ರೆಡ್ಡಿ ಪತ್ನಿ ಲಕ್ಷ್ಮಿಅರುಣ ಹೆಸರಿನಲ್ಲಿ ಜಮೀನು ವಿಸ್ತೀರ್ಣ ಹೆಚ್ಚಿಸಲು ಸರ್ಕಾರಿ ಜಮೀನು ಅತಿಕ್ರಮಣ?

ಬೆಂಗಳೂರು; ಬಳ್ಳಾರಿಯ ಕೌಲ್‌ ಬಜಾರ್ ಬಳಿಯ ಟಿ ಬಿ ಸ್ಯಾನಿಟೋರಿಯಂ ಆಸ್ಪತ್ರೆ ಪಕ್ಕದಲ್ಲಿರುವ ಬಳ್ಳಾರಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿದ್ದ ಸರ್ಕಾರಿ ಜಮೀನು ಸೇರಿದಂತೆ ಇತರೆ ವ್ಯಕ್ತಿಗಳ ಹೆಸರಿನಲ್ಲಿದ್ದ ಜಮೀನುಗಳಿಗೂ ಸುಳ್ಳು ದಾಖಲೆ ಸೃಷ್ಟಿಸಿದ್ದ ಅಧಿಕಾರಿಗಳ ಅಕ್ರಮಕೂಟವು ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣ ಅವರು ಹೊಂದಿದ್ದ ಜಮೀನಿನ ನಕ್ಷೆಯ ಮೇಲೆ  ಓವರ್‌ಲ್ಯಾಪಿಂಗ್‌  ಮಾಡುವ ಮೂಲಕ ಅವರ ಜಮೀನಿನ ವಿಸ್ತೀರ್ಣವನ್ನೇ ಹೆಚ್ಚಳ ಮಾಡಿತ್ತು  ಎಂಬ ಸಂಗತಿಯ ಲೋಕಾಯುಕ್ತ ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.

 

ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ 6 ವರ್ಷದ ಬಳಿಕ ದೋಷಾರೋಪಣೆ ಪಟ್ಟಿ ಸಲ್ಲಿಸಿರುವ ಬೆನ್ನಲ್ಲೇ ಅಂತಿಮ ತನಿಖಾ ವರದಿಯಲ್ಲಿ ಮಾಜಿ ಸಚಿವ  ಜಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣ ಅವರ ಹೆಸರಿನಲ್ಲಿಯೂ ಜಮೀನು ವಿಸ್ತೀರ್ಣವನ್ನು ಹೇಗೆ ಹೆಚ್ಚಳ ಮಾಡಲಾಗಿತ್ತು ಎಂಬುದರ ಕುರಿತು ವಿವರಿಸಲಾಗಿದೆ.

 

ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಿರುವ ಬೆನ್ನಲ್ಲೇ ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣ ಅವರ ಹೆಸರಿನಲ್ಲಿಯೂ ಜಮೀನು ವಿಸ್ತೀರ್ಣ ಮಾಡಿರುವುದು ಮುನ್ನೆಲೆಗೆ ಬಂದಿದೆ.  ತನಿಖಾ ವರದಿಯನ್ನು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

 

ಅಂದಿನ ಸರ್ವೆ ಸೂಪರ್‌ವೈಸರ್‌ ಜಿ ಎಸ್‌ ಗಡಕೇಶ್ವರ್‌ ಮತ್ತಿತರರೊಂದಿಗೆ ಅಕ್ರಮಕೂಟ ರಚಿಸಿಕೊಂಡು ದುರುದ್ದೇಶದಿಂದಲೇ ಜಮೀನುಗಳ ವಿಸ್ತೀರ್ಣವನ್ನು ಹೆಚ್ಚಿಸಲಾಗಿತ್ತು.  ಸರ್ವೆ ನಂಬರ್‌ 57ಬಿ 2 ಎ1ಎ1ಎ1ಕೆ ರಲ್ಲಿ ಬಾಪಟ್ಲ ಬಾಪರಾವ್‌ ಹೆಸರಿನಲ್ಲಿದ್ದ 2.88.05 ಎಕರೆ ಜಮೀನಿನಲ್ಲಿ ಭೌತಿಕವಾಗಿ ಯಾವುದೇ ಹೆಚ್ಚಿಗೆ ಜಮೀನು ಇರದಿದ್ದರೂ  ಇದೇ ಜಮೀನಿನ ಪಕ್ಕದಲ್ಲಿದ್ದ ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ ಅವರ ಪತ್ನಿ ಜಿ ಲಕ್ಷ್ಮಿ ಅರುಣ ಅವರ (ಸರ್ವೆ ನಂಬರ್‌ 597ಬಿ2ಎ1ಎ1ಸಿ ) 17.25 ಎಕರೆ ಜಮೀನಿನಲ್ಲಿನ  5.69 ಎಕರೆ ಜಮೀನನ್ನು ತೆಗೆದುಕೊಳ್ಳಲಾಗಿತ್ತು ಎಂಬುದು ಲೋಕಾಯುಕ್ತ ಪೊಲೀಸರ ತನಿಖೆ ವರದಿಯಿಂದ ತಿಳಿದು ಬಂದಿದೆ.

 

ಸರ್ಕಾರಿ ಆಸ್ಪತ್ರೆ ಹಕ್ಕು ಸ್ವಾಧೀನದಲ್ಲಿದ್ದ ಜಮೀನಿಗೂ ಓವರ್‌ ಲ್ಯಾಪಿಂಗ್‌

 

‘ಅಂದರೆ ಸದರಿ ಜಮೀನಿನ ನಕ್ಷೆ ಮೇಲೆ ಓವರ್‌ ಲ್ಯಾಪಿಂಗ್‌ ಮಾಡಿ ಸರ್ವೆ ನಂಬರ್‌ 597ಬಿ2ಎ1ಎ1ಎ1ಕೆ ರ ಜಮೀನಿನ ನಕ್ಷೆಯಲ್ಲಿ 2.88.05ಕ್ಕಿಂತ 8.57 ಎಕರೆ ಜಮೀನು ಹೆಚ್ಚಿಗೆ ಇದೆ ಎಂದು ಅಂದರೆ  5.69 ಎಕರೆ ಜಮೀನು ಹೆಚ್ಚಾಗಿದೆ ಎಂದು ವಿಸ್ತೀರ್ಣ ಹೆಚ್ಚಿಸಿರುತ್ತಾರೆ,’ ಎಂದು ತನಿಖಾ ವರದಿಯಲ್ಲಿ  ವಿವರಿಸಲಾಗಿದೆ.

 

 

 

ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ ಅವರ ಪತ್ನಿ ಜಿ ಲಕ್ಷ್ಮಿ ಅರುಣ ಅವರ ಹಕ್ಕು ಸ್ವಾಧೀನದಲ್ಲಿದ್ದ ಬಳ್ಳಾರಿ ಗ್ರಾಮದ ಸರ್ವೆ ನಂಬರ್‌ 597ಬಿ2ಎ131ಎ1ಹೆಚ್‌ ಪೈಕಿ 16.66 ಎಕರೆ ಜಮೀನಿನಲ್ಲಿ ಸಹ ಭೌತಿಕವಾಗಿ ಯಾವುದೇ ಜಮೀನು ಹೆಚ್ಚಿಗೆ ಇರಲಿಲ್ಲ. ಆದರೂ ಈ ಜಮೀನಿನ ಪಕ್ಕದಲ್ಲಿದ್ದ ಸರ್ಕಾರಿ ಟಿ ಬಿ ಸ್ಯಾನಿಟೋರಿಯಂ ಆಸ್ಪತ್ರೆಯ ಹಕ್ಕು ಸ್ವಾಧೀನದಲ್ಲಿದ್ದ ಬಳ್ಳಾರಿ ಗ್ರಾಮದ ಸರ್ವೆ ನಂಬರ್‌ 597ಬಿ2ಬಿ1ರ ಪೈಕಿ 34.57 ಎಕರೆ ಜಮೀನಿನಲ್ಲಿ 10.18 ಎಕರೆ ಜಮೀನನ್ನು ತೆಗೆದುಕೊಳ್ಳಲಾಗಿತ್ತು.

 

 

ಅಂದರೆ ಈ ಜಮೀನಿನ ನಕ್ಷೆಯ ಮೇಲೆ ಓವರ್‌ಲ್ಯಾಪಿಂಗ್‌ ಮಾಡಿ ಸರ್ವೆ ನಂಬರ್‌ 597ಬಿ2ಎ1ಎ1ಎ1ಹೆಚ್‌ರ ಜಮೀನಿನ ನಕ್ಷೆಯಲ್ಲಿ 16..6 ಎಕರೆ ಜಮಿನಿಗಿಂತ 24.84 ಎಕರೆ ಜಮೀನು ಹೆಚ್ಚಿಗೆ ಇದೆ ಎಂದು ದಾಖಲೆ ಸೃಷ್ಟಿಸಿ  10.18 ಎಕರೆ ಜಮೀನು ಹೆಚ್ಚಾಗಿದೆ ಎಂದು ವಿಸ್ತೀರ್ಣ ಹೆಚ್ಚಿಸಲಾಗಿತ್ತು. ಈ ರೀತಿಯಾಗಿ ಒಟ್ಟು 15.87 (5-69+10-18) ಜಮೀನು ಹೆಚ್ಚಿದೆ ಎಂದು ತಹಶೀಲ್ದಾರ್‌ ಶಶಿಧರ ಬಗಲಿ ಸೇರಿದಂತೆ ಇತರೆ ಅಧಿಕಾರಿಗಳು ಸುಳ್ಳು ನಕ್ಷೆ, ಸುಳ್ಳು ವರದಿ ಸೃಷ್ಟಿಸಿದ್ದರು. ಇದೇ ವರದಿಯನ್ನಾಧರಿಸಿ ಡಿಡಿಎಲ್‌ಆರ್‌ ನಾರಾಯಣಸ್ವಾಮಿ ಎಂಬುವರು ಕಾನೂನು ರೀತಿ ಕ್ರಮಬದ್ಧವಲ್ಲದ ದೋಷಪೂರಿತ ಆದೇಶ ಹೊರಡಿಸಿದ್ದರು.

 

 

ವಾಸ್ತವದಲ್ಲಿ ವಿಸ್ತೀರ್ಣ ಹೆಚ್ಚಿಸಿದ ಎರಡು ಜಮೀನುಗಳಲ್ಲಿ ಅಮಮ್ಮಾಳ್‌, ಬ್ರಹ್ಮಾಂಡಂ ವೆಂಕಟಲಕ್ಷ್ಮಿ ನಾರಾಯಣರಾವ್‌, ರಮಾಬಾಯಮ್ಮ, ಬಾಪಟ್ಲ ಬಾಪರಾವ್‌, ಸುವರ್ಣ ವೆಂಕಟರತ್ನಂ, ಚಿಲಮಕೂರಿ ವೆಂಕಟನಾರಾಯಣ ಶರ್ಮ ಹೆಸರಿಗೆ ಮ್ಯುಟೇಷನ್‌ ಮತ್ತು ಪಹಣಿಗಳಿದ್ದವು. ಇವರ ಹೆಸರಿನಲ್ಲಿಯೇ ಪಹಣಿ, ಮ್ಯುಟೇಷನ್‌ ಮಾಡಬೇಕಾಗಿದ್ದ ಅಧಿಕಾರಿಗಳು ಎ ಲಕ್ಷ್ಮಮ್ಮ ಮತ್ತಿತರರ ಹೆಸರಿಗೆ ಮಾಡಿದ್ದರು.

 

ಒಟ್ಟಾರೆ ‘ಸರ್ವೇ ನಂಬರ್‌ 597ಬಿ2ಎ1ಎ1ಹೆಚ್‌ ರಲ್ಲಿ 10.18 ಎಕರೆ ಸರ್ಕಾರಿ ಟಿ ಬಿ ಸ್ಯಾನಿಟೋರಿಯಿಂ ಆಸ್ಪತ್ರೆಯ ಜಮೀನುಗಳು ಸೇರಿ (11.38+5.69+10.18) ಒಟ್ಟು 27.25 ಎಕರೆ ವಿವಿಧ ಸರ್ವೆ ನಂಬರ್‌ಗಳು ಮತ್ತು ವಿವಿಧ ಚೆಕ್‌ ಬಂದಿಗುಳುಳ್ಳ ಜಮೀನುಗಳನ್ನು ಎ ಲಕ್ಷ್ಮಮ್ಮ, ಅವರ ಮಕ್ಕಳು, ಮಗನ ಹೆಂಡತಿ, ಮೊಮ್ಮಕ್ಕಳ ಹೆಸರುಗಳಿಗೆ ಸುಳ್ಳು ಮ್ಯುಟೇಷನ್‌ ಮತ್ತು ಸುಳ್ಳು ಪಹಣಿಗಳನ್ನು ಸೃಷ್ಟಿಸಿ ಅವುಗಳೇ ನೈಜವೆಂದು ಬಿಂಬಿಸಿದ್ದರು,’ ಎಂದು ಲೋಕಾಯುಕ್ತ ಪೊಲೀಸರು ತನಿಖೆಯಲ್ಲಿ ಸಾಬೀತುಪಡಿಸಿದ್ದರು.

the fil favicon

SUPPORT THE FILE

Latest News

Related Posts