Tuesday | March 17, 2026 |

ಗ್ರಾಮಠಾಣ ಜಮೀನು ಅದಲು-ಬದಲು; ಆರ್ಥಿಕ ಇಲಾಖೆ ಆಕ್ಷೇಪ ಬದಿಗೊತ್ತಿ ಎಂ ಆರ್ ಸೀತಾರಾಂ ಕುಟುಂಬದ ಬೆನ್ನಿಗೆ ನಿಂತ ಸರ್ಕಾರ

Support THE-FILE

spot_img

ಬೆಂಗಳೂರು; ಸರ್ಕಾರಿ ಭೂಮಿಗೆ ರಸ್ತೆಯ ಸಂಪರ್ಕ ಹೊಂದಿಲ್ಲದಿರುವ, ರಸ್ತೆ ಸಂಪರ್ಕ ಕಲ್ಪಿಸದೇ ಇರುವ ಕಾರಣ ಅಮೂಲವ್ಯವಾದ ಸರ್ಕಾರಿ ಭೂಮಿ ಹಾಗೂ ಖಾಸಗಿ ಭೂಮಿ ನಡುವೆ ಭೂ ವಿನಿಮಯ ಮಾಡಲು ಆರ್ಥಿಕ ಇಲಾಖೆಯು ವ್ಯಕ್ತಪಡಿಸಿದ್ದ ಆಕ್ಷೇಪಣೆಯನ್ನು ಬದಿಗೊತ್ತಿರುವ ರಾಜ್ಯ ಸರ್ಕಾರವು, ವಿಧಾನಪರಿಷತ್ ಸದಸ್ಯ ಎಂ ಆರ್ ಸೀತಾರಾಂ ಅವರ ಕುಟುಂಬ ಸದಸ್ಯರ ಮನವಿ ಪುರಸ್ಕರಿಸಿ ಕೆಟ್ಟ ಪೂರ್ವ ನಿದರ್ಶನಕ್ಕೆ  ನಾಂದಿ ಹಾಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ ಮತ್ತು ಮಲ್ಲೇನಹಳ್ಳಿ ಗ್ರಾಮಠಾಣ ಜಮೀನನ್ನು ಅದಲು ಬದಲು ಮಾಡಲು ಸಚಿವ ಸಂಪುಟವು ಅನುಮೋದಿಸಿದೆ. ಸಂಪುಟವು ಅನುಮೋದಿಸಿದ ಒಂದೆರಡು ದಿನಗಳಲ್ಲಿಯೇ ಕಂದಾಯ ಇಲಾಖೆಯು ಅಷ್ಟೇ ತ್ವರಿತಗತಿಯಲ್ಲಿ ಆದೇಶವನ್ನೂ ಹೊರಡಿಸಿದೆ.

ಅಲ್ಲದೇ ಬಾಗಮನೆ ಡೆವಲಪರ್ಸ್‌ ಪ್ರಕರಣದಲ್ಲಿ ಪ್ರಸ್ತಾವನೆಯನ್ನೇ ತಿರಸ್ಕರಿಸಿದ್ದ ಕಂದಾಯ ಇಲಾಖೆಯು, ವಿಧಾನ ಪರಿಷತ್ ಸದಸ್ಯ ಎಂ ಆರ್ ಸೀತಾರಾಂ ಅವರ ಪ್ರಕರಣದಲ್ಲಿ ಪುರಸ್ಕರಿಸಿದೆ. ಕಂದಾಯ ಇಲಾಖೆಯ ಈ ನಡೆಯು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಸಚಿವ ಸಂಪುಟಕ್ಕೆ ಮಂಡಿಸಿದ್ದ  ಕಡತದ ರಹಸ್ಯ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.

ಎಂ ಆರ್ ಸೀತಾರಾಂ ಮತ್ತಿತರರ ಮನವಿಯಲ್ಲೇನಿತ್ತು?

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿಯ ಅಕ್ಲೇನಹಳ್ಳಿ ಮಲ್ಲೇನಹಳ್ಳಿ ಗ್ರಾಮಕ್ಕೆ ಸೇರಿದ 6 ಎಕರೆ 18 ಗುಂಟೆ ಗ್ರಾಮ ಠಾಣೆ ಜಮೀನನ್ನು ಇದೇ ಗ್ರಾಮದ ಸರ್ವೆ ನಂಬರ್ 37, 07, 8/2ರಲ್ಲಿನ ಒಟ್ಟು 8 ಎಕರೆ 36 ಗುಂಟೆ ಖಾಸಗಿ ಜಮೀನಿಗೆ ಅದಲು ಮಾಡಿಕೊಡಬೇಕು ಎಂದು  ವಿಧಾನ ಪರಿಷತ್ ಸದಸ್ಯ ಎಂ ಆರ್ ಸೀತಾರಾಂ, ಎಂ ಆರ್ ಪಟ್ಟಾಭಿರಾಮ್ ಮತ್ತು ಎಂ ಆರ್ ಕೋದಂಡರಾಮ್ ಅವರು ಮನವಿ ಸಲ್ಲಿಸಿದ್ದರು. ಇದೇ ಮನವಿಯನ್ನು ಪುರಸ್ಕರಿಸಿದ್ದ ಕಂದಾಯ ಇಲಾಖೆಯು ಸಚಿವ ಸಂಪುಟದ ಪ್ರಸ್ತಾವನೆಯಲ್ಲಿಯೂ ಸೇರಿಸಿತ್ತು.

 

 

ಜನವಸತಿ ರಹಿತ 

ಎಂ ಆರ್ ಸೀತಾರಾಂ ಮತ್ತು ಅವರ ಕುಟುಂಬ ಸದಸ್ಯರ ಮನವಿಯಲ್ಲಿ ಪ್ರಸ್ತಾಪಿತವಾಗಿದ್ದ ಜಮೀನುಗಳು ಪ್ರಸ್ತುತ ಜನವಸತಿ ರಹಿತವಾಗಿದ್ದವು. ಅಲ್ಲದೇ ಅರ್ಜಿದಾರರಿಗೆ ಸೇರಿದ ಮಧ್ಯದಲ್ಲಿ ಇದೆ. ಈ ಗ್ರಾಮದ ಜನರು ಖಾತೆದಾರರಿಗೆ ಸೇರಿದ ಪಟ್ಟಾ ಜಮೀನಿನ ಸರ್ವೇ  ನಂಬರ್ 37ರಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಹಾಗೆಯೇ ಅರ್ಜಿದಾರರನ್ನು ಹೊರತುಪಡಿಸಿ ಬೇರೆ ಯಾರಿಗೂ ಈ ಗ್ರಾಮ ಠಾಣೆ ಜಮೀನಿಗೆ ಸಂಪರ್ಕ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಿ ಗ್ರಾಮ ಠಾಣೆ ಜಮೀನನ್ನು ಮಂಜೂರು ಮಾಡಬೇಕು ಎಂದು ಅರ್ಜಿದಾರರಾದ ಎಂ ಆರ್ ಸೀತಾರಾಂ ಮತ್ತು ಅವರ ಕುಟುಂಬ ಸದಸ್ಯರು ಕೋರಿದ್ದರು.

ಜಿಲ್ಲಾಧಿಕಾರಿ ವರದಿಯಲ್ಲೇನಿದೆ?

ಅಕ್ಲೇನಹಳ್ಳಿ ಮಲ್ಲೇನಹಳ್ಳಿ ಗ್ರಾಮವು ಇನಾಂ ಗ್ರಾಮವಾಗಿತ್ತು. ಮೈಸೂರು ಇನಾಂ ಅಬಾಲಿಷನ್ ಆಕ್ಟರ್ 1954ರ ಅಧಿನಿಯಮದ ಪ್ರಕಾರ ಈ ಗ್ರಾಮದ ಎಲ್ಲಾ ಜಮೀನುಗಳು ಸರ್ಕಾರಕ್ಕೆ ವಿಹಿತವಾಗಿದ್ದವು. ಗ್ರಾಮ ಠಾಣಾ ಸಹ ಸರ್ಕಾರದಲ್ಲಿ ವಿಹಿತವಾಗಿದ್ದವು. ಇದು ಯಾರಿಗೂ ಮಂಜೂರಾಗಿಲ್ಲ. ಹೀಗಾಗಿ 6 ಎಕರೆ 18 ಗುಂಟೆ ವಿಸ್ತೀರ್ಣದ ಗ್ರಾಮಠಾಣಾ ಜಮೀನು ಪ್ರಸ್ತುತ ಸರ್ಕಾರಿ ಜಮೀನಾಗಿದೆ ಎಂದು ವರದಿ ಸಲ್ಲಿಸಿದ್ದರು.

 

 

ಈ ಗ್ರಾಮ ಠಾಣಾ ಜಮೀನಿನಲ್ಲಿ ಹಲವು ದಶಕಗಳಿಂದ ಜನವಸತಿ ಇಲ್ಲ. ಈ ಗ್ರಾಮದ ಜನರು ಅನೇಕ ವರ್ಷಗಳ ಹಿಂದೆ ಖಾತೆದಾರರಿಗೆ ಸೇರಿದ ಪಟ್ಟಾ ಜಮೀನಿನ ಸರ್ವೆ ನಂಬರ್ 37ರಲ್ಲಿನ ಮನೆಗಳನ್ನು ನಿರ್ಮಾಣ ಮಾಡಿಕೊಂಡು ವಾಸಿಸುತ್ತಿದ್ದಾರೆ. ಆದರೆ ಇವರಿಗೆ ಯಾವುದೇ ರೀತಿಯ ಹಕ್ಕುಪೊತ್ರ ಅಥವಾ ಮಂಜೂರಾತಿ ನೀಡಿಲ್ಲ. ಗ್ರಾಮ ಪಂಚಾಯ್ತಿಯಿಂದ ಮೂಲಸೌಕರ್ಯಗಳನ್ನೂ ಒದಗಿಸಲಾಗಿದೆ. ಗ್ರಾಮಸ್ಥರು ಅರ್ಜಿದಾರರಿಗೆ ಸೇರಿದ ಪ್ರದೇಶದಲ್ಲಿಯೇ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಮನೆಗಳಿರುವ 2 ಎಕರೆ 6 ಗುಂಟೆ ಪ್ರದೇಶವನ್ನು ಖರಾಬು ಎಂದು ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ವರದಿಯಲ್ಲಿ ವಿವರಿಸಿದ್ದರು.

ಇನಾಂ ರದ್ಧತಿ ಅಧಿನಿಯಮದ ಪ್ರಕಾರ ಎಂ ಎಸ್‌ ರಾಮಯ್ಯ ಅವರಿಗೆ ಇನಾಂ ರದ್ದಿಯಾತಿ ವಿಶೇಷ ಜಿಲ್ಲಾಧಿಕಾರಿಗಳಿಂದ ಮಂಜೂರಾಗಿತ್ತು. ಮಂಜೂರಾತಿಯಂತೆ ಅವರ ಹೆಸರಿಗೆ ಖಾತೆಯೂ ಆಗಿತ್ತು. ನಂತರ ಈ ಜಮೀನುಗಳು ವ್ಯವಸಾಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಆಗಿತ್ತು. ಸರ್ವೆ ನಂಬರ್ 7ರಲ್ಲಿ ಎ ಖರಾಭು, 0-17 ಗುಂಟೆ ಸೇರಿ ಒಟ್ಟು 5 ಎಕರೆ 28 ಗುಂಟೆ ಇತ್ತು.

2005ರ ನವೆಂಬರ್ 18ರಂದು ಈ ಕುಟುಂಬದ ವ್ಯವಸ್ಥಾಪತ್ರದ ಪ್ರಕಾರ ಎಂ ಆರ್ ಪಟ್ಟಾಭಿರಾಮ್ ಅವರಿಗೆ 2 ಎಕರೆ 33 ಗುಂಟೆ, ಎಂ ಆರ್ ಕೋದಂಡರಾಮ್ ಅವರಿಗೆ 2 ಎಕರೆ 18 ಗುಂಟೆ ಬಂದಿತ್ತು. ಇದು ಎಂ ಆರ್ ಕೋದಂಡರಾಮ್ ಅವರ ಹೆಸರಿನಲ್ಲಿಯೇ ಇದೆ. ಸರ್ವೆ ನಂಬರ್ 8/2ರಲ್ಲಿ 1 ಎಕರೆ 38 ಗುಂಟೆ ಜಮೀನಿದೆ. ಇದರಲ್ಲಿ ಎಂ ಆರ್ ಕೋದಂಡರಾಮ್ ಅವರ ಹೆಸರಿನಲ್ಲಿ 1 ಎಕರೆ 6 ಗುಂಟೆ ಮತ್ತು ಎಂ ಆರ್ ಪಟ್ಟಾಭಿರಾಮ್ ಅವರ ಹೆಸರಿನಲ್ಲಿ 1 ಎಕರೆ 06 ಗುಂಟೆ ಇದೆ. ಅಲ್ಲದೇ ಎಂ ಆರ್ ಪಟ್ಟಾಭಿರಾಮ್ ಹೆಸರಿನಲ್ಲಿ 0-32 ಗುಂಟೆ ಇದೆ.

 

 

ಸರ್ವೆ ನಂಬರ್ 37ರಲ್ಲಿ ಒಟ್ಟು 12 ಎಕರೆ ಇದೆ. ಈ ಪೈಕಿ ಎಂ ಆರ್ ಸೀತಾರಾಮ್ ಅವರ ಹೆಸರಿನಲ್ಲಿ 8 ಎಕರೆ ಮತ್ತು ಎಂ ಆರ್‍‌ ಪಟ್ಟಾಭಿರಾಮ್ ಅವರ ಹೆಸರಿನಲ್ಲಿ 4 ಎಕರೆ ಇದೆ. ಸರ್ವೆ ನಂಬರ್‍‌ 37ರಲ್ಲಿ ಒಟ್ಟಾರೆ 460 ಎಕರೆ 26 ಗುಂಟೆ ಇದೆ. ಆದರೆ ಪೋಡಿ ದುರಸ್ತಿ ಆಗಿಲ್ಲ. ಹಾಗೂ ಆಕಾರ್ ಬಂದ್ ಕೂಡ ನಿಗದಿಯಾಗಿಲ್ಲ.

ಈ ಜಮೀನಿನಲ್ಲಿ ಪ್ರಸ್ತುತ ಮನೆ ನಿರ್ಮಿಸಿರುವ 2 ಎಕರೆ 6 ಗುಂಟೆ ಜಮೀನು ಸೇರಿದಂತೆ ಒಟ್ಟಾರೆ 6 ಎಕರೆ 38 ಗುಂಟೆ ಹಾಗೂ ಸರ್ವೇ ನಂಬರ್ 7ರಲ್ಲಿ 1 ಎಕರೆ 7 ಗುಂಟೆ ಜಮೀನಿನ ಪೈಕಿ 0-05 ಗುಂಟೆ  ಖರಾಬು, ಜಾತಾ ಉಳಿಕೆ ಹೆಸರಿನಲ್ಲಿ 1 ಎಕರೆ 02 ಗುಂಟೆ ಮತ್ತು ಸರ್ವೆ ನಂಬರ್ 8/2ರಲ್ಲಿನ 0-31 ಗುಂಟೆ ಜಮೀನಿನ ಪೈಕಿ 0-03 ಎಕರೆ ಖರಾಬು, ಜಾತಾ ಉಳಿಕೆ ಹೆಸರಿನಲ್ಲಿ 0-28 ಗುಂಟೆ ಸೇರಿ ಒಟ್ಟಾರೆ 8 ಎಕರೆ 36 ಗುಂಟೆ ಜಮೀನನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಪ್ರಮಾಣ ಪತ್ರವನ್ನು ಹಾಜರುಪಡಿಸಿದ್ದರು ಎಂಬುದು ಸಚಿವ ಸಂಪುಟ ಟಿಪ್ಪಣಿ ಹಾಳೆಗಳಿಂದ ಗೊತ್ತಾಗಿದೆ.

ಸರ್ವೆ ನಂಬರ್ 37ರಲ್ಲಿವೆ ಅನಧಿಕೃತ ಕಟ್ಟಡಗಳು

ದಿಶಾಂಕ್ ತಂತ್ರಾಂಶದ ಪ್ರಕಾರ ಸರ್ವೇ ನಂಬರ್ 37ರಲ್ಲಿ ರಚನೆಗಳೂ, ವಾಣಿಜ್ಯ ಸ್ವರೂಪವೇ ಅಥವಾ ವಸತಿ ಸ್ವರೂಪವೇ ಎಂಬ ಬಗ್ಗೆ ಮಾಹಿತಿಯೇ ಇಲ್ಲ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು  ಸ್ಥಳೀಯವಾಗಿ ಖುದ್ದು ಪರಿಶೀಲನೆ ನಡೆಸಿದ್ದ ಸಂದರ್ಭದಲ್ಲಿ ಸರ್ವೇ ನಂಬರ್ 37ರಲ್ಲಿ ಅನಧಿಕೃತ ಕಟ್ಟಡಗಳು ಇರುವುದು ಕಂಡುಬಂದಿತ್ತು.

 

 

 

ವಿವಾದಿತ ಜಮೀನಾಗಿದೆಯೇ?

ಅಕ್ಲೇನಹಳ್ಳಿ ಮತ್ತು ಮಲ್ಲೇನಹಳ್ಳಿಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರಾಶ್ರಿತರ ಕ್ಷೇಮಾಭಿವೃದ್ಧಿ ಸಂಘವು ಮನವಿ ಸಲ್ಲಿಸಿತ್ತು. ಸುಮಾರು 1,000 ಎಕರೆ ಸರ್ಕಾರಿ ಜಮೀನಿನ ಬಗ್ಗೆ ಮನವಿಯಲ್ಲಿ ವಿವರಿಸಿತ್ತು.

 

 

ಅಕ್ಲೇನಹಳ್ಳಿ ಮತ್ತು ಮಲ್ಲೇನಹಳ್ಳಿ ಹಳೆಯ ಗ್ರಾಮದಿಂದ ಒಕ್ಕಲೆಬ್ಬಿಸಲ್ಪಟ್ಟ ಗ್ರಾಮಠಾಣ ಭೂಮಿಯ ಭೂ ಸ್ವಾಧೀನವನ್ನು ಕೊಡಿಸಬೇಕು. ಹಾಗೆಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ಕಾಯ್ದೆಯಡಿ ಭೂ ಕಬಳಿಕೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಗ್ರಾಮ ಠಾಣ ಭೂಮಿಯ ಸ್ವಾಧಿನಾನುಭವವನ್ನು  ಇಲ್ಲಿನ ನಿರಾಶ್ರಿತರಿಗೆ  ಕೊಡಬೇಕು. ಅಲ್ಲದೇ ಅಕ್ಲೇನಹಳ್ಳಿ ಮತ್ತು ಮಲ್ಲೇನಹಳ್ಳಿ ಗ್ರಾಮದ 41 ಎಕರೆ 05 ಗುಂಟೆ , ಸರ್ವೆ ನಂಬರ್ 37 ಹಾಗೂ ಸರ್ಕಾರಿ ಗ್ರಾಮ ಠಾಣ ಜಮೀನನ್ನು ಸರ್ಕಾರದ ವಶಕ್ಕೆ ಪಡೆದು ಗ್ರಾಮಸ್ಥರಿಗೆ ಯಥಾಸ್ಥಿತಿ ಸ್ವಾಧೀನಾನುಭವಕ್ಕೆ ಬಿಟ್ಟುಕೊಟ್ಟಿರುವ ಜಮೀನಿನ ತಂಟೆಗೆ ಯಾಋಉ ಬರದಂತೆ ತಡೆಯಬೇಕು ಎಂದು ಮನವಿಯಲ್ಲಿ ಕೋರಿತ್ತು.

ಕಂದಾಯ ಇಲಾಖೆಯ ಸಮರ್ಥನೆಯಲ್ಲೇನಿದೆ?

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಸಮರ್ಥನೆ ನೀಡಿತ್ತು. ಕರ್ನಾಟಕ ಭೂ ಮಂಜೂರಾತಿ ನಿಯಮಗಳ ನಿಯಮ 28 ಎ (vii)ರಲ್ಲಿ ಗ್ರಾಮ ನಿವೇಶನಗಳ ವಿಸ್ತರಣೆಗಾಗಿ ಖಾಸಗಿ ಭೂಮಿಯು ಅಗತ್ಯವಾಗಿದ್ದಲ್ಲಿ ಬಿಟ್ಟುಕೊಟ್ಟ ಭೂಮಿಗೆ ಬದಲಾಗಿ ಭೂಮಿಯ ಮಂಜೂರಾತಿ ಮಾಡಬಹುದು. ಅಧರೆ ಈ ಪ್ರಕರಣದಲ್ಲಿ ಈಗಾಗಲೇ ಗ್ರಾಮಠಾಣವು ಲಭ್ಯವಿದೆ. ಮತ್ತು ವಸತಿ ರಚನೆಗಳು ಈಗಾಗಲೇ ನಿರ್ಮಾಣವಾಗಿದೆ. ಹೀಗಾಗಿ ಈ ನಿಯಮವನ್ನು ಅನ್ವಯಿಸಲು ಸಾಧ್ಯವಿಲ್ಲ. ಅಲ್ಲದೇ ಇಂತಹ ಭೂಮಿ ಅವಶ್ಯಕತೆ ಇರುವ ಬಗ್ಗೆ ಗ್ರಾಮ ಪಂಚಾಯ್ತಿ ಆಗಲೀ ಅಥವಾ ಸಾರ್ವಜನಿಕರೇ ಆಗಲಿ ಅವಶ್ಯಕತೆಯನ್ನು ವ್ಯಕ್ತಪಡಿಸಿಲ್ಲ ಎಂದು ಕಂದಾಯ ಇಲಾಖೆಯು ಸಮರ್ಥಿಸಿಕೊಂಡಿತ್ತು.

ಸುಪ್ರೀಂ ಕೋರ್ಟ್ ತೀರ್ಪುಗಳೇನು?

ಪರೊಂಬೋಕ್, ಗೋಮಾಳ, ಖರಾಬ್ ಮತ್ತು ಜಲಮೂಲಗಳಂತಹ ಸಾರ್ವಜನಿಕ ಭೂಮಿಯನ್ನು ರಕ್ಷಿಸುವ ಸಂಬಂಧ ಸುಪ್ರೀಂ ಕೋರ್ಟ್‌ ಹಲವು ಪ್ರಕರಣಗಳಲ್ಲಿ ಒತ್ತಿ ಹೇಳಿದೆ. ಹಿಂಚ್‌ಲಾಲ್‌ ತಿವಾರಿ/ ಕಮಲಾದೇವಿ ಮತ್ತು ಇತರರು (2011), ಜಗಪಾಲ್ ಸಿಂಗ್ ಮತ್ತು ಇತರರು/ಪಂಜಾಬ್ ರಾಜ್ಯ (2011), ಜೋಗಿಂದರ್ ಮತ್ತು ಇತರರು/ ಹರಿಯಾಣ ರಾಜ್ಯ (ಎಸ್‌ಎಲ್‌ಪಿ ಸಿವಿಲ್ 1829/2021) ಪ್ರಕರಣದಲ್ಲಿ ತೀರ್ಪು ನೀಡಿದೆ. ಈ ತೀರ್ಪನ್ನು ಕಂದಾಯ ಇಲಾಖೆಯು ತನ್ನ ಸಮರ್ಥನೆಯಲ್ಲಿ ವಿವರಿಸಿತ್ತು.

 

 

ಕಾನೂನು ಇಲಾಖೆಯ ಅಭಿಪ್ರಾಯವೇನು?

ಎಂ ಆರ್ ಸೀತಾರಾಂ ಅವರ ಪ್ರಕರಣದ ಕುರಿತು ಕಂದಾಯ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯ ಕೋರಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಕಾನೂನು ಇಲಾಖೆಯು ಅರ್ಜಿದಾರರ ಅರ್ಜಿಯನ್ನು ಪರಿಗಣಿಸಿ ಬದಲಿಯಾಗಿ ದೇವನಹಳ್ಳಿ ತಾಲೂಕು ಕಸಬಾ ಹೋಬಳಿ ಅಕ್ಲೇನಹಳ್ಳಿ,-ಮಲ್ಲೇನಹಳ್ಳಿ ಗ್ರಾಮದ 6 ಎಕರೆ 18 ಗುಂಟೆ ಸರ್ಕಾರಕ್ಕೆ ಸೇರಿದ್ದ ಗ್ರಾಮ ಠಾಣೆ ಜಮೀನನ್ನು ಮಂಜೂರು ಮಾಡಲು ಪರಿಗಣಿಸಬಹುದು ಎಂದು ಅಭಿಪ್ರಾಯಿಸಿತ್ತು.

 

 

ಆದರೆ ಕರ್ನಾಟಕ ಮಂಜೂರಾತಿ ನಿಯಮಗಳ ನಿಯಮ 28 ಎ (vii) ಗ್ರಾಮ ನಿವೇಶನಗಳ ವಿಸ್ತರಣೆಗಾಗಿ ಖಾಸಗಿ ಭೂಮಿಯು ಅವಶ್ಯಕತೆವಾಗಿದ್ದಲ್ಲಿ ಬಿಟ್ಟುಕೊಟ್ಟ ಭೂಮಿಗೆ ಬದಲಾಗಿ ಭೂಮಿಯ  ಮಂಜೂರಾತಿ ಮಾಡಬಹುದು. ಆದರೆ ಈ ಪ್ರಕರಣದಲ್ಲಿ ಗ್ರಾಮ ಠಾಣವು ಲಭ್ಯವಿದೆ. ಮತ್ತು ವಸತಿ ರಚನೆಗಳು ಈಗಾಗಲೇ ನಿರ್ಮಾಣಗೊಂಡಿವೆ. ಹೀಗಾಗಿ ಉಪ ಬಂಧವನ್ನು ಅನ್ವಯಿಸಲು ಸಾಧ್ಯವಿಲ್ಲ. ಅಲ್ಲದೇ ಇಂತಹ ಭೂಮಿ ಅವಶ್ಯಕತೆ ಇರುವ ಬಗ್ಗೆ ಗ್ರಾಮ ಪಂಚಾಯ್ತಿ ಆಗಲೀ ಅಥವಾ ಸಾರ್ವಜನಿಕರೇ ಆಗಲಿ ಅವಶ್ಯಕತೆಯನ್ನು ವ್ಯಕ್ತಪಡಿಸಿಲ್ಲ. ಹೀಗಾಗಿ ಕಾನೂನು ಇಲಾಖೆಯ ಅಭಿಪ್ರಾಯಕ್ಕೆ ಕಂದಾಯ ಇಲಾಖೆಯು ಸಹಮತಿ ವ್ಯಕ್ತಪಡಿಸಿರಲಿಲ್ಲ.

ಸಹಮತಿ ವ್ಯಕ್ತಪಡಿಸದ ಆರ್ಥಿಕ ಇಲಾಖೆ

ವಿಶೇಷವೆಂದರೇ ಕಾನೂನು ಮತ್ತು ಕಂದಾಯ ಇಲಾಖೆಯು ನೀಡಿದ್ದ ಅಭಿಪ್ರಾಯ ಮತ್ತು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಒಪ್ಪಿರಲಿಲ್ಲ ಮತ್ತು ಪರಿಗಣಿಸಿರಲಿಲ್ಲ.

 

 

ಕೆಟ್ಟ ಪೂರ್ವ ನಿದರ್ಶನವಾಗಲಿದೆ ಎಂದಿದ್ದ ಆರ್ಥಿಕ ಇಲಾಖೆ

ಕಂದಾಯ ಇಲಾಖೆಯು ಪ್ರಸ್ತಾಪಿಸಿರುವ ಸರ್ಕಾರಿ ಭೂಮಿಗೆ ರಸ್ತೆಯ ಸಂಪರ್ಕ ಹೊಂದಿದಲ್ಲದಿರುವ, ಕಲ್ಪಿಸದೇ ಇರುವ ಕಾರಣ ಅಮೂಲ್ಯವಾದ ಸರ್ಕಾರಿ ಭೂಮಿ ಹಾಗೂ ಖಾಸಗಿ ಭೂಮಿ ನಡುವಿನ ಭೂ ವಿನಿಮಯ ಮಾಡಿದಲ್ಲಿ ಈ ತರಹದ ಸಮಾನಾಂತರ ಪ್ರಕರಣಗಳಿಗೆ ಕೆಟ್ಟ ಪೂರ್ವ ನಿದರ್ಶನವಾಗಲಿದೆ. ಅಧ್ದರಿಂದ ಆಡಳಿತ ಇಲಾಖೆಯ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಸಹಮತಿ ಇಲ್ಲ ಎಂದು 2026ರ ಜನವರಿ 21ರಂದೇ ತನ್ನ ಅಭಿಪ್ರಾಯ ತಿಳಿಸಿತ್ತು.

 

 

ಆದರೂ ಕಂದಾಯ ಇಲಾಖೆಯು ಪಟ್ಟು ಬಿಡದೇ ಎರಡನೇ ಬಾರಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು.  ಅರ್ಜಿದಾರರ ಅರ್ಜಿಯನ್ನು ಪರಿಗಣಿಸಿ ಬದಲಿಯಾಗಿ ಅಕ್ಲೇನಹಳ್ಳಿ ಮಲ್ಲೇನಹಳ್ಳಿ ಗ್ರಾಮದ 6 ಎಕರೆ 18 ಗುಂಟೆ ಸರ್ಕಾರಕ್ಕೆ ಸೇರಿದ್ದ ಜಮೀನನ್ನು ಮಂಜೂರು ಮಾಡುವ ಪ್ರಸ್ತಾವನೆಗೆ ಸಹಮತಿ ಇಲ್ಲ ಎಂದು 2026ರ ಜನವರಿ 21ರಂದೇ ನೀಡಿದ್ದ ಹಿಂಬರಹವನ್ನೇ ಪುನರುಚ್ಛರಿಸಿತ್ತು.

ಸಿಎಂ ನಿರ್ದೇಶನ ಪಾಲಿಸಿದ ಕಂದಾಯ ಇಲಾಖೆ

ಈ ಪ್ರಕರಣದಲ್ಲಿ ಕಾನೂನು ತೊಡಕುಗಳಿದ್ದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟದ ಮುಂದೆ ಮಂಡಿಸಲು ಕಂದಾಯ ಇಲಾಖೆಗೆ ನಿರ್ದೇಶನ ನೀಡಿದ್ದರು. ಅದರಂತೆ ಕಂದಾಯ ಇಲಾಖೆಯು ಕಡತ ಮಂಡಿಸಿತ್ತು.

 

 

ಸಂಪುಟಕ್ಕೆ ಮೂರು ಆಯ್ಕೆ ತೋರಿಸಿದ್ದ ಇಲಾಖೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಮೂರು ಆಯ್ಕೆಗಳನ್ನು ನೀಡಿತ್ತು.

 

ಹಿಂಚ್‌ಲಾಲ್‌ ತಿವಾರಿ, ಜಗಪಾಲ್ ಸಿಂಗ್, ಜೋಗಿಂದರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಪೊರಂಬೋಕು, ಗೋಮಾಳ, ಖರಾಬು, ಜಲಮೂಲ ಜಮೀನುಗಳನ್ನು ಸಾರ್ವಜನಿಕ ಉಪಯೋಗಕ್ಕಾಗಿ ಸಂರಕ್ಷಿಸಬೇಕು ಎಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನವಿದೆ. ಹೀಗಾಗಿ ಈ ಪ್ರಸ್ತಾವನೆಯನ್ನು ತಿರಸ್ಕರಿಸಬಹುದು ಎಂದು ಮೊದಲ ಆಯ್ಕೆಯನ್ನು ಕಂದಾಯ ಇಲಾಖೆಯು ತೋರಿಸಿತ್ತು.

 

 

 

ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 27ರ ಅಡಿ ಇರುವ ಅಧಿಕಾರವನ್ನು ಚಲಾಯಿಸುವುದು ಮತ್ತು 1969ರ ನಿಯಮ 22 (ಎ) (2)ನ್ನು ಸಡಿಲಿಸಬಹುದು ಎಂದು ಮತ್ತೊಂದು ಆಯ್ಕೆಯನ್ನು ನೀಡಿತ್ತು. ಎಂ ಆರ್ ಸೀತಾರಾಂ, ಎಂ ಆರ್ ಪಟ್ಟಾಭಿರಾಮ್, ಎಂ ಆರ್ ಕೋದಂಡರಾಮ್ ಅವರು ಸರ್ಕಾರಕ್ಕೆ 8 ಎಕರೆ 36 ಗುಂಟೆ ಜಮೀನನ್ನು ಬಿಟ್ಟುಕೊಡಲು ಒಪ್ಪಿದ್ದಾರೆ. ಈ 8 ಎಕರೆ 36 ಗುಂಟೆ ಪೈಕಿ ಖರಾಬ್ ಜಮೀನನ್ನು ಹೊರತುಪಡಿಸಿ ನೋಂದಾಯಿತ ಪರಿತ್ಯಾಜನಾ ಪ್ರಮಾಣ ಪತ್ರ ನೀಡುವುದು ಮತ್ತು ಸರ್ವೇ ಪೋಡಿ ಕಾರ್ಯಗತಗೊಳಿಸಬೇಕು. ಮತ್ತು ಶಾಸನಬದ್ಧ ನಿಬಂಧನೆಗಳ ಪಾಲನೆಯ ಷರತ್ತುಗಳಿಗೆ ಒಳಪಟ್ಟು ಅದಲು ಬದಲು ಮಾಡಬಹುದು ಎಂದು 2ನೇ ಆಯ್ಕೆಯ ಕುರಿತು ವಿವರಿಸಿತ್ತು.

 

 

ಮೂರನೇ ಆಯ್ಕೆಯ ಪ್ರಕಾರ ಅರ್ಜಿದಾರರು ಬಿಟ್ಟುಕೊಡುವ ಜಮೀನಿನಲ್ಲಿರುವ ಉಳಿದ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿ ಸಂರಕ್ಷಿಸಲು ಸರ್ವೇ ಮತ್ತು ಮ್ಯುಟೇಷನ್ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕು.  ನಂತರ ಅಸ್ತಿತ್ವದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಕಸಬಾ ಹೋಬಳಿಯ ಅಕ್ಲೇನಹಳ್ಳಿ, ಮಲ್ಲೇನಹಳ್ಳಿ ಗ್ರಾಮದ 6 ಎಕರೆ 18 ಗುಂಟೆ ವಿಸ್ತೀರ್ಣದ ಸರ್ಕಾರಿ ಗ್ರಾಮ ಠಾಣೆ ಭೂಮಿಗೆ ಹೊಸ ಸರ್ವೇ ಸಂಖ್ಯೆ ನಿಗದಿಪಡಿಸಬಹುದು ಎಂದು ವಿವರಿಸಿತ್ತು.

 

 

ಈ ಆಯ್ಕೆಗಳ ಪೈಕಿ ಮೊದಲನೇ ಆಯ್ಕೆಯನ್ನು ಕೈಬಿಟ್ಟಿರುವ ಸಚಿವ ಸಂಪುಟವು ಎರಡು ಮತ್ತು ಮೂರನೇ ಅವಕಾಶವನ್ನು ಆಯ್ಕೆ ಮಾಡಿಕೊಂಡಿದೆ.

 

 

ಈ ಸಂಬಂಧ 2026ರ ಮಾರ್ಚ್‌ 9ರಂದು ಅದಲುಬದಲು ಮಾಡಲು ಆದೇಶವನ್ನು ಹೊರಡಿಸಿದೆ.

Hot this week

ಅದಾನಿ ಎಸಿಸಿ ಲಿಮಿಟೆಡ್‌ನಿಂದ ಅಕ್ರಮ ಗಣಿಗಾರಿಕೆ; ನಿರ್ದೇಶಕರು, ಅಧಿಕಾರಿಗಳ ವಿರುದ್ಧ ಲೋಕಾ ತನಿಖೆಗೆ ಶಿಫಾರಸ್ಸು, ಕಡತಕ್ಕೆ ಧೂಳು

ಬೆಂಗಳೂರು;  ಕಲ್ಬುರ್ಗಿಯ ವಾಡಿಯಲ್ಲಿ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಪ್ರೈವೈಟ್ ಲಿಮಿಟೆಡ್...

1,260 ಕೋಟಿ ಮೊತ್ತದ ಹಗರಣ; 3 ವರ್ಷವಾದರೂ ಕಾಣದ ತಾರ್ಕಿಕ ಅಂತ್ಯ, ತೆವಳಿದ ಲೋಕಾ ತನಿಖೆ

ಬೆಂಗಳೂರು;  1,260 ಕೋಟಿ ರು ಮೊತ್ತದಲ್ಲಿ  108 ಆರೋಗ್ಯ ಕವಚ ಆಂಬ್ಯುಲೆನ್ಸ್‌ಗಳನ್ನು...

ಶೈಕ್ಷಣಿಕ ಸಂಯೋಜಕ ಹುದ್ದೆ; 88.06 ಕೋಟಿ ಹೊರೆ, ಅರ್ಹ 1,500 ಅತಿಥಿ ಉಪನ್ಯಾಸಕರ ಹುದ್ದೆ ಕಿತ್ತುಕೊಂಡಿತೇ?

ಬೆಂಗಳೂರು; ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ದ  ನಿಗದಿತ ವಿದ್ಯಾರ್ಹತೆ ಹೊಂದದ...

ಅರಣ್ಯ ಜಮೀನಿನ ಖಾತೆ ಬದಲಾವಣೆ, ಅಸಮರ್ಪಕ ವರದಿ; ತಡವಾಗಿ ವಿಚಾರಣೆ, ನೋಟೀಸ್ ಜಾರಿ

ಬೆಂಗಳೂರು; ಭಾರತ ಸರ್ಕಾರದ ಅರಣ್ಯ ಸಚಿವಾಲಯದಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಅಂದಾಜು...

ಸಾಮಾಜಿಕ ಭದ್ರತಾ ಯೋಜನೆ; ಖರ್ಚಾಗದ ಪೂರ್ಣ ಅನುದಾನ, 676.16 ಕೋಟಿ ಉಳಿಕೆ

ಬೆಂಗಳೂರು; ವೃದ್ಧಾಪ್ಯ, ಸಂಧ್ಯಾ ಸುರಕ್ಷಾ ಸೇರಿದಂತೆ ಒಟ್ಟಾರೆ 12 ಸಾಮಾಜಿಕ ಭದ್ರತಾ...

Topics

ಅದಾನಿ ಎಸಿಸಿ ಲಿಮಿಟೆಡ್‌ನಿಂದ ಅಕ್ರಮ ಗಣಿಗಾರಿಕೆ; ನಿರ್ದೇಶಕರು, ಅಧಿಕಾರಿಗಳ ವಿರುದ್ಧ ಲೋಕಾ ತನಿಖೆಗೆ ಶಿಫಾರಸ್ಸು, ಕಡತಕ್ಕೆ ಧೂಳು

ಬೆಂಗಳೂರು;  ಕಲ್ಬುರ್ಗಿಯ ವಾಡಿಯಲ್ಲಿ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಪ್ರೈವೈಟ್ ಲಿಮಿಟೆಡ್...

1,260 ಕೋಟಿ ಮೊತ್ತದ ಹಗರಣ; 3 ವರ್ಷವಾದರೂ ಕಾಣದ ತಾರ್ಕಿಕ ಅಂತ್ಯ, ತೆವಳಿದ ಲೋಕಾ ತನಿಖೆ

ಬೆಂಗಳೂರು;  1,260 ಕೋಟಿ ರು ಮೊತ್ತದಲ್ಲಿ  108 ಆರೋಗ್ಯ ಕವಚ ಆಂಬ್ಯುಲೆನ್ಸ್‌ಗಳನ್ನು...

ಶೈಕ್ಷಣಿಕ ಸಂಯೋಜಕ ಹುದ್ದೆ; 88.06 ಕೋಟಿ ಹೊರೆ, ಅರ್ಹ 1,500 ಅತಿಥಿ ಉಪನ್ಯಾಸಕರ ಹುದ್ದೆ ಕಿತ್ತುಕೊಂಡಿತೇ?

ಬೆಂಗಳೂರು; ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ದ  ನಿಗದಿತ ವಿದ್ಯಾರ್ಹತೆ ಹೊಂದದ...

ಅರಣ್ಯ ಜಮೀನಿನ ಖಾತೆ ಬದಲಾವಣೆ, ಅಸಮರ್ಪಕ ವರದಿ; ತಡವಾಗಿ ವಿಚಾರಣೆ, ನೋಟೀಸ್ ಜಾರಿ

ಬೆಂಗಳೂರು; ಭಾರತ ಸರ್ಕಾರದ ಅರಣ್ಯ ಸಚಿವಾಲಯದಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಅಂದಾಜು...

ಸಾಮಾಜಿಕ ಭದ್ರತಾ ಯೋಜನೆ; ಖರ್ಚಾಗದ ಪೂರ್ಣ ಅನುದಾನ, 676.16 ಕೋಟಿ ಉಳಿಕೆ

ಬೆಂಗಳೂರು; ವೃದ್ಧಾಪ್ಯ, ಸಂಧ್ಯಾ ಸುರಕ್ಷಾ ಸೇರಿದಂತೆ ಒಟ್ಟಾರೆ 12 ಸಾಮಾಜಿಕ ಭದ್ರತಾ...

ಎಪಿಎಂಸಿಯಲ್ಲಿ ಅಕ್ರಮ; ನಿಯಮಬಾಹಿರವಾಗಿ 2,132 ಕಮಿಷನ್ ಏಜೆಂಟ್ ಲೈಸೆನ್ಸ್ ಮಂಜೂರು,

ಬೆಂಗಳೂರು; ಕೃಷಿ ಉತ್ಪನ್ನ ಮಾರುಕಟ್ಟೆ  ಸ್ವಂತ ಪ್ರಾಂಗಣ ಹೊಂದದೇ ಇದ್ದರೂ ಸಹ...

ರಾಜ್ಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಬೇಕು 10,000 ಕೋಟಿ ಹೆಚ್ಚುವರಿ ಅನುದಾನ; ಸಚಿವ ಸಂಪುಟಕ್ಕೆ ಪ್ರಸ್ತಾವ

ಬೆಂಗಳೂರು; ರಾಜ್ಯ ಶಿಕ್ಷಣ ನೀತಿ ಆಯೋಗವು ಮಾಡಿರುವ  ಒಟ್ಟು 72 ಪ್ರಮುಖ...

ಸರ್ಕಾರಿ ಜಮೀನು ಭೂಗಳ್ಳರ ಪಾಲು; ಪಿ ನಂಬರ್ ದುರಸ್ತಿ ಹೆಸರಿನಲ್ಲಿ ಅಕ್ರಮ, ತಹಶೀಲ್ದಾರ್‍‌ಗಳೇ ಭಾಗಿ, ಕ್ರಮವೇ ಇಲ್ಲ

ಬೆಂಗಳೂರು;  ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಲಕ್ಕೂರು ಹೋಬಳಿ ಸಂಪಂಗೆರೆ ಗ್ರಾಮದಲ್ಲಿನ...

Related Articles

Popular Categories

error: Content is protected !!