ದಲಿತ ಸಹ-ಪ್ರಾಧ್ಯಾಪಕರಿಗೆ ಜಾತಿ ನಿಂದನೆ, ದೌರ್ಜನ್ಯ; ಕುಲಪತಿ, ಕುಲ ಸಚಿವರ ವಿರುದ್ಧ ಎಫ್‌ಐಆರ್‌

ಬೆಂಗಳೂರು; ಪರಿಶಿಷ್ಟ ಜಾತಿಗೆ ಸೇರಿದ ಸಹ ಪ್ರಾಧ್ಯಾಪಕರಿಗೆ ಮುಂಬಡ್ತಿ ನೀಡದೇ  ಜಾತಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದ  ಅಡಿಯಲ್ಲಿ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ ಕೆ ಸಿ ವೀರಣ್ಣ ಮತ್ತಿತರರ ವಿರುದ್ಧ ಎಫ್‌ಐಆರ್‌ ದಾಖಲಾಗಿರುವುದು ಇದೀಗ ಬಹಿರಂಗವಾಗಿದೆ.

 

ಹೆಬ್ಬಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ (ವಿಜ್ಞಾನಿ-3) ಸಹ ಪ್ರಾಧ್ಯಾಪಕರಾದ ಡಾ ಕೆ ಹೆಚ್‌ ಮುನಿಯಲ್ಲಪ್ಪ ಅವರು ನೀಡಿದ್ದ ದೂರು ಆಧರಿಸಿ ಕುಲಪತಿ, ಕುಲಸಚಿವ, ಉಪ ಕುಲಸಚಿವರ ವಿರುದ್ಧ ಸಂಜಯನಗರ ಠಾಣೆಯಲ್ಲಿ 2023ರ ನವೆಂಬರ್‌ 1ರಂದು ಎಫ್‌ಐಆರ್‌ ದಾಖಲಾಗಿದೆ. ಐಪಿಸಿ 1860 (167) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ.

 

ಎಫ್‌ಐಆರ್‌ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಸಹ ಪ್ರಾಧ್ಯಾಪಕರಾಗಿದ್ದ ಡಾ ಕೆ ಹೆಚ್‌ ಮುನಿಯಲ್ಲಪ್ಪ ಅವರು ಪ್ರಾಧ್ಯಾಪಕ ಹುದ್ದೆಗೆ ಮುಂಬಡ್ತಿಗೊಳ್ಳಬೇಕಿದ್ದರೂ ಅವರಿಗೆ ಮುಂಬಡ್ತಿ ನೀಡಿರಲಿಲ್ಲ. ಹೀಗಾಗಿ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆಯೋಗಕ್ಕೆ ದೂರು ಸಲ್ಲಿಸಿದ್ದರು.

 

ಈ ದೂರಿನ ಕುರಿತು ಆಯೋಗ ವಿಚಾರಣೆ ನಡೆಸಿದ್ದ ಸಮಯದಲ್ಲಿ ರಾಜ್ಯಪಾಲರು ಮತ್ತು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ನೋಟೀಸ್‌ ಜಾರಿಗೊಳಿಸಲಾಗಿತ್ತು. ವಿಶ್ವವಿದ್ಯಾಲಯದ ಪರವಾಗಿ ಸುಳ್ಳು ವರದಿಯನ್ನು ನೀಡಲಾಗಿತ್ತು ಎಂಬುದು ಎಫ್‌ಐಆರ್‌ನಿಂದ ತಿಳಿದು ಬಂದಿದೆ.

 

 

ಮುಂಬಡ್ತಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯಲ್ಲಿ ಚರ್ಚಿಸಲಾಗಿದೆ ಎಂದು ಕುಲಪತಿ, ಕುಲಸಚಿವರು ಹೇಳಿದ್ದಾರಾದರೂ ಮಂಡಳಿ ಸಭೆಯ ನಡವಳಿ ಮತ್ತು ವರದಿಯಲ್ಲಿ ನಮೂದಿಸಿರಲಿಲ್ಲ ಎಂಬ ಸಂಗತಿಯು ಎಫ್‌ಐಆರ್‌ನಿಂದ ಗೊತ್ತಾಗಿದೆ.

 

 

ಎಫ್‌ಐಆರ್‌ನಲ್ಲೇನಿದೆ?

 

ಹೆಬ್ಬಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ವಿಜ್ಞಾನಿ-3 ಸಹ ಪ್ರಾಧ್ಯಾಪಕ ಹಾಗೂ ಗುಣಮಟ್ಟ ನಿರ್ವಹಣೆ ಹಾಗೂ ಇಲಾಖೆಯ ಮುಖ್ಯಸ್ಥರಾಗಿ ಸುಮಾರು 32 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.

 

 

ನಾನು ಪರಿಶಿಷ್ಟ ಜಾತಿಯ ಆದಿ ಕರ್ನಾಟಕ ಜನಾಂಗಕ್ಕೆ ಸೇರಿದವನಾಗಿರುತ್ತೇನೆ. ಸಿಎಎಸ್‌ 2006 ನಿಯಮಗಳ ಅನ್ವಯ 2023ರ ಅಕ್ಟೋಬರ್‌ 5ರಿಂದ ಅನ್ವಯವಾಗುವಂತೆ ನನಗೆ ಅಸೋಸಿಯೇಟ್‌ ಪ್ರೊಫೆಸರ್‌ ಹುದ್ದೆಯಿಂದ ಪ್ರೊಫೆಸರ್‌ ಹುದ್ದೆಗೆ ಮುಂಬಡ್ತಿಯನ್ನು ಪರಿಗಣಿಸುವಂತೆ ಕೋರಿ ಪರಿಶಿಷ್ಟ ಜಾತಿ ಮತ್ತುಪರಿಶಿಷ್ಟ ಪಂಗಡದ ಆಯೋಗಕ್ಕೆ 2021ರ ಏಪ್ರಿಲ್‌ 16ರಂದು ಅರ್ಜಿ ಸಲ್ಲಿಸಿದ್ದರು.

 

 

ಈ ಅರ್ಜಿಗೆ ಪೂರಕವಾಗಿ ಯುಜಿಸಿ ಸ್ಪಷ್ಟೀಕರಣ ಮತ್ತು ಕೋರ್ಟ್‌ ದಾಖಲೆಗಳನ್ನು ಲಗತ್ತಿಸಿದ್ದೆ. ಈ ಅರ್ಜಿಯನ್ನು ಆಯೋಗವು ರಾಜ್ಯಪಾಲರಿಗೆ ರವಾನಿಸಿ ಪಶು ಸಂಗೋಪನೆ ಇಲಾಖೆಯ ಅಂದಿನ ಕಾರ್ಯದರ್ಶಿ ಸಲ್ಮಾ ಕೆ ಫಹೀಮ್‌ ಅವರು ವಿಚಾರಣೆಗೆ ಹಾಜರಾಲು ಸೂಚಿಸಿತ್ತು.

 

 

ಅದರಂತೆ ಇಲಾಖೆ ಕಾರ್ಯದರ್ಶಿಗಳು 2022ರ ಜುಲೈ 6ರಂದು ಆಯೋಗಕ್ಕೆ ವರದಿ ಸಲ್ಲಿಸಿದ್ದರು. ಈ ವರದಿಯಲ್ಲಿ 2021ರ ಏಪ್ರಿಲ್‌ 3ರಂದು ನಡೆಸಿದ ವಿಶ್ವವಿದ್ಯಾಲಯದ 98ನೇ ವ್ಯವಸ್ಥಾಪಕ ಮಂಡಳಿ ಸಭೆಯಲ್ಲಿ ನನ್ನ ಮುಂಬಡ್ತಿ ಮನವಿ ಕುರಿತು ಚರ್ಚಿಸಿರುವುದಾಗಿ ನಮೂದಿಸಿದ್ದರು. ಮತ್ತು ವರದಿಯಲ್ಲಿ ಸಮಿತಿಯ ವರದಿ ಹಾಗೂ ವ್ಯವಸ್ಥಾಪಕ ಮಂಡಳಿಯ ಅನುಮೋದನೆ ಆಧರಿಸಿ ಡಾ ಹೆಚ್‌ ಕೆ ಮುನಿಯಲ್ಲಪ್ಪ ಅವರಿಗೆ ಹಿಂಬರಹವನ್ನು ವಿಶ್ವವಿದ್ಯಾಲಯದಿಂದ ನೀಡಿರುವುದಾಗಿ ನಮೂದಿಸಿದ್ದರು.

 

 

ನಾನು ವಿಶ್ವವಿದ್ಯಾಲಯದ 98ನೇ ವ್ಯವಸ್ಥಾಪಕ ಮಂಡಳಿ ಸಭೆ ವರದಿಯನ್ನು ವಿಶ್ವವಿದ್ಯಾಲಯದ ವೆಬ್ಸೈಟ್‌ನಿಂದ ತೆಗೆದು ಪರಿಶೀಲಿಸಿದಾಗ ವರದಿಯಲ್ಲಿ ನನ್ನ ಮನವಿ ಕುರಿತು ಯಾವುದೇ ಚರ್ಚೆಯಾಗಿಲ್ಲ. ಬದಲಾಗಿ ಪ್ಯಾರಾ ನಂ 05 ಮತ್ತು 06 ಸಂಬಂಧ ಪಟ್ಟಂತೆ ಚರ್ಚೆ ಆಗಿತ್ತು ಎಂದು ಎಫ್‌ಐಆರ್‌ನಲ್ಲಿ ಪ್ರಸ್ತಾವಿಸಲಾಗಿದೆ.

 

 

ಅಲ್ಲದೇ ಆಯೋಗಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದಂತೆ ನನಗಾಗಲಿ ನಮ್ಮ ಸಂಸ್ಥೆಯ ನಿರ್ದೇಶಕರಿಗಾಗಲಿ ವಿಶ್ವವಿದ್ಯಾಲಯದಿಂದ 98ನೇ ವ್ಯವಸ್ಥಾಪಕ ಮಂಡಳಿ ಸಭೆಯಲ್ಲಿ ನನ್ನ ಮನವಿ ಕುರಿತು ಚರ್ಚಿಸಲಾಗಿರುವ ಬಗ್ಗೆ ಯಾವುದೇ ಹಿಂಬರಹವನ್ನು ನೀಡಿರುವುದಿಲ್ಲ ಎಂದು ಆರೋಪಿಸಲಾಗಿದೆ.

 

 

ಆದರೆ ಕುಲಪತಿ ಕೆ ಸಿ ವೀರಣ್ಣ, ಕುಲಸಚಿವ ಬಿ ವಿ ಶಿವಪ್ರಕಾಶ್‌, ಉಪ ಕುಲಸಚಿವ ಡಾ ವಿಜಯಕುಮಾರ್‌ ಸೇರಿ ವಿಶ್ವವಿದ್ಯಾಲಯದ ಪರವಾಗಿ ನನ್ನ ಮನವಿ ಕುರಿತು ಸುಳ್ಳು ಮಾಹಿತಿಯನ್ನು ಒಳಗೊಂಡ ವರದಿಯನ್ನು ಸಿದ್ಧಪಡಿಸಿ ಪಶು ಸಂಗೋಪನೆ ಇಲಾಖೆಯ ಕಾರ್ಯದರ್ಶಿವರಿಗೆ ಸಲ್ಲಿಸಿರುತ್ತಾರೆ. ಅಲ್ಲದೇ ಆಯೋಗದ ಮುಂದೆ ಹಾಜರಾಗಿ ವರದಿಯಲ್ಲಿನ ಮಾಹಿತಿ ಸುಳ್ಳೆಂದು ತಿಳಿದಿದ್ದರೂ ಸಹ ಅದನ್ನೇ ಸಮರ್ಥಿಸಿಕೊಂಡು ವಾದವನ್ನು ಮಂಡಿಸಿ ಆಯೋಗದಲ್ಲಿ ಸುಳ್ಳು ಮಾಹಿತಿ ನೀಡಿರುತ್ತಾರೆ ಎಂದು ದೂರಿದ್ದಾರೆ.

 

 

ಈ ವಿಷಯವಾಗಿ ನಾನು ವಿಚಾರಣೆ ನಡೆಸುವಂತೆ ದೂರು ಅರ್ಜಿಯನ್ನು ಪೊಲೀಸ್‌ ಇಲಾಖೆಗೆ 2022ರ ಏಪ್ರಿಲ್‌ 15ರಂದು ಸಲ್ಲಿಸಿಕೊಂಡಿದ್ದೆ. ಪೊಲೀಸ್‌ ವಿಚಾರಣೆ ವೇಳೆ ವಿಶ್ವವಿದ್ಯಾಲಯದ ಸಲ್ಲಿಸಿರುವ ದಾಖಲೆಗಳನ್ನು ಪರಿಶಿಲಿಸಿರುತ್ತೇನೆ. ಅದರಲ್ಲಿ ನನಗೆ ವಶ್ವವಿದ್ಯಾಲಯದವರು ನೀಡಿದ್ದಾರೆ ಎನ್ನಲಾಧ 2021ರ ಆಗಸ್ಟ್‌ 5ರಂದು ಹಿಂಬರಹ ಅಂಚೆ ಮುಖೇನ ಕಳಿಸಿದ್ದು ನಮುದಿಸಿದ್ದು ಹಿಂಬರಹ ತಲುಪಿಲ್ಲ ಎಂದು ದೂರಿದ್ದಾರೆ.

 

 

‘ಸಂಸ್ಥೆಯ ನಿರ್ದೇಶಕರು ಯಾವುದೇ ಹಿಂಬರಹ ಬಂದಿಲ್ಲವೆಂದು ತಿಳಿಸಿರುತ್ತಾರೆ. ನನಗೆ ಕಿರುಕುಳ ನೀಡುವ ಉದ್ದೇಶದಿಂದ ನನ್ನನ್ನು ವಿಶ್ವವಿದ್ಯಾಲಯದದ ಕೆವಿಎಎಫ್‌ಎಸ್‌ ಅಧಿನಿಯಮ ಅನುಬಂಧ 1ಕ್ಕೆ ಒಳಪಡದ ಗದಗ್‌ನಲ್ಲಿರುವ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ವರ್ಗಾವಣೆ ಮಾಡಿದ್ದಾರೆ,’ ಎಂದು ಆರೋಪಿಸಿದ್ದಾರೆ.

 

 

ಅಲ್ಲದೇ ಮುನಿಯಲ್ಲಪ್ಪ ಅವರು ರಜೆಗಾಗಿ ಅರ್ಜಿ ಸಲ್ಲಿಸಿದ್ದರೂ ರಜೆಯನ್ನು ಮಂಜೂರಾಗಿರಲಿಲ್ಲ. ಬದಲಿಗೆ ಅನಧಿಕೃತ ಗೈರು ಹಾಜರಿ ಎಂಬ ಕಾರಣ ನೀಡಿ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯ ಗಮನಕ್ಕೆ ತರದೇ ಸೇವೆಯಿಂದ ಅಮಾನತಿನಲ್ಲಿಟ್ಟಿತ್ತು ಎಂಬುದು ಎಫ್‌ಐಆರ್‌ನಿಂದ ತಿಳಿದು ಬಂದಿದೆ.

 

 

ನಿಯಮಾನುಸಾರ ನನಗೆ ನೀಡಬೇಕಾದ ವೇತನ ಭತ್ಯೆಗಳನ್ನು ಸಹ ನೀಡದೇ ನ ನ್ನ ಮೆಲೆ ದೌರ್ಜನ್ಯವೆಸಗಿರುವ ಕುಲಪತಿ ಕೆ ಸಿ ವೀರಣ್ಣ, ಅಂದಿನ ಕುಲಸಚಿವ ಬಿ ವಿ ಶಿವಪ್ರಕಾಶ್‌ , ಉಪ ಕುಲಸಚಿವ ಡಾ ವಿಜಯಕುಮಾರ್‌ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದರು.

the fil favicon

SUPPORT THE FILE

Latest News

Related Posts