಹೊರಡಿಸುತ್ತಿರುವ ವರ್ಗಾವಣೆ ಆದೇಶಗಳು ಮುನ್ನೆಲೆಗೆ ಬಂದಿವೆ.
ಜುಲೈ 4 ಮತ್ತು 7ರಂದು ಹೊರಡಿಸಿರುವ ವರ್ಗಾವಣೆ ಆದೇಶ, ಅಧಿಸೂಚನೆಯಲ್ಲಿ ಕೆಎಎಸ್ (ಕಿರಿಯ ಶ್ರೇಣಿ), ಅಬಕಾರಿ ಅಧೀಕ್ಷಕರು, ಉಪಾಧೀಕ್ಷಕರು, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯ ಪ್ರಥಮದರ್ಜೆ ಸಹಾಯಕರುಗಳಿದ್ದಾರೆ.
ಅಬಕಾರಿ ಇಲಾಖೆ ಪಟ್ಟಿ
ಹೊನ್ನಪ್ಪ ಓಲೇಕಾರ (ಅಬಕಾರಿ ಉಪ ಅಧೀಕ್ಷಕರು ಹಾವೇರಿ), ದಾಮೋದರ ನಾಯ್ಕ ( ಅಬಕಾರಿ ನಿರೀಕ್ಷಕರು), ಪೂರ್ಣಿಮಾ ಕೆ ವಿ (ಅಬಕಾರಿ ಉಪ ನಿರೀಕ್ಷಕರು ಹೆಚ್‌ಎಸ್‌ಆರ್ ಲೇಔಟ್), ರೂಪ ವಿ ಕೆ (ಅಬಕಾರಿ ಉಪ ನಿರೀಕ್ಷಕರು ಚನ್ನರಾಯಪಟ್ಟಣ ವಲಯ), ಪ್ರಕಾಶ್ ಹೆಚ್ ವಿ (ಅಬಕಾರಿ ಉಪ ನಿರೀಕ್ಷಕರು ಪೀಣ್ಯ),
ಪರಮಾನಂದ ಕೋಲುರ (ಅಬಕಾರಿ ಉಪ ನಿರೀಕ್ಷಕರು ವಿಜಯಪುರ), ಗಂಗಾಧರ ಅಂತರಗಟ್ಟಿ (ಅಬಕಾರಿ ಉಪ ನಿರೀಕ್ಷಕರು ಜೆ ಪಿ ನಗರ) ಮೋಹನ ಟಿ ಎಂ (ಪ್ರಥಮದರ್ಜೆ ಸಹಾಯಕರು, ಕೆಎಸ್‌ಬಿಸಿಎಲ್ ಡಿಪೋ ತುಮಕೂರು), ವಿಶ್ವನಾಥ ಮಾವಿನಕಟ್ಟಿ ( ಪ್ರಥಮ ದರ್ಜೆ ಸಹಾಯಕರು ಕೆಎಸ್‌ಬಿಸಿಎಲ್ ಡಿಪೋ 1 ಬೆಳಗಾವಿ), ಸವಿತಾ ಡಿ ಭರಮಗೌಡ (ದ್ವಿತೀಯ ದರ್ಜೆ ಸಹಾಯಕರು, ಹುಬ್ಬಳ್ಳಿ ವಲಯ), ಸುಖದೇವ ಮೇತ್ರಿ (ಅಬಕಾರಿ ಪೇದೆ, ಬಾಗಲಕೋಟೆ), ಎನ್ ಪಿ ಸೂರ್ಯವಂಶಿ (ಅಬಕಾರಿ ಪೇದೆ, ವಿಜಯಪುರ ವಲಯ), ಶಿವಶಂಕರ ಎಸ್ ಗೋಟ್ಯಾಳ (ಅಬಕಾರಿ ಪೇದೆ, ಸಿಂಧಗಿ ವಲಯ), ಮೌನೇಶ ಬಡಿಗೇರ ( ಅಬಕಾರಿ ಪೇದೆ, ಮುಧೋಳ ವಲಯ),
ಅಬ್ದುಲ್ ರಜಾಕ್ ಲಟ್ಟನ್ನವರ (ಅಬಕಾರಿ ಪೇದೆ, ಜಮಖಂಡಿ ವಲಯ), ಆನಂದ ಬಾಗಿ (ಅಬಕಾರಿ ಪೇದೆ, ಮುಧೋಳ ವಲಯ), ಶ್ರೀಧರ ಮಾದರ (ಅಬಕಾರಿ ಪೇದೆ, ಜಮಖಂಡಿ ವಲಯ) ಮಂಜುಳಮ್ಮ (ಅಬಕಾರಿ ಪೇದೆ, ಚಿತ್ರದುರ್ಗ), ಮುರುಗೇಶ ಕೊಟ್ಟಲಗಿ( ಅಬಕಾರಿ ಪೇದೆ, ವಿಜಯಪುರ ವಲಯ), ಪರಮೇಶ್ವರ ಬಡಿಗೇರ (ವಾಹನ ಚಾಲಕರು)
ಕೆಎಎಸ್ (ಕಿರಿಯ ಶ್ರೇಣಿ) ಅಧಿಕಾರಿಗಳ ಪಟ್ಟಿ
ರಾಜು ಕೆ (ವಿಶೇಷ ಭೂಸ್ವಾಧೀನಾಧಿಕಾರಿ), ಮಹೇಶ್ ಚಂದ್ರ (ಉಪ ವಿಭಾಗಾಧಿಕಾರಿ ಪುತ್ತೂರು), ಗಿರೀಶ್ ನಂದನ್ ಎಂ (ವಿಶೇಷ ಭೂ ಸ್ವಾಧೀನಾಧಿಕಾರಿ ಎತ್ತಿನಹೊಳೆ ಯೋಜನೆ)
ಸಿ ಡಿ ಗೀತಾ ( ಅಪರ ಜಿಲ್ಲಾಧಿಕಾರಿ ಧಾರವಾಡ), ಅನ್ನಪೂರ್ಣ ನಾಗಪ್ಪ ಮುದುಕಮ್ಮನವರ (ಅಪರ ಜಿಲ್ಲಾಧಿಕಾರಿ ಗದಗ), ಡಾ ಜಿ ಸಂತೋಷ್ ಕುಮಾರ್ (ಅಪರ ಜಿಲ್ಲಾಧಿಕಾರಿ ದಕ್ಷಿಣ ಕನ್ನಡ),
ಡಾ ಭಾಸ್ಕರ್ ಎನ್ (ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ), ಶಿವಕುಮಾರ್ ಸಿ ಎಲ್ (ವಿಶೇಷ ಭೂಸ್ವಾಧೀನಾಧಿಕಾರಿ ಬಿಐಎಐಸಿಪಿ), ಮಹೇಶ್ ಕುಮಾರ್ ಎಸ್ ಮಾಲಗಿತ್ತಿ ( ಉಪ ವಿಭಾಗಾಧಿಕಾರಿ ಕೊಪ್ಪಳ), ಸಂತೋಷ್ ಕುಮಾರ್ (ಉಪ ವಿಭಾಗಾಧಿಕಾರಿ ಕಾರವಾರ ಉಪ ವಿಭಾಗ) ಕಲ್ಯಾಣಿ ವೆಂಕಟೇಶ್ ಕಾಂಬಳೆ (ಉಪ ವಿಭಾಗಾಧಿಕಾರಿ ಕುಮಟಾ ) ಅಶ್ವಿನ್ ಡಿ ಹೆಚ್ (ಉಪ ವಿಭಾಗಾಧಿಕಾರಿ ಚಿಕ್ಕಬಳ್ಳಾಪುರ ಉಪ ವಿಭಾಗ)
ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ
ಇಮ್ರಾನ ಅಬ್ದುಲ್ ಗಫೂರ ಮಕಾನದಾರ ( ಪ್ರಥಮದರ್ಜೆ ಸಹಾಯಕರು, ಕ್ಷೇತ್ರ ಶಿಕ್ಷಣಾಧಿಕಾರಿ ಸಿಂಧಗಿ), ಅನ್ನಪೂರ್ಣ ಭೂಮರಣ್ಣವರ (ಎಫ್‌ಡಿಎ, ಹುಬ್ಬಳಿ ಶಹರ), ಶಶಿಕಲಾ ಕುಂಬಾರ (ಎಫ್‌ಡಿಎ ಅಕ್ಷರ ದಾಸೋಹ, ಹುಬ್ಬಳ್ಳಿ ತಾಪಂ), ಸಫಾ ನಫೀಸ್ ಅಮೀನುದ್ದಿನ (ಎಫ್‌ಡಿಎ , ಡಯಟ್ ಧಾರವಾಡ), ವಿಶ್ವನಾಥ ನಾಗಪ್ಪ ಕಟ್ಟಿ (ಎಫ್‌ಡಿಎ, ಸಿದ್ದಾಪುರ ಬಿಇಒ)ಅನಿಲ ಹನ್ನು ರಾಠೋಡ (ಎಫ್‌ಡಿಎ ವಿಜಯಪುರ ಅರಕೇರಿ ಸರ್ಕಾರಿ ಪ್ರೌಢಶಾಲೆ), ಅಜ್ಜಪ್ಪ ಪಸಗಿ (ಎಫ್‌ಡಿಎ, ರಾಣೆಬೆನ್ನೂರು ಚೌಡದಾಯನಪುರ),
ರಾಜೇಶ್ವರಿ ಪ್ರೇಮಾನಂದ ಗೌರ (ಎಫ್‌ಡಿಎ, ಡಯಟ್ ವಿಜಯಪುರ), ಶ್ರೀಧರ ಎಂ ಅಷ್ಟೇಕರ (ಎಫ್‌ಡಿಎ, ಬೆಳಗಾವಿ ಸರದಾರ್ಸ್ ಪಿಯು ಕಾಲೇಜು), ಎಸ್ ಎನ್ ನದಾಫ್ (ಎಫ್‌ಡಿಎ, ಶಾಲಾ ಶಿಕ್ಷಣ ಉಪ ನಿರ್ದೇಶಕರ ಕಚೇರಿ ಹಾವೇರಿ ), ಸಂತೋಷ ತಿಮ್ಮಪ್ಪ ನಾಯ್ಕ (ಎಫ್‌ಡಿಎ, ಹೊನ್ನಾವರ ಸರ್ಕಾರಿ ಪ್ರೌಢಶಾಲೆ, ಅಳ್ಳಂಕಿ), ಅಜೀತ ಬಾಲಪ್ಪ ಗಂಗರೆಡ್ಡಿ (ಎಫ್‌ಡಿಎ, ರಬಕವಿ ಬನಹಟ್ಟಿ), ಬಸವರಾಜ ಜಿ ಗದ್ದಿಗೌಡ್ರ (ಎಫ್‌ಡಿಎ, ಬಿಇಒ ಹುಬ್ಬಳ್ಳಿ ಗ್ರಾಮೀಣ), ಜೆ ಆರ್ ಇಟಗಿ ( ಎಫ್‌ಡಿಎ, ನವಲಗುಂದ), ಯಶೋಧ ನಾಗಪ್ಪ ಮ್ಯಾಗಡಿ (ಎಫ್‌ಡಿಎ, ಬಿಇಒ ಬೆಳಗಾವಿ), ಬಸವರಾಜ ಮ ಕಬ್ಬೂರ (ಎಫ್‌ಡಿಎ, ಅಕ್ಷರ ದಾಸೋಹ ಗೋಕಾಕ), ಚೇನತ ಪ್ರಕಾಶ್‌ರಾವ್ ಬಾನೆ (ಎಫ್‌ಡಿಎ, ಬಿಇಒ ಮುಧೋಳ), ವಿದ್ಯಾ ಎಸ್ ಹಿರೇಮಠ (ಎಫ್‌ಡಿಎ, ಮುಧೋಳ ),
ಗೀತಾ ಹಣಮಂತ ಹಾದಿಮನಿ, (ಎಫ್‌ಡಿಎ, ಡಿಡಿಪಿಐ ವಿಜಯಪುರ), ಕೊಟ್ರೇಶ ಹಣಮಂತ ಗೊಲ್ಲರಹಟ್ಟಿ (ಎಫ್‌ಡಿಎ ಶಿರಹಟ್ಟಿ), ಕಿರಣಕುಮಾರ ಹುಲ್ಲಣ್ಣವರ (ಎಫ್‌ಡಿಎ, ಸ.ಪ.ಪೂ, ಕುಂದಗೋಳ), ಮಾರುತಿ ಎನ್ ಡೋಯಿಜೋಡೆ (ಎಫ್‌ಡಿಎ, ಅಪರ ಆಯುಕ್ತರ ಕಚೇರಿ, ಧಾರವಾಡ), ಶ್ರೀಕಾಂತ ಪರಮಾನಂದ ಹೂವಿನಹಳ್ಳಿ ( ಎಫ್‌ಡಿಎ, ಬಿಇಒ ಸಿಂಧಗಿ), ನರೇಂದ್ರಸ್ವಾಮಿ ಬಸಯ್ಯ ಹಿರೇಮಠ (ಎಫ್‌ಡಿಎ, ಬಿಇಒ ಬೈಲಹೊಂಗಲ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ಇಲಾಖೆ ವ್ಯಾಪ್ತಿಯ 12 ಮಂದಿ ಪಿಡಿಒಗಳನ್ನು ಜುಲೈ 4ರಂದು ವರ್ಗಾವಣೆಗೊಳಿಸಿ ಅಧಿಸೂಚನೆ ಹೊರಡಿಸಿದೆಯಾದರೂ ಈ ಪಟ್ಟಿಗೆ ಜುಲೈ 3ರಂದು ಇಲಾಖೆ ಸಚಿವರ ಅನುಮೋದನೆ ಪಡೆದಿರುವುದು ಗೊತ್ತಾಗಿದೆ.
ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಈ ಮಾರ್ಗಸೂಚಿಗಳ ಪ್ರಕಾರ ಸರ್ಕಾರಿ ನೌಕರರ ವರ್ಗಾವಣೆಗಳನ್ನು ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳಲ್ಲಿ ಮಾತ್ರ ಮಾರ್ಗಸೂಚಿಗಳಲ್ಲಿರುವ ಷರತ್ತುಗಳಿಗೊಳಪಟ್ಟು ಮಾಡಿದೆ.
2023-24ನೇ ಸಾಲಿಗೆ ಗ್ರೂಪ್-ಎ, ಗ್ರೂಪ್-ಬಿ, ಗ್ರೂಪ್-ಸಿ ಮತ್ತು ಗ್ರೂಪ್ -ಡಿ ವರ್ಗದ ಅಧಿಕಾರಿ, ನೌಕರರಿಗೆ ಅನ್ವಯವಾಗುವಂತೆ ಒಂದು ಜೇಷ್ಟತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ರಷ್ಟನ್ನು ಮೀರದಂತೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖೆ ಸಚಿವರಿಗೆ ಅಧಿಕಾರ ಪ್ರತ್ಯಾಯೋಜಿಸಲು ನಿರ್ಧರಿಸಿದ್ದ ಸರ್ಕಾರವು 2023ರ ಮೇ 30ರಂದು ಆದೇಶ ಹೊರಡಿಸಿತ್ತು.
ಈ ಆದೇಶದ ಪ್ರಕಾರ ಜೂನ್ 1ರಿಂದ ಜೂನ್ 15ರವರೆಗೆ ವರ್ಗಾವಣೆ ಮಾಡಲು ಆಯಾ ಇಲಾಖೆ ಸಚಿವರಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿತ್ತು. ಇದಾದ ಮೇಲೆ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಪುನಃ 2023ರ ಜೂನ್ 30ರವರೆಗೆ ವಿಸ್ತರಿಸಿತ್ತು. ಆದರೂ ಮತ್ತೊಮ್ಮೆ ಅವಧಿಯನ್ನು ಜುಲೈ 3ರವರೆಗೆ ವಿಸ್ತರಿಸಿ 2023ರ ಜೂನ್ 30ರಂದು ಆದೇಶ ಹೊರಡಿಸಿತ್ತು.
‘ವರ್ಗಾವಣೆ ದಿನಾಂಕಗಳನ್ನು ಮುಂದೂಡುತ್ತಿರುವುದು ಪ್ರಸ್ತುತ ಸರ್ಕಾರದ ವರ್ಗಾವಣೆ ದಂಧೆಯನ್ನು ವಿಸ್ತರಿಸುವ ಕ್ರಮವಾಗಿದೆಯೇ ಹೊರತು ಸರ್ಕಾರಿ ನೌಕರರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಮಾಡಿರುವುದಲ್ಲ, ಅಥಾ ವಿಸ್ತರಿಸಿರುವುದಲ್ಲ. ಸರ್ಕಾರಿ ನೌಕರರಿಗೆ ಅನುಕೂಲ ಮಾಡಿಕೊಡಬೇಕು ಎಂದಿದ್ದರೇ ಪಾರದರ್ಶಕವಾಗಿ ಕೌನ್ಸಲಿಂಗ್ ಮಾದರಿ ಅನುಸರಿಸಿ ವರ್ಗಾವಣೆ ಕ್ರಮ ತೆಗೆದುಕೊಳ್ಳಬಹುದಿತ್ತು. ಸರ್ಕಾರದ ಈ ಕ್ರಮದಿಂದ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಿ ಅದು ಶೇ.40ರಿಂದ ಶೇ.50ರಿಂದ 60ಕ್ಕೆ ಹೆಚ್ಚಾಗುತ್ತದೆ, ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ ಎನ್.