ಬೆಂಗಳೂರು; ಲಸಿಕಾಕರಣ ಅಭಿಯಾನದ ಮೂರನೇ ಹಂತವನ್ನು ಮುಂದುವರೆಸಿರುವ ಕೇಂದ್ರ ಸರ್ಕಾರವು 18-44 ವಯಸ್ಸಿನವರಿಗೆ 1 ಕೋಟಿ ಲಸಿಕೆ ಡೋಸ್‌ಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡಿದೆ. ಈ ಪೈಕಿ ಕರ್ನಾಟಕಕ್ಕೆ 1.97 ಲಕ್ಷ ದೊರೆತಿದ್ದರೆ ಗುಜರಾತ್‌ಗೆ 6.89 ಲಕ್ಷ ಡೋಸ್‌ಗಳು ಲಭಿಸಿವೆ.
ಈ ಕುರಿತು ಕೇಂದ್ರ ಸರ್ಕಾರ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಈವರೆವಿಗೆ ಉಚಿತವಾಗಿ ಮತ್ತು ರಾಜ್ಯ ಸರಕಾರಗಳಿಂದ ನೇರ ಖರೀದಿ ಮೂಲಕ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 21.80 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು (21,80,51,890) ಒದಗಿಸಿದೆ. 21.80 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ಒದಗಿಸಿದೆ ಎಂದು ಹೇಳಿದೆ.
ಈವರೆವಿಗೆ ಒಟ್ಟು ಶೇ. 66ರಷ್ಟು ಡೋಸ್‌ಗಳನ್ನು 10 ರಾಜ್ಯಗಳಿಗೆ ಒದಗಿಸಲಾಗಿದೆ. ಈ ಪೈಕಿ ಕರ್ನಾಟಕಕ್ಕೆ ಶೇ.6.17ರಷ್ಟು ಪ್ರಮಾಣದಲ್ಲಿ ಒಟ್ಟು 1,20,88,649 ಡೋಸ್ ನೀಡಿದ್ದರೆ ಗುಜರಾತ್‌ಗೆ ಶೇ. 7.91 ಪ್ರಮಾಣದಲ್ಲಿ ಒಟ್ಟು 1,55,15,181 ಡೋಸ್ ನೀಡಲಾಗಿದೆ. ಉತ್ತರ ಪ್ರದೇಶಕ್ಕೆ ಶೇ. 8.29ರಷ್ಟು ಅಂದರೆ ಒಟ್ಟು 1,62,55,150 ಡೋಸ್ ಒದಗಿಸಿದೆ. ಪಶ್ಚಿಮ ಬಂಗಾಳಕ್ಕೆ 1,31,43,523 (ಶೇ.6.70), ರಾಜಸ್ಥಾನಕ್ಕೆ 1,60,33,767 (ಶೇ. 8.18), ಮಹಾರಾಷ್ಟ್ರಕ್ಕೆ ಶೇ.10.59ರಷ್ಟು ಪ್ರಮಾಣದಲ್ಲಿ ಒಟ್ಟಾರೆ 2,07,60,193, ಡೋಸ್ ನೀಡಿರುವುದು ಕೇಂದ್ರ ಸರ್ಕಾರ ಬಹಿರಂಗಗೊಳಿಸಿರುವ ಮಾಹಿತಿಯಿಂದ ತಿಳಿದು ಬಂದಿದೆ.
ಮೇ 23 2021ರವರೆಗಿನ ಸರಾಸರಿ ಲೆಕ್ಕಾಚಾರದ ಆಧಾರದ ಮೇಲೆ ವ್ಯರ್ಥವಾದ ಡೋಸ್‌ಗಳೂ ಸೇರಿದಂತೆ ಒಟ್ಟು 20,00,08,875 ಡೋಸ್‌ಗಳನ್ನು ಬಳಕೆ ಮಾಡಲಾಗಿದೆ (ಇಂದು ಬೆಳಿಗ್ಗೆ 8 ಗಂಟೆಗೆ ಲಭ್ಯವಿರುವ ದತ್ತಾಂಶದ ಪ್ರಕಾರ) ಎಂದು ಕೇಂದ್ರ ಸರ್ಕಾರ ಹಂಚಿಕೊಂಡಿರುವ ಮಾಹಿತಿಯಿಂದ ತಿಳಿದು ಬಂದಿದೆ.
ರಾಜ್ಯಗಳಿಗೆ ಹಂಚಿಕೆಯಾದ ಡೋಸ್‌ಗಳೆಷ್ಟು? (18-44 ವಯೋಮಿತಿ)
ಅಂಡಮಾನ್ & ನಿಕೋಬಾರ್ ದ್ವೀಪಗಳು 4,082, ಆಂಧ್ರಪ್ರದೇಶ 8,891, ಅರುಣಾಚಲ ಪ್ರದೇಶ 17,777, ಅಸ್ಸಾಂ 4,33,615, ಬಿಹಾರ 12,27,279, ಚಂಡೀಗಢ 18,613, ಛತ್ತೀಸ್ಗಗಢ 7,01,945 ದಾದರ್ & ನಗರ್ ಹವೇಲಿ 18,269 , ದಾಮನ್ & ದಿಯು 19,802, ದೆಹಲಿ 9,15,275, ಗೋವಾ 30,983 ಗುಜರಾತ್ 6,89,234 , ಹರಿಯಾಣ 7,20,681 , ಹಿಮಾಚಲ ಪ್ರದೇಶ 40,272, ಜಮ್ಮು & ಕಾಶ್ಮೀರ 37,562, ಜಾರ್ಖಂಡ್, 3,69,847 , ಕರ್ನಾಟಕ 1,97,693 , ಕೇರಳ 30,555, ಲಡಾಖ್, 3,845, ಲಕ್ಷ ದ್ವೀ 1,770, ಮಧ್ಯ ಪ್ರದೇಶ 7,72,873 , ಮಹಾರಾಷ್ಟ್ರ 7,06,853, ಮಣೀಪುರ್ 9,110, ಮೇಘಾಲಯ 23,142, ಮಿಜೋರಾಂ 10,676, ನಾಗಾಲ್ಯಾಂಡ್ 7,376, ಒಡಿಶಾ 3,06,167 ಪುದುಚೆರಿ 5,411, ಪಂಜಾಬ್ 3,70,413, ರಾಜಸ್ಥಾನ್ 13,17,060, ಸಿಕ್ಕಿಂ 6,712, ತಮಿಳು ನಾಡು 53,216, ತೆಲಂಗಾಣ 654, ತ್ರಿಪುರ 53,957, ಉತ್ತರ ಪ್ರದೇಶ 10,70,642, ಉತ್ತರಾಖಂಡ 2,20,249 ಪಶ್ಚಿಮ ಬಂಗಾಳ 1,98,734 ಸೇರಿದಂತೆ ಒಟ್ಟು 1,06,21,235 ಡೋಸ್ ಲಸಿಕೆ ಒದಗಿಸಿರುವುದು ಗೊತ್ತಾಗಿದೆ.
ಕರ್ನಾಟಕದ ಜನಸಂಖ್ಯೆ ಆರು ಕೋಟಿ ಎಂಭತ್ನಾಲ್ಕು ಲಕ್ಷ. ಗುಜರಾತ್ ಜನಸಂಖ್ಯೆ ಆರು ಕೋಟಿ ನಲವತ್ತೆಂಟು ಲಕ್ಷ. ಈಗ ನೋಡಿ, ಹದಿನೆಂಟು ವಯೋಮಿತಿ ದಾಟಿದವರಿಗೆ ಒಕ್ಕೂಟ ಸರ್ಕಾರ ಹಂಚಿಕೆ ಮಾಡಿರುವ ಲಸಿಕೆಯ ಪ್ರಮಾಣ ಗಮನಿಸಿ. ಗುಜರಾತ್ ಗೆ ಸರಿಸುಮಾರು ಏಳು ಲಕ್ಷ, ಕರ್ನಾಟಕಕ್ಕೆ ಎರಡು ಲಕ್ಷ! ಇದೆಂಥ ನಾಚಿಕೆಗೆಟ್ಟ ರಾಜಕಾರಣ? ಇದನ್ನು ಪ್ರಶ್ನಿಸಬೇಕಾದ ರಾಜ್ಯ ಸರ್ಕಾರ, ಮಂತ್ರಿಗಳು, ಸಂಸದರು, ಶಾಸಕರ ಬಾಯಿಗೆ ಬೀಗ ಬಿದ್ದಿದೆಯೇ?
ದಿನೇಶ್‌ಕುಮಾರ್, ಮುಖ್ಯಸ್ಥರು
ಕರವೇ ಸಾಮಾಜಿಕ ಜಾಲತಾಣ
ಅದೇ ರೀತಿ ಮೇ 24ರ ಬೆಳಿಗ್ಗೆ 7 ಗಂಟೆಯವರೆಗೆ ಒಟ್ಟು 19,60,51,962 ಲಸಿಕೆ ಡೋಸುಗಳನ್ನು 28,16,725 ಸೆಷನ್‌ಗಳ ಮೂಲಕ ನೀಡಲಾಗಿದೆ. ಇದು 1ನೇ ಡೋಸ್ ತೆಗೆದುಕೊಂಡ 97,60,444 ಆರೋಗ್ಯ ಕಾರ್ಯಕರ್ತರು (ಎಚ್‌ಸಿಡಬ್ಲ್ಯೂ) ಮತ್ತು 2ನೇ ಡೋಸ್ ತೆಗೆದುಕೊಂಡ 67,06,890 ಆರೋಗ್ಯ ಕಾರ್ಯಕರ್ತರು, 1,49,91,357 ಮುಂಚೂಣಿಯಲ್ಲಿರುವ ಕಾರ್ಯಕರ್ತರು (ಎಫ್.ಎಲ್.ಡಬ್ಲ್ಯೂ) (1ನೇ ಡೋಸ್), 83,33,774 ಮುಂಚೂಣಿಯಲ್ಲಿರುವ ಕಾರ್ಯಕರ್ತರು (2 ನೇ ಡೋಸ್), 18 – 44 ವರ್ಷದೊಳಗಿನ 1,06,21,235 ಫಲಾನುಭವಿಗಳು(1 ನೇ ಡೋಸ್), 45 ರಿಂದ 60 ವರ್ಷ ವಯಸ್ಸಿನ 44 ವಯೋಮಾನದ 6,09,11,756 (1ನೇ ಡೋಸ್) ಮತ್ತು 98,18,384 (2 ನೇ ಡೋಸ್) ಫಲಾನುಭವಿಗಳು. 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ 5,66,45,457 1ನೇ ಡೋಸ್ ಫಲಾನುಭವಿಗಳು ಮತ್ತು 1,82,62,665 2ನೇ ಡೋಸ್ ಫಲಾನುಭವಿಗಳನ್ನು ಒಳಗೊಂಡಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ನೀಡಲು ಇನ್ನೂ 1.80 ಕೋಟಿಗಿಂತಲೂ ಅಧಿಕ (1,80,43,015) ಡೋಸ್‌ಗಳು ಲಭ್ಯವಿವೆ ಎಂದು ತಿಳಿಸಿರುವ ಕೇಂದ್ರ ಸರ್ಕಾರವು ಇನ್ನೂ 48 ಲಕ್ಷ (40,00,650) ಲಸಿಕೆ ಡೋಸ್‌ಗಳು ಸಾಗಣೆ ಹಂತದಲ್ಲಿದ್ದು ಮುಂದಿನ 3 ದಿನಗಳಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಲಿವೆ ಎಂದು ಮಾಹಿತಿ ಒದಗಿಸಿದೆ.