ಅಬಕಾರಿ ಹಗರಣ; ‘ಎನ್‌ಒಸಿಗೆ ತೊಂದರೆ ಆಗಬಾರದೆಂದು ಕಮಿಷನರ್‌ಗೂ ಬೊಮ್ಮಾಯಿ ಅವರೇ ಫೋನ್‌ ಮಾಡಿದ್ದು,’

ಬೆಂಗಳೂರು; ಅನಧಿಕೃತ ಲಾಭ ಪಡೆಯುವ ಉದ್ದೇಶದಿಂದ ಅಗತ್ಯ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಿ ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ 2 ಲಕ್ಷ ಮೆಟ್ರಿಕ್‌ ಟನ್‌ ಪ್ರಮಾಣದ ಕಾಕಂಬಿಯನ್ನು ಕರ್ನಾಟಕದಿಂದ ಗೋವಾಕ್ಕೆ ರಫ್ತು ಪರವಾನಗಿಗಳನ್ನು ಮಂಜೂರು ಮಾಡಿರುವ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಆರ್ಥಿಕ ಸಚಿವರೂ ಪ್ರಭಾವ ಬೀರಿದ್ದಾರೆ ಎಂಬ ಕುರಿತು ಲೋಕಾಯುಕ್ತಕ್ಕೆ ದೂರು ದಾಖಲಾಗಿರುವ ಬೆನ್ನಲ್ಲೇ ಇದೀಗ ಕಾಕಂಬಿ ಸಾಗಾಣಿಕೆ ವ್ಯವಸ್ಥೆ ಗುತ್ತಿಗೆದಾರ ಶಿವರಾಜ್‌, ಮತ್ತು ಕೆ ಎನ್‌ ರಿಸೋರ್ಸ್‌ ಪ್ರೈ ಲಿಮಿಟೆಡ್‌ ಪ್ರತಿನಿಧಿ ಎಂದು ಗುರುತಿಸಿಕೊಂಡಿರುವ ಸುರೇಶ್‌ ಇವರಿಬ್ಬರ ನಡುವಿನ ಸಂಭಾಷಣೆಯೂ ಬಹಿರಂಗಗೊಂಡಿದೆ.

 

ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿರುವ ದೂರಿನಲ್ಲಿಯೂ ಸಂಭಾಷಣೆಯ ವಿವರಗಳನ್ನೂ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ದೂರಿನೊಂದಿಗೆ ಸಲ್ಲಿಸಲಾಗಿರುವ ಸಂಭಾಷಣೆ ವಿವರವನ್ನು ಇಲ್ಲಿ ಕೊಡಲಾಗಿದೆ.

 

ಪ್ರತಿನಿಧಿ; ನಮಸ್ಕಾರ

 

ಗುತ್ತಿಗೆದಾರ; ನಮಸ್ಕಾರ ಸಾರ್‌…ಎಲ್ಲಿದ್ದೀರಾ ಸಾರ್‌?

 

ಪ್ರತಿನಿಧಿ; ಬೆಳಗಾವಿಲಿ ಇದ್ದೇನೆ

 

ಗುತ್ತಿಗೆದಾರ; ಬೆಳಗಾವೀಲಿ ಎಲ್ಲಿ?

 

ಪ್ರತಿನಿಧಿ; ಫ್ಯಾಕ್ಟರಿಯಲ್ಲಿ ಇದ್ದೇನೆ. ಫ್ಯಾಕ್ಟರೀಲಿ

 

ಗುತ್ತಿಗೆದಾರ; ಯಾಕೆ?

 

ಪ್ರತಿನಿಧಿ; ಸರ್‌ ಅದು ಫ್ಯಾಕ್ಟರೀಲಿ ತೋಡಾ ಅಂಡರ್‌ಗ್ರೌಂಡ್‌ ಮಾಡಿಸ್ತಾ ಇದ್ದೇನೆ

 

ಗುತ್ತಿಗೆದಾರ; ಹಾ

 

ಪ್ರತಿನಿಧಿ; ಮತ್ತೆ ಅದು ಮಾಲು ಜಾಸ್ತಿಯಾದರೇ ಮತ್ತೆ ಮಾಲ್‌ ತೆಗೆಯಲು ಜಾಗ ಇಲ್ಲಾ, ಜಾಗ ಮಾಡ್ಕೋಬೇಕು ಅಂತ ಮಾತನಾಡಲು ಬಂದೆ.

 

ಗುತ್ತಿಗೆದಾರ; ಬೆಳಗಾವಿ, ಖಾನಾಪುರ

 

ಪ್ರತಿನಿಧಿ; ನಾನು ಬೆಳಗಂ ಇದ್ದೇನೆ. ಬೆಳಗಾಂನಲ್ಲಿ ರೂಮ್‌ ಮಾಡ್ಕೊಂಡು ಇದೇನೆ. ಫ್ಯಾಕ್ಟರಿಗೆ ಬಂದೆ. ಲೈಲಾ ಷುಗರ್‌ನಲ್ಲಿ ಇದ್ದೇನೆ…ಲೈಲಾ ಷುಗರ್‌ನಲ್ಲಿ ಇದ್ದೇನೆ

 

ಗುತ್ತಿಗೆದಾರ; ಏನು ಪರ್ಮಿಟ್‌ ಗಿರ್ಮಿಟ್‌ ಎಲ್ಲಾ ಆಗಿದ್ಯಾ?

 

ಪ್ರತಿನಿಧಿ; ಪರ್ಮಿಟ್‌ ಮಾಡ್ಸಿದಾರೆ. ಎಲ್ಲಾ ನಾಳೆಗೆ ಆಗುತ್ತದೆ ಎಲ್ಲಾ

 

ಗುತ್ತಿಗೆದಾರ; ಯಾರು ಮಾಡಿಸ್ತಿದಾರೆ?

 

ಪ್ರತಿನಿಧಿ; ಬೆಳಗಾಂ ಆಫೀಸ್‌ನಾಗ

 

ಗುತ್ತಿಗೆದಾರ; ಅಲ್ಲ ಅಲ್ಲ ನೀವು ಮಾಡಿಸುತ್ತಿದ್ದೀರಾ? ಸುರೇಶ್‌ ಮಾಡಿಸುತ್ತಿದ್ದಾರಾ?

 

ಪ್ರತಿನಿಧಿ; ನಾನೇ ಆದರೆ ಏನು ? ಸುರೇಶ್‌ ಮಾಡಿಸಿದರೇನು?

 

ಗುತ್ತಿಗೆದಾರ; ಅಲ್ಲ…ಅಲ್ಲಾ… ಎರಡು ಒಂದೇ ಗೊತ್ತು

 

ಪ್ರತಿನಿಧಿ; ಸುರೇಶ್‌ ಇಲ್ಲಿಗೆ ಬರೋದಿತ್ತು. ಇವತ್ತು ಬರುತ್ತಾನೆ. ನಾನು ಇಲ್ಲೇ ಇದ್ದು 2 ದಿನ ಆಯ್ತು. ರೋಡ್‌ ಒಂದು ಮಾಡಿಸೋದು ಇದೆ. ರೋಡ್‌ ಕೆಲ್ಸ ಮಾಡಿಸ್ತಿದ್ದೇನೆ.

 

ಗುತ್ತಿಗೆದಾರ; ಹೌದಾ

 

ಪ್ರತಿನಿಧಿ; ರೋಡ್‌ ಅಂದರೆ ಖಾನಾಪುರ ರೋಡ್‌ ಚಾಲೂ ಮಾಡುವ ಸಲುವಾಗಿ

 

ಗುತ್ತಿಗೆದಾರ; ಇದು ಯಾವ ಕಂಪನಿ ಸಾರ್‌

 

ಪ್ರತಿನಿಧಿ; ಇದು ಕೆ ಎನ್‌ ಆಗ್ರೋ ಕಂಪನಿ. ನಾನು ಈ ಫ್ಯಾಕ್ಟರೀಲಿ ಇವರು ಎಕ್ಸೋಪೋರ್ಟ್‌ನಲ್ಲಿ ಇದ್ದಾರೆ. ನಾನು ಈ ಕಂಪನಿಯಲ್ಲಿ 20 ವರ್ಷಗಳಿಂದ ಕೆಲ್ಸ ಮಾಡ್ತೀದಿನಿಪ್ಪಾ

 

ಗುತ್ತಿಗೆದಾರ; ಹೌದಾ

 

ಪ್ರತಿನಿಧಿ; ಊಂ ಎಕ್‌ದಮ್‌ ಕ್ಲೋಸ್‌ ದೋಸ್ತ್‌ ಅವ

 

ಗುತ್ತಿಗೆದಾರ; ಹೌದಾ

 

ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನ ಪ್ರತಿಯಲ್ಲಿನ ಸಂಭಾಷಣೆ ವಿವರ ಪ್ರತಿ

 

 

ಪ್ರತಿನಿಧಿ; ಹೌದು…ಹೌದು…ವಿಜಯದುರ್ಗ, ಕೊಲ್ಲಾಪುರದಲ್ಲಿ ವಿಜಯದುರ್ಗ

 

ಗುತ್ತಿಗೆದಾರ; ಹೂನ್ರಿ

 

ಪ್ರತಿನಿಧಿ; 91-92ರಲ್ಲಿ ಗೋವಾದಿಂದ ಮಾಡಿದವನು ನಾನು

 

ಗುತ್ತಿಗೆದಾರ; ಹೂನ್ರಿ

 

ಪ್ರತಿನಿಧಿ; ಮತ್ತೆ ನಲಬಗ್‌ ಜೆಎನ್‌ಪಿಟಿ ಮಾಡ್ತಾ ಇದ್ದಾ

 

ಗುತ್ತಿಗೆದಾರ; ಹೂನ್ರಿ

 

ಪ್ರತಿನಿಧಿ; ಎಲ್ಲಾ ಎಕ್ಸ್‌ಪೋರ್ಟ್‌ ಜವಾಬ್ದಾರಿ ನಂದೆ

 

ಗುತ್ತಿಗೆದಾರ; ಹಾಗಾದಲ್ಲಿ ಎಲ್ಲಾ ಜವಾಬ್ದಾರಿ ನಿಮ್ದೇ ಅಂತ ಆಯ್ತು

 

ಪ್ರತಿನಿಧಿ; ಹೌದು ಮೊಲಾಸಸ್‌ ಪರ್ಮಿಟ್‌, ಎಕ್ಸೈಸ್‌ ಪರ್ಮಿಷನ್‌, ಗಾಡಿಯಿಂದ ಹಿಡಿದು ಟ್ರಾನ್ಸ್‌ಪೋರ್ಟ್‌ ಎಲ್ಲವೂ ನನ್ನದೇ ಜವಾಬ್ದಾರಿ

 

ಗುತ್ತಿಗೆದಾರ; ಯಾವ ಮಿನಿಸ್ಟರ್‌ ಅನ್ನು ಹಿಡಿದಿದ್ದೀರಪ್ಪಾ

 

ಪ್ರತಿನಿಧಿ; ಮಿನಿಸ್ಟರ್‌ ಇಲ್ಲಾ ಇವರು ಹೈಲೆವೆಲ್‌ ದೊಡ್ಡ ಕಂಪನಿಯವರು. ಮೂರು ಸಾವಿರ ಕೋಟಿ ಕೆ ಎನ್‌ ಆಗ್ರೋ ಎಕ್ಸ್‌ಪೋರ್ಟರ್‌ ಅವರು ಹಳೇಯವರೇ. ಹೊಸದಾಗಿ ಏನೂ ಇಲ್ಲಾ

 

ಗುತ್ತಿಗೆದಾರ; ಕರ್ನಾಟಕದಲ್ಲಿ ಯಾರನ್ನು ಹಿಡಿದಿದ್ದೀರಾ? ನಮ್ಮ ಸಿಎಂ ಬೊಮ್ಮಾಯಿ ಅವರನ್ನು ಹಿಡಿದಿದ್ದೀರಾ? ಅಥವಾ ಎಕ್ಸೈಸ್‌ ಮಿನಿಸ್ಟರ್‌ನ್ನು ಹಿಡಿದಿದ್ದೀರಾ?

 

ಪ್ರತಿನಿಧಿ; ಈಗ ಯಾರೇನು ಗೊತ್ತೇನು? ಕೆ ಎನ್‌ ಆಗ್ರೋದಲ್ಲಿ ಯಾರು ಎಂ ಪಿ ಇದ್ದಾರೆ ಅವರು ಹನ್ನೊಂದು ಮಂದಿ ನಿರ್ದೇಶಕರಿದ್ದಾರೆ. ಎಲ್ಲಾ ಬಿಗ್‌ ಶಾಟ್ಸ್‌ ಅವರೇ ಇದ್ದಾರೆ. ಆ ಎಂ ಪಿ ಗಳು ಬಿಜೆಪಿಯವರೇ. ಅವರು ಡೈರೆಕ್ಟ್‌ ಆಗಿ ಬೊಮ್ಮಾಯಿಯವರಿಗೆ ಫೋನ್‌ ಮಾಡಿಸಿದಾರೆ.

 

ಗುತ್ತಿಗೆದಾರ; ಡೈರೆಕ್ಟ್‌ ಬೊಮ್ಮಾಯಿಯವರಿಗೆ ಹೇಳಿ ಮಾಡಿಸಿದ್ದೀರಾ?

 

ಪ್ರತಿನಿಧಿ; ಹೌದು, ಮತ್ತು ಸೆಂಟ್ರಲ್ ಮಿನಿಸ್ಟರ್‌ ಅವರ ಪತ್ರ ಇದೆ. ಫೈನಾನ್ಸ್‌ ಮಿನಿಸ್ಟರ್‌ ಸಹ ವಿನಂತಿ ಮಾಡಿಕೊಂಡಿದಾರೆ. ಎಂಎಂಸಿಎಲ್‌ ಬಹಳ ಅಡ್ಡ ಹಾಕಿದರು,  ಮಾಡಬಾರದು ಎಂದು. ಅದಕ್ಕೆ ಲೇಟ್‌ ಆಯಿತು

 

ಗುತ್ತಿಗೆದಾರ; ಅವರೇಕೆ ಅಡ್ಡ ಹಾಕ್ತಾರೆ ನಿಮ್ಮ ವ್ಯಾಪಾರಕ್ಕೆ?

 

ಪ್ರತಿನಿಧಿ; ಪರ್ಮಿಷನ್‌ ಕೊಡಬೇಡಿ ಅಂತ ಆಯುಕ್ತರ ಆಫೀಸ್ಸಿಗೆ ಒತ್ತಡ ಹೇರಿದಾರೆ

 

ಗುತ್ತಿಗೆದಾರ; ನಿಮ್ಮ ವ್ಯಾಪಾರಕ್ಕೂ ಅವರ ವ್ಯಾಪಾರಕ್ಕೂ ಏನು ಸಂಬಂಧ?

 

ಪ್ರತಿನಿಧಿ; ಸಂಬಂಧ ಏನೂ ಇಲ್ಲಾ. ಈ ತರಹ ಆಗಿದೆ ಅಂತ ತಮಗೆ ಹೇಳ್ತೀದ್ದೀನಿ

 

ಗುತ್ತಿಗೆದಾರ; ಹೌದಾ

 

ಪ್ರತಿನಿಧಿ; ನಾನು ಬೆಂಗಳೂರಿಗೆ ಹೋಗಿದ್ದೆ. ಅವರ ಸಂಗಡ ನಾನೂ ಇದ್ದೆ. ಆಗ ಎಂಎಂಸಿಎಲ್‌ ಪ್ರಾಬ್ಲಮ್‌ ಬಂತು. ಅವಾಗ ತೊಂದರೆ ಇತ್ತು. ಆವಾಗಲೇ ಸಾಲ್ವ್‌ ಆಯ್ತು. ಬೊಮ್ಮಾಯಿ ಕೈಲಿ ಮಾಡಿಸಿದ್ದು.

 

 

ಗುತ್ತಿಗೆದಾರ; ಹೌದಾ

 

ಪ್ರತಿನಿಧಿ; ಆಮೇಲೆ ಗೋವಾ ಪರ್ಮಿಷನ್‌ ಮಾಡಿಕೊಂಡಿದ್ದೇವೆ. ಬೇಕಾದರೆ ಎರಡೂ ಪರ್ಮಿಷನ್‌ ನಿಮ್ ವಾಟ್ಸಾಪ್‌ಗೆ ಹಾಕ್ತೇನೆ

 

ಗುತ್ತಿಗೆದಾರ; ಆಯ್ತು ಹಾಕಿ

 

ಪ್ರತಿನಿಧಿ; ಅದೇ 2 ಲಕ್ಷ ಟನ್‌ ಕೆಲಸ ಇದೆ. ಕೆಲಸ ಎಲ್ಲಾ ನಡೆಯುತ್ತಿದೆ. ಅದು ನನ್ನ ಕೈಯಲ್ಲೇ ಇದೆ.
ಗುತ್ತಿಗೆದಾರ; ನಿಮ್ ಕಲಿ ಇರುವಾಗ ಕೆಲಸ ಸರಿಯಾಗಿ ನಡೆಯುತ್ತದೆ. ಎಕ್ಸೈಸ್‌ ಮಿನಿಸ್ಟರ್‌ಗೆ ಏನು ಕಮ್ಯುನಿಕೇಟ್‌ ಮಾಡ್ಲಿಲ್ವಾ?

 

ಪ್ರತಿನಿಧಿ; ಅವರೇ ಕರೆಸಿ ಹೇಳಿದರು

 

ಗುತ್ತಿಗೆದಾರ; ಯಾರು ಬೊಮ್ಮಾಯಿ ಅವರಾ?

 

ಪ್ರತಿನಿಧಿ; ಹೌದು, ಬೊಮ್ಮಾಯಿ ಅವರೇ ಕರೆಸಿ ಕಮಿಷನರ್‌ಗೂ ಫೋನ್‌ ಮಾಡಿ, ಕಮಿಷನರ್‌ ಅವರಿಗೂ ಬೊಮ್ಮಾಯಿ ಅವರೇ ಫೋನ್‌ ಮಾಡಿದ್ದಾರೆ. ಎನ್‌ಒಸಿಗೆ ಏನೂ ತೊಂದರೆ ಆಗದ ಹಾಗೆ ಹೇಳಿದರು.

 

ಗುತ್ತಿಗೆದಾರ: ಈಗ ಕರ್ನಾಟಕದಲ್ಲಿ ಅವರ ಯಾವ ಪರ್ಸನ್‌ ಬಂದಿರೋದು? ಕೆ ಎನ್‌ ಆಗ್ರೋದು?

 

ಪ್ರತಿನಿಧಿ; ಕೆಎನ್‌ ಆಗ್ರೋದು ಅನಿಲ್‌ ಅಗರವಾಲ್‌ ಅಂತ. ಅವರು ಬರ್ತಾರೆ

 

ಗುತ್ತಿಗೆದಾರ: ಅವರು ಓನರ್‌ ರಾ…?

 

ಪ್ರತಿನಿಧಿ; ಅವರು ಒನ್‌ ಆಫ್‌ ದಿ ಡೈರೆಕ್ಟರ್‌

 

ಗುತ್ತಿಗೆದಾರ; ಹೌದಾ ಸರಿ ಸರಿ

 

ಪ್ರತಿನಿಧಿ; ಅವರು ನನಗೆ ಕ್ಲೋಸ್‌ ಇದ್ದಾರೆ. 1990ರಿಂದ. ನನಗೆ 8 ದಿನಕ್ಕೊಮ್ಮೆ ಫೋನ್‌ ಮಾಡುತ್ತಾರೆ. ಅವರದ್ದೂ ಕೆಲಸ ಮಾಡಿಕೊಟ್ಟಿದ್ದೇನೆ. ಕಂಪ್ಲೀಟ್‌ 2001ರಲ್ಲಿ

 

ಗುತ್ತಿಗೆದಾರ; ನೀವು ಮಹಾರಾಷ್ಟ್ರದಲ್ಲಿ ಮಾಡ್ತಾ ಇದ್ದಿದ್ದು ಇವರ ಜತೆನಾ?

 

ಪ್ರತಿನಿಧಿ; ಹೌದು…ಹೌದು…ಇವರೊಟ್ಟಿಗೆ ಮಾಡಿದ್ದೀನಿ. ಲಾಸ್ಟ್‌ ಇಯರ್‌ನಲ್ಲಿ ಜೆಎನ್‌ಪಿಟಿ ಇಂದ 4,50,000 ಟನ್‌ ಆಗಿದೆ. ಈ ವರ್ಷ 6,00,000 ಟನ್‌ ಮಾಡಲು ಫ್ಲಾನ್‌ ನಡೆದಿದೆ.

 

ಗುತ್ತಿಗೆದಾರ; ಹೌದಾ

 

ಪ್ರತಿನಿಧಿ; ಈ ಮೂರು ಠಿಕಾಣಿ ಕಡೆ, ಜಾಗದಲ್ಲೂ ನಡೆಯುತ್ತದೆ. ಒಂದು ಕಾಂಡ್ಲ ಚಾಲೂ ಇದೆ. ಅಲ್ಲಿ ಪಂಜಾಬ್‌ ಗುಜರಾತ್‌ ಮತ್ತು ಎಂಪಿಯಿಂದ ಮಾಲು ಬರುತ್ತೆ. ಈ ಎಲ್ಲಾ ಮಾಲು ಜೆಎನ್‌ಪಿಟಿಗೆ ಬರುತ್ತೆ.

 

ಗುತ್ತಿಗೆದಾರ; ಈಗ ಇಲ್ಲಿ ಎಷ್ಟು ಲಿಫ್ಟ್‌ ಮಾಡಬೇಕು ಎಣಿಸಿದ್ದೀರಿ?

 

ಪ್ರತಿನಿಧಿ; ಇಲ್ಲಿ 2 ಲಕ್ಷ ಪೂರ್ತಿ ಮಾಡುವುದು ಇದೆ

 

ಗುತ್ತಿಗೆದಾರ; ಎಲ್ಲಿ ಇದೆ 2 ಲಕ್ಷ ಟನ್‌ ಕರ್ನಾಟಕದಲ್ಲಿ?

 

ಪ್ರತಿನಿಧಿ; ಎಲ್ಲಾ ಸಿಗುತ್ತೆ, ಯಾಕೆ ಸಿಗೋದಿಲ್ಲ?

 

ಗುತ್ತಿಗೆದಾರ; ಅಯ್ಯೋ ದೇವರೇ, ಎಲ್ಲಿ ತರುತ್ತೀರಿ ಕರ್ನಾಟಕದಲ್ಲಿ?

 

ಪ್ರತಿನಿಧಿ; ಸಿಗುತ್ತದೆ ಕರ್ನಾಟಕದಲ್ಲಿ. ಯಾವುದೇ ತೊಂದರೆ ಇಲ್ಲ. ನಾವು ಈಗಾಗಲೇ ತೆಗೆದುಕೊಂಡಿದ್ದೇವೆ. 15ರಿಂದ 20 ತೆಗೆದುಕೊಂಡಿದ್ದೇವೆ. ನಾವು ಈಗಾಗಲೇ

 

ಗುತ್ತಿಗೆದಾರ; ನಂದಿ ಶುಗರ್‌ ಟೆಂಡರ್‌ಗೆ ಹೋಗಿದ್ದೀರಾ?

 

ಪ್ರತಿನಿಧಿ; ಹೋಗಿದ್ದಾರಾಲ್ಲಾ

 

ಗುತ್ತಿಗೆದಾರ; ಯಾರು ಹೋಗಿದ್ದಾರೆ?

 

ಪ್ರತಿನಿಧಿ; ಸುರೇಶ್‌ ಹೋಗಿದ್ದಾರೆ. ಮಾಲು ತೆಗೆದುಕೊಂಡಿದ್ದೇವೆ

 

ಗುತ್ತಿಗೆದಾರ; ಹೌದಾ ಸರಿ ಸರಿ, ಬ್ಯುಸಿ ಇದ್ದೀರಾ?

 

ಪ್ರತಿನಿಧಿ; ಬ್ಯುಸಿ ಇಲ್ಲಾ ಫ್ಯಾಕ್ಟರೀಲಿ ಇದ್ದೇನೆ. ಈ ಸಾಯಂಕಾಲ ಮಾತಾಡಿ ಎಲ್ಲಾ ವಿಷಯವನ್ನು ಹೇಳ್ತೇನೆ.

SUPPORT THE FILE

Latest News

Related Posts