ಜಮ್ಮಾ ಸೇರಿ ವಿಶೇಷ ಹಕ್ಕಿನ ಜಮೀನು; 5 ಎಕರೆಗೆ ಮೀರದಂತೆ 30 ವರ್ಷ ಗುತ್ತಿಗೆ ನೀಡಲು ಕಾಯ್ದೆಗೆ ತಿದ್ದುಪಡಿ

photo credit-dehalivaarthe

ಬೆಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಮ್ಮಾ, ಕಾಣೆ, ಬಾಣೆ ಜಮೀನು, ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಟ್ಟ, ಹಾಡಿ, ಮೈಸೂರು ಪ್ರಾಂತ್ಯದಲ್ಲಿ ಕಾಣೆ, ಸೊಪ್ಪಿನಬೆಟ್ಟ, ಕೊಡಗು ಜಿಲ್ಲೆಯಲ್ಲಿ ಜಮ್ಮಾ ಮತ್ತು ಬಾಣೆ ಜಮೀನುಗಳನ್ನು ಅಧಿಬೋಗದಾರರಿಗೆ ಮಂಜೂರು ಮಾಡುವ ಸಂಬಂಧ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 79(2)ಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟ ಉಪ ಸಮಿತಿ ಸೂಚಿಸಿದೆ.

 

ಗೋಮಾಳ, ಗಾಯರಾಣ, ಹುಲ್ಲಬನ್ನಿ, ಸೊಪ್ಪಿನ ಬೆಟ್ಟ ಸೇರಿದಂತೆ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡುವ ಕುರಿತು ನೀತಿ ರೂಪಿಸಲು ರಚಿಸಲು ಕಂದಾಯ ಸಚಿವ ಆರ್‌ ಅಶೋಕ್‌ ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಚಿವ ಸಂಪುಟ ಉಪ ಸಮಿತಿಯು 2023ರ ಜನವರಿ 24ರಂದು ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಸಚಿವ ಸಂಪುಟ ಉಪ ಸಮಿತಿಯ ಸಭೆ ನಡವಳಿಗಳು (ಸಂಖ್ಯೆ ಅರ್‌ಡಿ 05 ಎಲ್‌ಜಿಪಿ 2022) ‘ದಿ ಫೈಲ್‌’ಗೆ ಲಭ್ಯವಾಗಿವೆ.

 

‘ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 79(2) ರಲ್ಲಿರುವ ವಿಶೇಷಾಧಿಕಾರಗಳನ್ನು ಮುಂದುವರೆಸುತ್ತಾ ಅವುಗಳನ್ನು ಅಧಿಭೋಗದಾರರಿಗೆ ಅವರ ಹಿಡುವಳಿ ಜಮೀನನ್ನು ಹೊರತುಪಡಿಸಿ 5 ಎಕರೆಗೆ ಮೀರದಂತೆ ಸರ್ಕಾರವು ನಿರ್ಧರಿಸಬಹುದಾದಂತಹ ಗುತ್ತಿಗೆ ಮೌಲ್ಯವನ್ನು ವಿಧಿಸಿ 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲು ಅನುವಾಗುವಂತೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ಕ್ಕೆ ತಿದ್ದುಪಡಿ ತರಲು ಕ್ರಮ ವಹಿಸಬೇಕು,’ ಎಂದು ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಕಂದಾಯ ಸಚಿವ ಆರ್‌ ಅಶೋಕ್‌ ಅವರು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.

 

ಅದೇ ರೀತಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 79(2)ರ ಅಡಿ ಯಾವುದೇ ಭೂಮಿಯನ್ನು ಅರಣ್ಯವೆಂದು ವರ್ಗೀಕರಿಸಲ್ಪಟ್ಟಿಲ್ಲ. ಇದೇ ಕಾಯ್ದೆ ಕಲಂ 94 ಬಿ ಅಡಿ ಅನಧಿಕೃತ ಸಾಗುವಳಿದಾರರಿಗೆ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡುವಾಗ ಕಲಂ 94 ಬಿ (3) ರಡಿ ಅರಣ್ಯ ಭೂಮಿಯೆಂದು ವರ್ಗೀಕೃತವಾಗಿರುವ 79ನೇ ಪ್ರಕರಣದ ಎರಡನೇ ಉಪ ಪ್ರಕರಣದದಲ್ಲಿ ಯಾವುದೇ ಭೂಮಿಯನ್ನು ಹೊರತುಪಡಿಸಿ ಇತರ ಅರಣ್ಯ ಭೂಮಿಗೆ ಅನ್ವಯಿಸತಕ್ಕದ್ದಲ್ಲ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಕಲಂ 79(2) ರಡಿಯಲ್ಲಿ ಉಲ್ಲೇಖಿಸಿರುವ ಎಲ್ಲಾ ಭೂಮಿಗಳನ್ನು ಅರಣ್ಯ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಭೂಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂ ದಾಖಲೆಗಳ ಆಯುಕ್ತರು ಸಭೆ ಗಮನಕ್ಕೆ ತಂದಿರುವುದು ನಡವಳಿಯಿಂದ ಗೊತ್ತಾಗಿದೆ.

 

ಆದರೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಧಿಕಾರಿಗಳು ‘ಕರ್ನಾಟಕ ಭೂ ಕಂದಾಯ ಕಾಯ್ದೆ 3 1964ರ ಕಲಂ 94ಬಿ (3)ರಡಿ ಅರಣ್ಯ ಭೂಮಿಯೆಂದು ವರ್ಗೀಕೃತವಾದ 79ನೇ ಪ್ರಕರಣದ ಉಪ ಪ್ರಕರಣದಡಿಯಲ್ಲಿ ತಿಳಿಸಿರುವುದರಿಂದ ಸದರಿ ಭೂಮಿಯ ಮಂಜೂರಾತಿಗೆ ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಅಡಿಯಲ್ಲಿ ಕೇಂದ್ರ ಸರ್ಕಾರದ ಪೂರ್ವಾನುಮೋದನೆ ಅವಶ್ಯಕತೆ ಇದೆ,’ ಎಂದು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

 

ಜಮ್ಮಾ, ಬಾಣೆ, ಬೆಟ್ಟ, ಸೊಪ್ಪಿನ ಬೆಟ್ಟ, ಕಾಣೆ ಯಂತಹ ವಿಶೇಷ ಹಕ್ಕಿನ  ಜಮೀನುಗಳನ್ನು ಅಧಿಬೋಗದಾರರಿಗೆ ಮಂಜೂರು ಮಾಡಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 79(2)ರಲ್ಲಿ ವಿಶೇಷಾಧಿಕಾರ ನೀಡಲಾಗಿದೆ.

 

ಕುಮ್ಕಿ,ಕಾನು,ಬೆಟ್ಟ, ಸೊಪ್ಪಿನಬೆಟ್ಟ, ಜುಮ್ಮಬಾನೆ,ಇತರೆ ವರ್ಗಗಳ ಜಮೀನು ಮಂಜೂರಾತಿಗೆ ನಿರ್ಬಂಧ ವಿಧಿಸಿ ಕಂದಾಯ ಇಲಾಖೆ ಕಾರ‍್ಯದರ್ಶಿ 2010 ಮೇ 3ರಂದು ಹೊರಡಿಸಿದ ತಾತ್ಕಾಲಿಕ ಆದೇಶ ಹೊರಡಿಸಿದ್ದರು. ಕರ್ನಾಟಕ ಭೂ ಕಂದಾಯ ಕಾಯಿದೆ 1964ರ ಕಲಂ 79 (2)ರಲ್ಲಿ ಕುಮ್ಕಿ, ಕಾನು, ಬೆಟ್ಟ, ಸೊಪ್ಪಿನಬೆಟ್ಟ, ಜುಮ್ಮಾಬಾನೆ ರೈತರ ವಿಶೇಷ ಹಕ್ಕುಳ್ಳ ಜಮೀನು ಪ್ರದೇಶವಾಗಿದೆ. ನಿವೇಶನ, ಸಾಗುವಳಿ ಭೂ ಮಂಜೂರಾತಿ ಕೋರಿದ ಅರ್ಜಿ ಅವಧಿ 5 ವರ್ಷ ಮೀರಿದರೆ ನಿಯಮದ ಅನ್ವಯ ವಜಾ ಗೊಳಿಸಬೇಕು.

the fil favicon

SUPPORT THE FILE

Latest News

Related Posts