Thursday | March 26, 2026 |

ಅನುಭವವಿಲ್ಲದ ಕಂಪನಿಗೆ 65 ಲಕ್ಷ ರು. ಮೊತ್ತದ ಯೋಜನೆ; ಐಎಂಎಸ್‌ ಟೆಂಡರ್‍‌ನಲ್ಲಿ ಅಕ್ರಮ?

Support THE-FILE

spot_img

ಬೆಂಗಳೂರು; ಡಾ ಬಾಬು ಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮವು ವಾಣಿಜ್ಯ ಅಭಿವೃದ್ಧಿ ತಾಂತ್ರಿಕ ಮತ್ತು ಹಣಕಾಸು ಚಟುವಟಿಕೆಗಳ ನಿರ್ವಹಣೆಗೆ ಐಎಂಎಸ್‌ ಸಾಫ್ಟ್‌ವೇರ್‍‌ ಅಭಿವೃದ್ಧಿ ಪಡಿಸುವ ಅನುಭವ ಹೊಂದಿರದೇ ಕಂಪನಿಗೆ ಕರಾರು ಒಪ್ಪಂದ ಮಾಡಿಕೊಂಡಿರುವುದು ಇದೀಗ ಬಹಿರಂಗವಾಗಿದೆ.

ವಿಶೇಷವೆಂದರೇ ಐಎಎಂಎಸ್‌ (INFORMATION MANAGEMENT SYSTEM) ಸಾಫ್ಟ್‌ವೇರ್‍‌ ಅಭಿವೃದ್ಧಿಪಡಿಸುವಲ್ಲಿ ಯಾವುದೇ ಅನುಭವ ಹೊಂದಿಲ್ಲ ಎಂದು ಹೇಳಲಾಗಿರುವ ಕಂಪನಿಯನ್ನೇ ಟೆಂಡರ್‍‌ನಲ್ಲಿ ಎಲ್‌ 1 ಆಗಿ ಆಯ್ಕೆ ಮಾಡಲಾಗಿತ್ತು. ಅಲ್ಲದೆ ಟೆಂಡರ್‍‌ದಾರರು ನಿಗದಿಪಡಿಸಿದ್ದ ಮೊತ್ತವೂ ಸಮರ್ಪಕವಾಗಿರಲಿಲ್ಲ. ಆದರೂ ಇಲಾಖೆಯು ಅದೇ ಕಂಪನಿಯೊಂದಿಗೇ ಕರಾರು ಒಪ್ಪಂದವನ್ನು ಮಾಡಿಕೊಂಡಿತ್ತು. ಇಲಾಖೆಯ ಈ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ದಾಖಲೆಗಳು (BJLIDC/ADMN/ADOT/49/2024-MD)  ಲಭ್ಯವಾಗಿವೆ.

ಲಿಡ್ಕರ್‍‌ನ ಪ್ರಧಾನ ಕಚೇರಿ, ಕೇಂದ್ರ ಉಗ್ರಾಣ, ಮಾರಾಟ ಮಳಿಗೆಗಳು, ವಾಣಿಜ್ಯ ವಿಭಾಗದ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಮಗ್ರವಾದ ಬಿಲ್ಲಿಂಗ್‌ ಮತ್ತು ಇನ್‌ವಂಟ್ರಿ ನಿರ್ವಹಣೆ ತಂತ್ರಾಂಶ ಅಳವಡಿಸಲು ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ 2024ರ ಜನವರಿ 31ರಂದು ನಡೆದಿದ್ದ ಸಭೆಯು ತೀರ್ಮಾನಿಸಿತ್ತು. ಸಭೆಯ ತೀರ್ಮಾನದಂತೆ ಟೆಂಡರ್‍‌ ಆಹ್ವಾನಿಸಲಾಗಿತ್ತು.

ಈ ಟೆಂಡರ್‍‌ನಲ್ಲಿ ಭಾಗವಹಿಸಿದ್ದ ಕಂಪನಿಗಳ ಪೈಕಿ ಸನ್‌ ಪ್ಲಸ್‌ ಸಾಫ್ಟ್‌ವೇರ್‍‌ ಟೆಕ್ನಾಲಜೀಸ್‌ ಪ್ರೈ ಜಿಎಸ್‌ಟಿ ಒಳಗೊಂಡಂತೆ ನಮೂದಿಸಿದ್ದ ದರದೊಂದಿಗೆ ಸಂಧಾನ ನಡೆಸಿದ ನಂತರ 65.00 ಲಕ್ಷ ರು.ಗೆ ಒಪ್ಪಿತ್ತು. ಭಾಗವಹಿಸಿದ್ದ ಇತರೆ ಕಂಪನಿಗಳಿಗೆ ಹೋಲಿಸಿದರೆ ಸನ್‌ ಪ್ಲಸ್‌ ಸಾಫ್ಟ್‌ವೇರ್‍‌ ಟೆಕ್ನಾಲಜೀಸ್‌ ಪ್ರೈ ಲಿಮಿಟೆಡ್‌ ಕಡಿಮೆ ದರ ನಮೂದಿಸಿದ್ದ ಕಾರಣ ಟೆಂಡರ್‍‌ನಲ್ಲಿ ಎಲ್‌ 1 ಆಗಿ ಹೊರಹೊಮ್ಮಿತ್ತು.

ಈ ಕಂಪನಿಗೆ 2024ರ ಮಾರ್ಚ್‌ 15ರಂದು ಕಾರ್ಯಾದೇಶವನ್ನೂ ನೀಡಲಾಗಿತ್ತು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.

ಕಾರ್ಯಾದೇಶ ಪಡೆದುಕೊಂಡಿದ್ದ ಈ ಕಂಪನಿಯೊಂದಿಗೆ ಲಿಡ್ಕರ್‍‌ ಒಡಂಬಡಿಕೆಯನ್ನೂ ಮಾಡಿಕೊಂಡಿತ್ತು. ಈ ಕಂಪನಿಗೆ Design, Development, Deployment and Maintenance Of Information Management System (IMS) ಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಕ್ಷೇತ್ರದಲ್ಲಿಯೂ ಸನ್‌ ಪ್ಲಸ್‌ ಸಾಫ್ಟ್‌ವೇರ್‍‌ ಟೆಕ್ನಾಲಜೀಸ್‌ ಪ್ರೈ ಲಿ ಗೆ ಯಾವುದೇ ಅನುಭವ ಹೊಂದಿರಲಿಲ್ಲ ಎಂಬುದು ಗೊತ್ತಾಗಿದೆ.

‘ಐಎಂಎಸ್‌ ಸಾಫ್ಟ್‌ವೇರ್‍‌ ಅಭಿವೃದ್ಧಿಪಡಿಸಲು ಎಲ್‌ 1 ಆಗಿ ಆಯ್ಕೆಯಾದ ಸಂಸ್ಥೆಯು ಸಪ್ಲೈ ಚೈನ್‌ ಮ್ಯಾನೇಜ್‌ಮೆಂಟ್‌ (SCM) ಅಭಿವೃದ್ಧಿಪಡಿಸುವಲ್ಲಿ ಯಾವುದೇ ಅನುಭವ ಹೊಂದಿರುವುದಿಲ್ಲ. ಅಲ್ಲದೇ ಎಸ್‌ಸಿಎಂ ಗೆ ಟೆಂಡರ್‍‌ನಲ್ಲಿ ಟೆಂಡರ್‍‌ದಾರರು ಮತ್ತು ಎಲ್‌-1 ಆಗಿ ಹೊರಹೊಮ್ಮಿದ ಟೆಂಡರ್‍‌ದಾರರು ನಿಗದಿಪಡಿಸಿದ ಮೊತ್ತವೂ ಸಮರ್ಪಕವಾಗಿರುವುದಿಲ್ಲ,’ ಎಂದು ಇಲಾಖೆಯ ಐಟಿ ಸಲಹೆಗಾರರು ಅಭಿಪ್ರಾಯ ನೀಡಿದ್ದರು ಎಂಬುದು ತಿಳಿದು ಬಂದಿದೆ.

ಇ-ಕಾಮರ್ಸ್‌ನಲ್ಲಿ ವಾಣಿಜ್ಯ ಚಟುವಟಿಕೆ ನಡೆಯಲು ಈ ತಂತ್ರಾಂಶವು ನಿರ್ಣಾಯವಾಗಿದೆ. ಆದರೂ ಈ ವಿಚಾರದಲ್ಲಿ ತುಂಬಾ ವಿಳಂಬವಾಗಿತ್ತು. ಇದೊಂದು ಗಂಭೀರವಾದ ವಿಷಯವಾಗಿದ್ದರೂ ಸಹ ಇಲಾಖೆಯ ಉನ್ನತ ಅಧಿಕಾರಿಗಳು, ಅನುಭವವನ್ನೇ ಹೊಂದಿರದ ಕಂಪನಿಗೆ ಆದೇಶ ನೀಡಿದಲ್ಲದೇ ಕರಾರು ಒಡಂಬಡಿಕೆ ಮಾಡಿಕೊಂಡಿದ್ದರು. ಇದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

ಈ ಎಲ್ಲಾ ಬೆಳವಣಿಗಳ ಕುರಿತು ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್‍‌ ಮಣಿವಣ್ಣನ್‌ ಅವರೂ ಸಹ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು ಎಂದು ಗೊತ್ತಾಗಿದೆ.

ಚರ್ಮೋತ್ಪನ್ನಗಳ ವಹಿವಾಟು ನಿರ್ವಹಣೆ, ಬಳಕೆದಾರರ, ಗ್ರಾಹಕ ಸ್ನೇಹಿ ಮತ್ತು ವಹಿವಾಟಿನಲ್ಲಿ ಹೆಚ್ಚು ಪಾರದರ್ಶಕ ಹಾಗೂ ದಕ್ಷತೆ ಸಾಧಿಸಲು ನಿಗಮವು ಹೊಂದಿತ್ತು. ಪ್ರಧಾನ ಕಚೇರಿ, ಆಡಳಿತ ವಿಭಾಗ, ವಾಣಿಜ್ಯ ವಿಭಾಗ, ಲೆಕ್ಕಪತ್ರ ವಿಭಾಗ, ಕೇಂದ್ರ ಉಗ್ರಾಣ, ಮಾರಾಟ ಮಳಿಗೆಗಳ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಮಗ್ರವಾದ ಬಿಲ್ಲಿಂಗ್‌ ಮತ್ತು ಇನ್‌ವೆಂಟ್ರಿ ನಿರ್ವಹಣೆ ತಂತ್ರಾಂಶಕ್ಕೆ ಮೊರೆ ಹೋಗಿದ್ದನ್ನು ಸ್ಮರಿಸಬಹುದು.

Hot this week

ನರೇಗಾ ವಸತಿ ಕಾಮಗಾರಿಗಳಲ್ಲಿ ಮೋಸದ ಪಾವತಿ; ಚೆಕ್ ಡ್ಯಾಂ ಕಾಮಗಾರಿಯೇ ಇಲ್ಲ, ಆದರೂ ಹಣ ಪಾವತಿ

ಬೆಂಗಳೂರು; 847 ಸಂಖ್ಯೆ ವಸತಿ  ಕಾಮಗಾರಿಗಳಲ್ಲಿ  ಮೋಸದ ಪಾವತಿಗಳಾಗಿರುವುದನ್ನು ಭಾರತದ ಲೆಕ್ಕ...

42,750 ಕೋಟಿ ದೀರ್ಘಾವಧಿ ಸಾಲ, 4,516 ಕೋಟಿ ಆದಾಯ ಕೊರತೆ; ಎಸ್ಕಾಂಗಳ ಆರ್ಥಿಕ ಸ್ಥಿತಿ ಅನಾವರಣ

ಬೆಂಗಳೂರು; ವಿದ್ಯುತ್ ಸರಬರಾಜು ಕಂಪನಿಗಳು ಇದುವರೆಗೆ ಒಟ್ಟಾರೆ 42,750 ಕೋಟಿಗಳಷ್ಟು ದೀರ್ಘಾವಧಿ...

ಹಿಂದುಳಿದ ವರ್ಗ ವಸತಿ ಶಾಲೆ ಕಟ್ಟಡಗಳು ಶಿಥಿಲ; ಕಟ್ಟಡಗಳ ದುರಸ್ತಿಗೂ ಅನುದಾನವಿಲ್ಲ, ‘ಕೈ’ ಎತ್ತಿದ ಸರ್ಕಾರ

ಬೆಂಗಳೂರು;  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ಶಾಲೆಗಳು ಶಿಥಿಲಗೊಂಡಿದ್ದರೂ...

ನರೇಗಾ ಕಾಮಗಾರಿಗಳ ಆರಂಭದ ದಿನಾಂಕವೂ ಇಲ್ಲ, ದತ್ತಾಂಶವೂ ಇಲ್ಲ; 1,007.83 ಕೋಟಿ ರು. ವೆಚ್ಚದ ಕಾಮಗಾರಿಗಳು ಅಪೂರ್ಣ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿಗಳ ಪೈಕಿ ಒಂದು ವ‍ರ್ಷಕ್ಕಿಂತಲೂ ಹೆಚ್ಚು...

ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳ ಕುಟುಂಬ ಸದಸ್ಯರ ಉದ್ಯಮ, ಹಣಕಾಸಿನ ವ್ಯವಹಾರ; ಸದನಕ್ಕೆ ಒದಗಿಸಬಹುದೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಖಿಲ ಭಾರತ...

Topics

ನರೇಗಾ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಿಯಮ ಉಲ್ಲಂಘನೆ; 86.67 ಕೋಟಿ ರು ಅಕ್ರಮ ಪತ್ತೆ ಹಚ್ಚಿದ ಸಿಎಜಿ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಮಾನವ ಸಂಪನ್ಮೂಲ ಬಳಕೆಗಾಗಿ ಮಾಡಿಕೊಂಡಿದ್ದ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಡೆದಿದ್ದ...

ಮೋಸದ ವಹಿವಾಟು, ಹೆಚ್ಚಿನ ಪಾವತಿ, ಅಕ್ರಮ ವೆಚ್ಚ; ನರೇಗಾದ ಮತ್ತೊಂದು ಮುಖ ಬಯಲು ಮಾಡಿದ ಸಿಎಜಿ

ಬೆಂಗಳೂರು; ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡಿದ್ದ ಕಾಮಗಾರಿಗಳು...

ಗೃಹಜ್ಯೋತಿ; 23,823.06 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ, ಎಸ್ಕಾಂಗಳಿಗೆ 631.75 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

  ಬೆಂಗಳೂರು; ಗೃಹ ಜ್ಯೋತಿ ಯೋಜನೆ ಅನುಷ್ಠಾನಗೊಳಿಸಿರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸರ್ಕಾರವು...

Related Articles

Popular Categories

error: Content is protected !!