Friday | March 27, 2026 |

1 ಕೋಟಿ ಲಸಿಕೆ; ಕರ್ನಾಟಕಕ್ಕೆ 1.97 ಲಕ್ಷ, ಗುಜರಾತ್‌ಗೆ 6.89 ಲಕ್ಷ ಡೋಸ್‌ ಹಂಚಿಕೆ

Support THE-FILE

spot_img

ಬೆಂಗಳೂರು; ಲಸಿಕಾಕರಣ ಅಭಿಯಾನದ ಮೂರನೇ ಹಂತವನ್ನು ಮುಂದುವರೆಸಿರುವ ಕೇಂದ್ರ ಸರ್ಕಾರವು 18-44 ವಯಸ್ಸಿನವರಿಗೆ 1 ಕೋಟಿ ಲಸಿಕೆ ಡೋಸ್‌ಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡಿದೆ. ಈ ಪೈಕಿ ಕರ್ನಾಟಕಕ್ಕೆ 1.97 ಲಕ್ಷ ದೊರೆತಿದ್ದರೆ ಗುಜರಾತ್‌ಗೆ 6.89 ಲಕ್ಷ ಡೋಸ್‌ಗಳು ಲಭಿಸಿವೆ.

ಈ ಕುರಿತು ಕೇಂದ್ರ ಸರ್ಕಾರ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಈವರೆವಿಗೆ ಉಚಿತವಾಗಿ ಮತ್ತು ರಾಜ್ಯ ಸರಕಾರಗಳಿಂದ ನೇರ ಖರೀದಿ ಮೂಲಕ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 21.80 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು (21,80,51,890) ಒದಗಿಸಿದೆ. 21.80 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ಒದಗಿಸಿದೆ ಎಂದು ಹೇಳಿದೆ.

ಈವರೆವಿಗೆ ಒಟ್ಟು ಶೇ. 66ರಷ್ಟು ಡೋಸ್‌ಗಳನ್ನು 10 ರಾಜ್ಯಗಳಿಗೆ ಒದಗಿಸಲಾಗಿದೆ. ಈ ಪೈಕಿ ಕರ್ನಾಟಕಕ್ಕೆ ಶೇ.6.17ರಷ್ಟು ಪ್ರಮಾಣದಲ್ಲಿ ಒಟ್ಟು 1,20,88,649 ಡೋಸ್‌ ನೀಡಿದ್ದರೆ ಗುಜರಾತ್‌ಗೆ ಶೇ. 7.91 ಪ್ರಮಾಣದಲ್ಲಿ ಒಟ್ಟು 1,55,15,181 ಡೋಸ್‌ ನೀಡಲಾಗಿದೆ. ಉತ್ತರ ಪ್ರದೇಶಕ್ಕೆ ಶೇ. 8.29ರಷ್ಟು ಅಂದರೆ ಒಟ್ಟು 1,62,55,150 ಡೋಸ್‌ ಒದಗಿಸಿದೆ. ಪಶ್ಚಿಮ ಬಂಗಾಳಕ್ಕೆ 1,31,43,523 (ಶೇ.6.70), ರಾಜಸ್ಥಾನಕ್ಕೆ 1,60,33,767 (ಶೇ. 8.18), ಮಹಾರಾಷ್ಟ್ರಕ್ಕೆ ಶೇ.10.59ರಷ್ಟು ಪ್ರಮಾಣದಲ್ಲಿ ಒಟ್ಟಾರೆ 2,07,60,193,  ಡೋಸ್‌ ನೀಡಿರುವುದು ಕೇಂದ್ರ ಸರ್ಕಾರ ಬಹಿರಂಗಗೊಳಿಸಿರುವ ಮಾಹಿತಿಯಿಂದ ತಿಳಿದು ಬಂದಿದೆ.

ಮೇ 23 2021ರವರೆಗಿನ ಸರಾಸರಿ ಲೆಕ್ಕಾಚಾರದ ಆಧಾರದ ಮೇಲೆ ವ್ಯರ್ಥವಾದ ಡೋಸ್‌ಗಳೂ ಸೇರಿದಂತೆ ಒಟ್ಟು 20,00,08,875 ಡೋಸ್‌ಗಳನ್ನು ಬಳಕೆ ಮಾಡಲಾಗಿದೆ (ಇಂದು ಬೆಳಿಗ್ಗೆ 8 ಗಂಟೆಗೆ ಲಭ್ಯವಿರುವ ದತ್ತಾಂಶದ ಪ್ರಕಾರ) ಎಂದು ಕೇಂದ್ರ ಸರ್ಕಾರ ಹಂಚಿಕೊಂಡಿರುವ ಮಾಹಿತಿಯಿಂದ ತಿಳಿದು ಬಂದಿದೆ.

ರಾಜ್ಯಗಳಿಗೆ ಹಂಚಿಕೆಯಾದ ಡೋಸ್‌ಗಳೆಷ್ಟು? (18-44 ವಯೋಮಿತಿ)

ಅಂಡಮಾನ್ & ನಿಕೋಬಾರ್ ದ್ವೀಪಗಳು 4,082, ಆಂಧ್ರಪ್ರದೇಶ 8,891, ಅರುಣಾಚಲ ಪ್ರದೇಶ 17,777, ಅಸ್ಸಾಂ 4,33,615, ಬಿಹಾರ 12,27,279, ಚಂಡೀಗಢ 18,613, ಛತ್ತೀಸ್ಗಗಢ 7,01,945 ದಾದರ್ & ನಗರ್ ಹವೇಲಿ 18,269 , ದಾಮನ್ & ದಿಯು 19,802, ದೆಹಲಿ 9,15,275, ಗೋವಾ 30,983 ಗುಜರಾತ್ 6,89,234 , ಹರಿಯಾಣ 7,20,681 , ಹಿಮಾಚಲ ಪ್ರದೇಶ 40,272, ಜಮ್ಮು & ಕಾಶ್ಮೀರ 37,562, ಜಾರ್ಖಂಡ್, 3,69,847 , ಕರ್ನಾಟಕ 1,97,693 , ಕೇರಳ 30,555, ಲಡಾಖ್, 3,845, ಲಕ್ಷ ದ್ವೀ 1,770, ಮಧ್ಯ ಪ್ರದೇಶ 7,72,873 , ಮಹಾರಾಷ್ಟ್ರ 7,06,853, ಮಣೀಪುರ್ 9,110, ಮೇಘಾಲಯ 23,142, ಮಿಜೋರಾಂ 10,676, ನಾಗಾಲ್ಯಾಂಡ್ 7,376, ಒಡಿಶಾ 3,06,167 ಪುದುಚೆರಿ 5,411, ಪಂಜಾಬ್ 3,70,413, ರಾಜಸ್ಥಾನ್ 13,17,060, ಸಿಕ್ಕಿಂ 6,712, ತಮಿಳು ನಾಡು 53,216, ತೆಲಂಗಾಣ 654, ತ್ರಿಪುರ 53,957, ಉತ್ತರ ಪ್ರದೇಶ 10,70,642, ಉತ್ತರಾಖಂಡ 2,20,249 ಪಶ್ಚಿಮ ಬಂಗಾಳ 1,98,734 ಸೇರಿದಂತೆ ಒಟ್ಟು 1,06,21,235 ಡೋಸ್‌ ಲಸಿಕೆ ಒದಗಿಸಿರುವುದು ಗೊತ್ತಾಗಿದೆ.

ಕರ್ನಾಟಕದ ಜನಸಂಖ್ಯೆ ಆರು ಕೋಟಿ ಎಂಭತ್ನಾಲ್ಕು ಲಕ್ಷ. ಗುಜರಾತ್ ಜನಸಂಖ್ಯೆ ಆರು ಕೋಟಿ ನಲವತ್ತೆಂಟು ಲಕ್ಷ. ಈಗ ನೋಡಿ, ಹದಿನೆಂಟು ವಯೋಮಿತಿ ದಾಟಿದವರಿಗೆ ಒಕ್ಕೂಟ ಸರ್ಕಾರ ಹಂಚಿಕೆ ಮಾಡಿರುವ ಲಸಿಕೆಯ ಪ್ರಮಾಣ ಗಮನಿಸಿ. ಗುಜರಾತ್ ಗೆ ಸರಿಸುಮಾರು ಏಳು ಲಕ್ಷ, ಕರ್ನಾಟಕಕ್ಕೆ ಎರಡು ಲಕ್ಷ! ಇದೆಂಥ ನಾಚಿಕೆಗೆಟ್ಟ ರಾಜಕಾರಣ? ಇದನ್ನು ಪ್ರಶ್ನಿಸಬೇಕಾದ ರಾಜ್ಯ ‌ಸರ್ಕಾರ, ಮಂತ್ರಿಗಳು, ಸಂಸದರು, ಶಾಸಕರ ಬಾಯಿಗೆ ಬೀಗ ಬಿದ್ದಿದೆಯೇ?

ದಿನೇಶ್‌ಕುಮಾರ್‌, ಮುಖ್ಯಸ್ಥರು

ಕರವೇ ಸಾಮಾಜಿಕ ಜಾಲತಾಣ

 

ಅದೇ ರೀತಿ ಮೇ 24ರ ಬೆಳಿಗ್ಗೆ 7 ಗಂಟೆಯವರೆಗೆ ಒಟ್ಟು 19,60,51,962 ಲಸಿಕೆ ಡೋಸುಗಳನ್ನು 28,16,725 ಸೆಷನ್‌ಗಳ ಮೂಲಕ ನೀಡಲಾಗಿದೆ. ಇದು 1ನೇ ಡೋಸ್ ತೆಗೆದುಕೊಂಡ 97,60,444 ಆರೋಗ್ಯ ಕಾರ್ಯಕರ್ತರು (ಎಚ್‌ಸಿಡಬ್ಲ್ಯೂ) ಮತ್ತು 2ನೇ ಡೋಸ್ ತೆಗೆದುಕೊಂಡ 67,06,890 ಆರೋಗ್ಯ ಕಾರ್ಯಕರ್ತರು, 1,49,91,357 ಮುಂಚೂಣಿಯಲ್ಲಿರುವ ಕಾರ್ಯಕರ್ತರು (ಎಫ್.ಎಲ್.ಡಬ್ಲ್ಯೂ) (1ನೇ ಡೋಸ್), 83,33,774 ಮುಂಚೂಣಿಯಲ್ಲಿರುವ ಕಾರ್ಯಕರ್ತರು (2 ನೇ ಡೋಸ್), 18 – 44 ವರ್ಷದೊಳಗಿನ 1,06,21,235 ಫಲಾನುಭವಿಗಳು(1 ನೇ ಡೋಸ್), 45 ರಿಂದ 60 ವರ್ಷ ವಯಸ್ಸಿನ 44 ವಯೋಮಾನದ 6,09,11,756 (1ನೇ ಡೋಸ್) ಮತ್ತು 98,18,384 (2 ನೇ ಡೋಸ್) ಫಲಾನುಭವಿಗಳು. 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ 5,66,45,457 1ನೇ ಡೋಸ್ ಫಲಾನುಭವಿಗಳು ಮತ್ತು 1,82,62,665 2ನೇ ಡೋಸ್ ಫಲಾನುಭವಿಗಳನ್ನು ಒಳಗೊಂಡಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ನೀಡಲು ಇನ್ನೂ 1.80 ಕೋಟಿಗಿಂತಲೂ ಅಧಿಕ (1,80,43,015) ಡೋಸ್‌ಗಳು ಲಭ್ಯವಿವೆ ಎಂದು ತಿಳಿಸಿರುವ ಕೇಂದ್ರ ಸರ್ಕಾರವು ಇನ್ನೂ 48 ಲಕ್ಷ (40,00,650) ಲಸಿಕೆ ಡೋಸ್‌ಗಳು ಸಾಗಣೆ ಹಂತದಲ್ಲಿದ್ದು ಮುಂದಿನ 3 ದಿನಗಳಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಲಿವೆ ಎಂದು ಮಾಹಿತಿ ಒದಗಿಸಿದೆ.

Hot this week

ನರೇಗಾ ವಸತಿ ಕಾಮಗಾರಿಗಳಲ್ಲಿ ಮೋಸದ ಪಾವತಿ; ಚೆಕ್ ಡ್ಯಾಂ ಕಾಮಗಾರಿಯೇ ಇಲ್ಲ, ಆದರೂ ಹಣ ಪಾವತಿ

ಬೆಂಗಳೂರು; 847 ಸಂಖ್ಯೆ ವಸತಿ  ಕಾಮಗಾರಿಗಳಲ್ಲಿ  ಮೋಸದ ಪಾವತಿಗಳಾಗಿರುವುದನ್ನು ಭಾರತದ ಲೆಕ್ಕ...

42,750 ಕೋಟಿ ದೀರ್ಘಾವಧಿ ಸಾಲ, 4,516 ಕೋಟಿ ಆದಾಯ ಕೊರತೆ; ಎಸ್ಕಾಂಗಳ ಆರ್ಥಿಕ ಸ್ಥಿತಿ ಅನಾವರಣ

ಬೆಂಗಳೂರು; ವಿದ್ಯುತ್ ಸರಬರಾಜು ಕಂಪನಿಗಳು ಇದುವರೆಗೆ ಒಟ್ಟಾರೆ 42,750 ಕೋಟಿಗಳಷ್ಟು ದೀರ್ಘಾವಧಿ...

ಹಿಂದುಳಿದ ವರ್ಗ ವಸತಿ ಶಾಲೆ ಕಟ್ಟಡಗಳು ಶಿಥಿಲ; ಕಟ್ಟಡಗಳ ದುರಸ್ತಿಗೂ ಅನುದಾನವಿಲ್ಲ, ‘ಕೈ’ ಎತ್ತಿದ ಸರ್ಕಾರ

ಬೆಂಗಳೂರು;  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ಶಾಲೆಗಳು ಶಿಥಿಲಗೊಂಡಿದ್ದರೂ...

ನರೇಗಾ ಕಾಮಗಾರಿಗಳ ಆರಂಭದ ದಿನಾಂಕವೂ ಇಲ್ಲ, ದತ್ತಾಂಶವೂ ಇಲ್ಲ; 1,007.83 ಕೋಟಿ ರು. ವೆಚ್ಚದ ಕಾಮಗಾರಿಗಳು ಅಪೂರ್ಣ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿಗಳ ಪೈಕಿ ಒಂದು ವ‍ರ್ಷಕ್ಕಿಂತಲೂ ಹೆಚ್ಚು...

ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳ ಕುಟುಂಬ ಸದಸ್ಯರ ಉದ್ಯಮ, ಹಣಕಾಸಿನ ವ್ಯವಹಾರ; ಸದನಕ್ಕೆ ಒದಗಿಸಬಹುದೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಖಿಲ ಭಾರತ...

Topics

ನರೇಗಾ ವಸತಿ ಕಾಮಗಾರಿಗಳಲ್ಲಿ ಮೋಸದ ಪಾವತಿ; ಚೆಕ್ ಡ್ಯಾಂ ಕಾಮಗಾರಿಯೇ ಇಲ್ಲ, ಆದರೂ ಹಣ ಪಾವತಿ

ಬೆಂಗಳೂರು; 847 ಸಂಖ್ಯೆ ವಸತಿ  ಕಾಮಗಾರಿಗಳಲ್ಲಿ  ಮೋಸದ ಪಾವತಿಗಳಾಗಿರುವುದನ್ನು ಭಾರತದ ಲೆಕ್ಕ...

42,750 ಕೋಟಿ ದೀರ್ಘಾವಧಿ ಸಾಲ, 4,516 ಕೋಟಿ ಆದಾಯ ಕೊರತೆ; ಎಸ್ಕಾಂಗಳ ಆರ್ಥಿಕ ಸ್ಥಿತಿ ಅನಾವರಣ

ಬೆಂಗಳೂರು; ವಿದ್ಯುತ್ ಸರಬರಾಜು ಕಂಪನಿಗಳು ಇದುವರೆಗೆ ಒಟ್ಟಾರೆ 42,750 ಕೋಟಿಗಳಷ್ಟು ದೀರ್ಘಾವಧಿ...

ಹಿಂದುಳಿದ ವರ್ಗ ವಸತಿ ಶಾಲೆ ಕಟ್ಟಡಗಳು ಶಿಥಿಲ; ಕಟ್ಟಡಗಳ ದುರಸ್ತಿಗೂ ಅನುದಾನವಿಲ್ಲ, ‘ಕೈ’ ಎತ್ತಿದ ಸರ್ಕಾರ

ಬೆಂಗಳೂರು;  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ಶಾಲೆಗಳು ಶಿಥಿಲಗೊಂಡಿದ್ದರೂ...

ನರೇಗಾ ಕಾಮಗಾರಿಗಳ ಆರಂಭದ ದಿನಾಂಕವೂ ಇಲ್ಲ, ದತ್ತಾಂಶವೂ ಇಲ್ಲ; 1,007.83 ಕೋಟಿ ರು. ವೆಚ್ಚದ ಕಾಮಗಾರಿಗಳು ಅಪೂರ್ಣ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿಗಳ ಪೈಕಿ ಒಂದು ವ‍ರ್ಷಕ್ಕಿಂತಲೂ ಹೆಚ್ಚು...

ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳ ಕುಟುಂಬ ಸದಸ್ಯರ ಉದ್ಯಮ, ಹಣಕಾಸಿನ ವ್ಯವಹಾರ; ಸದನಕ್ಕೆ ಒದಗಿಸಬಹುದೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಖಿಲ ಭಾರತ...

ನರೇಗಾ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಿಯಮ ಉಲ್ಲಂಘನೆ; 86.67 ಕೋಟಿ ರು ಅಕ್ರಮ ಪತ್ತೆ ಹಚ್ಚಿದ ಸಿಎಜಿ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಮಾನವ ಸಂಪನ್ಮೂಲ ಬಳಕೆಗಾಗಿ ಮಾಡಿಕೊಂಡಿದ್ದ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಡೆದಿದ್ದ...

ಮೋಸದ ವಹಿವಾಟು, ಹೆಚ್ಚಿನ ಪಾವತಿ, ಅಕ್ರಮ ವೆಚ್ಚ; ನರೇಗಾದ ಮತ್ತೊಂದು ಮುಖ ಬಯಲು ಮಾಡಿದ ಸಿಎಜಿ

ಬೆಂಗಳೂರು; ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡಿದ್ದ ಕಾಮಗಾರಿಗಳು...

ಗೃಹಜ್ಯೋತಿ; 23,823.06 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ, ಎಸ್ಕಾಂಗಳಿಗೆ 631.75 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

  ಬೆಂಗಳೂರು; ಗೃಹ ಜ್ಯೋತಿ ಯೋಜನೆ ಅನುಷ್ಠಾನಗೊಳಿಸಿರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸರ್ಕಾರವು...

Related Articles

Popular Categories

error: Content is protected !!