ನೋಟು ಅಮಾನ್ಯೀಕರಣಕ್ಕಿಂತಲೂ ಕೆಟ್ಟ ಪರಿಸ್ಥಿತಿ; ವಲಸಿಗರ ಮೇಲೆ ದೀರ್ಘ ಪರಿಣಾಮ ಬೀರಿದ ಲಾಕ್‌ಡೌನ್‌

ಬೆಂಗಳೂರು; ಲಾಕ್‌ಡೌನ್‌ ಘೋಷಣೆ ಆದ ದಿನದಿಂದಲೂ ಅತಂತ್ರರಾಗಿದ್ದ ವಲಸೆ ಕಾರ್ಮಿಕರ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ಲಾಕ್‌ಡೌನ್‌ ಮೇ 3ರವರೆಗೆ ವಿಸ್ತರಣೆ ಘೋಷಣೆ ಆದ ಮೇಲಂತೂ ಅವರ ಇಡೀ ಜೀವನ ಚೇತರಿಸಿಕೊಳ್ಳಲಾರದಂತೆ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ವಲಸಿಗ ಕಾರ್ಮಿಕರು  ಇನ್ನಷ್ಟು ಕಡೆಗಣಿಸಲ್ಪಟ್ಟಿದ್ದಾರೆ. ಲಾಕ್‌ಡೌನ್‌ನ ಪರಿಣಾಮವು ರಾಕ್ಷಸೀಕರಣಕ್ಕಿಂತ ಕೆಟ್ಟ ಪರಿಸ್ಥಿತಿಯಲ್ಲಿದೆ. 

ಲಾಕ್‌ಡೌನ್‌ ಘೋಷಣೆ ಮತ್ತು ವಿಸ್ತರಣೆ ಮಾಡಿರುವ ದಿನಗಳ ಪರಿಸ್ಥಿತಿಯನ್ನು  ನೋಟು ಅಮಾನ್ಯೀಕರಣದ ದಿನಗಳಿಗೆ ಹೋಲಿಸಿದರೆ ಸಾಮಾನ್ಯರಷ್ಟೇ ಅಲ್ಲ, ಎಲ್ಲಾ ವರ್ಗದವರನ್ನೂ ಅತ್ಯಂತ ಕೆಟ್ಟ ಪರಿಸ್ಥಿತಿಗೆ ನೂಕಿದೆ. ನೋಟು ಅಮಾನ್ಯೀಕರಣ ಒಟ್ಟು ಆರ್ಥಿಕತೆ ಮತ್ತು ಒಟ್ಟು ಉತ್ಪಾದನೆಯಲ್ಲಿ ಇಳಿಕೆಗೆ ಕಾರಣವಾಗಿತ್ತು. 

ಅನೌಪಚಾರಿಕ  ವಲಯದ ಮೇಲೆ ತೀವ್ರವಾಗಿ ಪರಿಣಾಮ ಬೀರಿರುವ ಹೊತ್ತಿನಲ್ಲೇ ಲಾಕ್‌ಡೌನ್‌ ದಿನಗಳು, ಜೀವನೋಪಾಯದ ಮೇಲೆ ದೀರ್ಘ ಕಾಲಿನ ಪರಿಣಾಮ ಬೀರಲಿವೆ.ಅದರಲ್ಲೂ ವಲಸೆ  ಕಾರ್ಮಿಕರ ಮೇಲೆ ತಕ್ಷಣ ಮತ್ತು ನೇರಪರಿಣಾಮ  ಬಹು ದೀರ್ಘಕಾಲದವರೆಗೂ ಇರಲಿದೆ. 

ಅಂದಾಜು 11,000ಕ್ಕೂ ಹೆಚ್ಚು ಕಾರ್ಮಿಕರ ಜಾಲವನ್ನು ಹೊಂದಿರುವ ಸ್ಟಾಂಡರ್ಡ್‌ ವರ್ಕರ್ಸ್‌ ಆಕ್ಷನ್‌ ನೆಟ್‌ವರ್ಕ್‌ ಸಂಸ್ಥೆ ಕಳೆದ ಒಂದು ದಿನದ ಹಿಂದೆಯಷ್ಟೇ (2020ರ  ಏಪ್ರಿಲ್‌ 15)  ಹೊಸ ವರದಿಯೊಂದನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಶೇ.50ರಷ್ಟು ಕಾರ್ಮಿಕರ ಪೈಕಿ ಒಬ್ಬರಿಗಿಂತ  ಕಡಿಮೆ ಇರುವವರು ಮಾತ್ರ ಪಡಿತರ ಹೊಂದಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಶೇ.89ರಷ್ಟು ಉದ್ಯೋಗದಾತರು ಕಾರ್ಮಿಕರಿಗೆ ವೇತನ  ಪಾವತಿಸಿಲ್ಲ. ಇವರಲ್ಲಿ ಹೆಚ್ಚಿನವರು ಕಾರ್ಖಾನೆ ಮತ್ತು ಕಟ್ಟಡ ನಿರ್ಮಾಣ ಕಂಪನಿಗಳಲ್ಲಿನ ದಿನಗೂಲಿ ಕಾರ್ಮಿಕರಿದ್ದಾರೆ. 

2020ರ ಏಪ್ರಿಲ್‌  5ರಂದು ಕೇಂದ್ರ  ಗೃಹ ಸಚಿವಾಲಯ ಪತ್ರಿಕೆ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು. ಅದರ ಪ್ರಕಾರ ದೇಶದಲ್ಲಿ ಸುಮಾರು 1.25 ಮಿಲಿಯನ್‌ ಸಂಖ್ಯೆಯಲ್ಲಿರುವ ಅಂತರರಾಜ್ಯ ವಲಸಿಗರನ್ನು 27,661 ಪರಿಹಾರ ಶಿಬಿರ ಮತ್ತು ನಿರಾಶ್ರಿತರ ಕೇಂದ್ರಗಳಲ್ಲಿರಿಸಲಾಗಿದೆ. ಇನ್ನುಳಿದ ಶೇ.87ರಷ್ಟು ವಲಸಿಗರನ್ನು ಎನ್‌ಜಿಒಗಳ ಆಶ್ರಯದಲ್ಲಿವೆ. ಇಷ್ಟೆಲ್ಲಾ ಆದರೂ ಇನ್ನೂ ಅನೇಕರು ಶಿಬಿರಗಳಲ್ಲೇ  ಇಲ್ಲ. ಅದೇ ರೀತಿ ಅಂತರ  ಮತ್ತು ಅಂತರರಾಜ್ಯ ವಲಸಿಗರು ಕೆಲಸವಿಲ್ಲದೇ  ವಿವಿಧೆಡೆ ಸಿಲುಕಿದ್ದಾರೆ. 

ಆಂತರಿಕ ವಲಸೆ ಕಾರ್ಮಿಕರಲ್ಲಿ  ಹೆಚ್ಚಿನವರು ಇನ್ನೂ ಅನೌಪಚಾರಿಕ ವಲಯದಲ್ಲೇ ಇದ್ದಾರೆ. ಭಾರತದ ಜಿಡಿಪಿಗೆ ಶೇ. 10ರಷ್ಟು ಕೊಡುಗೆಯನ್ನು ನೀಡುವುದು ಇದೇ ವಲಸಿಗ ಕಾರ್ಮಿಕರು. ಆದರೂ  ಇಂತಹ ಪರಿಸ್ಥಿತಿಯಲ್ಲಿ ವಲಸಿಗರ ಬಗೆಗೆ ಸರ್ಕಾರಗಳು ಕಾಳಜಿ ವಹಿಸುತ್ತಿಲ್ಲ. ಸ್ಥಳೀಯ  ಪ್ರದೇಶದಲ್ಲಿ ಬ್ಯಾಂಕ್‌ ಖಾತೆಗಳನ್ನು ಹೊಂದಿಲ್ಲ. ಆಧಾರ್‌ ಸಂಖ್ಯೆ ಜತೆ ಜೋಡಣೆಯಾಗಿಲ್ಲ, ನಾವೇನು ಮಾಡುವುದು  ಎಂದು ಹೇಳುವುದನ್ನು ಬಿಟ್ಟರೆ ಉಳಿದಂತೆ ಯಾವ ಕಾಳಜಿಯನ್ನೂ ಕಾರ್ಮಿಕ ಇಲಾಖೆ ಅಧಿಕಾರಿಗಳು ವಹಿಸುತ್ತಿಲ್ಲ.  

ಇನ್ನು, ವಲಸಿಗರು ಇಡೀ ವ್ಯವಸ್ಥೆಯಲ್ಲಿ ಇದ್ದರೂ ಇಲ್ಲದಂತಿರುತ್ತಾರೆ. ಏಕೆಂದರೆ ಅವರ ಬಗ್ಗೆ ಸಾಕಷ್ಟು ಮಾಹಿತಿಯನ್ನೇ ಹೊಂದಿರುವುದಿಲ್ಲ. ಸ್ಥಳೀಯ ರಾಜಕೀಯ ಮತ್ತು ಆರ್ಥಿಕತೆಯ ಭಾಗವೂ ಆಗಿರುವುದಿಲ್ಲ. ಹೀಗಾಗಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೂ ಅವರಿಗೆ ಜವಾಬ್ದಾರರಾಗಿರುವುದಿಲ್ಲ. 

ಕರ್ನಾಟಕದ್ದೇ ಒಂದು ಉದಾಹರಣೆ ನೋಡಬಹುದಾದರೆ ಕರ್ನಾಟಕ ಕಟ್ಟಡ  ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಅಂದಾಜು 21 ಲಕ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಆಗಿದೆ. ಈ ಪೈಕಿ 10 ಲಕ್ಷದಷ್ಟು ಸಂಖ್ಯೆಯಲ್ಲಿರುವವರು ಹೊರರಾಜ್ಯದ ವಲಸಿಗರು. 

ಬೆಂಗಳೂರು ಮಹಾನಗರದಲ್ಲಿನ ಕಟ್ಟಡ ನಿರ್ಮಾಣ ಕಂಪನಿಗಳು ಸೇರಿದಂತೆ ಇನ್ನಿತರೆ ಸಣ್ಣ, ಮಧ್ಯಮ ಮತ್ತು ಸೂಕ್ಷ್ಮ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವವರಲ್ಲಿ  ವಲಸಿಗರೇ ಹೆಚ್ಚು. ಉತ್ತರ ಭಾರತ  ಮತ್ತು ಉತ್ತರ  ಕರ್ನಾಟಕದಿಂದ  ಸಾವಿರಾರು ಸಂಖ್ಯೆಯ ಕಾರ್ಮಿಕರು ಕೆಲಸ ಹುಡುಕಿಕೊಂಡು ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ಈ ಕಾರ್ಮಿಕರಿಗೆ  ಕೆಲಸವೂ ಇಲ್ಲ, ನಿತ್ಯದ ಊಟವೂ ಇಲ್ಲದಂತಾಗಿದೆ.  

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನೆಲೆಸಿರುವ ಕೂಲಿ ಕಾರ್ಮಿಕರು  ಅತ್ತ  ತಮ್ಮ ಊರಿಗೂ ಹೋಗಲಾರದೆ  ಇತ್ತ  ಇರಲಾಗದೆ ಅಡಕತ್ತರಿಯಲ್ಲಿ ಸಿಲುಕಿ ನರಳುತ್ತಿದ್ದಾರೆ. ಅವರಲ್ಲಿ ಒಂದಷ್ಟು ಮಂದಿ ಬೆಂಗಳೂರು ನಗರ ತೊರೆದು ನಗರದಿಂದ ಗುಳೆ ಹೋಗಿದ್ದಾರೆ. ಪಡಿತರ  ಇರಲಿ, ಕುಡಿಯಲು  ನೀರು ಇಲ್ಲದಂತಹ ಸ್ಥಿತಿಯಲ್ಲಿದ್ದಾರೆ. 

ಅದರಲ್ಲೂ ರಾಜ್ಯದೊಳಗಿನ ಆಂತರಿಕ  ವಲಸಿಗರ ಸಂಖ್ಯೆ ದೊಡ್ಡದಿದೆ. ಉತ್ತರ ಮತ್ತು ಹೈದರಾಬಾದ್‌  ಕರ್ನಾಟಕದ ಪ್ರಾಂತ್ಯದ  ರಾಯಚೂರು,  ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ವಿವಿಧೆಡೆಯ ವಲಸಿಗರು ಕೆಲಸ  ಮಾಡುತ್ತಿದ್ದರೂ ಅವರು ಬೆಂಗಳೂರಿನ ಆಡಳಿತ ವ್ಯವಸ್ಥೆಯ ಭಾಗವಾಗಿರುವುದಿಲ್ಲ. ಹೀಗಾಗಿ ಸ್ಥಳೀಯ ನಗರಾಡಳಿತ ಸಂಸ್ಥೆಗಳು ಕೂಡ ಇವರ ಸಂಕಷ್ಟದ ದಿನಗಳಲ್ಲಿ ಕೈ ಹಿಡಿಯುವುದಿಲ್ಲ.

ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ ಸ್ವಂತ ಸ್ಥಳಗಳತ್ತ ಒಂದೇ ಉಸಿರಿನಲ್ಲಿ ದೌಡಾಯಿಸಿರುವ ವಲಸಿಗರ ಪರಿಸ್ಥಿತಿ ಭಿನ್ನವಾಗಿದೆ. ವೇತನವಿಲ್ಲದೇ ತೆರಳಿರುವ ಅವರೀಗ ನೆರೆಹೊರೆಯವರಿಂದ ಆಹಾರ ಪದಾರ್ಥಗಳನ್ನು ಕಾಡಿಬೇಡಿ ಪಡೆಯುತ್ತಿದ್ದಾರೆ. ವಲಸಿಗ ಕಾರ್ಮಿಕರಿಗೆ  ಪಡಿತರ ನೀಡಲಾಗುವುದು ಎಂದು ಸರ್ಕಾರ ಹೇಳಿದ ಮೇಲೂ ಆಹಾರ ಪದಾರ್ಥಗಳಿಗೆ ಪರದಾಟ ಮಾತ್ರ ನಿಂತಿಲ್ಲ. ಇನ್ನೂ ನರೇಗಾ ಕಾಮಗಾರಿಗಳು ನಡೆಯುತ್ತಿಲ್ಲವಾದ್ದರಿಂದ ಈಗಲೂ ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ ಸ್ಥಳೀಯ ಲೇವಾಲೇವಿಗಾರರಿಂದ  ಅತಿಯಾದ ಬಡ್ಡಿದರದಲ್ಲಿ ಸಾಲ ಪಡೆಯುವ ಅನಿವಾರ್ಯ ಸ್ಥಿತಿಗೆ ಬಂದು ತಲುಪಿದ್ದಾರೆ. 

ಇವರಿಗಿಂತ ಕಠಿಣ ಪರಿಸ್ಥಿತಿಯಲ್ಲಿರುವ ವಲಸಿಗರೆಂದರೆ, ಮನೆಗಳನ್ನು ತಲುಪಲಾರದೇ ರಸ್ತೆ ಬದಿ, ಫ್ಲೈಓವರ್‌ ಕೆಳಗೆ ದಿನದೂಡುತ್ತಿರುವವರದ್ದು. ಸುತ್ತಲಿನ ಪ್ರದೇಶ, ಪರಿಸರದ ಅರಿವಿಲ್ಲದ  ಸ್ಥಳಗಳಲ್ಲಿರುವ ಈ ವಲಸಿಗ ಕಾರ್ಮಿಕರದ್ದು ಅಕ್ಷರಶಃ ನರಕಯಾತನೆ. ಅಗತ್ಯ ವಸ್ತುಗಳಿಗಾಗಿ ಎಲ್ಲಿಗೆ ಹೋಗಬೇಕು ಎಂಬ ಚಿಂತೆಯಲ್ಲಿದ್ದರೆ, ಆರೋಗ್ಯ ರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕು ಎಂಬ ಅರಿವೂ ಕೂಡ  ಅವರಿಗಿಲ್ಲ.

SUPPORT THE FILE

Latest News

Related Posts