ಬೆಂಗಳೂರು; ಕೋವಿಡ್ 2ನೇ ಅಲೆಯಲ್ಲಿ ಎದುರಾಗಿರುವ ಆರ್ಥಿಕ ಸಂಕಷ್ಟದಲ್ಲೂ ರಾಜ್ಯ ಬಿಜೆಪಿ ಸರ್ಕಾರವು ಹಲವು ಜಿಲ್ಲೆಗಳಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ 10.60 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ.
ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ರಾಜಕೀಯ ಬೆಳವಣಿಗೆಗಳು ಬಿರುಸಿನಿಂದ ನಡೆಯುತ್ತಿರುವ ಮಧ್ಯೆಯೇ ವಿವಿಧ ಜಾತಿಗಳ ಸಮುದಾಯ ಭವನ, ದೇಗುಲಗಳಿಗೆ ಲಕ್ಷಾಂತರ ರುಪಾಯಿ ಅನುದಾನ ಬಿಡುಗಡೆ ಮಾಡಿಸಿರುವುದು ಕುತೂಹಲ ಮೂಡಿಸಿದೆ. ಅಲ್ಲದೆ ಹಿಂದುಳಿದ ವರ್ಗಗಳ ಓಲೈಕೆ ನಡೆಸುವ ತಂತ್ರಗಾರಿಕೆಯೂ ಇದರಲ್ಲಿ ಅಡಗಿದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.
ಕೆಲ ತಿಂಗಳ ಹಿಂದೆಯಷ್ಟೇ ವೀರಶೈವ ಲಿಂಗಾಯತ ಸೇರಿದಂತೆ ನಾನಾ ಸಮುದಾಯಕ್ಕೆ ಸೇರಿದ 182 ಮಠ ಮಾನ್ಯಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರಕಾರ 88.75 ಕೋಟಿ ರೂ. ಬಿಡುಗಡೆ ಮಾಡಿತ್ತು.
ಹಿಂದುಳಿದ ವರ್ಗಗಳ ಇಲಾಖೆಗಳ ವ್ಯಾಪ್ತಿಯಲ್ಲಿರುವ ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದ ಭಾಗವಾಗಿ ಸಮುದಾಯ ಭವನಗಳ ನಿರ್ಮಾಣವೂ ಸೇರಿದಂತೆ ಇನ್ನಿತರೆ ಉದ್ದೇಶಗಳಿಗಾಗಿ ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 10 ಲಕ್ಷ, ತಾಲೂಕು ಕೇಂದ್ರ ಸ್ಥಾನದಲ್ಲಿ 25.00 ಲಕ್ಷ, ಜಿಲ್ಲಾ ಕೇಂದ್ರ ಸ್ಥಾನದಲ್ಲಿ 50 ಲಕ್ಷಗಳಂತೆ ಗರಿಷ್ಠ ಮಿತಿಗೊಳಪಟ್ಟು 10.60 ಕೋಟಿ ರು.ಗಳನ್ನು ಬಿಡುಗಡೆ ಮಾಡಿ 2021ರ ಮೇ 27ರಂದು ಆದೇಶ ಹೊರಡಿಸಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸದ್ಧರ್ಮ ಅಜಾತ ಅಪ್ಪಾಜಿಯವರ ಪವಿತ್ರ ಪು ಪುಣ್ಯಾಶ್ರಮದ ಜೀರ್ಣೋದ್ಧಾರ ಸಮಿತಿಗೆ 50 ಲಕ್ಷ, ಬಾಗಲಕೋಟೆಯ ಜಮಖಂಡಿ ತಾಲೂಕಿನ ಹಿಂದುಳಿದ ವರ್ಗಗಳ ಸಮುದಾಯ ಭವನಕ್ಕೆ 25 ಲಕ್ಷ , ಬೀರಸಿದ್ದೇಶ್ವರ ಜೀರ್ರ ಜೀರ್ಣೋದ್ಧಾರ ಸೇವಾ ಸಮಿತಿಗೆ 25 ಲಕ್ಷ, ಜಮಖಂಡಿಯ ಓಗಿಸಿದ್ದೇಶ್ವರ ದೇವಸ್ಥಾನಕ್ಕೆ 25 ಲಕ್ಷ ರು.ಗಳನ್ನು ಬಿಡುಗಡೆ ಮಾಡಿದೆ.
ಅದೇ ರೀತಿ ಹಿರಿಯೂರು ತಾಲೂಕಿನ ಆನಂದ ಆಶ್ರಮಕ್ಕೆ 15 ಲಕ್ಷ, ಹರಪನಹಳ್ಳಿಯ ತಾಲೂಕು ಆರ್ಯ ಈಡಿಗರ ಸಂಘಕ್ಕೆ 25 ಲಕ್ಷ, ಬ್ರಹ್ಮಾವರ ತಾಲೂಕಿನ ಬಾರ್ಕೂರಿನ ಬ್ರಹ್ಮಲಿಂಗ ವೀರಭದ್ರ ದುರ್ಗಾಂಭ ಶೆಟ್ಟಿಗಾರ ಸಮಾಜದ ಸಮುದಾಯ ಭವನಕ್ಕೆ 25 ಲಕ್ಷ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಯೋಗಿ ನಾರಾಯಣ ಟ್ರಸ್ಟ್‌ಗೆ 1.00 ಕೋಟಿ,ಕಲ್ಬುರ್ಗಿಯ ಜೇವರ್ಗಿ ತಾಲೂಕಿನ ಗಾಣದಕಣ್ಣಪ್ಪ ಭವನಕ್ಕೆ 25 ಲಕ್ಷ, ಅಂಬಿಗರ ಚೌಡಯ್ಯ ಭವನಕ್ಕೆ 25 ಲಕ್ಷ, ದಕ್ಷಿಣ ಕನ್ನಡದ ವಿಟ್ಲದ ಬಿಲ್ಲವ ಸಂಘಕ್ಕೆ 50 ಲಕ್ಷ, ಬಾಗಲಕೋಟೆಯ ಹುನಗುಂದ ತಾಲೂಕಿನ ಅಭಿನವ ಜಾತವೇದ ಶಿವಾಚಾರ್ಯ ಸ್ವಾಮೀಗಳ ಟ್ರಸ್ಟ್‌ಗೆ 50 ಲಕ್ಷ, ಯಾದಗಿರಿಯ ಮೂಡಬೂಳ ಜ್ಞಾನಜ್ಯೋತಿ ಕಡಕೋಳ ಮಡಿವಾಳೇಶ್ವರ ವಿದ್ಯಾಪೀಠಕ್ಕೆ 50 ಲಕ್ಷ, ಇಂಡಿ ತಾಲೂಕಿನ ಗುರು ಗಂಗಾಧೇಶ್ವರ ಸೇವಾ ಸಂಘ 50 ಲಕ್ಷ, ಮಡಿಕೇರಿ ನಗರದ ಕೊಡಗು ಗೌಡ ಸಮಾಜದ ಸಮುದಾಯ ಭವನಕ್ಕೆ 50 ಲಕ್ಷ, ಭಾಗಮಂಡಲದ ಗೌಡ ಸಮಾಜದ ಸಮುದಾಯ ಭವನಕ್ಕೆ 50 ಲಕ್ಷ, ಕಾರಗುಂದ ಗೌಡ ಸಮಾಜಜದ ಸಮುದಾಯ ಭವನಕ್ಕೆ 50 ಲಕ್ಷ, ಚೆಟ್ನಹಳ್ಳಿ ಸಮಾಜದ ಸಮುದಾಯ ಭವನಕ್ಕೆ 50 ಲಕ್ಷ, ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹುಚ್ಚಂಗಿಪುರ ಗ್ರಾಮದ ಸಮದಾಯ ಭವನಕ್ಕೆ 50 ಲಕ್ಷ, ವಿಜಯಪುರ ಜಿಲ್ಲೆಯ ಸಿಂದಗಿ ನಗರದ ಪಿ ಇ ಎಸ್ ವಿದ್ಯಾಸಂಸ್ಥೆ ನಿಆfಣ ಮಾಡುತ್ತಿರು ವಿದ್ಯಾರ್ಥಿ ನಿಲಯದ ಮಂದುವರೆದ ಕಾಮಗಾರಿಗೆ 50 ಲಕ್ಷ, ಕಲ್ಬುರ್ಗಿಯ ಕುಕನೂರ ಅಡಿಯಲ್ಲಿ ಚನ್ನಮಲ್ಲೇಶ್ವರ ವಿದ್ಯಾಭಿವೃದ್ಧಿ ಟ್ರಸ್ಟ್‌ಗೆ 25 ಲಕ್ಷ, ವಿಜಯಪುರ ತಾಳಿಕೋಟೆಯ ಕುವೆಂಪು ಗ್ರಾಮೀಣಾಭಿವೃದ್ಧಿ ಸಂಘಕ್ಕೆ 10 ಲಕ್ಷ, ಕೋಲಾರ ಜಿಲ್ಲೆಲಯ ಶ್ರೀನಿವಾಸಪುರ ತಾಲೂಕಿನ ಕೆಂಪರೆಡ್ಡಿ ಗಾರಿಪಲ್ಲಿ ಗ್ರಾಮದ ಸಮುದಾಯ ಭವನಕ್ಕೆ 5 ಲಕ್ಷ, ಜೋಡಿಲಕ್ಷ್ಮಿಸಾಗರ ಗ್ರಾಮದ ಸಮುದಾಯ ಭವನಕ್ಕೆ 5 ಲಕ್ಷ, ಪಾತನೆಲವಂಕಿ ಗ್ರಾಮ ಸಮುದಾಯ ಭವನಕ್ಕೆ 5 ಲಕ್ಷ, ಬಂದಾರಪಲ್ಲಿ ಗ್ರಾಮದ ಸಮುದಾಯ ಭವನಕ್ಕೆ 5 ಲಕ್ಷ, ಗೊರವಿಮಾಕಲಪಲ್ಲಿ ಗ್ರಾಮದ ಸಮುದಾಯ ಭವನಕ್ಕೆ 5 ಲಕ್ಷ, ಉಪ್ಪರಪಲ್ಲಿ ಗ್ರಾಮದ ಸಮುದಾಯ ಭವನಕ್ಕೆ 5 ಲಕ್ಷ, ಉರಟಿ ಅಗ್ರಹಾರ ಗ್ರಾಮದ ಸಮುದಾಯ ಭವನಕ್ಕೆ 5 ಲಕ್ಷ ಅಣ್ಣೇನಹಳ್ಳಿ ಗ್ರಾಮದ ಸಮುದಾಯ ಭವನಕ್ಕೆ 5 ಲಕ್ಷ, ಶ್ರೀನಿವಾಸಪುರ ಪಟ್ಟಣದ ದೋಬಿಘಾಟ್‌ನಲ್ಲಿ ಮಡಿವಾಳರ ಸಮುದಾಯ ಭವನಕ್ಕೆ 15 ಲಕ್ಷ, ಬಾಗಲಕೋಟೆ ಬೀಳಗಿ ತಾಲೂಕಿನ ನಾಗರಾಳ ಗ್ರಾಮದ ಬನಶಂಕರಿ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ, ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದ ತೇಗೂರು ಗ್ರಾಮ ಪಂಚಾಯ್ತಿ ಅರಸು ಸಮುದಾಯ ಭವನಕ್ಕೆ 15 ಲಕ್ಷ, ದಕ್ಷಿಣ ಕನ್ನಡ ಜಿಲ್ಲೆಯ ದೇವಾಡಿಗ ಸಮಾಜ ಸೇವಾ ಸಂಘಕ್ಕೆ 10 ಲಕ್ಷ, ಉಡುಪಿಯ ಕೋಡಿಬೇಂಗ್ರೆ ದುರ್ಗಾ ಪರಮೇಶ್ವರಿ ಸಮುದಾಯ ಭವನಕ್ಕೆ 125 ಲಕ್ಷ ರು.ಗಳನ್ನು ಬಿಡುಗಡೆ ಮಾಡಿದೆ.
2019-20 ಹಾಗೂ 2020-21ರ ಬಜೆಟ್‌ನಲ್ಲಿ ಮಠ, ಧಾರ್ಮಿಕ ಸಂಘ, ಸಂಸ್ಥೆಗಳಿಗೆ ಅನುದಾನ ಘೋಷಿಸಲಾಗಿತ್ತು. ಆದರೆ, ನಾನಾ ಕಾರಣದಿಂದ ಹಣ ಬಿಡುಗಡೆ ಮಾಡಿರಲಿಲ್ಲ. ಪ್ರವಾಹ ಹಾಗೂ ಕೋವಿಡ್‌ನಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ ಕೋಟ್ಯಂತರ ರುಪಾಯಿ ಬಿಡುಗಡೆ ಮಾಡಿತ್ತು.
ಬಿ.ಎಸ್.ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಮಠ ಮಂದಿರಗಳಿಗೆ ನೆರವು ನೀಡಿದ್ದರು. ಎಲ್ಲ ಜಾತಿ, ವರ್ಗಗಳ ಮಠಗಳ ಮೂಲಸೌಕರ್ಯ ಸಂಬಂಧ 2008 ರಿಂದ 2013ರ ಅವಧಿಯ ಬಿಜೆಪಿ ಸರಕಾರ ಸಾಕಷ್ಟು ಅನುದಾನ ನೀಡಿತ್ತು. ಈ ಸಂಪ್ರದಾಯಕ್ಕೆ ನಾಂದಿ ಹಾಡಿದ್ದ ಬಿಎಸ್‌ವೈ ರಾಜ್ಯದ ನಾನಾ ಸಮುದಾಯಗಳ ಮಠಗಳ ಸ್ವಾಮೀಜಿಗಳು, ಧಾರ್ಮಿಕ ಮುಖಂಡರ ಒಲವು ಗಳಿಸಿದ್ದರು. ಜತೆಗೆ ಇದು ಬಿಎಸ್‌ವೈ ಅವರ ಶಕ್ತಿ ಎಂಬಂತೆಯೂ ಬಿಂಬಿತವಾಗಿತ್ತು.
2019-20ರ ಮುಂಗಡ ಪತ್ರದಲ್ಲಿ 39 ಮಠ, ಸಂಘ, ಸಂಸ್ಥೆಗಳಿಗೆ 39 ಕೋಟಿ ರೂ. ಘೋಷಿಸಲಾಗಿತ್ತು. 2020-21ರಲ್ಲಿ 143 ಮಠಗಳಿಗೆ 49.75 ಕೋಟಿ ರೂ. ಘೋಷಿಸಲಾಗಿತ್ತು. ಇದರ ಒಟ್ಟು ಮೊತ್ತ 88.75 ಕೋಟಿ ರೂ. ಅನ್ನು ಈಗ ಬಿಡುಗಡೆ ಮಾಡಲಾಗಿದೆ. ಈ ಪೈಕಿ 49 ಮಠ, ಸಂಸ್ಥೆಗಳಿಗೆ ತಲಾ 1 ಕೋಟಿ ರೂ. ನೀಡಿದ್ದನ್ನು ಸ್ಮರಿಸಬಹುದು.