ನಾರಾಯಣಪುರ ಎಡದಂಡೆ ಯೋಜನಾ ವೆಚ್ಚ; 2 ಬಾರಿ ಪರಿಷ್ಕರಣೆ, ದೋಷಪೂರಿತ ಅಂದಾಜು

ಬೆಂಗಳೂರು; ನಾರಾಯಣಪುರ ಎಡದಂಡೆ ನಾಲೆ ಯೋಜನೆಯಡಿ ಕಾಲುವೆಗಳ ಆಧುನೀಕರಣ, ವಿಸ್ತರಣೆ, ನವೀಕರಣಕ್ಕೆ ಸಂಬಂಧಿಸಿದಂತೆ ಅಂದಾಜು ವೆಚ್ಚವನ್ನು ಎರಡು ಬಾರಿ ಪರಿಷ್ಕರಿಸಿದ್ದ ಕೃಷ್ಣಭಾಗ್ಯ ಜಲನಿಗಮವು ದೋಷಪೂರಿತ ಅಥವಾ ತಪ್ಪು ಅಂದಾಜನ್ನು ಜಲಸಂಪನ್ಮೂಲ ಇಲಾಖೆಗೆ ಸಲ್ಲಿಸಿತ್ತು.

 

ಈ ಯೋಜನೆಗೆ 2012ರಲ್ಲೇ ಆಡಳಿತಾತ್ಮಕ ಅನುಮೋದನೆ ದೊರೆತ ನಂತರವೂ ಕಾಮಗಾರಿಗೆ ವೇಗ ಸಿಗದ ಕಾರಣ ಅಂದಾಜು ವೆಚ್ಚದಲ್ಲಿ ಏರಿಕೆಯಾಗಿತ್ತು. ಯೋಜನೆಯ ಅಂದಾಜು ವೆಚ್ಚವನ್ನು ಭಾರೀ ಪ್ರಮಾಣದಲ್ಲಿ ಪರಿಷ್ಕರಿಸಿದ್ದ ನಿಗಮವು ಎರಡನೇ ಬಾರಿಯೂ ಪರಿಷ್ಕೃತಗೊಳಿಸಲು 2022ರ ಜನವರಿ 19ರಂದು ಸಲ್ಲಿಸಿದ್ದ ಪ್ರಸ್ತಾವನೆಗೆ ಜಲಸಂಪನ್ಮೂಲ ಇಲಾಖೆಯು ಆಕ್ಷೇಪಗಳನ್ನು ಎತ್ತಿತ್ತು. ಆದರೂ ಸಚಿವ ಗೋವಿಂದ ಕಾರಜೋಳ ಅವರು ಈ ಕುರಿತು ಕ್ರಮವಹಿಸಲಿಲ್ಲ ಎಂದು ಗೊತ್ತಾಗಿದೆ.

 

ಈ ಕುರಿತು ‘ದಿ ಫೈಲ್‌’ 500ಕ್ಕೂ ಹೆಚ್ಚು ಪುಟಗಳನ್ನೊಳಗೊಂಡಿರುವ ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ಜಲಸಂಪನ್ಮೂಲ ಇಲಾಖೆ ಪತ್ರದಲ್ಲೇನಿದೆ?

 

2015ರ ಡಿಸೆಂಬರ್‌ 3ರಂದು 4,233.98 ಕೋಟಿ ರು. ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಇದರಲ್ಲಿ ರಾಜ್ಯದ ಪಾಲು 2,988.35 ಕೋಟಿ ರು., ಹಾಗೂ ಕೇಂದ್ರದ ಪಾಲು 1,245.63 ಕೋಟಿ ಗಳಾಗಿವೆ. ಈ ಯೋಜನೆಗೆ ಈವರೆಗೆ ಭರಿಸಿದ ವೆಚ್ಚವೆಷ್ಟು, ಇದರಲ್ಲಿ ರಾಜ್ಯದ ಪಾಲು ಮತ್ತು ಕೇಂದ್ರದ ಪಾಲಿನ ವೆಚ್ಚವೆಷ್ಟು, ಪರಿಷ್ಕೃತ ಅಂದಾಜು ಮೊತ್ತ 4,699.00 ಕೋಟಿಗಳನ್ನು ಅನುಮೋದಿತ ಅಂದಾಜು ಮೊತ್ತ 4,233.98 ಕೋಟಿಗಳಿಗೆ ಹೋಲಿಸಿದಾಗ 465.02 ಕೋಟಿ ಹೆಚ್ಚಳವಾಗಿರುತ್ತದೆ.

 

ಇದರಲ್ಲಿ ರಾಜ್ಯದ ಪಾಲು ಮತ್ತು ಕೇಂದ್ರದ ಪಾಲು ಎಷ್ಟು , ಈ ಯೋಜನೆಯನ್ನು ಈಗಾಗಲೇ ಒಂದು ಭಾರೀ ಪರಿಷ್ಕೃತಗೊಳಿಸಲಾಗಿರುತ್ತದೆ. ಈಗ ಮತ್ತೊಮ್ಮೆ ಪರಿಷ್ಕೃತಗೊಳಿಸುವುದು ದೋಷಪೂರಿತ ಅಥವಾ ತಪ್ಪಾದ ಅಂದಾಜು ತಯಾರಿಸಿದಂತೆ ಅಗುವುದಿಲ್ಲವೇ, ಇದಕ್ಕೆ ಕಾರಣಗಳೇನು ಎಂದು ಜಲಸಂಪನ್ಮೂಲ ಇಲಾಖೆಯು 2022ರ ಜನವರಿ 19ರಂದೇ ಕೃಷ್ಣಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿತ್ತು.

 

ಕೃಷ್ಣಭಾಗ್ಯ ಜಲನಿಗಮದ ಉತ್ತರವೇನು?

 

ಎನ್‌ಎಲ್‌ಬಿಸಿ-ಇಆರ್‌ಎಂ ಯೋಜನೆಯಡಿ ಈಗಾಗಲೇ ಕೈಗೆತ್ತಿಕೊಂಡಿರುವ ಸ್ಕಾಡಾ ಫೇಸ್‌-1 ಕಾಮಗಾರಿ ಪೂರ್ಣಗೊಳಿಸಿ ಅನುಷ್ಟಾನಗೊಳಿಸಲಾಘಿದೆ. ಈ ಮೊದಲು ಅನುಮೋದಿತ ಎನ್‌ಎಲ್‌ಬಿಸಿ-ಇಆರ್‌ಎಂ ಯೋಜನೆಯಡಿ ಇಂಡಿ ಶಾಖಾ ಕಾಲುವೆ 0.00ರಿಂದ 64.00 ವರೆಗಿನ ಕಾಲುವೆ ಜಾಲದ ಆಧುನೀಕರಣ ಮಾತ್ರ ಪರಿಗಣಿಸಲಾಗಿತ್ತು.

 

ಆದರೆ ಇಂಡಿ ಶಾಖಾ ಕಾಲುವೆ ಜಾಲದಡಿ ಸಮರ್ಪಕ ನೀರು ನಿರ್ವಹಣೆ ಮತ್ತು ನೀರು ಬಳಕೆ ಸಾಮರ್ಥ್ಯ ಅಭಿವೃದ್ಧಿಗೆ ಸಹಕಾರಿಯಾಗಲು ಸ್ಥಳೀಯ ಪ್ರತಿನಿಧಿಗಳು ಸಲ್ಲಿಸಿರುವ ಮನವಿಗಳು ಮತ್ತು ಸರ್ಕಾರದ ಮಟ್ಟದಲ್ಲಿ ಜರುಗಿದ್ದ ಪರಿಶೀಲನಾ ಸಭೆಗಳಲ್ಲಿ ಕಾಲುವೆ ಕಾಮಗಾರಿ 172.00 ಕಿ ಮೀ ವರೆಗೆ ವಿಸ್ತರಣೆಯಾಗಿತ್ತು.  ಇಆರ್‌ಎಂ ಯೋಜನೆಯ ಪರಿಷ್ಕೃತ ವಿವರವಾದ ಯೋಜನೆ ವರದಿ ಅಂದಾಜು 4,699.00 ಕೋಟಿ ಆಗಿದೆ ಎಂದು ಸ್ಪಷ್ಟನೆ ನೀಡಿತ್ತು ಎಂಬುದು ಪತ್ರದಿಂದ ಗೊತ್ತಾಗಿದೆ.

 

ಈ ಯೋಜನೆ ಅನುಷ್ಠಾನವನ್ನು 2015-16ರಲ್ಲಿ ಕೇಂದ್ರ ಸರ್ಕಾರದ ಎಐಬಿಪಿ ಮತ್ತು ಪಿಎಂಕೆಎಸ್‌ವೈ ಯೋಜನೆಯಡಿ ಪರಿಗಣಿಸಲಾಗಿರುತ್ತದೆ. ಹಾಗೂ ಈ ಯೋಜನೆಯನ್ನು ಕೇಂದ್ರ ಸಚಿವಾಲಯವು ಅಂತಿಮಗೊಳಿಸಿದ್ದ 99 ಆದ್ಯತೆ ಯೋಜನೆಯಡಿ ಪರಿಗಣಿಸಿದೆ.

 

ಈ ಯೋಜನೆಯ ಪರಿಷ್ಕೃತ ಮಾರ್ಗಸೂಚಿಗಳನ್ವಯ ಕೇಂದ್ರ ಸಹಾಯಧನವು 940.50 ಕೋಟಿ ಆಗಿದೆ. ಅಂದಾಜು ಪಟ್ಟಿ ತಯಾರಿಕೆಯಲ್ಲಿ ಯಾವುದೇ ಲೋಪದೋಷಗಳಾಗಿರುವುದಿಲ್ಲ. ಈ ಯೋಜನೆಯನ್ನು 2022ರ ಜೂನ್‌ ಅಂತ್ಯದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಎಂದು 2022ರ ಮೇ 12 ಮತ್ತು ಮೇ 17 ಮತ್ತು ಮೇ 30ರಂದು ವಿವರಣೆ ನೀಡಿತ್ತು.

the fil favicon

SUPPORT THE FILE

Latest News

Related Posts