ಕಲ್ಯಾಣ ಕರ್ನಾಟಕದಲ್ಲಿ ಶೌಚಾಲಯ ನಿರ್ಮಾಣ; ಪ್ರಸಕ್ತ ಸಾಲಿನಲ್ಲಿ ಹಣ ಲಭ್ಯವಿಲ್ಲವೆಂದ ಇಲಾಖೆ

ಬೆಂಗಳೂರು; ಕಲ್ಯಾಣ ಕರ್ನಾಟಕ ಪ್ರದೇಶದ ವಿವಿಧ ಜಿಲ್ಲೆಗಳ ವ್ಯಾಪ್ತಿಯ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ  ಪೂರ್ಣ ಪ್ರಮಾಣದಲ್ಲಿ ಶೌಚಾಲಯಗಳು ನಿರ್ಮಾಣವಾಗಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಸ್ವಚ್ಛ ಭಾರತ್ ಅಭಿಯಾನ ಮೂಲಕ ಕೋಟ್ಯಂತರ ರುಪಾಯಿಗಳನ್ನು ಹಂಚಿಕೆ ಮಾಡಿದೆ. ಆದರೂ ಶೌಚಾಲಯಗಳ ನಿರ್ಮಾಣದಲ್ಲಿ ಪ್ರಗತಿ ಕಂಡು ಬಂದಿಲ್ಲ.

 

ಅಲ್ಲದೇ ಈ ಭಾಗದಲ್ಲಿ ಶೌಚಾಲಯ ನಿರ್ಮಾಣ ಕೆಲಸವನ್ನು ಕಾರ್ಯಗತಗೊಳಿಸಲು ಪ್ರಸಕ್ತ ವರ್ಷದಲ್ಲಿ  ಸರ್ಕಾರದ ಬಳಿ ಹಣವೇ ಲಭ್ಯವಿಲ್ಲ ಎಂಬ ಸಂಗತಿಯು  ಕೆಕೆಆರ್‍‌ಡಿಬಿ ಪರಿಶೀಲನಾ ಸಭೆಯಲ್ಲಿ ಬಹಿರಂಗವಾಗಿದೆ.

 

ಕಲ್ಯಾಣ ಕರ್ನಾಟಕದ ನಡೆ ಅಭಿವೃದ್ಧಿ ಕಡೆ, ಕಳೆದ 28 ತಿಂಗಳಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ 13,000 ಕೋಟಿ ರು ಅನುದಾನ ನೀಡಲಾಗಿದೆ ಎಂದು ಭರ್ಜರಿ ಪ್ರಚಾರ ಪಡೆದುಕೊಂಡಿರುವ ಬೆನ್ನಲ್ಲೇ ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಪ್ರಸಕ್ತ ವರ್ಷದಲ್ಲಿ ಹಣವೇ ಇಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.

 

2025ರ ಆಗಸ್ಟ್‌ 6ರಂದು ನಡೆದಿದ್ದ ಈ ಸಭೆಯು 2024-25 ಮತ್ತು 2025-26ನೇ ಸಾಲಿನ ಬಜೆಟ್‌ ಪ್ಯಾರಾ ಕಾಮಗಾರಿಗಳ ಪರಿಶೀಲನೆ ನಡೆಸಿತ್ತು. ಈ ವೇಳೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಶೌಚಾಲಯಗಳ ನಿರ್ಮಾಣ, ಪ್ರಗತಿ ಮತ್ತು ಹಣಕಾಸಿನ ಲಭ್ಯತೆ ಕುರಿತು ಚರ್ಚೆಯಾಗಿತ್ತು. ಈ ವೇಳೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಶೌಚಾಲಯ ನಿರ್ಮಾಣ ಕೆಲಸವನ್ನು ಕೈಗೆತ್ತಿಕೊಳ್ಳಲು ಹಣ ಲಭ್ಯವಿಲ್ಲ ಎಂದು ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯು ಹೇಳಿದೆ.

 

ಈ ಸಭೆಯ  ನಡವಳಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅಗತ್ಯವಿರುವ ಶೌಚಾಲಯ ನಿರ್ಮಾಣ ಕಾಮಗಾರಿಗಳಿಗೆ ಕಳೆದ ವರ್ಷ 100 ಕೋಟಿ ನೀಡಲಾಗಿತ್ತು. ಇದರಲ್ಲಿ ರಾಜ್ಯ ಸರ್ಕಾರವು 88 ಕೋಟಿ ಮತ್ತು ಸ್ವಚ್ಛ ಭಾರತ್‌ ಮಿಷನ್‌ನಿಂದ 12 ಕೋಟಿ ರು ಪಾಲುದಾರಿಕೆ ಇತ್ತು.

 

 

ಈ ವರ್ಷ ಈ ಕೆಲಸವನ್ನು ಕಾರ್ಯಗತಗೊಳಿಸಲು ಇಲಾಖೆಯಲ್ಲಿ ಹಣ ಲಭ್ಯವಿಲ್ಲ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಹೇಳಿದೆ.

 

 

ಇಲಾಖೆಯು ಎಸ್‌ಸಿ ಎಸ್‌ ಟಿ ಸಮುದಾಯೇತರ ಪ್ರದೇಶಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುತ್ತಿರುವುದರಿಂದ ಎಸ್‌ ಸಿ ಪಿ ಮತ್ತು ಎಸ್‌ ಟಿ ಪಿ ಅಡಿಯಲ್ಲಿ ಕ್ರಮವಾಗಿ ಮೀಸಲಿಟ್ಟ 16 ಕೋಟಿ ಮತ್ತು 4 ಕೋಟಿ ರು.ಗಳಲ್ಲಿ ಎಸ್‌ ಸಿ ಎಸ್‌ ಟಿ ಸಮುದಾಯದ ಪ್ರದೇಶಗಳಲ್ಲಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲು ನಿರ್ದೇಶಿಸಲಾಗಿದೆ.

 

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 480 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದ್ದು 2025ರ ಜನವರಿ ಅಂತ್ಯದೊಳಗೆ ಶೌಚಾಲಯಗಳ ನಿರ್ಮಾಣವನ್ನು ಪೂರ್ಣಗೊಳಿಸಬೇಕು. ಸಾರ್ವಜನಿಕರ ಬಳಕೆಗೆ ಸಜ್ಜುಗೊಳಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದರು.

 

ಈ ಶೌಚಾಲಯಗಳ ನಿರ್ಮಾಣದ ನಂತರ ನಿರ್ವಹಣೆಯ ಜವಾಬ್ದಾರಿಯನ್ನು ನಿರ್ಮಾಣ ಸಂಸ್ಥೆಗೆ ಒಪ್ಪಿಸಲಾಗುವುದು. ನಿರ್ಮಾಣದ ನಂತರ ನಿರ್ವಹಣೆಯಿಲ್ಲದೆ ಸೊರಗಬಾರದು ಎಂಬ ಉದ್ದೇಶದಿಂದ ಈ ಹೊಸ ಪದ್ಧತಿಯಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದರು.

 

ಸ್ವಚ್ಛ ಭಾರತ ಅಭಿಯಾನಕ್ಕೆ ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳಲ್ಲಿ ನಿರೀಕ್ಷೆಯಂತೆ ಪ್ರಗತಿಯಾಗಿಲ್ಲ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಈ ಸಂಗತಿಯನ್ನು ಗಮನಕ್ಕೆ ತರಲಾಗಿತ್ತು. ಬೀದರ್‍‌,ವಿಜಯಪುರ, ಕಲ್ಬುರ್ಗಿ, ಯಾದಗಿರಿ, ಬಾಗಲಕೋಟೆ, ಧಾರವಾಡ, ರಾಯಚೂರು, ಗದಗ್ ಕೊಪ್ಪಳ, ಹಾವೇರಿ ಮುಂತಾದ ಜಿಲ್ಲೆಗಳಲ್ಲಿ ಸರಾಸರಿ ಶೇ. 33ರಿಂದ 55ರಷ್ಟು ಮಾತ್ರ ಶೌಛಾಲಯ ನಿರ್ಮಾಣ ಮಾಡಲಾಗಿತ್ತು.

 

ಸ್ವಚ್ಛ ಭಾರತ್ ಅಭಿಯಾನ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರವು 2014ರಿಂದ 2019ರ ಅವಧಿಯಲ್ಲಿ ದೇಶವನ್ನು ಸಂಪೂರ್ಣ ಬಹಿರ್ದೆಸೆ ಮುಕ್ತ ಮಾಡುವ ಸಂಕಲ್ಪ ತೊಟ್ಟಿತ್ತು. ಈ ಅಭಿಯಾದಡಿ ದೇಶಾದಾದ್ಯಂತ ಒಟ್ಟು 110 ದಶಲಕ್ಷ ಶೌಚಾಲಯಗಳನ್ನು ನಿಮಿfಶಲಾಗಿತ್ತು. ಇದರಿಂದಾಗಿ 2014ರಲ್ಲಿ ಶೆ. 38.7ರ್‍ಟಿದ್ದ ಸ್ವಚ್ಛತಾ ಪ್ರಮಾಣವು 2019ರಲ್ಲಿ ಶೇ.93.3ರಷ್ಟು ಹೆಚ್ಚಾಗಿತ್ತು.

 

ರಾಜ್ಯದಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ, 4ಕ್ಕಿಂತ ಸಮೀಕ್ಷೆ 5ರಲ್ಲಿ ಹೆಚಚಿನ ಸುಧಾರಣೆ ಕಂಡು ಬಂದಿಲ್ಲ ಸುದಾರಿತ ನೈರ್ಮಲ್ಯ ಸೌಲಭ್ಯ ಹೊಂದಿರುವ ಕುಟುಂಬಗಳ ಪ್ರಮಾಣವು ಶೇ. 57.8ರಿಂದ ಸೇ.74.8ಕ್ಕೇರಿತ್ತು.

 

2014ರ ವರದಿಯಲ್ಲಿಯೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಶೇ. 30ರ್‍ಟಿದ್ದ ಜಿಲ್ಲೆಗಳು ಶೇ. 33ಕ್ಕೆ ಹಾಗೂ ಶೇ.50ರಷ್ಟಿದ್ದ ಜಿಲ್ಲೆಗಳ ಸಾಧನೆ ಶೇ.56 ಎಂದು ನಮೂದಿಸಿತ್ತು.

 

ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಕಳಪೆ ಸಾಧನೆ ತೊರಿದೆ. ಅದರಲ್ಲೂ ಕ್ಲಬುರ್ಗಿ ಜಿಲ್ಲೆಯು ಕಲ್ಬುರ್ಗಿ ಮುಂದಿನ ಸ್ಥಾನದಲ್ಲಿದೆ.

 

ಎನ್‌ಎಫ್‌ಎಚ್‌-5 ಮತ್ತು ಎನ್‌ಎಫ್ಎಚ್‌ಎಸ್‌ 4 ರ ಪ್ರಕಾರ ಶೌಚಾಲಯ ನಿರ್ಮಾಣ ಮಾಡಲಾಗಿತ್ತು.

 

ಕಳಪೆ ಸಾಧನೆ ಮಾಡಿರುವ ಜಿಲ್ಲೆಗಳ ಪಟ್ಟಿ

 

ಕಲ್ಬುರ್ಗಿ 36.5; 30.2, ಯಾದಗಿರಿ; 37.4;18.9, ವಿಜಯಪುರ; 44.8;22.6, ಬಾಗಲಕೋಟೆ 51.3;23.0, ರಾಯಚೂರು, 53.0;27.6, ಗದಗ್; 56.5;28.0, ಬೀದರ್; 56.2;28.0 ಕೊಪ್ಪಳ; 58;8; 46ರಷ್ಟಿತ್ತು.

 

ಅಲ್ಲದೇ ಕಲ್ಯಾಣ ಕರ್ನಾಟಕದ ಕೆಲವು ಕಡೆಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಕೋಟಿಗಟ್ಟಲೆ ಹಣ ಖರ್ಚಾಗಿದೆ. ಆದರೂ ಅವುಗಳನ್ನು ಉಪಯೋಗಿಸುವ ಸ್ಥಿತಿಯಿಲ್ಲಿರಲಿಲ್ಲ. ಕಲ್ಬುರ್ಗಿಯ ಶಹಾಬಾದ ಪಟ್ಟಣದಲ್ಲಿ ಕೋಟಿಗಟ್ಟಲೆ ಹಣ ಖರ್ಚಾದರೂ ಬಯಲು ಶೌಚಮುಕ್ತವಾಗಿರಲಿಲ್ಲ. ಈ ನಗರದಲ್ಲಿ ಸುಮಾರು 35ಕ್ಕೂ ಹೆಚ್ಚು ಸಾರ್ವಜನಿಕ ಶೌಚಾಲಯಗಳಿವೆ.

 

2022-23 ರಲ್ಲಿ ಕೆ.ಕೆ.ಆರ್.ಡಿ.ಬಿ ಯ ಮೈಕ್ರೋ ಪೈನಾನ್ಸ್, ಸಮಾಜ ಕಲ್ಯಾಣ ಇಲಾಖೆ ಅನುದಾನದಿಂದ ಯೋಜನೆಯಲ್ಲಿ 15 ಶೌಚಾಲಯಗಳನ್ನು ನಿರ್ಮಿಸಲು ಅನುದಾನ ಹಂಚಿಕೆಯಾಗಿತ್ತು. ಆದರೆ ಶೌಚಾಲಯಗಳು ನಿರ್ಮಾಣಗೊಂಡು ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದೆ ಹಾಳಾಗಿದ್ದವು. ಶಹಬಾದ ನಗರಸಭೆಯು ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದರಲ್ಲಿ ವಿಫಲವಾಗಿತ್ತು.

 

2024-25 ಮತ್ತು 2025-26ನೇ ಸಾಲಿನಲ್ಲಿ ಕಲ್ಯಾಣ ಪಥ ಯೋಜನೆಗೆ 1,000 ಕೋಟಿ ರು ಮೀಸಲಿಡಲಾಗಿದೆ. 2024-25ನೇ ಸಾಲಿನಲ್ಲಿ ಕೆಕೆಆರ್‍‌ಡಿಬಿ ಶೇ. 100ರಷ್ಟು ಮತ್ತು ಮೊತ್ತವನ್ನು ಅಂದರೆ 292.87 ಕೋಟಿ ರು ಬಿಡುಗಡೆ ಮಾಡಿದೆ. 2025-26ನೇ ಸಾಲಿನಲ್ಲಿ 290 ಕೋಟಿ ಹಂಚಿಕೆ ಮಾಡಲಾಗಿದೆ. ಬಾಕಿ ಅನುದಾನದ ಮೂಲವನ್ನು ಪ್ರಸ್ತಾಪಿಸಲು ಇಲಾಖೆಗೆ ಸೂಚಿಸಲಾಗಿದೆ.

 

ಗ್ರಾಮೀಣ ಕಲ್ಯಾಣ ಕರ್ನಾಟಕದಲ್ಲಿ ಗೋದಾಮು ನಿರ್ಮಾಣ ಮಾಡಲು 60 ಕೋಟಿ ರು ಒದಗಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿತ್ತು.  ಈ ಕಾಮಗಾರಿಯನ್ನು ಕೃಷಿ ಇಲಾಖೆಯ ಸಹಯೋಗದಲ್ಲಿ ಜಾರಿಗೆ ತರಬೇಕು. ಸದ್ಯ ಕರ್ನಾಟಕ ರಾಜ್ಯ ಗೋದಾಮು ನಿಗಮವು ನಷ್ಟದಲ್ಲಿ ಇರುವ ಕಾರಣ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ಸರ್ಕಾರವೇ ಸೂಚನೆ ನೀಡಿದೆ.

 

 

ಆದರೆ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು 2025ರ ಜೂನ್‌ 27ರಂದು ರಸ್ತೆ, ಇತ್ಯಾದಿ ಮೂಲಸೌಕರ್ಯ ನಿರ್ಮಾಣಕ್ಕೆ ಅನುದಾನ ಉಪಯೋಗಿಸಲು ಪ್ರಸ್ತಾವ ನೀಡಿರುತ್ತಾರೆ. ಈ ಕಾಮಗಾರಿಯಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಘಟಕಗಳು ಬರುವ ಕಾರಣ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಮಾಣ ಪತ್ರ ಪಡೆಯಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸಭೆಗೆ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

ಬಜೆಟ್‌ ಘೋಷಣೆಗಳನ್ನು 2025ರ ಮಾರ್ಚ್‌ ನಲ್ಲೇ ಘೋಷಿಸಲಾಗಿದೆ. ಈ ಘೋಷಣೆ ಮಾಡಿ 5 ತಿಂಗಳು ಕಳೆದಿವೆ. ಅದರೂ ಈ ಕಾಮಗಾರಿಗೆ ಸಚಿವ ಸಂಪುಟದ ಅನುಮೋದನೆ ಪಡೆಯಲು ಕ್ರಮ ಕೈಗೊಂಡಿಲ್ಲ. ಕಾಮಗಾರಿಯು ನಿಧಾನಗತಿಯಲ್ಲಿದೆ ಎಂದು ಮಂಡಳಿ ಸಭಾಧ್ಯಕ್ಷರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.

Your generous support will help us remain independent and work without fear.

Latest News

Related Posts