ಕೋವಿಡ್‌; ಒಂದೇ ತಿಂಗಳಲ್ಲಿ 1,920 ಕೋಟಿ ರು.ಮೌಲ್ಯದ ರೆಮ್ಡಿಸಿವಿರ್‌ ವಯಲ್‌ ಮಾರಾಟ

ಬೆಂಗಳೂರು; ಕೋವಿಡ್‌ ರೋಗಿಗಳ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ ಅದನ್ನೇ ಸಂಜೀವಿನಿ ಎಂಬಂತೆ ಬಿಂಬಿಸಿದ ಪರಿಣಾಮ ಮೈಲಾನ್‌ ಸೇರಿದಂತೆ 7 ಕಂಪನಿಗಳು ಕರ್ನಾಟಕ ಸೇರಿದಂತೆ ದೇಶದಾದ್ಯಂತ ಒಟ್ಟು 1,426 ಕೋಟಿ ಕೋಟಿ ರು.ನಷ್ಟು ಮೌಲ್ಯದ ರೆಮ್‌ಡಿಸಿವಿರ್‌ ಮಾರಾಟ ಮಾಡಿದೆ.

ಕರ್ನಾಟಕದಲ್ಲಿ ಈ ಕಂಪನಿಗಳು 494 ಕೋಟಿ ರು. ಮೌಲ್ಯದ ರೆಮ್‌ಡಿಸಿವಿರ್‌ ಮಾರಾಟ ಮಾಡಿದೆ. ಮೈಲಾನ್‌ ಸೇರಿದಂತೆ ಒಟ್ಟು 7 ಕಂಪನಿಗಳು 2021ರ ಏಪ್ರಿಲ್‌ 21ರಿಂದ ಮೇ 31ರವರೆಗೆ ರಾಜ್ಯಕ್ಕೆ 10,11,431 ವಯಲ್ಸ್‌ಗಳನ್ನು ಪೂರೈಕೆ ಮಾಡಿತ್ತು. ಈ ಪೈಕಿ ಸರ್ಕಾರಕ್ಕೆ 4,26,784 ವಯಲ್‌ ಹಂಚಿಕೆ ಮಾಡಿದ್ದರೆ ಮುಕ್ತ ಮಾರುಕಟ್ಟೆಗೆ 5,84,647 ವಯಲ್‌ಗಳನ್ನು ಬಿಡುಗಡೆ ಮಾಡಿತ್ತು. ಸರ್ಕಾರಕ್ಕೆ 268,51,88,000 ರು. ಮೌಲ್ಯ ಮತ್ತು ಮುಕ್ತ ಮಾರುಕಟ್ಟೆಯಲ್ಲಿ 226, 02,66,050 ಕೋಟಿ ರು. ಮೌಲ್ಯದ ರೆಮ್‌ಡಿಸಿವೀರ್‌ನ್ನು ಮಾರಾಟ ಮಾಡಿದೆ.

ಅದೇ ರೀತಿ ದೇಶದ 36 ರಾಜ್ಯ( ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ) ಗಳಿಗೆ ಏಪ್ರಿಲ್‌ 21ರಿಂದ ಮೇ9ರವರೆಗೆ ಒಟ್ಟು 34,50,000 ವಯಲ್‌ಗಳನ್ನು ಪೂರೈಕೆ ಮಾಡಿದ್ದವು. ಇದರ ಮೊತ್ತ 1,426 ಕೋಟಿ ರು. ಮೌಲ್ಯದ ರೆಮ್‌ಡಿಸಿವಿರ್‌ನ್ನು ಸರಬರಾಜು ಮಾಡಿರುವುದು ಅಂಕಿ ಅಂಶದಿಂದ ಗೊತ್ತಾಗಿದೆ.

ಮೈಲಾನ್‌ ಕಂಪನಿಯು (4,800 ರು.ದರ) 67,18,32,000 ರು.ಮೌಲ್ಯದ ರೆಮ್‌ಡಿಸಿವಿರ್‌ 1,39,965 ವಯಲ್‌ಗಳನ್ನು ಸರ್ಕಾರಕ್ಕೆ ಪೂರೈಕೆ ಮಾಡಿದ್ದರೆ ಮುಕ್ತ ಮಾರುಕಟ್ಟೆಗೆ 39, 12, 91,200 ರು. ಮೌಲ್ಯದ 81,519 ವಯಲ್‌ಗಳನ್ನು ಬಿಡುಗಡೆ ಮಾಡಿತ್ತು.

ಅದೇ ರೀತಿ ಸಿನ್‌ಜಿನ್‌ ಕಂಪನಿಯು 57,79,96,000 ರು. ಮೌಲ್ಯದ 1,44,499 ವಯಲ್‌ಗಳನ್ನು ಸರ್ಕಾರಕ್ಕೆ 66,07,80,000 ರು. ಮೌಲ್ಯದ 1,65,195 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಜ್ಯುಬಿಲಿಯೆಂಟ್‌ ಕಂಪನಿಯು 20,53,60,000 ರು. ಮೌಲ್ಯದ 60,4000 ವಯಲ್‌ಗಳನ್ನು ಸರ್ಕಾರಕ್ಕೆ 4,19,93,400 ರು. ಮೌಲ್ಯದ 12,351 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಸರಬರಾಜು ಮಾಡಿತ್ತು. ಹಿಟರಿಯೋ ಕಂಪನಿಯು 94,95, 30,000 ರು. ಮೌಲ್ಯದ 1,89,906 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

ಇನ್ನು, ಡಾ ರೆಡ್ಡೀಸ್‌ ಲ್ಯಾಬ್‌ 16,69,15,150 ರು.ಮೌಲ್ಯದ 42,257 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಪೂರೈಕೆ ಮಾಡಿತ್ತು. ಕ್ಯಾಡಿಲಾ ಕಂಪನಿಯು 4,97,56,000 ರು. ಮೌಲ್ಯದ 17,770 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

ಮೈಲಾನ್‌ ಕಂಪನಿಯು ದೇಶದ ರಾಜ್ಯಗಳಿಗೆ 248,30,40,000 ರು. ಮೌಲ್ಯದ 5,17,300 ವಯಲ್‌ಗಳನ್ನು ಸರಬರಾಜು ಮಾಡಿದೆ. ಸಿಪ್ಲಾ ಕಂಪನಿಯು 185,56,00,000 ಮೌಲ್ಯದ 4,63,900 ವಯಲ್‌, ಸಿನ್‌ಜಿನ್‌ ಕಂಪನಿಯು 69,83,60,000 ರು.ಮೌಲ್ಯದ 1,76,800 ವಯಲ್‌, ಜ್ಯುಬಿಲಿಯೆಂಟ್‌ ಕಂಪನಿಯು 77,96,20,000 ರು.ಮೌಲ್ಯದ 2,29,300 ವಯಲ್‌, ಡಾ ರೆಡ್ಡೀಸ್‌ ಲ್ಯಾಬ್‌ 70,13,22,500 ಕೋಟಿ ರು. ಮೌಲ್ಯದ 1,77,550 ವಯಲ್‌, ಕ್ಯಾಡಿಲಾ ಕಂಪನಿಯು 213,80,80,000 ರು.ಮೌಲ್ಯದ 7,63,600 ವಯಲ್‌, ಹೆಟರೋ ಕಂಪನಿಯು 560, 77,50,000 ಕೋಟಿ ರು. ಮೌಲ್ಯದ 11,21,550 ವಯಲ್‌ಗಳನ್ನು ಹಂಚಿಕೆ ಮಾಡಿತ್ತು.

‘ಕೋವಿಡ್ ವೈರಸ್ ಬಗ್ಗೆ ಜನ ಭಯಭೀತರಾಗಲು ಮೆಡಿಕಲ್ ಮಾಫಿಯಾನೆ ಮುಖ್ಯ ಕಾರಣ ಎಂಬ ಸಂಶಯಕ್ಕೆ ಸಾಕ್ಷ್ಯಧಾರಗಳಿಲ್ಲದಿದ್ದರೂ ಕೋವಿಡ್ ರೋಗಿಗಳ ಮೇಲೆ ಯಾವುದೇ ಪರಿಣಾಮ ಬೀರದ ರೆಮಿಡಿಸ್ವಿರ್ ಅಂತಹ ಔಷಧವನ್ನು ಸಂಜೀವಿನಿಯಂತೆ ಬಿಂಬಿಸಿ ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆಸಿರುವುದನ್ನು ನೋಡಿದರೆ ನಿಜಕ್ಕೂ ಸಂಶಯ ಬರುತ್ತಿದೆ,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ಯುವ ಘಟಕದ ರಾಜ್ಯಾಧ್ಯಕ್ಷ ರಘು ಜಾಣಗೆರೆ.

ಸರಿಯಾದ ಸಮಯಕ್ಕೆ ರೆಮ್‌ಡಿಸಿವಿರ್‌ ಚುಚ್ಚುಮದ್ದು ದೊರೆಯದ ಕಾರಣ ಕೋವಿಡ್‌ ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ಪರದಾಡುತ್ತಿದ್ದರೆ ಇತ್ತ ರೆಮ್‌ಡಿಸಿವಿರ್‌ ತಯಾರಿಕೆ ಕಂಪನಿಗಳು ಸರ್ಕಾರಕ್ಕಿಂತಲೂ ಮುಕ್ತ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸರಬರಾಜು ಮಾಡಿದ್ದವು.

ಏಪ್ರಿಲ್‌ 21ರಿಂದ 28ರವರೆಗೆ ಮೈಲಾನ್‌ ಸೇರಿದಂತೆ ಕೆಲ ಕಂಪನಿಗಳು ರಾಜ್ಯದಲ್ಲಿ ಮುಕ್ತ ಮಾರುಕಟ್ಟೆಗೆ ರೆಮ್‌ಡಿಸಿವಿರ್‌ ಪೂರೈಕೆ ಮಾಡಿ ಒಟ್ಟು 20 ಕೋಟಿ ರು ವಹಿವಾಟು ನಡೆಸಿತ್ತು. ಕೇವಲ 7 ದಿನದಲ್ಲಿಯೇ 20 ಕೋಟಿ ವಹಿವಾಟು ನಡೆಸಿರುವ ಕಂಪನಿಗಳು ಲಾಭ ಗಳಿಸಿದ್ದವು.

2021ರ ಏಪ್ರಿಲ್‌ 21ರಿಂದ 28ರವರೆಗೆ ಮೈಲಾನ್‌, ಸಿಪ್ಲಾ, ಹೆಟ್ರೋ , ಡಾ ರೆಡ್ಡೀಸ್‌, ಕೆಡಿಲಾ ಸೇರಿದಂತೆ ಹಲವು ಕಂಪನಿಗಳು ಸರ್ಕಾರಕ್ಕೆ ಬಿಡುಗಡೆ ಮಾಡಿರುವುದಕ್ಕಿಂತಲೂ ಮುಕ್ತ ಮಾರುಕಟ್ಟೆಗೆ ಸರಬರಾಜು ಮಾಡಿರುವುದು ದಾಖಲೆಯಿಂದ ತಿಳಿದು ಬಂದಿದೆ. ಅಲ್ಲದೆ ಸಿಪ್ಲಾ, ಹೆಟ್ರೋ ಮತ್ತು ಜ್ಯುಬಿಲಿಯೆಂಟ್‌ ಕಂಪನಿಗಳು ಸರ್ಕಾರಕ್ಕೆ ಸರಬರಾಜು ಮಾಡದೆಯೇ ಮುಕ್ತ ಮಾರುಕಟ್ಟೆಗೆ ಪೂರೈಕೆ ಮಾಡಿದೆ. ಏಪ್ರಿಲ್‌ 21ರಿಂದ 28ರವರೆಗೆ ಈ ಕಂಪನಿಗಳು ಸರಬರಾಜು ಮಾಡಿದ್ದವು.

ರೆಮಿಡಿಸ್ವಿರ್ ಹಾದಿಯಲ್ಲೆ ಭಾರತದಲ್ಲಿ ಕೋವಿಡ್ ಚಿಕಿತ್ಸೆಗೆ ಬಳಸಿದ ಹಲವು ಔಷಧಿಗಳು ನಿರುಪಯುಕ್ತವೆಂದು ವಿಜ್ಞಾನಿಗಳ ಸಂಶೋಧನೆಯ ಮುಖಾಂತರ ಸಾಬೀತಾಗಿದೆ. ಇಂತಹ ನಿರುಪಯುಕ್ತ ಔಷಧಗಳ ಮುಖಾಂತರ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಔಷಧಿ ಕಂಪನಿಗಳು ದೇಶದ ಬಡವರನ್ನು ಸುಲಿಗೆ ಮಾಡಿದ್ದು ನಮ್ಮ ದೇಶದ ರಾಜಕೀಯ ವ್ಯವಸ್ಥೆಯ ಗುಣ ಮಟ್ಟವನ್ನು ತಿಳಿಸುತ್ತದೆ.

 

ರಘು ಜಾಣಗೆರೆ, ರಾಜ್ಯಾಧ್ಯಕ್ಷ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಯುವ ಘಟಕ)

ಏಪ್ರಿಲ್‌ 21ರಿಂದ 28ರವರೆಗೆ ಈ ಎಲ್ಲಾ ಕಂಪನಿಗಳು ಸರ್ಕಾರಕ್ಕೆ 41,040 ಸರಬರಾಜು ಮಾಡಿದ್ದರೆ ಮುಕ್ತ ಮಾರುಕಟ್ಟೆಗೆ 59,207 ವಯಲ್‌ನಷ್ಟು ಸರಬರಾಜು ಮಾಡಿದೆ. ಅಲ್ಲಿಗೆ 18,167 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಪೂರೈಕೆ ಮಾಡಿದ್ದವು.

ಸರ್ಕಾರಕ್ಕೆ ಒಂದೇ ಒಂದು ಔಷಧ ನೀಡದ ಜ್ಯುಬಿಲಿಯೆಂಟ್‌ ಕಂಪನಿಯು ಏಪ್ರಿಲ್‌ 27ರಂದು 600 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಸರಬರಾಜು ಮಾಡಿದೆ. ಅದೇ ರೀತಿ ಸಿಪ್ಲಾ ಕಂಪನಿಯು ಸಹ ಒಟ್ಟು 2,432, ಹೆಟ್ರೋ ಕಂಪನಿಯು 24,240 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಪೂರೈಕೆ ಮಾಡಿದೆಯೇ ವಿನಃ ಸರ್ಕಾರಕ್ಕೆ ಒಂದೇ ಒಂದು ಔಷಧವನ್ನು ಸರಬರಾಜು ಮಾಡಿರಲಿಲ್ಲ.

ಈ ಸಂಬಂಧ ಸಚಿವ ಡಾ ಕೆ ಸುಧಾಕರ್‌ ಮತ್ತು ಡಿ ವಿ ಸದಾನಂದಗೌಡ ಅವರು ಕಂಪನಿಗಳೊಂದಿಗೆ ಮಾತುಕತೆ ನಡೆಸಿ ರೆಮ್‌ಡಿಸಿವಿರ್‌ ಸರಬರಾಜಿಗೆ ಕ್ರಮ ಕೈಗೊಂಡಿದ್ದರು. ಅಲ್ಲದೆ ನಿಗದಿತ ಕಾಲಾವಧಿಯೊಳಗೆ ವಯಲ್‌ಗಳನ್ನು ಪೂರೈಸದ ಕೆಲ ಕಂಪನಿಗಳಿಗೆ ನೋಟೀಸ್‌ ಕೂಡ ಜಾರಿ ಮಾಡಲಾಗಿತ್ತು.

the fil favicon

SUPPORT THE FILE

Latest News

Related Posts