Tuesday | March 24, 2026 |

ವಿನಾಶಕಾರಿ ಭೂ ಕುಸಿತ; ಕೊಡಗು ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರದಲ್ಲಿ ಸಭೆಯೇ ನಡೆದಿಲ್ಲ, ಪುರಾವೆಯೂ ಇಲ್ಲ

Support THE-FILE

spot_img

ಬೆಂಗಳೂರು; ಕೊಡಗಿನಲ್ಲಿ 2018-19ನೇ ಸಾಲಿನಲ್ಲಿ  ಭಾರೀ ಪ್ರಮಾಣದ ವಿನಾಶಕಾರಿ ಭೂ ಕುಸಿತಗಳಾಗಿದ್ದರೂ  ಸಹ  ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಒಮ್ಮೆಯೂ ಸಭೆ ಸೇರಿರಲಿಲ್ಲ. ಅದೇ ರೀತಿ ರಾಜ್ಯದ ಹಲವು ಜಿಲ್ಲೆಗಳಲ್ಲಿರುವ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳೂ ಸಹ ನಿಯಮಿತವಾಗಿ ಸಭೆ ಸೇರಿರಲಿಲ್ಲ ಎಂಬುದನ್ನು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪಾಲರು ಬಹಿರಂಗಗೊಳಿಸಿದ್ದಾರೆ.

ಕರ್ನಾಟಕದಲ್ಲಿ ವಿಪತ್ತು ನಿರ್ವಹಣೆಯ ಕಾರ್ಯನಿರ್ವಹಣೆ ಕುರಿತು ಅಮೂಲಾಗ್ರವಾಗಿ ವಿಶ್ಲೇಷಣೆ ನಡೆಸಿರುವ ಸಿಎಜಿಯು, ವಿಪತ್ತು ನಿರ್ವಹಣೆಯಲ್ಲಿ ರಾಜ್ಯ ಸರ್ಕಾರವು ವಹಿಸಿರುವ  ಅತ್ಯಂತ ನಿರ್ಲಕ್ಷ್ಯವನ್ನು ಪತ್ತೆ ಹಚ್ಚಿದೆ. ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಈ ವರದಿ ಕುರಿತು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿಲ್ಲ ಎಂದು ತಿಳಿದು ಬಂದಿದೆ.

ಸಿದ್ದರಾಮಯ್ಯ ಅವರು ಮೊದಲ ಅವಧಿಯಿಂದ ಹಿಡಿದು ಬಿಜೆಪಿ ಸರ್ಕಾರದ ಅಧಿಕಾರಾವಧಿವರೆಗೆ  (2017-18ರಿಂದ 2022-23) ರಾಜ್ಯದ ಬೆಳಗಾವಿ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ದಾವಣಗೆರೆ, ಹಾವೇರಿ, ಕಲ್ಬುರ್ಗಿ, ಕೊಡಗು, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿನ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರಗಳು ನಿಯಮಿತವಾಗಿ ಸಭೆ ನಡೆಸಿರಲಿಲ್ಲ. ಕಳೆದ 7 ವರ್ಷಗಳಲ್ಲಿ  ಬೆಳಗಾವಿ ಜಿಲ್ಲೆಯಲ್ಲಿ 12 ಬಾರಿ ಸಭೆ ನಡೆಸಿತ್ತು. ಚಿಕ್ಕಬಳ್ಳಾಪುರದಲ್ಲಿ 5 ಬಾರಿ, ದಕ್ಷಿಣ ಕನ್ನಡದಲ್ಲಿ 28 ಬಾರಿ ಸಭೆ ನಡೆಸಿತ್ತು. ಆದರೆ  ದಾವಣಗೆರೆ ಜಿಲ್ಲೆಯಲ್ಲಿ ಒಂದೇ ಒಂದು ಸಭೆಯನ್ನೂ ನಡೆಸಿರಲಿಲ್ಲ.

ಹಾವೇರಿಯಲ್ಲಿ 12 ಬಾರಿ, ಕೊಡಗಿನಲ್ಲಿ 5 ಬಾರಿ, ರಾಮನಗರದಲ್ಲಿ 12 ಬಾರಿ, ಶಿವಮೊಗ್ಗದಲ್ಲಿ 11 ಬಾರಿ ಸಭೆ ನಡೆಸಲಾಗಿದೆ. ಕಲ್ಬುರ್ಗಿಯಲ್ಲಿ ಎಷ್ಟು ಬಾರಿ ಸಭೆ ನಡೆಸಲಾಗಿದೆ ಎಂದು ಸಿಎಜಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಯಾವುದೇ ಮಾಹಿತಿಯನ್ನು ಒದಗಿಸಿಲ್ಲ.

‘ದಕ್ಷಿಣ ಕನ್ನಡ ಮತ್ತು ರಾಮನಗರ ಜಿಲ್ಲೆಗಳು ಮಾತ್ರ ಎಲ್ಲಾ ವರ್ಷಗಳಲ್ಲಿ ನಿರಂತರವಾಗಿ ಡಿಡಿಎಂ ಸಭೆಗಳನ್ನು ನಡೆಸಿವೆ. 2018-19ರಲ್ಲಿ ಬೆಳಗಾವಿಯ ಡಿಡಿಎಂಎ ಒಮ್ಮೆಯೂ ಸಭೆ ಸೇರಿರಲಿಲ್ಲ. ಮತ್ತು ಜಿಲ್ಲೆಯು ವರ್ಷದಿಂದ ವರ್ಷಕ್ಕೆ ವಿವಿಧ ವಿಪತ್ತುಗಳಿಗೆ ಒಳಗಾಗಿದ್ದರೂ ಸಹ 2017-18, 2020-21 ಮತ್ತು 2021-22ರಲ್ಲಿ ಒಮ್ಮೆ ಮಾತ್ರ ಸಭೆ ಸೇರಿತ್ತು. ಇದಲ್ಲದೇ ಕೊಡಗು ಜಿಲ್ಲೆಯು ಪ್ರವಾಹ, ಭೂ ಕುಸಿತಕ್ಕೆ ಗುರಿಯಾಗುತ್ತದೆ. ಆದರೆ 2018-19ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ತೀವ್ರ ಪ್ರವಾಹ ಮತ್ತು ಭೂ ಕುಸಿತಕ್ಕೆ ಒಳಗಾದರೂ ಸಹ  ಡಿಡಿಎಂಎ ಒಮ್ಮೆಯೂ ಸಭೆ ಸೇರಿರಲಿಲ್ಲ,’ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ತೈಲ ಸೋರಿಕೆ ಮತ್ತು ತ್ವರಿತ ಪ್ರತಿಕ್ರಿಯೆಗಾಗಿ ಸಮಿತಿಗಳನ್ನು ಹೊಂದಿರುವ ದಕ್ಷಿಣ ಕನ್ನಡವನ್ನು ಹೊರತುಪಡಿಸಿ ಡಿಎಂ ಕಾಯ್ದೆಯ ಪರಿಚ್ಛೇಧ 28(1)ರ ಅಡಿಯಲ್ಲಿ ಅಗತ್ಯವಿದ್ದರೂ ಸಹ ಮಾದರಿ ಜಿಲ್ಲೆಗಳ ಡಿಡಿಎಂಎಗಳು ಯಾವುದೇ ಸಲಹಾ ಸಮಿತಿಗಳನ್ನೂ ರಚಿಸಿಲ್ಲ ಎಂಬುದನ್ನು ಲೆಕ್ಕ ಪರಿಶೋಧನೆಯು ಗಮನಿಸಿರುವುದು ತಿಳಿದು ಬಂದಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು 2017-18ರಿಂದ 2022-23ರ ಅವಧಿಯಲ್ಲಿ ಜಿಲ್ಲಾ ಯೋಜನೆಗಳನ್ನು ಸಿದ್ಧಪಡಿಸಿದ್ದವು. ಜಿಲ್ಲಾ ಯೋಜನೆಗಳು ರಾಜ್ಯ ಪ್ರಾಧಿಕಾರಕ್ಕೆ ರವಾನಿಸಿದ್ದವು. ಆದರೂ ಸಹ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ಯೋಜನೆಗಳನ್ನು ಪರಿಶೀಲನೆಯನ್ನೇ ನಡೆಸಿರಲಿಲ್ಲ ಮತ್ತು ಯೋಜನೆಗಳನ್ನು ಅನುಮೋದಿಸಿಯೂ ಇರಲಿಲ್ಲ.

ಜಿಲ್ಲೆಗಳಲ್ಲಿನ ಹಲವು ಇಲಾಖೆಗಳು ವಿಪತ್ತು ನಿರ್ವಹಣೆ ಯೋಜನೆಗಳನ್ನೇ ಸಿದ್ಧಪಡಿಸಿರಲಿಲ್ಲ. ಆದರೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮಾಲೋಚಿಸಿ ಜಿಲ್ಲಾ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಸರ್ಕಾರವು ಉತ್ತರಿಸಿತ್ತು. ಆದರೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮಾಲೋಚಿಸಿ ಜಿಲ್ಲಾ ಯೋಜನೆಗಳನ್ನು ಸಿದ್ದಪಡಿಸಲಾಗಿದೆ ಎಂಬುದನ್ನು ಸಮರ್ಥಿಸಲು ರಾಜ್ಯ ಸರ್ಕಾರದ ಬಳಿ ಯಾವುದೇ ಪುರಾವೆಗಳೇ ಇರಲಿಲ್ಲ.

2020-21ರ ಅವಧಿಯಲ್ಲಿ ಮಾತ್ರ 16 ಇಲಾಖೆಗಳು  ವಿಪತ್ತು ನಿರ್ವಹಣೆ ಯೋಜನೆಗಳನ್ನು ಸಿದ್ಧಪಡಿಸಿದ್ದವು. ನಂತರ ಅವುಗಳನ್ನು ಪರಿಶೀಲಿಸಿರಲಿಲ್ಲ ಮತ್ತು ಅವುಗಳನ್ನು ನವೀಕರಿಸಿರಲಿಲ್ಲ. ಈ ಯೋಜನೆಯ ಅನುಷ್ಠಾನದ ಬಗ್ಗೆ ಎಸ್‌ಇಸಿಗೆ ಸ್ಥಿತಿಗತಿಯ ವರದಿಯನ್ನೂ ಸಲ್ಲಿಸಿರಲಿಲ್ಲ  ಎಂಬುದನ್ನು ಲೆಕ್ಕ ಪರಿಶೋಧನೆಯು ಗಮನಿಸಿರುವುದು ವರದಿಯಿಂದ ತಿಳಿದು ಬಂದಿದೆ.

6,300 ಗ್ರಾಮ ಪಂಚಾಯ್ತಿಗಳ ಪೈಕಿ 2,250 ಗ್ರಾಮ ಪಂಚಾಯ್ತಿಗಳು ವಿಪತ್ತು ಯೋಜನೆಗಳನ್ನು ಸಿದ್ಧಪಡಿಸಿವೆ ಎಂದು ಕಂದಾಯ ಇಲಾಖೆಯು ಉತ್ತರಿಸಿತ್ತು. ಆದರೆ ಪರಿಶೋಧನೆಗೆ ಹಾಜರುಪಡಿಸಲಾದ ಪರೀಕ್ಷಾ ತನಿಖೆ ನಡೆಸಿದ ಜಿಲ್ಲೆ ಮತ್ತು ತಾಲೂಕು ಕಚೇರಿಗಳಲ್ಲಿ ಯಾವುದೇ ಯೋಜನೆಗಳು ಭೌತಿಕ ದಾಖಲೆಗಳಲ್ಲಿ ಲಭ್ಯವಿರಲಿಲ್ಲ. ಹಾಗೆಯೇ ಬೆಂಗಳೂರು ನಗರ ಜಿಲ್ಲೆಯ ಕೆಲವು ಖಾಸಗಿ ಆಸ್ಪತ್ರೆಗಳನ್ನು ಹೊರತುಪಡಿಸಿ ರಾಜ್ಯದ ಯಾವುದೇ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳು, ಪರೀಕ್ಷಾ ತನಿಖೆಗೆ ಒಳಪಡುವ ಜಿಲ್ಲೆಗಳು ಅಗತ್ಯವಾದ ವಿಪತ್ತು ನಿರ್ವಹಣಾ ಯೋಜನೆಗಳನ್ನು ಸಿದ್ಧಪಡಿಸಿರಲಿಲ್ಲ ಎಂದು ಸಿಎಜಿಯು  ದಾಖಲೆಗಳ ಪರಿಶೀಲನೆಯಿಂದ ಪತ್ತೆ ಹಚ್ಚಿದೆ.

ಪ್ರಮುಖ ಅಪಘಾತ ಪೀಡಿತ ಕೈಗಾರಿಕೆ ಘಟಕಗಳಿಗಾಗಿ ಆನ್‌ ಸೈಟ್‌ ಮತ್ತು ಆಫ್‌ ಸೈಟ್‌ ವಿಪತ್ತು ನಿರ್ವಹಣೆ ಯೋಜನೆಯನ್ನು ಸಿದ್ಧಪಡಿಸಲಾಗಿದ್ದರೇ ಆಣೆಕಟ್ಟುಗಳು, ತುರ್ತು ಕ್ರಿಯಾ ಯೋಜನೆ, ರೈಲ್ವೆ ವಿಪತ್ತು ನಿರ್ವಹಣಾ ಯೋಜನೆ, ರೈಲ್ವೆ ವಿಪತ್ತು ಕ್ರಿಯಾ ಯೋಜನೆ, ಪಾರಂಪರಿಕ ಪ್ರದೇಶ ವಿಪತ್ತು ನಿರ್ವಹಣಾ ಯೋಜನೆ, ದೊಡ್ಡ ಜನಸಂದಣಿ ಮತ್ತು ಜನಸಂದಣಿಗಾಗಿ ಡಿಎಂ ಯೋಜನೆ, ಸೈಬರ್‍‌ ಅಪರಾಧ ನಿರ್ವಹಣಾ ಯೋಜನೆ, ವಿಪತ್ತುಗಳ ಸಮಯದಲ್ಲಿ ಪ್ರಾಣಿ ಆರೈಕೆ ನಿರ್ವಹಣೆ ಯೋಜನೆಗಳಿಗೆ 2023ರ ಮಾರ್ಚ್‌ವರೆಗೂ ಸಹ ಸಂಬಂಧಪಟ್ಟ ಏಜೆನ್ಸಿಗಳ ಸಮನ್ವಯದೊಂದಿಗೆ ರಾಜ್ಯ ಸರ್ಕಾರವು ರಾಜ್ಯ ವಿಪತ್ತು ಕಾರ್ಯನಿರ್ವಹಣೆ ಯೋಜನೆಯನ್ನೇ ಸಿದ್ಧಪಡಿಸಿಲ್ಲ ಎಂಬುದನ್ನು ಲೆಕ್ಕ ಪರಿಶೋಧನೆಯು ಗಮನಿಸಿದೆ.

2020-21ರ ಅವಧಿಯಲ್ಲಿ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ ಅನುದಾನದಿಂದ 61.84 ಲಕ್ಷ ರು ವೆಚ್ಚದಲ್ಲಿ ಎಸ್‌ಇಒಸಿಗೆ ಸ್ಥಳಾವಕಾಶ ಮಾಡಿಕೊಡಲು ನವೀಕರಿಸಲಾಗಿತ್ತು. ಆದರೆ ಇದನ್ನು ಇತರೆ ಉದ್ದೇಶಗಳಿಗೆ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಎಸ್‌ಇಒಸಿಗೆ ಕಾರ್ಯನಿರ್ವಹಿಸಲು ಯಾವುದೇ ಸ್ಥಳವಿಲ್ಲ. ನಿರ್ದೇಶಕ, ಸಲಹೆಗಾರ ಮತ್ತು ಸಂಪರ್ಕಾಧಿಕಾರಿ ಹುದ್ದೆಗಳನ್ನೂ ಭರ್ತಿ ಮಾಡಿರಲಿಲ್ಲ. ಎಸ್‌ಇಒಸಿಗಾಗಿ ಒದಗಿಸಿದ್ದ ಎರಡು ದೂರದರ್ಶನ ಸೆಟ್‌ಗಳು ಕಾರ್ಯನರ್ವಿಹಿಸುತ್ತಿಲ್ಲ. ಜಂಟಿ ಭೌತಿಕ ಪರಿಶೀಲನೆ ಸಮಯದಲ್ಲಿ ಒಂದು ಸೆಟ್‌ನ್ನು ಮೂಲೆಯಲ್ಲಿ ಇರಿಸಲಾಗಿತ್ತು. ಹೀಗಾಗಿ ಎಸ್‌ಇಒಸಿಗೆ ವಿಪತ್ತುಗಳಿಗೆ ಸಂಬಂಧಿಸಿದ ಸುದ್ದಿಗಳ ನೇರ ಪ್ರಸಾರಕ್ಕೆ ಅವಕಾಶವೇ ಇರಲಿಲ್ಲ.

ವಿಪತ್ತು ನಿರ್ದಿಷ್ಟ ದೂರುಗಳಿಗಾಗಿ ಎಸ್‌ಇಒಸಿಯ ಕಾರ್ಯನಿರ್ವಹಣೆಯಲ್ಲಿ ಪ್ರಮುಖವಾಗಿರುವ ಕಾಲ್‌ ಲಾಗ್‌ಗಳನ್ನು ನಿರ್ವಹಿಸಿಲ್ಲ. ‘2019 ಮತ್ತು 2022ರಲ್ಲಿ ರಾಜ್ಯದ ಕೆಲವು ಭಾಗಗಳು ಪ್ರವಾಹ ಮತ್ತು ಮಳೆಯಿಂದ ತೀವ್ರ ಬಾಧಿತವಾಗಿದ್ದವು. ಕೊಡಗು ಜಿಲ್ಲೆಯು 2018 ಮತ್ತು 2020ರಲ್ಲಿ ವಿನಾಶಕಾರಿ ಭೂ ಕುಸಿತವನ್ನು ಅನುಭವಿಸಿದೆ. ಆದರೂ ಎಸ್‌ಇಒಸಿ ಸಕ್ರೀಯವಾಗಿದೆ ಮತ್ತು ರಕ್ಷಣೆ, ಪರಿಹಾರ ಕಾರ್ಯಾಚರಣೆಗಳನ್ನು ಸಂಘಟಿಸಿದೆ ಎಂದು ತೋರಿಸಲು ಯಾವುದೇ ಪುರಾವೆಗಳಿರಲಿಲ್ಲ,’ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

Hot this week

ಗೃಹಜ್ಯೋತಿ; 23,823.06 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ, ಎಸ್ಕಾಂಗಳಿಗೆ 631.75 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

  ಬೆಂಗಳೂರು; ಗೃಹ ಜ್ಯೋತಿ ಯೋಜನೆ ಅನುಷ್ಠಾನಗೊಳಿಸಿರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸರ್ಕಾರವು...

ಭೂ ಸ್ವಾಧೀನ, ಪರಿಹಾರದಲ್ಲಿ ಅಕ್ರಮ; ಬಿಸ್ವಾಸ್ ವರದಿ ಮೂಲೆಗುಂಪು, 29.96 ಕೋಟಿ ನಷ್ಟ ಪ್ರಕರಣಕ್ಕೆ ಕ್ಲೀನ್ ಚಿಟ್

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸಾಬೀತಾಗಿದ್ದ  ಬೆಳಗಾವಿ ಜಿಲ್ಲೆ ಹುಕ್ಕೇರಿ...

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ರಾಡಾರ್ ಸ್ಟ್ರೀಮ್‌ ಗೇಜ್‌, ವೈರ್‍‌ಲೆಸ್‌ ಸಾಧನ ಅಳವಡಿಕೆ; ನಡೆಯದ ತಾಂತ್ರಿಕ ಪರಿಶೀಲನೆ, 3.54 ಕೋಟಿ ವ್ಯರ್ಥ

ಬೆಂಗಳೂರು;  ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ನೆಚ್ಚರಿಕೆಗಾಗಿ 2.45 ಕೋಟಿ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

Topics

ಗೃಹಜ್ಯೋತಿ; 23,823.06 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ, ಎಸ್ಕಾಂಗಳಿಗೆ 631.75 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

  ಬೆಂಗಳೂರು; ಗೃಹ ಜ್ಯೋತಿ ಯೋಜನೆ ಅನುಷ್ಠಾನಗೊಳಿಸಿರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸರ್ಕಾರವು...

ಭೂ ಸ್ವಾಧೀನ, ಪರಿಹಾರದಲ್ಲಿ ಅಕ್ರಮ; ಬಿಸ್ವಾಸ್ ವರದಿ ಮೂಲೆಗುಂಪು, 29.96 ಕೋಟಿ ನಷ್ಟ ಪ್ರಕರಣಕ್ಕೆ ಕ್ಲೀನ್ ಚಿಟ್

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸಾಬೀತಾಗಿದ್ದ  ಬೆಳಗಾವಿ ಜಿಲ್ಲೆ ಹುಕ್ಕೇರಿ...

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ರಾಡಾರ್ ಸ್ಟ್ರೀಮ್‌ ಗೇಜ್‌, ವೈರ್‍‌ಲೆಸ್‌ ಸಾಧನ ಅಳವಡಿಕೆ; ನಡೆಯದ ತಾಂತ್ರಿಕ ಪರಿಶೀಲನೆ, 3.54 ಕೋಟಿ ವ್ಯರ್ಥ

ಬೆಂಗಳೂರು;  ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ನೆಚ್ಚರಿಕೆಗಾಗಿ 2.45 ಕೋಟಿ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

ಚೆಮನೂರು ಬ್ಲಾಕ್‌ನಲ್ಲಿ ಗಣಿಗಾರಿಕೆ; ಅದಾನಿ ಸಮೂಹದ ಎಸಿಸಿಗೆ ಲೆಟರ್ ಆಫ್ ಇಂಟೆಂಟ್‌ ಕೊಡಲು ಗಣಿ ಇಲಾಖೆ ಉತ್ಸುಕ!

ಬೆಂಗಳೂರು; ಭವಿಷ್ಯದ ಸರ್ಕಾರಿ ಟೆಂಡರ್, ಹರಾಜು ಮತ್ತು ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ...

ರೋಹಿತ್ ವೇಮುಲ ಕಾಯ್ದೆ; ವ್ಯಾಖ್ಯಾನಗಳು ಅಸ್ಪಷ್ಟ, ಕಾನೂನು ಬಲವಿಲ್ಲ, ವಿಧೇಯಕವೇ ಅಪೂರ್ಣ

ಬೆಂಗಳೂರು; ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಯ ಎದುರಿಸಬಾರದು...

Related Articles

Popular Categories

error: Content is protected !!