ಬೆಂಗಳೂರು ನಗರ ದೇಶದ ಎರಡನೇ ಅತಿ ಹೆಚ್ಚು ಪೀಡಿತ ಜಿಲ್ಲೆ; ಆತಂಕ ಹೆಚ್ಚಿಸಿದ ವಿಶ್ಲೇಷಣಾ ವರದಿ

ಬೆಂಗಳೂರು; ಕೋವಿಡ್‌-19 ಪೀಡಿತ ದೇಶದ ಮಹಾನಗರಗಳ ಪೈಕಿ ಬೆಂಗಳೂರು ನಗರವೀಗ ದೇಶದ ಎರಡನೇ ಅತಿ ಹೆಚ್ಚು ಪೀಡಿತ ಜಿಲ್ಲೆಯಾಗಿ ಹೊರಹೊಮ್ಮಿದೆ ಎಂಬುದನ್ನು ಬಹಿರಂಗಪಡಿಸಿರುವ ಸಾರ್ವಜನಿಕ ಆರೋಗ್ಯ ಫೌಂಡೇಷನ್‌ನ ಅಧ್ಯಯನ ವರದಿಯು ಆತಂಕವನ್ನು ಹೆಚ್ಚಿಸಿದೆ.

ಲಾಕ್‌ಡೌನ್‌ ತೆರವುಗೊಳಿಸಿದ ನಂತರದ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ವೈರಸ್‌ ಹರಡುವಿಕೆ ನಿಧಾನವಾಗುತ್ತಿದೆ. ಆಗಸ್ಟ್‌ನಲ್ಲಿ ದೃಢಪಟ್ಟ ಪ್ರಕರಣಗಳ ದರ (ಟಿಪಿಆರ್‌) ಶೇ.18ರಷ್ಟು ಕಡಿಮೆಯಾಗಿದೆ ಎಂದು ಅಧ್ಯಯನ ವರದಿ ಹೇಳಿದೆಯಾದರೂ ಸೆಪ್ಟಂಬರ್‌ 20ರಂದು ಶೇ. 10ರಿಂದ 14ಕ್ಕೆ ಹೆಚ್ಚಳವಾಗುವ ಮೂಲಕ ದೃಢಪಟ್ಟ ಪ್ರಕರಣಗಳ ದರವು ಶೇ.5ಕ್ಕಿಂತ ಹೆಚ್ಚಾಗಿದೆ. ಹೀಗಾಗಿ ಬೆಂಗಳೂರು ನಗರ ಇನ್ನೂ ಸೂಕ್ಷ್ಮ ತಾಣವಾಗಿಯೇ ಉಳಿದಿದೆ ಎಂದೂ ವಿಶ್ಲೇಷಿಸಿದೆ.

ಸಾರ್ವಜನಿಕ ಆರೋಗ್ಯ ಫೌಂಡೇಷನ್‌ ಕರ್ನಾಟಕದ 7 ಜಿಲ್ಲೆಗಳನ್ನು ವಿಶ್ಲೇಷಣೆಗೆ ಒಳಪಡಿಸಿದೆ. ಈ ಪೈಕಿ 6 ಜಿಲ್ಲೆಗಳು ಶೇ.10ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಧನಾತ್ಮಕ ಪ್ರಕರಣಗಳು ದಾಖಲಾಗಿವೆ. ಕೊಡಗಿನಲ್ಲಿ ಶೇ.6.3 ಮತ್ತು ಕಲಬುರಗಿಯಲ್ಲಿ ಶೇ.11.7ರಷ್ಟು ಧನಾತ್ಮಕ ಪ್ರಮಾಣ ಕಡಿಮೆ ಇವೆ. ಆದರೆ ಸೆಪ್ಟಂಬರ್‌ 19ರ ನಂತರ 6 ವಾರಗಳಲ್ಲಿ (ಮೂರು ದಿನಗಳ ಸರಾಸರಿ) ದ್ವಿಗುಣಗೊಳಿಸುವ ಸಮಯ ಹೆಚ್ಚಾಗಿದ್ದರೂ ಅದರ ದರ ಹೆಚ್ಚುತ್ತಿದೆ ಎಂದು ಎಚ್ಚರಿಸಿದೆ.

ಸಾರ್ವಜನಿಕ ಆರೋಗ್ಯ ಫೌಂಡೇಷನ್‌ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದಾದ್ಯಂತ 36 ಜಿಲ್ಲೆಗಳಲ್ಲಿ ಸೆಪ್ಟೆಂಬರ್ 20 ರಿಂದ ಆರು ವಾರಗಳಲ್ಲಿ ಕೋವಿಡ್‌-19ರ ಪರೀಕ್ಷಾ ಅಂಕಿ ಅಂಶಗಳನ್ನು ವಿಶ್ಲೇ‍ಷಣೆಗೊಳಪಡಿಸಿದೆ. ಕೇವಲ ಎರಡು ಜಿಲ್ಲೆಗಳು ಮಾತ್ರ ಈ ಸಾಂಕ್ರಾಮಿಕವನ್ನು ಸ್ವಲ್ಪಮಟ್ಟಿಗೆ ನಿಯಂತ್ರಣದಲ್ಲಿರಿಸಿಕೊಂಡಿರುವುದನ್ನು ಹೊರತುಪಡಿಸಿದರೆ ಉಳಿದ ಜಿಲ್ಲೆಗಳಲ್ಲಿ ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಹೇಳಿದೆ.

ಲಾಕ್‌ಡೌನ್ ತೆರೆಯುವ ನಾಲ್ಕನೇ ಹಂತಕ್ಕೆ ಕಾಲಿಡುತ್ತಿದ್ದಂತೆ ಕೋವಿಡ್‌-19 ಪ್ರಕರಣಗಳು ಹೆಚ್ಚುತ್ತಿರುವ ಜಿಲ್ಲೆಗಳು ಸಾಂಕ್ರಾಮಿಕ ಉಲ್ಬಣಗೊಳ್ಳುವುದಕ್ಕೆ ತಡೆ ನೀಡಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ. ಕೋವಿಡ್‌-19ರ ಅತ್ಯಂತ ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಕರ್ನಾಟಕವೂ ಸೇರಿದಂತೆ ಮೂರು ರಾಜ್ಯಗಳ ದತ್ತಾಂಶಗಳ ವಿಶ್ಲೇಷಣೆಯು ಪರೀಕ್ಷಾ ಸಕಾರಾತ್ಮಕತೆ ದರ ಮತ್ತು ದ್ವಿಗುಣಗೊಳಿಸುವ ಸಮಯದ ಆಧಾರದ ಮೇಲೆ ಎಲ್ಲಾ ಜಿಲ್ಲೆಗಳು ಉಲ್ಬಣಗೊಳ್ಳುವ ಅಪಾಯದಲ್ಲಿದೆ ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ.

ಮಾರ್ಚ್ 24 ರಿಂದ ಪ್ರಾರಂಭವಾಗಿದ್ದ ಒಟ್ಟು ಲಾಕ್‌ಡೌನ್‌ನ್ನು ವಿವಿಧ ಹಂತಗಳಲ್ಲಿ ತೆಗೆದುಹಾಕಲಾಗಿದೆ. ಜೂನ್‌ 1ರಿಂದ ಅನ್‌ಲಾಕ್‌ ಆರಂಭವಾದ ದಿನದಿಂದ ಹೆಚ್ಚು ಹೆಚ್ಚು ಜಿಲ್ಲೆಗಳು ಕೋವಿಡ್‌-19 ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ವರದಿ ಮಾಡಿವೆ. ಮೇ ತಿಂಗಳಲ್ಲಿ 523 ಜಿಲ್ಲೆಗಳು ವೈರಸ್‌ನಿಂದ ಪ್ರಭಾವಿತವಾಗಿದ್ದರೆ ಸೆಪ್ಟೆಂಬರ್ 20 ರ ಹೊತ್ತಿಗೆ, ಲಭ್ಯವಿರುವ ದತ್ತಾಂಶಗಳ ಅಧರಿಸಿ 637 ಜಿಲ್ಲೆಗಳಲ್ಲಿ 636 ಜಿಲ್ಲೆಗಳಲ್ಲಿ ಪರಿಣಾಮ ಬೀರಿವೆ. ಲಕ್ಷದ್ವೀಪ ಮಾತ್ರ ಇದಕ್ಕೆ ಹೊರತಾಗಿದೆ ಎಂದು ವಿಶ್ಲೇಷಣೆ ವರದಿಯಲ್ಲಿ ಹೇಳಲಾಗಿದೆ.

“ಇದು ಕಾಡಿನ ಬೆಂಕಿಯಂತೆ, ಕಿಡಿಗಳು ಬಿದ್ದಲ್ಲೆಲ್ಲಾ ಬೆಂಕಿ ಪ್ರಾರಂಭವಾಗುತ್ತದೆ ಮತ್ತು ನಂತರ ಹರಡುತ್ತದೆ. ಅಂತಿಮವಾಗಿ ಹೆಚ್ಚಿನ ಪಟ್ಟಣಗಳು ​​ಮತ್ತು ಹಳ್ಳಿಗಳ ಮೇಲೆ ಇತರ ಸಮುದಾಯಗಳೊಂದಿಗೆ ಕಡಿಮೆ ಅಥವಾ ಸಂಪರ್ಕವಿಲ್ಲದ ದೂರದ ಪ್ರದೇಶಗಳನ್ನು ಹೊರತುಪಡಿಸಿ ಪರಿಣಾಮ ಬೀರುತ್ತವೆ. ,’ ಎನ್ನುತ್ತಾರೆ ವೆಲ್ಲೂರ್‌ನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ವೈರಾಲಜಿಸ್ಟ್ ಮತ್ತು ಪ್ರಾಧ್ಯಾಪಕ ಎಮಿರಿಟಸ್ ಟಿ ಜಾಕೋಬ್ ಜಾನ್.

ಸಂಪೂರ್ಣ ಲಾಕ್‌ಡೌನ್‌ನ ಕೊನೆಯ ದಿನವಾದ ಮೇ 31 ರಂದು ದೇಶಾದ್ಯಂತ 182,143 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದವು. ಸೆಪ್ಟಂಬರ್‌ 22ಕ್ಕೆ 5.56 ಮಿಲಿಯನ್‌ ಹೆಚ್ಚಳ ಅಂದರೆ ಸುಮಾರು 30 ಪಟ್ಟು ಹೆಚ್ಚಾಗಿದೆ. 6 ತಿಂಗಳ ನಂತರ ಕೋವಿಡ್‌-19 ದೃಢಪಟ್ಟ ಪ್ರಕರಣಗಳು ಜುಲೈ 17ರಂದು 1ಮಿಲಿಯನ್‌ ತಲುಪಿತ್ತು. ಆದರೆ ಸೆಪ್ಟಂಬರ್‌ 16ರಂದು 5 ಮಿಲಿಯನ್‌ ಗಡಿ ದಾಟಲು ಎರಡು ತಿಂಗಳಿಗಿಂತಲೂ ಕಡಿಮೆ ಅವಧಿ ತೆಗೆದುಕೊಂಡಿತ್ತು. ಪ್ರಸ್ತುತ, ಭಾರತದಲ್ಲಿ 975,861 ಸಕ್ರಿಯ ಪ್ರಕರಣಗಳಿವೆ. 88,935 ಸಾವಿಗೆ ಕಾರಣವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (MoHFW) ಅಂಕಿ ಅಂಶಗಳು ಹೇಳುತ್ತಿವೆ.

ದೇಶದ ಸಕ್ರಿಯ ಪ್ರಕರಣಗಳಲ್ಲಿ ಮಹಾರಾಷ್ಟ್ರದಲ್ಲಿ ಶೇ. 57, (275,017), ಕರ್ನಾಟಕದಲ್ಲಿ 95,354) ಆಂಧ್ರಪ್ರದೇಶ 74,518, ಉತ್ತರ ಪ್ರದೇಶ 64,164, ಮತ್ತು ತಮಿಳುನಾಡು 46,495 ಸಕ್ರೀಯ ಪ್ರಕರಣಗಳಿವೆ. ಇತರ ರಾಜ್ಯಗಳಲ್ಲಿಯೂ ಸಕ್ರೀಯ ಸೋಂಕುಗಳು ಹೆಚ್ಚಿವೆ. ಉದಾಹರಣೆಗೆ ಕೇರಳ 39,354, ಛತ್ತೀಸ್‌ಗಡ್‌ನಲ್ಲಿ 37,927 ಮತ್ತು ಒಡಿಶಾ 34,033 ಪ್ರಕರಣಗಳು ದಾಖಲಾಗಿವೆ.

ಯಾವ ಜಿಲ್ಲೆಗಳು ಹಾಟ್‌ಸ್ಪಾಟ್‌ಗಳಾಗಿರಬಹುದು?

ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾದ ಕೇರಳ, ದೆಹಲಿ, ಬೆಂಗಳೂರು, ಚೆನ್ನೈ ಮತ್ತು ಮುಂಬೈ ನಗರಗಳು ಭಾರತದ ಮೊದಲ ಹಾಟ್‌ಸ್ಪಾಟ್‌ಗಳಾಗಿವೆ. ಹಾಟ್‌ಸ್ಪಾಟ್‌ಗಳನ್ನು ಸಮುದಾಯದ ಜನರ ಸಂಖ್ಯೆ, ಅವರ ಸಾಮಾಜಿಕ ಮಾದರಿ ಮತ್ತು ಸೋಂಕಿನ ಪರಿಚಯದಿಂದ ನಿರ್ಧರಿಸಲಾಗುತ್ತದೆ. ಪ್ರತಿ ‘ಅನ್ಲಾಕ್’ ಜೊತೆಗೆ, ರಾಜ್ಯಗಳ ಒಳಗೆ ಮತ್ತು ಜನರ ಚಲನೆ ಹೆಚ್ಚಾದಂತೆ ಹೆಚ್ಚಿನ ಜಿಲ್ಲೆಗಳಲ್ಲಿ ವೈರಸ್‌ ಹರಡುತ್ತದೆ.

“ಹೆಚ್ಚಿನ ಜನಸಂಖ್ಯೆ ಹೊಂದಿರುವ ಯಾವುದೇ ಜಿಲ್ಲೆಯು ಸಮಾನ ಅಪಾಯದಲ್ಲಿದೆ” ಎನ್ನುತ್ತಾರೆ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಲೈಫ್ ಕೋರ್ಸ್ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಗಿರಿಧರ್ ಬಾಬು.

ಕೆಲವು ನಗರಗಳಲ್ಲಿ ಕೋವಿಡ್‌-19 ಪ್ರಕರಣಗಳ ಏರಿಕೆಯ ಬಗ್ಗೆ ಮಾತ್ರ ಅನೇಕರು ಚಿಂತಿತರಾಗಿದ್ದಾರೆ. ಆದರೆ ಜನಸಂಖ್ಯೆಯಲ್ಲಿ ಹೆಚ್ಚಿರುವ ಪ್ರದೇಶಗಳತ್ತ ಗಮನ ಹರಿಸುತ್ತಿಲ್ಲ. ಈ ಪ್ರದೇಶಗಳು ಹೆಚ್ಚು ಅಪಾಯಕಾರಿ ಮತ್ತು ಭವಿಷ್ಯದ ಹಾಟ್‌ಸ್ಪಾಟ್‌ಗಳಾಗುವ ಸಾಧ್ಯತೆಯಿದೆ,’ ಎನ್ನುತ್ತಾರೆ ಬಾಬು.

SUPPORT THE FILE

Latest News

Related Posts