Friday | June 12, 2026 |

ವೆಂಟಿಲೇಟರ್‌ ಹಾಸಿಗೆ ಖರೀದಿ; ಮಾರುಕಟ್ಟೆ ದರಕ್ಕಿಂತಲೂ 141.51 ಕೋಟಿ ರು. ಹೆಚ್ಚಳ ನಮೂದು

ಬೆಂಗಳೂರು; ಕೋವಿಡ್‌ 19ರ ಮೂರನೇ ಅಲೆ ನಿರ್ವಹಣೆಗೆ ಪೂರ್ವ ಸಿದ್ಥತೆಗೆ ಪೂರಕವಾಗಿ ಬ್ಲಾಕ್‌ ಫಂಗಸ್‌ ತಪಾಸಣೆ ಮತ್ತು ಚಿಕಿತ್ಸೆಗೆ ಅತ್ಯಗತ್ಯವಾಗಿರುವ ವೆಂಟಿಲೇಟರ್‌ ಸೇರಿದಂತೆ ವೈದ್ಯಕೀಯ ಇನ್ನಿತರೆ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯು ನಮೂದಿಸಿರುವ ಉಪಕರಣವಾರು ಖರೀದಿ ಮೊತ್ತವು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ ಶೇ. 5ರಿಂದ 10 ಪಟ್ಟು ಹೆಚ್ಚಳವಿರುವುದು ಕಂಡು ಬಂದಿದೆ.

ವೆಂಟಿಲೇಟರ್‌ ಒಳಗೊಂಡ ಪಿಐಸಿಯು ಹಾಸಿಗೆ, ವೆಂಟಿಲೇಟರ್‌ ರಹಿತ ಹಾಸಿಗೆ, ವೆಂಟಿಲೇಟರ್‌ ಒಳಗೊಂಡ ಎನ್‌ಐಸಿಯು ಹಾಸಿಗೆ, ಫೆಸ್‌ ಉಪಕರಣ, ಟೆಲಿಸ್ಕೋಪ್‌, ಕೊಬಾಲ್ಟರ್‌, ವಾಂಡ್ಸ್‌, ಪಿಎಪಿ ಆರ್‌, ರಿಜಿಡ್‌ ಬ್ರೋನ್ಚೋಸ್ಕೋಪ್‌, ಕಾರ್ಡಿಯಾಕ್‌ ಟೇಬಲ್‌ ಉಪಕರಣಗಳಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯು ಮಾರುಕಟ್ಟೆ ದರಕ್ಕಿಂತಲೂ ಶೇ.5ರಿಂದ 10 ಪಟ್ಟು ದರ ನಮೂದಿಸಿದೆ. ಇದಕ್ಕೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆಯು ದೊರೆತಿದೆ ಎಂದು ತಿಳಿದು ಬಂದಿದೆ. ಇದು ಅಕ್ರಮಕ್ಕೆ ದಾರಿಮಾಡಿಕೊಟ್ಟಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೋವಿಡ್‌ ಮೂರನೇ ಅಲೆಯ ನಿರ್ವಹಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ಉಪಕರಣ ಖರೀದಿ ಮತ್ತು ಕಾಮಗಾರಿಗಳಿಗೆ ಒಟ್ಟು 1,594.59 ಕೋಟಿ ರು. ಒದಗಿಸಲು ವೈದ್ಯಕೀಯ ಶಿಕ್ಷಣ ಇಲಾಖೆಯು ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಸೇರಿದಂತೆ ಇನ್ನಿತರೆ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ನಮೂದಿಸಿರುವ ಒಟ್ಟು ಮೊತ್ತದಲ್ಲಿ 16 ವೈದ್ಯಕೀಯ ಉಪಕರಣಗಳ ಖರೀದಿಗೆ 214,98,98,740 ರು.ಗಳನ್ನು ನಮೂದಿಸಿದೆ. ಆದರೆ ಮಾರುಕಟ್ಟೆಯಲ್ಲಿ ವಾಸ್ತವವಾಗಿ 16 ಉಪಕರಣಗಳಿಗೆ 60.38 ಕೋಟಿ ರು. ವೆಚ್ಚವಾಗಲಿದೆ. ಇಲಾಖೆಯು ನಮೂದಿಸಿರುವ ಒಟ್ಟು ದರವನ್ನು ಮಾರುಕಟ್ಟೆಯಲ್ಲಿನ ದರಕ್ಕೆ ಹೋಲಿಸಿದರೆ 154.60 ಕೋಟಿ ರು. ಹೆಚ್ಚಳವಿರುವುದು ಕಂಡು ಬಂದಿದೆ.

ಪ್ರತಿ ಉಪಕರಣದ ಖರೀದಿಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯು ನಮೂದಿಸಿರುವ ದರವನ್ನು ‘ದಿ ಫೈಲ್‌’ ತನಿಖಾ ತಂಡವು ಬೆಂಗಳೂರು ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರ ನೆರವಿನೊಂದಿಗೆ ಮಾರುಕಟ್ಟೆಯಲ್ಲಿನ ದರದೊಂದಿಗೆ ಒರೆಗೆ ಹಚ್ಚಿದೆ. ಇದರ ಪ್ರಕಾರ ಪ್ರತಿ ಉಪಕರಣದ ದರವು ಶೇ.5ರಿಂದ 10 ಪಟ್ಟು ಹೆಚ್ಚಳವಿದೆ. ಉಪಕರಣಗಳ ಒಟ್ಟಾರೆ ದರದಲ್ಲಿ ಶೇ.5ರಷ್ಟು ಹೆಚ್ಚಳವಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ಸಲ್ಲಿಸಿರುವ(ಏಕ ಕಡತ ಸಂಖ್ಯೆ; M/E TENDER/20/2021-22- ದಿನಾಂಕ 23.06.2021 ಮತ್ತು 20.07.2021) ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ( ಟಿಪ್ಪಣಿ ಸಂಖ್ಯೆ FD 125 EXP-5/2021 ದಿನಾಂಕ 14.07.2021) ಸಿವಿಲ್‌ ಕಾಮಗಾರಿಗೆ 217 ಕೋಟಿ ಮತ್ತು ಉಪಕರಣಗಳಿಗೆ 152 ಕೋಟಿ ಸೇರಿ ಒಟ್ಟು ಮೊತ್ತ 369.00 ಕೋಟಿ ರು.ಗಳಿಗೆ ಸಹಮತಿ ನೀಡಿರುವುದು ತಿಳಿದು ಬಂದಿದೆ.

ವೈದ್ಯಕೀಯ ಉಪಕರಣಗಳ ಖರೀದಿಗೆ 317 ಕೋಟಿ ರು.ಗಳಗಿಎ ಸಚಿವ ಸಂಪುಟದ ಘಟನೋತ್ತರ ಅನುಮೋದನೆ ಬಾಕಿ ಇರಿಸಿ ಆಡಳಿತಾತ್ಮಕ ಅನುಮೋದನೆ ನೀಡಿರುವ ಆದೇಶದಲ್ಲಿ ಉಪಕರಣಗಳ ನಿರ್ದಿಷ್ಟತೆಯನ್ನು ನಮೂದಿಸಿಲ್ಲ. ಬದಲಿಗೆ ಘಟಕ ವೆಚ್ಚ ಮತ್ತು ವೈದ್ಯಕೀಯ ಕಾಲೇಜುಗಳಿಗೆ ತಗಲುವ ಒಟ್ಟು ವೆಚ್ಚವನ್ನು ಮಾತ್ರ ನಮೂದಿಸಿದೆ. ಹೀಗಾಗಿ ‘ದಿ ಫೈಲ್‌’ ತನಿಖಾ ತಂಡವು ಉಪಕರಣಗಳ ಗರಿಷ್ಠ  ಉತ್ಕೃಷ್ಟ ನಿರ್ದಿಷ್ಟತೆ ಮತ್ತು ಗರಿಷ್ಠ ದರಕ್ಕೆ ಹೋಲಿಸಿ ನೋಡಿದ್ದರೂ ವೈದ್ಯಕೀಯ ಶಿಕ್ಷಣ ಇಲಾಖೆಯು ನಮೂದಿಸಿರುವ ದರವು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ ಶೇ.5ರಿಂದ 10ಪಟ್ಟು ಹೆಚ್ಚಳ ಇರುವುದು ಕಂಡು ಬಂದಿದೆ.

ಪಿಐಸಿಯು ವೆಂಟಿಲೇಟರ್ ಸಹಿತ ಹಾಸಿಗೆ, ವೆಂಟಿಲೇಟರ್‌ ರಹಿತ ಹಾಸಿಗೆ ಮತ್ತು ವೆಂಟಿಲೇಟರ್‌ ಸಹಿತ ಎನ್‌ಐಸಿ ಹಾಸಿಗೆ (ಒಟ್ಟು 1,280 ಹಾಸಿಗೆ)ಗಳನ್ನು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ 141.51 ಕೋಟಿ ರು. ಹೆಚ್ಚಳ ದರದಲ್ಲಿ ಖರೀದಿಸಲು ಮುಂದಾಗಿದೆ. ವಾಸ್ತವದಲ್ಲಿ 1,280 ಹಾಸಿಗೆಗಳನ್ನು 55,76,00,000 ಕೋಟಿ ರು.ನಲ್ಲಿ ಖರೀದಿಸಬಹುದಾಗಿದ್ದರೂ ವೈದ್ಯಕೀಯ ಶಿಕ್ಷಣ ಇಲಾಖೆಯು 197.27 ಕೋಟಿ ರು ದರದಲ್ಲಿ ಖರೀದಿಸಲು ಅನುಮೋದನೆ ಪಡೆದಿದೆ. ಮಾರುಕಟ್ಟೆಯಲ್ಲಿನ ದರಕ್ಕೂ ಮತ್ತು ಇಲಾಖೆಯು ನಮೂದಿಸಿರುವ ದರ ಮಧ್ಯೆ ಅಪಾರ ಹೆಚ್ಚಳ ಇದ್ದರೂ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿರುವುದು ಅಕ್ರಮಕ್ಕೆ ದಾರಿಮಾಡಿಕೊಟ್ಟಂತಾಗಿದೆ.

ಪಿಐಸಿಯು ವೆಂಟಿಲೇಟರ್‌ ಹಾಸಿಗೆಗಳಿಗೆ 72.69 ಕೋಟಿ ಹೆಚ್ಚಳ

ವೆಂಟಿಲೇಟರ್‌ ಒಳಗೊಂಡ ಪಿಐಸಿಯು ಹಾಸಿಗೆ (320)ಗೆ ವೈದ್ಯಕೀಯ ಶಿಕ್ಷಣ ಇಲಾಖೆಯು ತಲಾ 1,04,69,60,000 ರು. ನಮೂದಿಸಿದೆ. ಆದರೆ ಮಾರುಕಟ್ಟೆಯಲ್ಲಿ ತಲಾ ವೆಂಟಿಲೇಟರ್‌ ಒಳಗೊಂಡ ಹಾಸಿಗೆಯೊಂದಕ್ಕೆ 10,00,000 ರು. ದರವಿದೆ. ಮಾರುಕಟ್ಟೆಯಲ್ಲಿರುವ ವಾಸ್ತವ ದರದಂತೆ ಅಂದರೆ 10,00,000 ರು. ದರದಲ್ಲಿ 320 ಹಾಸಿಗೆ (ವೆಂಟಿಲೇಟರ್‌ ಒಳಗೊಂಡಂತೆ)ಗೆ 32,00,00,000 ರು.ಗಳಾಗಲಿವೆ. ಆದರೆ ವೈದ್ಯಕೀಯ ಶಿಕ್ಷಣ ಇಲಾಖೆಯು ತಲಾ ಹಾಸಿಗೆಗೆ 32, 71, 750 ರು.ಲೆಕ್ಕದಲ್ಲಿ ಒಟ್ಟು 321 ಹಾಸಿಗೆಗಳಿಗೆ 104.69 ಕೋಟಿ ರು. ನಮೂದಿಸಿದೆ. ವೆಂಟಿಲೇಟರ್‌ ಒಳಗೊಂಡ ಪಿಐಸಿಯು ತಲಾ ಹಾಸಿಗೆಗೆ 22,71,750 ರು. ವ್ಯತ್ಯಾಸವಿದ್ದರೆ ಒಟ್ಟು 320 ಹಾಸಿಗೆಗಳ ಖರೀದಿ ದರದಲ್ಲಿ 72,69,60,000 ರು. ಹೆಚ್ಚಳ ಕಂಡು ಬಂದಿದೆ.

ಪಿಐಸಿಯು ವೆಂಟಿಲೇಟರ್‌ ರಹಿತ ಹಾಸಿಗೆಗೆ 35.03 ಕೋಟಿ ಹೆಚ್ಚಳ

ವೆಂಟಿಲೇಟರ್‌ ರಹಿತ ಪಿಐಸಿಯು ಹಾಸಿಗೆಗೆ ಮಾರುಕಟ್ಟೆಯಲ್ಲಿ 1,20,000 ರು. ದರವಿದೆ. ಈ ದರದಂತೆ ಒಟ್ಟು 780 ಹಾಸಿಗೆಗಳಿಗೆ 9,36,00,000 ರು.ಗಳಾಗಲಿದೆ. ಆದರೆ ವೈದ್ಯಕೀಯ ಶಿಕ್ಷಣ ಇಲಾಖೆಯು ತಲಾ ಹಾಸಿಗೆಗೆ 5,67,966 ರು. ದರ ನಮೂದಿಸಿದೆ. ಒಟ್ಟು ಈ ದರದಲ್ಲಿ 780 ಹಾಸಿಗೆಗಳಿಗೆ 44,30, 14,000 ರು.ಗಳಾಗಿದ್ದರೆ ಮಾರುಕಟ್ಟೆಯಲ್ಲಿರುವ ದರಕ್ಕೂ ಮತ್ತು ಇಲಾಖೆಯು ನಮೂದಿಸಿರುವ ದರದ ಮಧ್ಯೆ 35,03,14,000 ರು. ವ್ಯತ್ಯಾಸವಿದೆ.

ಎನ್‌ಸಿಯು ಹಾಸಿಗೆ ವೆಂಟಿಲೇಟರ್‌ ಸಹಿತ ಹಾಸಿಗೆ 33.79 ಕೋಟಿ ಹೆಚ್ಚಳ

ಎನ್‌ಸಿಯು ಹಾಸಿಗೆ (ವೆಂಟಿಲೇಟರ್‌ ಸಹಿತ)ಗೆ ಮಾರುಕಟ್ಟೆಯಲ್ಲಿ 8,00,000 ರು. ಇದೆ. ಈ ದರದಂತೆ ಒಟ್ಟು 180 ಹಾಸಿಗೆಗಳಿಗೆ 14,40,00,000 ರು.ಗಳಾಗಲಿದೆ. ಆದರೆ ವೈದ್ಯಕೀಯ ಶಿಕ್ಷಣ ಇಲಾಖೆಯು ತಲಾ ಹಾಸಿಗೆಗೆ 26,77,300 ರು. ನಮೂದಿಸಿದೆ. ಈ ದರದಂತೆ ಒಟ್ಟು 180 ಹಾಸಿಗೆಗಳಿಗೆ 48,19,14,000 ರು.ಗಳಾಗಲಿದೆ. ಮಾರುಕಟ್ಟೆಯಲ್ಲಿನ ದರಕ್ಕೂ ಇಲಾಖೆಯು ನಮೂದಿಸಿರುವ ದರ ಮಧ್ಯೆ 33, 79,14,000 ರು. ಹೆಚ್ಚಳವಿದೆ.

ಕೋವಿಡ್‌ ಮೊದಲ ಅಲೆಯಲ್ಲಿಯೂ ವೆಂಟಿಲೇಟರ್‌ಗಳನ್ನು ದುಪ್ಪಟ್ಟು ದರದಲ್ಲಿ ಖರೀದಿಸಲಾಗಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಮತ್ತು ಹಿಂದಿನ ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರು ಇದನ್ನು ಅಲ್ಲಗಳೆದಿದ್ದರು. ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವೆಂಟಿಲೇಟರ್‌ ಖರೀದಿಯಲ್ಲಿ ಅಕ್ರಮಗಳಾಗಿವೆ ಎಂದು ಆರೋಪಿಸಿದ್ದರು. ವೆಂಟಿಲೇಟರ್‌ಗಳ ಖರೀದಿಯಲ್ಲಿ ಅಕ್ರಮಗಳಾಗಿವೆ ಎಂದು ‘ದಿ ಫೈಲ್‌’ ದಾಖಲೆ ಸಮೇತ ವರದಿ ಮಾಡಿದ್ದನ್ನು ಸ್ಮರಿಸಬಹುದು.

Hot this week

ತ್ಯಾಜ್ಯ ವಿಲೇವಾರಿ ಟೆಂಡರ್ ಪ್ರಕ್ರಿಯೆಗಳಲ್ಲಿ ಅಕ್ರಮ ಆರೋಪ; ಮಧ್ಯಪ್ರವೇಶಕ್ಕೆ ಲೋಕಭವನ ಕದ ತಟ್ಟಿದ ಬಿಜೆಪಿ, ಸ್ವತಂತ್ರ ತನಿಖೆಗೆ ಮುಂದಾಗುವರೇ?

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಮಗ್ರ ಘನ ತ್ಯಾಜ್ಯ ನಿರ್ವಹಣಾ...

ಕಸ ವಿಲೇವಾರಿ ಟೆಂಡರ್‍‌ನಲ್ಲಿ ಅಕ್ರಮ; 10,000 ಕೋಟಿ ಕಿಕ್‌ ಬ್ಯಾಕ್‌ ಆರೋಪ, ಹೈಕಮಾಂಡ್ ಕಪ್ಪದ ಟೆಂಡರ್, ರಾಜ್ಯಪಾಲರಿಗೆ ದೂರು, ದಿ ಫೈಲ್ ವರದಿ ಬೆನ್ನಲ್ಲೇ ತುಟಿ ಬಿಚ್ಚಿದ ಆರ್ ಅಶೋಕ್

ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ ಯೋಜಿಸಿದ್ದ ಟೆಂಡರ್ ಪ್ಯಾಕೇಜ್‌ಗಳಲ್ಲಿ...

ಒಂದು ರಾಷ್ಟ್ರ ಒಂದು ಚುನಾವಣೆ; ಸಂಸತ್‌ ಜಂಟಿ ಸಮಿತಿಗೆ 5 ತಿಂಗಳಾದರೂ ಮಾಹಿತಿ ನೀಡದ ರಾಜ್ಯ

ಬೆಂಗಳೂರು; ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ಸಂವಿಧಾನದ 129ನೇ ತಿದ್ದುಪಡಿ...
Please Scan to make Your Contribution

Topics

ಕಸ ವಿಲೇವಾರಿ ಟೆಂಡರ್‍‌ನಲ್ಲಿ ಅಕ್ರಮ; 10,000 ಕೋಟಿ ಕಿಕ್‌ ಬ್ಯಾಕ್‌ ಆರೋಪ, ಹೈಕಮಾಂಡ್ ಕಪ್ಪದ ಟೆಂಡರ್, ರಾಜ್ಯಪಾಲರಿಗೆ ದೂರು, ದಿ ಫೈಲ್ ವರದಿ ಬೆನ್ನಲ್ಲೇ ತುಟಿ ಬಿಚ್ಚಿದ ಆರ್ ಅಶೋಕ್

ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ ಯೋಜಿಸಿದ್ದ ಟೆಂಡರ್ ಪ್ಯಾಕೇಜ್‌ಗಳಲ್ಲಿ...

ಒಂದು ರಾಷ್ಟ್ರ ಒಂದು ಚುನಾವಣೆ; ಸಂಸತ್‌ ಜಂಟಿ ಸಮಿತಿಗೆ 5 ತಿಂಗಳಾದರೂ ಮಾಹಿತಿ ನೀಡದ ರಾಜ್ಯ

ಬೆಂಗಳೂರು; ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ಸಂವಿಧಾನದ 129ನೇ ತಿದ್ದುಪಡಿ...

ಐಪಿಜಿಆರ್‍ಎಸ್, ಸಕಾಲ ಮತ್ತು ಸಿಪಿಗ್ರಾಮ್ಸ್‌, ಸಿಎಂ ಜನಸ್ಪಂದನ, ಸಿ ಎಸ್ ಕಚೇರಿಯಲ್ಲಿ ಇತ್ಯರ್ಥವಾಗದ 37,782 ಅರ್ಜಿಗಳು; ನಿಷ್ಕ್ರೀಯವಾಯಿತೇ ಆಡಳಿತ?

ಬೆಂಗಳೂರು;  ಸಾರ್ವಜನಿಕರು ವಿವಿಧ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಐಪಿಜಿಆರ್‍ಎಸ್, ಸಕಾಲ ಮತ್ತು ಸಿಪಿಗ್ರಾಮ್ಸ್‌,...

ಅತಿಥಿ ಶಿಕ್ಷಕರ ನೇಮಕ ಪದ್ಧತಿಗೆ ರಾಜ್ಯ ಶಿಕ್ಷಣ ನೀತಿ ಆಯೋಗ ವಿರೋಧ; ಪದ್ದತಿ ಸಂಪೂರ್ಣವಾಗಿ ತೆಗೆದು ಹಾಕದೇ ವರದಿಯನ್ನೇ ಮೂಲೆಗುಂಪು ಮಾಡಿತೇ ಸರ್ಕಾರ?

ಬೆಂಗಳೂರು; 'ರಾಜ್ಯದಲ್ಲಿ   ಬೇರೂರಿದ ಗುತ್ತಿಗೆ ಶಿಕ್ಷಕ ನೇಮಕ ಪದ್ಧತಿಯಿಂದಾಗಿ  ವೃತ್ತಿಪರತೆಯ ಕೊರತೆ...

ಕಸ ವಿಲೇವಾರಿ ಟೆಂಡರ್ ಪ್ರಕ್ರಿಯೆಗಳಲ್ಲಿ ಬಹುಕೋಟಿ ಮೊತ್ತದ ಹಗರಣ; ಯತ್ನಾಳ್, ಶೋಭಾ ನಂತರ ಧೀರಜ್ ಮುನಿರಾಜು ದೂರು, ತುಟಿಬಿಚ್ಚದ ಪ್ರತಿಪಕ್ಷ ನಾಯಕ ಅಶೋಕ್

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರಿನ ಸಮಗ್ರ ಘನತ್ಯಾಜ್ಯ ನಿರ್ವಹಣೆಗೆ...

Related Articles

Popular Categories

error: Content is protected !!