ಬೆಂಗಳೂರು; ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಹಮ್ಮಿಕೊಂಡಿರುವ ಯೋಜನೆ, ಕಾರ್ಯಕ್ರಮಗಳ ಸಮಗ್ರ ಚಿತ್ರಣವನ್ನು ಬಿಂಬಿಸುವ ನಾಲ್ಕು ಪುಟಗಳ ಪ್ರಾಯೋಜಿತ ಪುರವಣಿಗಾಗಿ 2020ರಲ್ಲಿ ಒಟ್ಟು 1.60 ಕೋಟಿ ರು.ಗಳನ್ನು ವೆಚ್ಚ ಮಾಡಿದೆ. ಈ ಪೈಕಿ ಹೊಸ ದಿಗಂತ ಪತ್ರಿಕೆ ಸಿಂಹಪಾಲು ಪಡೆದಿದ್ದು, ಉಳಿದೆಲ್ಲ ಪತ್ರಿಕೆಗಳಿಗಿಂತ ಅತಿ ಹೆಚ್ಚಿನ ಮೊತ್ತದ ಜಾಹೀರಾತು ನೀಡಿರುವುದು ಗೊತ್ತಾಗಿದೆ.
ಈ ಪ್ರಾಯೋಜಿತ ಪುರವಣಿಗಳು 2020ರ ಜುಲೈ 25ರಿಂದ ಜುಲೈ 27ರ ಅವಧಿಯಲ್ಲಿ ಪ್ರಕಟಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕಾರ್ಯಾದೇಶ ನೀಡಿತ್ತು. ಈ ಅವಧಿಯಲ್ಲಿ ಸರ್ಕಾರದ ಅಂಗೀಕೃತ ಏಜೆನ್ಸಿಗಳಿಗೆ ಜಾಹೀರಾತು ಬಿಡುಗಡೆ ಮಾಡದ ಸರ್ಕಾರವು ನೇರವಾಗಿ ಪತ್ರಿಕೆಗಳಿಗೆ ಕಾರ್ಯಾದೇಶ ನೀಡಿತ್ತು ಎಂದು ತಿಳಿದು ಬಂದಿದೆ.
ವೆಚ್ಚದ ವಿವರ
ವಿ ಆರ್ ಎಲ್ ಮೀಡಿಯಾ ಪ್ರೈವೈಟ್ ಲಿಮಿಟೆಡ್ (ವಿಜಯವಾಣಿ) – 19, 73, 915 ರು.
ಮೆಟ್ರೋಪಾಲಿಟಿನ್ ಮೀಡಿಯಾ ಕಂಪನಿ ಲಿಮಿಟೆಡ್ (ವಿಜಯಕರ್ನಾಟಕ ) 13, 36, 474 ರು
ದಿ ಪ್ರಿಂಟರ್ಸ್ (ಮೈಸೂರು) ಪ್ರೈ ಲಿ (ಪ್ರಜಾವಾಣಿ) – 14, 85, 043 ರು.
ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್ – 9, 68, 675 ರು.
ಕನ್ನಡ ಪ್ರಭ ಪಬ್ಲಿಕೇಷನ್ಸ್ ಲಿಮಿಟೆಡ್ (ಕನ್ನಡ ಪ್ರಭ) 7, 91, 280 ರು.
ಲೋಕ ಶಿಕ್ಷಣ ಟ್ರಸ್ಟ್, ಬೆಂಗಳೂರು (ಸಂಯುಕ್ತ ಕರ್ನಾಟಕ) 8, 23, 329 ರು.
ಹೊಸ ದಿಗಂತ ಕನ್ನಡ ಡೈಲಿ (ಹೊಸ ದಿಗಂತ) 23, 73, 840 ರು.
ವಿಶ್ವವಾಣಿ ಕನ್ನಡ ದಿನಪತ್ರಿಕೆ – 7, 91, 280 ರು.
ವಾರ್ತಾ ಭಾರತಿ ಕನ್ನಡ ದಿನ ಪತ್ರಿಕೆ – 2, 19, 870 ರು.
ಬೆನೆಟ್ ಅಂಡ್ ಕೋಲ್ಮನ್ ಕಂಪನಿ ಲಿಮಿಟೆಡ್ – 15, 21, 589 ರು.
ದಿ ಪ್ರಿಂಟರ್ಸ್ (ಮೈಸೂರು ) ಪ್ರೈ ಲಿ (ಡೆಕ್ಕನ್ ಹೆರಾಲ್ಡ್) – 7, 87, 878 ರು.
ದಿ ಪಬ್ಲಿಷಿಂಗ್ ಪ್ರೈವೈಟ್ ಲಿಮಿಟೆಡ್ ( ದಿ ಹಿಂದೂ) 9, 03, 876 ರು.
ಎಕ್ಸ್‌ಪ್ರೆಸ್ ಪಬ್ಲಿಕೇಷನ್ಸ್ (ಮಧುರೈ) ಪ್ರೈ ಲಿ (ಇಂಡಿಯನ್ ಎಕ್ಸ್‌ಪ್ರೆಸ್ ) – 4, 73, 760 ರು.
ಕರ್ನಾಟಕ ನ್ಯೂಸ್ ಪ್ಲಬಿಕೇಷನ್ಸ್ ಪ್ರೈ ಲಿ (ಸಂಜೆವಾಣಿ) – 3, 72, 960 ರು.
ಈ ಸಂಜೆ – 3, 72, 960 ರು.
ಆಂದೋಲನ ಪ್ರಿಂಟರ್ಸ್ ಪಬ್ಲಿಷರ್ಸ್ ಮೈಸೂರು – 3, 72, 960 ರು.
ಅಕಾಡೆಮಿ ನ್ಯೂಸ್ ಪೇಪರ್ರ್ಸ್ ಪ್ರೈವೈಟ್ ಲಿ (ಮೈಸೂರು ಮಿತ್ರ) – 3, 72, 960 ರು.
ಅಕಾಡೆಮಿ ನ್ಯೂಸ್ ಪೇಪರ್ರ್ಸ್ ಪ್ರೈ ಲಿ (ಸ್ಟಾರ್ ಆಫ್ ಮೈಸೂರ್) – 1, 14, 620 ರು.
ರಾಜ್ಯ ಬಿಜೆಪಿ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬಕ್ಕೆ ನೀಡಿದ್ದ ಪತ್ರಿಕೆಗಳ ಪ್ರಾಯೋಜಿತ ಪುರವಣಿಗಳಿಗೆ 44.85 ಲಕ್ಷ ರು.ಗಳನ್ನು ವೆಚ್ಚ ಮಾಡಿದ್ದರು. ಅದೇ ರೀತಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮಗಳ ಜಾಹೀರಾತಿಗೆ 89 ಲಕ್ಷ ರು. ಖರ್ಚು ಮಾಡಿರುವುದನ್ನು ಸ್ಮರಿಸಬಹುದು.
ಅತಿಥಿ ಉಪನ್ಯಾಸಕರಿಗೆ ಗೌರವ ಸಂಭಾವನೆ, ಆಟೋ ಚಾಲಕರು, ತರಕಾರಿ, ಹೂ ಬೆಳೆಗಾರರು, ನೇಕಾರರು, ಸವಿತಾ ಸಮಾಜ, ವಲಸೆ ಕಟ್ಟಡ ಕಾರ್ಮಿಕರು ಸೇರಿದಂತೆ ಇನ್ನಿತರರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡದ ಸರ್ಕಾರ ಜಾಹೀರಾತಿಗೆ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಿರುವುದು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.