ಗ್ಯಾರಂಟಿ ಸಮಾವೇಶ; ಆರಂಭಿಕ ವರ್ಷದಲ್ಲೇ 35 ಕೋಟಿ ಬಿಡುಗಡೆ, 30 ಕೋಟಿ ಖರ್ಚು, ದುಂದುವೆಚ್ಚವಲ್ಲವೇ?

ಬೆಂಗಳೂರು; ಗೃಹಲಕ್ಷ್ಮಿ, ಶಕ್ತಿ, ಯುವನಿಧಿ, ಅನ್ನಭಾಗ್ಯ, ಗೃಹ ಜ್ಯೋತಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕಾಗಿ 2023-24ರಲ್ಲಿ ರಾಜ್ಯ ಸರ್ಕಾರವು ಬರೋಬ್ಬರಿ 30.92 ಕೋಟಿ ರುಪಾಯಿ  ಒಟ್ಟು ಖರ್ಚು ಮಾಡಿದೆ.

 

ಗ್ಯಾರಂಟಿ ಯೋಜನೆಗಳ ಅನುಷ್ಠಾನಗೊಳಿಸಿದರೆ ಆರ್ಥಿಕ ಪರಿಣಾಮಗಳಾಗಲಿವೆ, ನಿರಂತರ ಸಾಲದ ಸುಳಿಗೆ ಸಿಲುಕಲಿದೆ ಮತ್ತು ಇತರೆ ಬಂಡವಾಳ ವೆಚ್ಚ ಹಾಗೂ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸಿನ ಮುಗ್ಗಟ್ಟು ಉಂಟಾಗಲಿದೆ ಎಂದು ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಬದಿಗೊತ್ತಿ ಈ ಯೋಜನೆಗಳನ್ನು ಜಾರಿಗೊಳಿಸಿತ್ತು.

 

ಅಲ್ಲದೇ ಯೋಜನೆಗಳು ಅನುಷ್ಠಾನಗೊಂಡು ವರ್ಷ ಕಳೆಯುವರಷ್ಟರಲ್ಲಿ ಗ್ಯಾರಂಟಿ ಸಮಾವೇಶಗಳನ್ನೂ ಹಮ್ಮಿಕೊಂಡಿತ್ತು. ಈ ಸಮಾವೇಶಕ್ಕೆ 2023-24ರಲ್ಲೇ   ಒಟ್ಟಾರೆ 30.92 ಕೋಟಿ ರು ಖರ್ಚು ಮಾಡಿರುವ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.

 

ಸರ್ಕಾರಿ ಶಾಲೆ ಶೌಚಾಲಯಗಳ ದುರಸ್ತಿ, ನಿರ್ವಹಣೆಗೆ ಸೂಕ್ತ ಅನುದಾನ ಒದಗಿಸದ ಸರ್ಕಾರವು ಗ್ಯಾರಂಟಿ ಸಮಾವೇಶಗಳ ಹೆಸರಿನಲ್ಲಿ ಹತ್ತಾರು ಕೋಟಿ ರುಪಾಯಿಗಳನ್ನು ಖರ್ಚು ಮಾಡುತ್ತಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

 

ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾವಾರು ಬಿಡುಗಡೆ ಮಾಡಿದ ಅಂಕಿ ಅಂಶಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ರಾಜ್ಯದ ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಗಳಲ್ಲಿದ್ದ ಹಣಕ್ಕೂ ಸರ್ಕಾರವು ಕೈ ಹಾಕಿತ್ತು. ಅಲ್ಲದೆ 2023ರ ಆರ್ಥಿಕ ವರ್ಷ ಮುಕ್ತಾಯಗೊಂಡಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು 64,48, 55, 913 ರು.ಗಳ ಅನುದಾನವನ್ನು ಕೋರಿದ್ದರು. ಈ ಅನುದಾನದ ಪೈಕಿ 36 ಕೋಟಿ 95 ಲಕ್ಷ 43 ಸಾವಿರ 982 ರು.ಗಳನ್ನು ಗ್ಯಾರಂಟಿ ಸಮಾವೇಶ ನಡೆಸಲು ಅನುದಾನ ಬಿಡುಗಡೆ ಮಾಡಿತ್ತು.

 

ಗ್ಯಾರಂಟಿ ಸಮಾವೇಶಗಳಿಗಾಗಿ ಬಿಡುಗಡೆ ಮಾಡಿದ್ದ ಅನುದಾನವನ್ನು 23 ಜಿಲ್ಲೆಗಳಲ್ಲಿ ಖರ್ಚು ಮಾಡಲಾಗಿತ್ತು. ಕೆಲವು ಜಿಲ್ಲೆಗಳಲ್ಲಿ ಅನುದಾನವನ್ನು ಬಳಕೆ ಮಾಡದ ಕಾರಣ ಲ್ಯಾಪ್ಸ್‌ ಆಗಿತ್ತು. ಇದರ ಮೊತ್ತ 6 ಕೋಟಿ 1 ಲಕ್ಷ 55 ಸಾವಿರ 727 ರು ಗಳಷ್ಟಿತ್ತು. ಅಲ್ಲದೇ 33 ಕೋಟಿ 67 ಲಕ್ಷ 57 ಸಾವಿರ 841 ರು ಅನುದಾನ ಕೊರತೆ ಇದೆ ಎಂದು ಜಿಲ್ಲಾಧಿಕಾರಿಗಳು ಹೆಚ್ಚುವರಿ ಮನವಿ ಮತ್ತು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು ಎಂದು ಕೋರಿದ್ದರು.

 

ಜಿಲ್ಲಾಧಿಕಾರಿಗಳ ಕೋರಿಕೆಯಂತೆ ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶಗಳ ಆಯೋಜನೆಗಾಗಿ 33 ಕೋಟಿ 67 ಲಕ್ಷ 57 ಸಾವಿರ 841 ರು.ಗಳ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಕೋರಿತ್ತು. ಈ ಪೈಕಿ 36 ಕೋಟಿ 95 ಲಕ್ಷ 43 ಸಾವಿರ 982 ರು.ಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ 30 ಕೋಟಿ 92 ಲಕ್ಷ 98 ಸಾವಿರ 072 ರು.ಗಳನ್ನು ಖರ್ಚು ಮಾಡಿತ್ತು. ಇದಾದ ಮೇಲೂ ಜಿಲ್ಲಾಧಿಕಾರಿಗಳು ಇನ್ನೂ 33 ಕೋಟಿ 67 ಲಕ್ಷ 57 ಸಾವಿರ 841 ರು.ಗಳನ್ನು ಕೋರಿತ್ತು.

 

ಶಿವಮೊಗ್ಗ ಜಿಲ್ಲಾಧಿಕಾರಿಗಳು 3,64,41,642 ರು ಅನುದಾನ ಕೋರಿದ್ದರು. ಈ ಪೈಕಿ 2,53,11,153 ರು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 2,39,14,548 ರು ಖರ್ಚಾಗಿತ್ತು. 13,96,605 ರು ಲ್ಯಾಪ್ಸ್‌ ಆಗಿತ್ತು. ಆದರೂ ಹೆಚ್ಚುವರಿಯಾಗಿ 1,25,27,094 ರು ಬೇಕು ಎಂದು ಪ್ರಸ್ತಾವ ಸಲ್ಲಿಸಿದ್ದರು. ಮಂಡ್ಯ ಜಿಲ್ಲಾಧಿಕಾರಿಗಳು 5,00,00,000 ರು ಕೋರಿದ್ದರು. ಇದರಲ್ಲಿ 2,53,11,153 ರು ಬಿಡುಗಡೆ ಮಾಡಲಾಗಿತ್ತು. 2,53,11,153 ರು ಖರ್ಚು ಮಾಡಿದ್ದರು. ಹೆಚ್ಚುವರಿಯಾಗಿ 2,46,88,847 ರು ಗಳಿಗೆ ಪ್ರಸ್ತಾವ ಸಲ್ಲಿಸಿದ್ದರು.

 

ಕೋಲಾರ ಜಿಲ್ಲಾಧಿಕಾರಿಗಳು 3,24,00,000 ರು ಕೋರಿದ್ದರು. ಈ ಪೈಕಿ 2,53,11,153 ರು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 2,53,11,153 ರು.ಗಳನ್ನು ವೆಚ್ಚ ಮಾಡಲಾಗಿತ್ತು. ಇನ್ನೂ 70,88,847 ರು ಒದಗಿಸಿ ಎಂದು ಹೆಚ್ಚುವರಿ ಪ್ರಸ್ತಾವ ಸಲ್ಲಿಸಿದ್ದರು. ಕಲಬುರಗಿ ಜಿಲ್ಲಾಧಿಕಾರಿಗಳು 12,50, 00,000 ಕೋರಿದ್ದರು. ಈ ಪೈಕಿ 2,53,11,153 ರು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆ ಮಾಡಿದ್ದ 2,53,11,15 ರು ಖರ್ಚಾಗಿತ್ತು. ಆದರೂ 9,96,88,847 ರು ಅನುದಾನ ಕೋರಿ ಪ್ರಸ್ತಾವ ಸಲ್ಲಿಸಿದ್ದರು. ಹಾಸನ ಜಿಲ್ಲಾಧಿಕಾರಿ 3,06,00,000 ಕೋಟಿ ರು ಬಿಡುಗಡೆಗೆ ಕೋರಿದ್ದರು. ಈ ಪೈಕಿ 2,53,11,153 ರು ಬಿಡುಗಡೆ ಆಗಿತ್ತು. ಖರ್ಚಿನ ಬಾಬತ್ತಿನಲ್ಲಿ ಶೂನ್ಯ ಎಂದು ತೋರಿಸಲಾಗಿದೆ. ಆದರೆ 3,06,00,000 ರು ಹೆಚ್ಚುವರಿ ಅನುದಾನ ಕೋರಿದ್ದರು. ಆದರೂ ಈ ಅನುದಾನವನ್ನು ಡ್ರಾ ಮಾಡಿರಲಿಲ್ಲ.

 

ಧಾರವಾಡ ಜಿಲ್ಲಾಧಿಕಾರಿಯು 4,90,60,665 ರು ಕೋರಿದ್ದರು. ಈ ಪೈಕಿ 2,53,11,153 ರು ಬಿಡುಗಡೆ ಅಗಿತ್ತು ಬಿಡುಗಡೆಯಾಗಿದ್ದ ಅನುದಾನ ಪೈಕಿ 2,53,09,885 ರು ಖರ್ಚಾಗಿತ್ತು. 1,268 ರು ಲ್ಯಾಪ್ಸ್‌ ಆಗಿತ್ತು. ಇದಾದ ನಂತರವೂ 2,37,50,780 ರು ಹೆಚ್ಚುವರಿಯಾಗಿ ಕೋರಿದ್ದರು.

 

ಬೀದರ್ ಜಿಲ್ಲಾಧಿಕಾರಿಯು 5,41,55,000 ರು ಕೋರಿದ್ದರು. ಈ ಪೈಕಿ 2,53,11,153 ರು ಬಿಡುಗಡೆ ಆಗಿತ್ತು. ಬಿಡುಗಡೆ ಆಗಿದ್ದ 2,53,11,153 ರು.ಗಳನ್ನು ಖರ್ಚು ಮಾಡಿದ್ದರು. ಆದರೂ ಹೆಚ್ಚುವರಿಯಾಗಿ 2,88,43,847 ಕೋರಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯು 4,25,00,000 ರು ಕೋರಿದ್ದರು. 2,53,11,153 ರು ಬಿಡುಗಡೆಯಾಗಿತ್ತು. 1,40,00,001 ರು ಖರ್ಚಾಗಿತ್ತು. 1,13,11,152 ರು ಲ್ಯಾಪ್ಸ್‌ ಅಗಿತ್ತು. ಆದರೂ 2,84,99,999 ರು ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ವಿಜಯಪುರ ಜಿಲ್ಲಾಧಿಕಾರಿಯು 80,00,000 ರು ಕೋರಿದ್ದರು. ಕೋರಿಕೆಯಂತೆ 80,00,000 ರು ಬಿಡುಗಡೆಯಾಗಿತ್ತು. ಇದರಲ್ಲಿಯೂ 18,30,00 ಖರ್ಚಾಗಿತ್ತು. 61,70,000 ರು ಲ್ಯಾಪ್ಸ್‌ ಆಗಿತ್ತು. ಹೀಗಾಗಿ 61,70,000 ರು.ಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಬೇಕು ಎಂದು ಪ್ರಸ್ತಾವ ಸಲ್ಲಿಸಿದ್ದರು.

 

ವಿಜಯನಗರ ಜಿಲ್ಲಾಧಿಕಾರಿಯು 9,35,000 ರು ಕೋರಿದ್ದರು. 9,35,000 ಬಿಡುಗಡೆ ಮಾಡಲಾಗಿತ್ತಾದರೂ 2,74,550 ರು ಖರ್ಚು ಮಾಡಿದ್ದರು. ಹೀಗಾಗಿ 6,60,450 ರು ಲ್ಯಾಪ್ಸ್‌ ಆಗಿತ್ತು. ಹೀಗಾಗಿ 6,60,450 ರು ಬಿಡುಗಡೆ ಮಾಡಬೇಕು ಎಂದು ಕೋರಿದ್ದರು.

 

 

ಉತ್ತರ ಕನ್ನಡ (ಕಾರವಾರ) ಜಿಲ್ಲಾಧಿಕಾರಿಯು 1,35,00,000 ರು ಕೋರಿದ್ದರು. 1,35,00,000 ರು ಬಿಡುಗಡೆಯಾಗಿತ್ತು. ಇದರಲ್ಲಿ 99,96,382 ರು ಖರ್ಚಾಗಿತ್ತು. 35,03,618 ಲ್ಯಾಪ್ಸ್‌ ಆಗಿತ್ತು. ಹೀಗಾಗಿ 35,03,618 ರುಗಳನ್ನು ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿಯು ಪ್ರಸ್ತಾವ ಸಲ್ಲಿಸಿದ್ದರು.

 

ರಾಮನಗರ ಜಿಲ್ಲಾಧಿಕಾರಿ 68,92,065 ರು ಗೆ ಕೋರಿದ್ದರು. 68,92,065 ರು ಬಿಡುಗಡೆಯಾಗಿತ್ತು. ಬಿಡುಗಡೆ ಆಗಿದ್ದ 68,92,-065 ರು ಅನುದಾನವನ್ನು ಸೆಳೆದಿರಲಿಲ್ಲ. ಮೈಸೂರು ಜಿಲ್ಲಾಧಿಕಾರಿಯು 2,40,65,037 ರು ಕೋರಿದ್ದರು. 2,40,65,037 ರು ಬಿಡುಗಡೆಯಾಗಿತ್ತು. ಈ ಪೈಕಿ 2,40,10,776 ರು ಖರ್ಚಾಗಿತ್ತು. 54,261 ರು ಲ್ಯಾಪ್ಸ್‌ ಆಗಿತ್ತು. ಹೀಗಾಗಿ 54,261 ರು ಮಂಜೂರು ಮಾಡಬೇಕು ಎಂದು ಕೋರಿದ್ದರು. ಗದಗ ಜಿಲ್ಲಾಧಿಕಾರಿಯು 1,29,90,000 ರು ಅನುದಾನ ಕೋರಿದ್ದರು. 1,29,90,000 ರು ಬಿಡುಗಡೆ ಆಗಿತ್ತು. ಇಷ್ಟೂ ಅನುದಾನವನ್ನು ಖರ್ಚು ಮಾಡಲಾಗಿತ್ತು.

 

ಚಾಮರಾಜನಗರ ಜಿಲ್ಲಾಧಿಕಾರಿಯು 84,01,829 ರು ಅನುದಾನ ಕೋರಿದ್ದರು. 84,01,829 ರು ಬಿಡುಗಡೆಯಾಗಿತ್ತು. ಬಿಡುಗಡೆಯಾಗಿದ್ದ -84,01,829 ರು ಖರ್ಚು ಮಾಡಿದ್ದರು. ಆದರೂ ಹೆಚ್ಚುವರಿಯಾಗಿ 12,00,000 ರು ಕೋರಿದ್ದರು.

 

ಬಳ್ಳಾರಿ ಜಿಲ್ಲಾಧಿಕಾರಿಯು 49,24,855 ರು ಅನುದಾನ ಕೋರಿದ್ದರು. ಈ ಪೈಕಿ 48,55,155 ರು ಬಿಡುಗಡೆ ಮಾಡಲಾಗಿತ್ತು. ಆದರೆ ಈ ಅನುದಾನವನ್ನು ಡ್ರಾ ಮಾಡಿರಲಿಲ್ಲ. ಹೀಗಾಗಿ ಲ್ಯಾಪ್ಸ್‌ ಆಗಿತ್ತು. ಇದೇ ಅನುದಾವನ್ನು ಹೆಚ್ಚುವರಿಯಾಗಿ ಮಂಜೂರು ಮಾಡಲು ಕೋರಿದ್ದರು. ಉಡುಪಿ ಜಿಲ್ಲಾಧಿಕಾರಿಯು 95,31,500 ರು ಅನುದಾನ ಕೋರಿದ್ದರು. 95,31,500 ರು ಬಿಡುಗಡೆಯಾಗಿತ್ತು. 94,50,282 ರು ಖರ್ಚಾಗಿತ್ತು. ಆದರೂ 81,218 ರು.ಗಳನ್ನು ಹೆಚ್ಚುವರಿಯಾಗಿ ಕೋರಿದ್ದರು. ಹಾವೇರಿ ಜಿಲ್ಲಾಧಿಕಾರಿಯು 71,08,920 ರು ಕೋರಿದ್ದರು. 71,08,920 ರು ಬಿಡುಗಡೆಯಾಗಿತ್ತು. ಬಿಡುಗಡೆಯಾಗಿದ್ದ ಈ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡಿದ್ದರು.

 

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯು 1,77,50,252 ರು ಕೋರಿದ್ದರು. ಈ ಪೈಕಿ 1,77,50,252 ರು ಬಿಡುಗಡೆ ಆಗಿತ್ತು. ಇದರಲ್ಲಿ 1,77,50,252 ರು ಖರ್ಚಾಗಿತ್ತು. ಚಿತ್ರದುರ್ಗ ಜಿಲ್ಲಾಧಿಕಾರಿಯು 94,00,000 ರು ಅನುದಾನ ಕೋರಿದ್ದರು. 94,00,000 ರು ಬಿಡುಗಡೆ ಆಗಿತ್ತು. ಈ ಪೈಕಿ 93,98,192 ರು ಖರ್ಚಾಗಿತ್ತು. ಹೆಚ್ಚುವರಿಯಾಗಿ 1,808 ರು ಕೋರಿದ್ದರು.

 

 

ಚಿಕ್ಕಮಗಳೂರು ಜಿಲ್ಲಾಧಿಕಾರಿಯು 1,37,25,000 ರು ಕೋರಿದ್ದರು. 1,37,25,000 ರು ಬಿಡುಗಡೆಯಾಗಿತ್ತು. ಈ ಪೈಕಿ 1,37,17,843 ರು ಖರ್ಚಾಗಿತ್ತು. 7,157 ರು ಹೆಚ್ಚುವರಿಯಾಗಿ ಬಿಡುಗಡೆ ಮಾಡಲು ಕೋರಿದ್ದರು.

 

ತುಮಕೂರು ಜಿಲ್ಲಾಧಿಕಾರಿಯು 2,00,00,000 ರು ಕೋರಿದ್ದರು. ಕೋರಿಕೆಯಂತೆ 2,00,000,000 ರು.ಗಳನ್ನು ಬಿಡುಗಡೆ ಮಾಡಿತ್ತು. ಇಷ್ಟೂ ಅನುದಾನವನ್ನೂ ಖರ್ಚು ಮಾಡಲಾಗಿತ್ತು. ದಾವಣಗೆರೆ ಜಿಲ್ಲಾಧಿಕಾರಿಯು 99,00,000 ರು ಕೋರಿದ್ದರು. ಇಷ್ಟೂ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತಲ್ಲದೇ ಈ ಹಣವೂ ಸಂಪೂರ್ಣವಾಗಿ ಖರ್ಚು ಮಾಡಲಾಗಿತ್ತು. ಕೊಪ್ಪಳ ಜಿಲ್ಲಾಧಿಕಾರಿಯು 75,74,148 ರು ಕೋರಿದ್ದರು. ಆದರೆ ಅನುದಾನವನ್ನು ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ 75,74,148 ರು ಒದಗಿಸಬೇಕು ಎಂದು ಎಂದು ಹೊಸ ಪ್ರಸ್ತಾವನೆ ಸಲ್ಲಿಸಿದ್ದರು.

 

 

ಅದೇ ರೀತಿ ರಾಯಚೂರು ಜಿಲ್ಲಾಧಿಕಾರಿಯು 3,00,00,000, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ 2,00,00,000 ಅನುದಾನ ಕೋರಿದ್ದರು. ಆದರೆ ಈ ಅನುದಾನವು ಬಿಡುಗಡೆಯಾಗಿರಲಿಲ್ಲ. ಹೀಗಾಗಿ ಈ ಇಬ್ಬರೂ ಜಿಲ್ಲಾಧಿಕಾರಿಗಳು ಕ್ರಮವಾಗಿ 3 ಕೋಟಿ ಮತ್ತು 2 ಕೋಟಿ ರು.ಗಳನ್ನು ಬಿಡುಗಡೆ ಮಾಡಬೇಕು ಎಂದು ಹೊಸ ಪ್ರಸ್ತಾವ ಸಲ್ಲಿಸಿದ್ದರು.
ಒಟ್ಟಾರೆಯಾಗಿ ಈ 26 ಜಿಲ್ಲಾಧಿಕಾರಿಗಳು 64,48,55,913 ರು ಕೋರಿದ್ದರು. ಈ ಪೈಕಿ 35,95,43,982 ರು ಬಿಡುಗಡೆಯಾಗಿತ್ತು. ಬಿಡುಗಡೆಯಾಗಿದ್ದ ಈ ಅನುದಾನದಲ್ಲಿ 30,92,98,072 ರು ಖರ್ಚಾಗಿತ್ತು. ಉಳಿದ 6,01,55,727 ರು ಲ್ಯಾಪ್ಸ್‌ ಅಗಿತ್ತು. ಹೀಗಾಗಿ ಇನ್ನೂ 33,67,57,841 ರು ಬಿಡುಗಡೆ ಮಾಡಬೇಕು ಎಂದು ಕೋರಿದ್ದರು.

Your generous support will help us remain independent and work without fear.

Latest News

Related Posts