ಕೋಟ್ಯಂತರ ಮೊತ್ತದ ವರಮಾನ ಸೋರಿಕೆ; ವರ್ತಕರ ದಂಡ ಮನ್ನಾಕ್ಕೆ ಸಿಎಜಿ ಆಕ್ಷೇಪ

ಬೆಂಗಳೂರು; ತೆರಿಗೆ ಪಾವತಿದಾರರು ಮಾಸಿಕ ಸಲ್ಲಿಕೆಗಳನ್ನು ಖಚಿತಪಡಿಸಿಕೊಳ್ಳದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಕರ್ತವ್ಯಲೋಪದಿಂದಾಗಿ ನಿರಂತರವಾಗಿ ಕೋಟ್ಯಂತರ ಮೊತ್ತದ ವರಮಾನ ಸೋರಿಕೆಯಾಗುತ್ತಿದೆ.

ಆರ್ಥಿಕ ಮತ್ತು ರಾಜಸ್ವ ವಲಯಗಳಿಗೆ ಸಂಬಂಧಿಸಿದಂತೆ ಮಾರ್ಚ್‌ 2019 ಅಂತ್ಯಕ್ಕೆ ಸಿಎಜಿ ನೀಡಿರುವ ವರದಿಯು ಕರ್ನಾಟಕ ಮೌವತೆ ಅಧಿನಿಯಮ ಪರಿಚ್ಛೇದ 74(4) ರ ಅಡಿಯಲ್ಲಿ ದಂಡ ವಸೂಲು ಮಾಡದೇ ವರಮಾನ ಸೋರಿಕೆಯಾಗುತ್ತಿರುವುದನ್ನು ಮುನ್ನೆಲೆಗೆ ತಂದಿದೆ.

ಬಳ್ಳಾರಿ, ಬೆಂಗಳೂರು, ಬಿದರೆ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹೊಸಪೇಟೆ, ಕಲಬುರಗಿ ಹಾಗೂ ರಾಯೂಚೂರು ಜಿಲ್ಲೆಗಳ 22 ಕಚೇರಿ ವ್ಯಾಪ್ತಿಯಲ್ಲಿ ಕರ್ನಾಟಕ ಮೌವತೆ ಅಧಿನಿಯಮ ಪರಿಚ್ಛೇದ 74(4) ರ ಅಡಿಯಲ್ಲಿ17.62 ಕೋಟಿ ದಂಡ ವಿಧಿಸಿರಲಿಲ್ಲ ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

ಕಾಂಗ್ರೆಸ್‌ ಸರ್ಕಾರದಲ್ಲಿ ಪೂರ್ಣಾವಧಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌ ಡಿ ಕುಮಾರಸ್ವಾಮಿ ಅವರ ಅವಧಿಯಲ್ಲಿ ಈ ನಷ್ಟ ಸಂಭವಿಸಿದೆ. ಈಗಿನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ ಕಳೆದಿದ್ದರೂ ಅಧಿಕಾರಿಗಳಿಗೆ ನೋಟೀಸ್‌ ನೀಡಿದೆಯೇ ವಿನಃ ಇನ್ನೂ ಪೂರ್ಣ ಪ್ರಮಾಣದಲ್ಲಿ ದಂಡ ವಸೂಲು ಮಾಡಿಲ್ಲ ಎಂದು ತಿಳಿದು ಬಂದಿದೆ.

ಕರದಾತರು ಸ್ಥಳೀಯ ಸನ್ನದು ಲೆಕ್ಕಪರಿಶೋಧಕರಿಂದ ಲೆಕ್ಕ ತಪಾಸಣೆ ನಡೆಸಿರುವುದಿಲ್ಲ. ಕರ ನಿರ್ಧರಣಾ ಅಧಿಕಾರಿಗಳು ಅಧಿನಿಯಮದ ಪ್ರಕಾರ ನೋಟೀಸ್‌ ನೀಡುವ ಮೂಲಕ ಅಥವಾ ಕಡ್ಡಾಯವಾಗಿ ವಿಧಿಸಬಹುದಾಗಿದ್ದ ದಂಡವನ್ನು ವಿಧಿಸುವ ಮೂಲಕ ಅನುಸರಣಾ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿರಲಿಲ್ಲ.

‘ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ನಿಯಂತ್ರಣಗಳನ್ನು ಜಾರಿಗೊಳಿಸುವಲ್ಲಿನ ವಿಫಲತೆಯು ವರಮಾನದ ಸೋರಿಕೆಯಲ್ಲಿ ಪರಿಣಿಮಿಸುತ್ತದೆ, ‘ ಎಂದು ಸಿಎಜಿ ವರದಿ ಅಭಿಪ್ರಾಯಪಟ್ಟಿದೆ.
ಇಂತಹ ಪ್ರಕರಣಗಳನ್ನು 2019ರ ಅಗಸ್ಟ್‌ ಡಿಸೆಂಬರ್‌ 2019ರ ನಡುವೆ ಸರ್ಕಾರ ಹಾಗೂ ಇಲಾಖೆ ಗಮನಕ್ಕೆ ತಂದ ನಂತರ 3 ಪ್ರಕರಣಗಳಲ್ಲಿ 0.84 ಲಕ್ಷ ಮೊತ್ತವನ್ನಷ್ಟೇ ವಸೂಲು ಮಾಡಲಾಗಿದೆ. 1,081 ಪ್ರಕರಣಗಳಲ್ಲಿ 4.20 ಕೋಟಿ ಮೊತ್ತದಷ್ಟು ದಂಡದ ಪಾವತಿಸಲು ಆದೇಶ ಹೊರಡಿಸಿದೆ. 10.02 ಲಕ್ಷ ಮೊತ್ತವು ಒಳಗೊಂಡಂತೆ 67 ಪ್ರಕರಣಗಳಲ್ಲಿ ತಗಾದೆ ನೋಟೀಸ್‌ಗಳನ್ನು ನೀಡಿದೆ ಎಂದು ಇಲಾಖೆ ಸಿಎಜಿಗೆ ಉತ್ತರಿಸಿರುವುದು ತಿಳಿದು ಬಂದಿದೆ.

4 ವರ್ತಕರು ನಮೂನೆ ಮೌವತೆ 240ರಲ್ಲಿ 15.15 ಲಕ್ಷ ಮೊತ್ತದಷ್ಟು ಹೆಚ್ಚುವರಿ ತೆರಿಗೆ ಬಾಧ್ಯತೆಯನ್ನು ಘೋಷಿಸಿಕೊಂಡಿದ್ದರು. ಈ ಪೈಕಿ ಕೇವಲ ಇಬ್ಬರು ವರ್ತಕರು ಮಾತ್ರ 3.63 ಲಕ್ಷ ಮೊತ್ತವನ್ನು ಪಾವತಿಸಿದ್ದರು. ಇಬ್ಬರು ವರ್ತಕರುಗಳಿಂದ ಪಾವತಿ ಆಗಬೇಕಿದ್ದ ತೆರಿಗೆ ಬಾಧ್ಯತೆ 11.52 ಲಕ್ಷ ಮೊತ್ತವು ವಾಣಿಜ್ಯ ತೆರಿಗೆಗಳ ಇಲಾಖೆಯ ವಿದ್ಯುನ್ಮಾನ ಸಲ್ಲಿಕೆ ವ್ಯವಸ್ಥೆಯಲ್ಲಿ ಪಾವತಿಯಾಗದೇ ಬಾಕಿ ಉಳಿದಿತ್ತು. ಅಲ್ಲದೆ ಈ ರೀತಿಯಾಗಿ ಹೆಚ್ಚುವರಿ ತೆರಿಗೆ ಬಾಧ್ಯತೆಯ ಪಾವತಿಯನ್ನು ಖಚಿತಪಡಿಸಿಕೊಳ್ಳದೆಯೂ ಕೂಡ ದಂಡಗಳನ್ನು ಮನ್ನಾ ಮಾಡಲಾಗಿತ್ತು ಎಂದು ಸಿಎಜಿ ವರದಿ ಗಮನಿಸಿದೆ.

the fil favicon

SUPPORT THE FILE

Latest News

Related Posts