ಧರ್ಮಸ್ಥಳದಲ್ಲಿ ಅಸಹಜ ಸಾವು; ನೇತ್ರಾವತಿ ನದಿ ಸ್ನಾನಘಟ್ಟ, ಬೆಟ್ಟ, ಗುಡ್ಡದ ಸುತ್ತಮುತ್ತ 452 ಪ್ರಕರಣ ದಾಖಲು

ಬೆಂಗಳೂರು; ಸೌಜನ್ಯ ಸಾವು ಹೊರತುಪಡಿಸಿ ಬೆಳ್ತಂಗಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಧರ್ಮಸ್ಥಳ ಗ್ರಾಮ ಮತ್ತು ಉಜಿರೆ ಗ್ರಾಮದಲ್ಲಿ 2001ರ ಜನವರಿ 1ರಿಂದ 2012ರ ಅಕ್ಟೋಬರ್‍‌ 13 ರವರೆಗೆ ಆತ್ಮಹತ್ಯೆ, ಕೊಲೆ, ಅತ್ಯಾಚಾರಕ್ಕೆ ಒಳಗಾದ ಪ್ರಕರಣಗಳ ಸಂಖ್ಯೆಯು ಒಟ್ಟಾರೆ 452 ರಷ್ಟಿವೆ.

 

ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟ ಮತ್ತು ಇದರ ಸುತ್ತಲಿನ ಹಲವು ಕಾಡಿನ ಪ್ರದೇಶ, ದ್ವಾರಕಾಶ್ರಮಕ್ಕೆ ಹೊಂದಿಕೊಂಡಿರುವ ಕಾಡು, ನೇತ್ರಾವತಿ ಸ್ನಾನ ಘಟ್ಟದ ಕಿಂಡಿ ಅಣೆಕಟ್ಟು ಮತ್ತು ಅಣೆಕಟ್ಟು ನೀರಿನ ಪ್ರದೇಶ, ಧರ್ಮಸ್ಥಳ ಗ್ರಾಮದ ನ್ಯಾಚರೋಪತಿ ಆಸ್ಪತ್ರೆ ಸುತ್ತಲಿನ ಕಾಡು, ಧರ್ಮಸ್ಥಳದ ನೇತ್ರಾವತಿ ಗೆಸ್ಟ್‌ ಹೌಸ್‌, ಧರ್ಮಸ್ಥಳ ಗ್ರಾಮದ ಬಾಹುಬಲಿ ಬೆಟ್ಟ, ಅಣ್ಣಪ್ಪ ಬೆಟ್ಟ, ಮತ್ತಿತರೆ ಗುಡ್ಡಗಾಡು ಪ್ರದೇಶದಲ್ಲಿ ಕೊಲೆ, ಅತ್ಯಾಚಾರಕ್ಕೆ ಒಳಾಗಿರುವವರ ಸಂಖ್ಯೆ ಹೆಚ್ಚಿರುವುದು ತಿಳಿದು ಬಂದಿದೆ.

 

ಮೃತಪಟ್ಟವರ ಪೈಕಿ ಅಪ್ರಾಪ್ತರು, ವಯಸ್ಕರು, ಹದಿಹರೆಯದವರು, ಅಪರಿಚಿತ ಗಂಡಸು, ಹೆಂಗಸರು, ವಿದ್ಯಾರ್ಥಿನಿಯರು ಇರುವುದು ಗೊತ್ತಾಗಿದೆ.

 

2001ರಿಂದ 2012ರವರೆಗೆ ಕೊಲೆ, ಅತ್ಯಾಚಾರ ಒಳಗಾಗಿ ಸಾವನ್ನಪ್ಪಿರುವವರ ಸಂಖ್ಯೆ ಮತ್ತು ಹೆಸರುಗಳ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

2001ರಲ್ಲಿ ದಾಖಲಾದ ಪ್ರಕರಣಗಳ ಪಟ್ಟಿ

 

ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನ ಘಟ್ಟದಲ್ಲಿ ಸಂಜೀವ ದತ್ತ, (37/2001) ಧರ್ಮಸ್ಥಳ ಗಂಗಗೋತ್ರಿ ವಸತಿ ಗೃಹದದಲ್ಲಿ ಪುಟ್ಟ ತಿಮ್ಮೇಗೌಡ, (39/2001) ಉಜಿರೆ ಗ್ರಾಮದ ಶ್ರೀ ರತ್ನವರ್ಮ ಹೆಗ್ಡೆ ಕ್ರೀಡಾಂಗಣದ ಬದಿಯಲ್ಲಿ ಕೃಷ್ಣಪ್ಪ ನಾಯ್ಕ, (44/2001) ಧರ್ಮಸ್ಥಳ ಗ್ರಾಮದ ಎಸ್‌ಡಿಎಂ ಹಿರಿಯ ಪ್ರಾಥಮಿಕ ಶಾಲೆ ಆಟದ ಮೈದಾನದಲ್ಲಿ ಶ್ರೀರಾಮ, (45/2001) ಧರ್ಮಸ್ಥಳ ಗ್ರಾಮದ ನೇತ್ರಾವತಿ ದೊಂಡೋಳೆ ಎಂಬಲ್ಲಿ ಅಪರಿಚಿತ ಗಂಡಸು, (46/2011)

 

 

ಧರ್ಮಸ್ಥಳ ಗ್ರಾಮದ ಶ್ರಾವತಿ ಅತಿಥಿ ಗೃಹ ನಂ 231ರಲ್ಲಿ ನಾರಾಯಣ ಕಣ್ಣೂರು, (51/2001) ಧರ್ಮಸ್ಥಳ ಗ್ರಾಮದ ನೇರ್ತನೆ ಎಂಬಲ್ಲಿ ಶೇಷಪ್ಪ ಪೂಜಾರಿ, (53/2001) ಉಜಿರೆ ಗ್ರಾಮದ ಅತ್ತಾಜೆ ಜನತಾ ಕಾಲೋನಿಯಲ್ಲಿ ಕುಮಾರಿ ರುಬೀನಾ ಬೇಗಂ, (54/2001) ಮೃತಪಟ್ಟಿರುವುದು ಗೊತ್ತಾಗಿದೆ.

 

 

ಧರ್ಮಸ್ಥಳ ಗ್ರಾಮದ ಕನ್ಯಾಡಿ ಗ್ರಾಮದಲ್ಲಿ ಕೃಷ್ಣಪೂಜಾರಿ, (04/2001) ಧರ್ಮಸ್ಥಳ ಗ್ರಾಮದ ಗಿರಿಕೋರಿಯಲ್ಲಿ ಅಪರಿಚಿತ ಗಂಡಸು, (06/2001) ಉಜಿರೆ ಗ್ರಾಮದ ಪಾಳೆಂದ ಎಂಬಲ್ಲಿ ಕುಮಾರಿ ಗಿರಿಜಾ, ಮಂಜುನಾಥ, (07/2001) ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯಲ್ಲಿ ಅಪರಿಚಿತ ಗಂಡಸು, (09/2001) ಧರ್ಮಸ್ಥಳ ಗ್ರಾಮದ ಮೂಡಂಗಲ್ಲು ಎಂಬಲ್ಲಿ ಅಪರಿಚಿತ ಗಂಡಸು, (14/2001) ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನ ಘಟ್ಟದಲ್ಲಿ ಅಶ್ವಥ್ ಕುಮಾರ, (16/2001) ಧರ್ಮಸ್ಥಳ ಗ್ರಾಮದ ಕೆಎಸ್‌ಆರ್‍‌ಟಿಸಿ ವಸತಿ ಗೃಹ ನಂ 28ರಲ್ಲಿ ಶ್ರೀಮತಿ ಸುವರ್ಣಮ್ಮ, (19/2001) ರಲ್ಲಿ ಧರ್ಮಸ್ಥಳ ಗ್ರಾಮದ ನೆರಿಯಾ ಹೊಳೆ ಬದಿಯಲ್ಲಿ ಅಪರಿಚಿತ ಹೆಂಗಸು, (21/2001), ಅಪರಿಚಿತ ಹೆಂಗಸು (23/2001) ಮೃತಪಟ್ಟಿರುವುದು ತಿಳಿದು ಬಂದಿದೆ.

 

 

ಧರ್ಮಸ್ಥಳ ಗ್ರಾಮದ ಮುಂಡ್ರುಪ್ಪಾಡಿ ಕಾರಂಬಡೆಗುಡ್ಡೆ ಎಂಬಲ್ಲಿ ಮುದ್ರ ಮುಗೇರ, (25/2001) ಉಜಿರೆ ಗ್ರಾಮದ ಅತ್ತಾಜೆ ಎಂಬಲ್ಲಿ ತಾರಾ, (65/2001) ಧರ್ಮಸ್ಥಳ ಗ್ರಾಮದ ಮುಂಡ್ರುಪ್ಪಾಡಿ ಎಂಬಲ್ಲಿ ಶ್ರೀಮತಿ ಲಲಿತಾ, ಕುಮಾರಿ ಸವಿತಾ, ಕುಮಾರಿ ಶೋಭಾ, (69/2001) ಉಜಿರೆ ಗ್ರಾಮದ ಕಲ್ಲೆಮಗೆ ಎಂಬಲ್ಲಿ ವೆಂಕಟೇಶ, (70/2001) ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಸಮೀಪದ ಕಾಡಿನಲ್ಲಿ ಅಪರಿಚಿತ ಗಂಡಸು, (71/2001) ನೇತ್ರಾವತಿ ಸ್ನಾನ ಘಟ್ಟ ಬಳಿ ಅಪರಿಚಿತ ಗಂಡಸು, (78/2001) ನೇತ್ರಾವತಿ ನದಿಯ್ಲಿ ಮಾ ಭೀಮಾ, (87/2001) ಉಜಿರೆ ಗ್ರಾಮದ ನೀರ ಚಿಲುಮೆ ಎಂಬಲ್ಲಿ ಅಪರಿಚಿತ ಗಂಡಸು , (88/2001) ಧರ್ಮಸ್ಥಳ ಗ್ರಾಮದ ಕಲೆಲಾಯಿ ಸರ್ಕಾರಿ ಗುಡ್ಡ ಪ್ರದೇಶದಲ್ಲಿ ಅಪರಿಚಿತ ಗಂಡಸು ಶವ ಪತ್ತೆಯಾಗಿತ್ತು.

 

ಉಜಿರೆ-ಬೆಳ್ತಂಗಡಿಯಲ್ಲಿ ಅಸಹಜ ಸಾವುಗಳು; 2013ರಿಂದ 2020ರವರೆಗೆ 98 ಪ್ರಕರಣ ದಾಖಲು

 

2002

 

ಧರ್ಮಸ್ಥಳ ಗ್ರಾಮದ ಗಂಗೋತ್ರಿ ವಸತಿ ಗೃಹದ ಎದುರು ಕಾಡಿನಲ್ಲಿ ನಾರಾಯಣ ಸುಬ್ರಾಯ ಭಟ್‌ (02/2002), ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ಮುಖ್ಯ ದ್ವಾರದ ಬಳಿ ಮಲ್ಲಿಕಾರ್ಜುನ ರೆಡ್ಡಿ (10/2002) ಧರ್ಮಸ್ಥಳ ಗ್ರಾಮದ ಶರಾವತಿ ವಸತಿ ಗೃಹದಲ್ಲಿ ಮೋಹನ (13/2002) , ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನ ಘಟ್ಟದ ಸೇತುವೆ ಬಳಿ ಅಪರಿಚಿತ ಗಂಡಸು (14/2002), ಧರ್ಮಸ್ಥಳ ಗ್ರಾಮದ ವಿದೂಷ ನಗರ ಎಂಬಲ್ಲಿ ಶ್ರೀಮತಿ ಲಲಿತಾ (18/2002) ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಸೇತುವೆ ಬಳಿ ಅಪರಿಚಿತ ಗಂಡಸು (20/2002),

 

 

ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಬಳಿ ಅಪರಿಚಿತ ಗಂಡಸು (24/2002) ಧರ್ಮಸ್ಥಳ ಗ್ರಾಮದ ಶರಾವತಿ ವಸತಿ ಗೃಹದಲ್ಲಿ ನಾಗರಾಜ (28/2002), ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ಕಾಮತ್‌ ಹೋಟೆಲ್‌ನಲ್ಲಿ ವಿಕಾಸ್‌ ಶೆಟ್ಟಿ ( 29/2002) ಧರ್ಮಸ್ಥಳ ಗ್ರಾಮದ ಬೋಳಿಯಾರು ಸೇತುವೆ ಬಳಿ ಅಪರಿಚಿತ ಹುಡುಗಿ (37/2002) ಶವ ಪತ್ತೆಯಾಗಿತ್ತು.

 

2003

 

ಉಜಿರೆ ಶಿವಾಜಿ ನಗರ ಎಂಬಲ್ಲಿ ಎಂ ಕೆ ಮುರುಳೀಧರ (87/2003), ಧರ್ಮಸ್ಥಳ ನೇರ್ತರಾವತಿ ಸ್ನಾನಘಟ್ಟದ ಬಳಿ ಅಪರಿಚಿತ ಗಂಡಸು (88/2008) ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಬಳಿ ಕಾಡಿನಲ್ಲಿ ಅಪರಿಚಿತ ಗಂಡಸು (90/2003), ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿ ಅಪರಿಚಿತ ಗಂಡಸು (92/2003) ಧರ್ಮಸ್ಥಳದ ಬಾಹುಬಲಿ ಬೆಟ್ಟ ಎಂಬದಲ್ಲಿ ಸದಾಶಿವ ಶೆಟ್ಟಿ (94/2003), ಧರ್ಮಸ್ಥಳ ಮಣ್ಣ ಸಂಕದ ಬಳಿ ಪಾಂಗಾಳ ಕಾಡಿನಲ್ಲಿ ಅಪರಿಚಿತ ಗಂಡಸು (42/2003) ,

 

 

ಧರ್ಮಸ್ಥಳದ ನೇತ್ರಾವತಿ ನದಿ ನೀರಿನಲ್ಲಿ ಅಪರಿಚಿತ ಗಂಡಸು (43/2003) ಧರ್ಮಸ್ಥಳದ ಬಾರೆದಡಿ ಮೊಳೆಕ್ಯಾರು ಎಂಬಲ್ಲಿ ಮುದರ ಮಲೆಕುಡಿಯ (44/2003), ಧರ್ಮಸ್ಥಳ ಗುತ್ತಿಮಾರು ಎಂಬಲ್ಲಿ ಅಪರಿಚಿತ ಗಂಡಸು (47/2003) , ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದಲ್ಲಿ ಅಪರಿಚಿತ ಗಂಡಸು (48/2003), ಧರ್ಮಸ್ಥಳದ ಸಭಾ ಮಂಟಪದಲ್ಲಿ ಅಪರಿಚಿತ ಗಂಡಸು (52/2003) ಶವ ಪತ್ತೆಯಾಗಿತ್ತು ಎಂದು ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದೆ.

 

 

ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದ ಬಳಿ ಕಾಲು ಸೇತುವೆ ಹತ್ತಿರ ಗೋಪಿ @ ವೆಂಕಟೇಶ್‌ (56/2003) , ಉಜಿರೆಯ ಕಾಶಿಬೆಟ್ಟು ಹೊಸಕುಮೇರಿ ಎಂಬಲ್ಲಿ ಅಪರಿಚಿತ ಗಂಡಸು (57/2003) ಧರ್ಮಸ್ಥಳದ ನಾರ್ಯ ಎಂಬಲ್ಲಿ ಶ್ರೀಮತಿ ಸುಂದರಿ (62/2003), ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಬಳಿ ಕಾಲು ಸೇತುಎ ಹತ್ತಿರ ಅಪರಿಚಿತ ಹೆಂಗಸು (66/2003), ಧರ್ಮಸ್ಥಳ ದ್ವಾರಕಾಶ್ರಮದ ಬಳಿಯ ಕಾಡಿನಲ್ಲಿ ಅಪರಿಚಿತ ಗಂಡಸು (02/2003), ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದಲ್ಲಿ ಸಂಗ್ರಾಂ ರಾಯ್‌ (03/2003), ಧರ್ಮಸ್ಥಳ ಗೊಮ್ಮಟ ಬೆಟ್ಟದ ಬಳಿ ಗಂಗಾಧರ (05/2003 ), ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ನದಿ ನೀರಿನಲ್ಲಿ ಅಪರಿಚಿತ ಗಂಡಸು (06/2003) ಧರ್ಮಸ್ಥಳ ನೇತ್ರಾವತಿ ಸ್ನಾನ ಘಠ್ಟದ ಬಳಿ ಕಿಂಡಿ ಅಣೆಕಟ್ಟಿನ ನೀರಿನಲ್ಲಿ ಅಪರಿಚಿತ ಹೆಂಗಸು (10/2003) ಶವ ದೊರೆತಿತ್ತು ಎಂದು ದಾಖಲೆಯಿಂದ ಗೊತ್ತಾಗಿದೆ.

 

 

ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಉತ್ತರ ಬದಿಯ ಕಾಡಿನಲ್ಲಿ ಚನಿಯಪ್ಪ @ಸುಧಾಕ್ರ ಮಣಿಯಾಣಿ (13/2003), ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಬಳಿ ಕಿಂಡಿ ಅಣೆಕಟ್ಟಿನ ನೀರಿನಲ್ಲಿ ರಾಮೇಗೌಡ, ಕುಮಾರಿ ಶ್ವೇತಾ (14/2003), ಧರ್ಮಸ್ಥಳ ಗೊಮ್ಮಟ ಬೆಟ್ಟದ ಬಳಿ ಚೀಂಕ್ರ ಮೇರ (15/2003), ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದಲ್ಲಿ ಎ ಆರ್‍‌ ಗಣೇಶ್‌ (17/2003), ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದ ಉತ್ತರ ಬದಿಯಲ್ಲಿ ಅಪರಿಚಿತ ಹೆಂಗಸು (18/2003), ಧರ್ಮಸ್ಥಳ ಮಣ್ಣು ಸಮಕದ ರಸ್ತೆ ಬದಿಯಲ್ಲಿ ಅಪರಿಚಿತ ಗಂಡಸು (21/2003), ಧರ್ಮಸ್ಥಳದ ಅಣ್ಣಪ್ಪ ಬೆಟ್ಟದ ಹಿಂಭಾಗದಲ್ಲಿ ಅಪರಿಚಿತ ಹೆಂಗಸು (22/2003), ಧರ್ಮಸ್ಥಳದ ಗೊಮ್ಮಟ ಬೆಟ್ಟದ ಎಡ ಬದಿಯ ಕಾಡಿನಲ್ಲಿ ಅಪರಿಚಿತ ಗಂಡಸು (23/2003), ಶವ ಪತ್ತೆಯಾಗಿತ್ತು.

 

 

ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಉತ್ತರ ಬದಿಯಲ್ಲಿ ಅಪರಿಚಿತ ಗಂಡಸು (24/2003), ಉಜಿರೆ ಗ್ರಾಮದ ಗಾಂಧಿನಗರ ಎಂಬಲ್ಲಿ ಹೈದರಾಲಿ (26/2003), ಧರ್ಮಸ್ಥಳದ ಮಣ್ಣ ಸಂಕದ ಬಳಿ ಪಾಂಗಾಳ ಕಾಡಿನಲ್ಲಿ ಅಪರಿಚಿತ ಮಹಿಳೆ (34/2003), ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದಲ್ಲಿ ಬಾಬು, ಪುರುಷೋತ್ತಮ, ಸಿದ್ದರಾಜು (35/2003), ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಕಿಂಡಿ ಅಣೆಕಟ್ಟಿನ ನೀರಿನಲ್ಲಿ ಶ್ರೀಮತಿ ಧರ್ಣಮ್ಮ (36/2003), ಧರ್ಮಸ್ಥಳದ ಮಾಹಿತಿ ಕಚೇರಿ ಬಳಿ ಅಪರಿಚಿತ ಗಂಡಸು (39/2003), ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಬಳಿ ಕಿಂಡಿ ಅಣೆಕಟ್ಟಿನ ನೀರಿನಲ್ಲಿ ಅಪರಿಚಿತ ಗಂಡಸು (40/2003) ಮೃತಪಟ್ಟಿದ್ದ ಎಂಬ ಪ್ರಕರಣ ದಾಖಲಾಗಿತ್ತು.

 

2004

 

ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದಲ್ಲಿ ಅಪರಿಚಿತ ಗಂಡಸು ( 01/2004), ಧರ್ಮಸ್ಥಳ ಗ್ರಾಮದ ಗೊಮ್ಮಟ ಬೆಟ್ಟದ ಬಳಿ ಅಪರಿಚಿತ ಗಂಡಸು ( 02/2004), ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನ ಘಟ್ಟದ ನದಿ ನೀರಿನಲ್ಲಿ ದಾಕ್ಷಾಣಿಯಮ್ಮ, ರಂಜಿತ್‌, ಪ್ರವೀಣ್‌ (03/2004), ಉಜಿರೆ ಗ್ರಾಮದ ಅತ್ತಾಜೆ ಪಾರ ಮನೆ ಎಂಬಲ್ಲಿ ಮಹಮ್ಮದ್‌ ಮಜೀದ್‌ (04/2004), ಉಜಿರೆ ಗ್ರಾಮದ ನೀರ ಚಿಲುಮೆ ಎಂಬಲ್ಲಿ ಅಪರಿಚಿತ ಗಂಡಸು (05/2004), ಉಜಿರೆಯ ಗ್ರಾಮದ ಮಾಚಾರು ವಿಘ್ನೇಷ ನಿಲಯ ಎಂಬಲ್ಲಿ ನಾರ್ಣಪ್ಪಗೌಡ (35/2004) ಎಂಬುವರು ಸಾವನ್ನಪ್ಪಿದ್ದರು ಎಂದು ಪ್ರಕರಣ ದಾಖಲಾಗಿತ್ತು.

 

 

ಧರ್ಮಸ್ಥಳ ಗ್ರಾಮದ ಗೊಮ್ಮಟ ಬೆಟ್ಟದ ಬಳಿ ವಿ ಎನ್‌ ಶ್ರೀಕಂಠ ಪ್ರಸಾದ್‌ (36/2004), ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ವಸಂತ ಮಹಲ್‌ ಬಳಿ ಅಪರಿಚಿತ ಹುಡುಗ (41/2004), ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ಸಭಾ ಮಂಟಪ್ ಬಳಿ ಅಪರಿಚಿತ ಗಂಡಸು (42/2004 ), ನೇತ್ರಾವತಿ ಸ್ನಾನ ಘಟ್ಟದಲ್ಲಿ ಸಂತೋಷ್‌ (44/2004 ) ನೇತ್ರಾವತಿ ಗ್ರಾಮದ ಸ್ನಾನ ಘಟ್ಟದಲ್ಲಿ ವೈ ಪ್ರಭಾಚಂದ್ರ (45/2004), ಧರ್ಮಸ್ಥಳ ಗ್ರಾಮದ ಸಾಕೇತ ವಸತಿ ಗೃಹ ರೂ ನಂ 516 ಅಪರಿಚಿತ ಗಂಡಸು, ಹೆಂಗಸು (46/2004 ), ನೇತ್ರಾವತಿ ಸ್ನಾನ ಘಟ್ಟದಲ್ಲಿ ಜಯರಾಮೇಗೌಡ (47/2004), ಧರ್ಮಸ್ಥಳ ಗ್ರಾಮದ ಪಂಗಾರು ಮನೆ ಎಂಬಲ್ಲಿ ಚೆನ್ನಮ್ಮ (48/2004) ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

 

 

ಧರ್ಮಸ್ಥಳ ಗ್ರಾಮದ ನ್ಯಾಚರೋಪತಿ ಆಸ್ಪತ್ರೆ ಕಾಡಿನಲ್ಲಿಲ ಅಪರಿಚಿತ ಗಂಡಸು (49/2004), ಧರ್ಮಸ್ಥಳ ಗ್ರಾಮದ ಸಾಕೇತ ವಸತಿ ಗೃಹದ ನೆಲ ಅಂತಸ್ತಿನ ವರಾಂಡದಲ್ಲಿ ಅಪರಿಚಿತ ಗಂಡಸು (71/2004), ಧರ್ಮಸ್ಥಳ ಗ್ರಾಮದ ಶರಾವತಿ ವಸತಿ ಗೃಹದಲ್ಲಿ ಅಪರಿಚಿತ ಗಂಡಸು (72/2004), ಧರ್ಮಸ್ಥಳ ಕೆಎಸ್‌ಆರ್‍‌ಟಿಸಿ ಬಸ್‌ ನಿಲ್ದಾಣದಲ್ಲಿ ಶಿವ (73/2004), ಧರ್ಮಸ್ಥಳ ಗ್ರಾಮದ ಮುಖ್ಯ ದ್ವಾರದ ಬಳಿ ಮಣ್ಣು ಸಂಕ ಎಂಬಲ್ಲಿ ಅಪರಿಚಿತ ಗಂಡಸು (79/2004) ಶವ ಪತ್ತೆಯಾಗಿತ್ತು.

 

ಧರ್ಮಸ್ಥಳ ಗ್ರಾಮದ ನೇತ್ರಾವತಿ ಸೇತುವೆ ಬಳಿ ಅಪರಿಚಿತ ಗಂಡಸು ( 80/2004), ಧರ್ಮಸ್ಥಳ ಗ್ರಾಮದ ಪೆರಿಯಡ್ಕ ಕಲ್ಲಡ್ಕ ಮನೆ ಎಂಬಲ್ಲಿ ಗಿರಿಯಪ್ಪ (83/2004), ನೇತ್ರಾವತಿ ಸ್ನಾನ ಘಟ್ಟದ ಮಾಹಿತಿ ಕಚೇರಿ ಬಳಿ ಅಪರಿಚಿತ ಗಂಡಸು (84/2004), ನೇತ್ರಾವತಿ ಸ್ನಾನ ಘಟ್ಟದ ವೆಂಟೆಡ್‌ ಡ್ಯಾಮ್‌ ಬಳಿ ಅಪರಿಚಿತ ಗಂಡಸು (86/2004), ಧರ್ಮಸ್ಥಳ ಗ್ರಾಮದ ಸ್ನಾನಘಟ್ಟದ ಕಾಡಿನ ಬಳಿ ಅಪರಿಚಿತ ಗಂಡಸು (87/2004), ಧರ್ಮಸ್ಥಳ ಗ್ಋಆಮದ ಸ್ನಾನಘಟಟದ ಬಳಿ ನದಿ ನೀರಿನಲ್ಲಿ ಅಪರಿಚಿತ ಗಂಡಸು ( 89/2004) ಶವ ಪತ್ತೆಯಾಗಿತ್ತು.

 

2005

 

ಧರ್ಮಸ್ಥಳ ನೇತ್ರಾವತಿ ಸೇತುವೆ ಬಳಿ ಅಪರಿಚಿತ ಗಂಡಸು (55/2005), ಉಜಿರೆ ಗ್ರಾಮದ ಮಾರಿಗುಡಿ ಸರ್ಕಾರಿ ಬಾವಿಯಲ್ಲಿ ಶ್ರೀಮತಿ ಚಂದ್ರಾವತಿ (56/2005), ಧರ್ಮಸ್ಥಳ ಕಟ್ಟದಬೈಲು ಎಂಬಲ್ಲಿ ಸುಮಿತ್ರಾ, ಸತೀಶ (59/2005), ಉಜಿರೆ ಗ್ರಾಮದ ಅತ್ತಾಜೆ ಎಂಬಲ್ಲಿ ಶ್ರೀಮತಿ ನೀಲಮ್ಮ (62/2005), ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿ ಅಪರಿಚಿತ ಹೆಂಗಸು (63/2005), ಧರ್ಮಸ್ಥಳದ ಕೋಳಿಯಾರ್‍‌ ಎಂಬಲ್ಲಿ ಅಣ್ಣಪ್ಪ (65/2005), ಧರ್ಮಸ್ಥಳದ ಶರಾವತಿ ವಸತಿ ಗೃಹದ ಒಂದನೇ ಮಹಡಿಯಲ್ಲಿ ಅಪರಿಚಿತ ಗಂಡಸು (66/2005) ಮೃತಪಟ್ಟಿದ್ದರು.

 

 

2006

 

ಧರ್ಮಸ್ಥಳ ಗ್ರಾಮದ ಬ್ರೆಮೇಲು ಎಂಬಲ್ಲಿ ಕುಮಾರಿ ಜಮೀಲಾ (01/2006), ಧರ್ಮಸ್ಥಳ ಗ್ರಾಮದ ಶಾಂತರಾಜ್‌ ಜೈನ್‌ ಎಂಬುವರ ಬಾವಿಯಲ್ಲಿ ಟಿ ವಿಶ್ವನಾಥ (10/2006), ಧರ್ಮಸ್ಥಳ ಗ್ರಾಮದ ಗಾಯತ್ರಿ ವಸತಿ ಗೃಹ ಬಳಿ ಅಪರಿಚಿತ ಗಂಡಸು (12/2006), ಧರ್ಮಸ್ಥಳ ಗ್ರಾಮದ ಶರಾವತಿ ಗೃಹದ ಬಳಿ ನರೇಶ (87/2006), ಧರ್ಮಸ್ಥಳ ಗ್ರಾಮದ ಸನ್ನಿಧಿ ಮಾಹಿತಿ ಕಚೇರಿ ಬಳಿ ಅಪರಿಚಿತ ಗಂಡಸು (88/2006), ಧರ್ಮಸ್ಥಳ ಗ್ರಾಮದ ಜೋಡುಸ್ಥಾನ ಎಂಬಲ್ಲಿ ಗಣೇಶ ಭಂಡಾರಿ (89/2006), ಉಜಿರೆ ಗ್ರಾಮದ ಮುಂಡತ್ತೋಡಿ ಗ್ರಾಮ ಎಂಬಲ್ಲಿ ವೆಂಕಪ್ಪಗೌಡ ( 63/2006), ಧರ್ಮಸ್ಥಳ ಗ್ರಾಮದ ಶರಾವತಿ ವಸತಿ ಗೃಹದಲ್ಲಿ ಈರಪ್ಪ ನಾಯ್ಕ (67/2006) ಆತ್ಮಹತ್ಯೆ ಮಾಡಿಕೊಂಡಿದ್ದರು.

 

 

ಧರ್ಮಸ್ಥಳ ಗ್ರಾಮದ ಬಾಹುಬಲಿ ಬೆಟ್ಟದ ಕಾಡಿನಲ್ಲಿ ಅಪರಿಚಿತ ಗಂಡಸು ( 69/2006), ಉಜಿರೆ ಗ್ರಾಮದ ಕಕ್ಕರಬೆಟ್ಟು ಎಂಬಲ್ಲಿ ಲಕ್ಷ್ಮಣ ಗೌಡ (70/2006), ಧರ್ಮಸ್ಥಳ ಗ್ರಾಮದ ಕುದ್ರೇಯ ಎಂಬಲ್ಲಿ ಕೆ ಪಿ ಕುಮಾರ್‍‌ (72/2006), ಧರ್ಮಸ್ಥಳ ಗ್ರಾಮದ ಮಿಥಿಲಾ ನಗರ ಎಂಬಲ್ಲಿ ಶ್ರೀಮತಿ ವಿಜಯಾ, ಶಶಿಕಾಂತ, ಅಭಿಜಿತ್‌ (73/2006), ಧರ್ಮಸ್ಥಳ ಗ್ರಾಮದ ಹಳೇ ಕೆಎಸ್‌ಆರ್‍‌ಟಿಸಿ ಬಸ್‌ ನಿಲ್ದಾಣದ ಬಳಿ ನಾರಾಯಣ ಶೆಟ್ಟಿ (74/2006), ಉಜಿರೆ ಗ್ರಾಮದ ಮಾವಂತೂರು ರೆಸಿಡೆನ್ಸಿ ಲಾಡ್ಜ್‌ನಲ್ಲಿ ರಾಮಕೃಷ್ಣ (77/2006), ಧರ್ಮಸ್ಥಳ ಗ್ರಾಮದ ಮಾರಿಗುಡಿ ಬಳಿಲ ಅಪರಿಚಿತ ಗಂಡಸು (78/2006), ಧರ್ಮಸ್ಥಳ ಗ್ರಾಮದ ಬಾಹುಬಲಿ ಬೆಟ್ಟದ ಬಳಿ ಅಪರಿಚಿತ ಗಂಡಸು (80/2006) ವಿನ ಶವ ಪತ್ತೆಯಾಗಿತ್ತು.

 

2007

 

ಉಜಿರೆ ಗ್ರಾಮದ ಬಸ್‌ ಸ್ಟ್ಯಾಂಡ್‌ ಕಟ್ಟಡದ ಬಳಿ ಅಪರಿಚಿತ ಗಂಡಸು (02/2007), ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದಲ್ಲಿ ಅಪರಿಚಿತ ಹೆಂಗಸು (05/2007), ನೇತ್ರಾವತಿ ನದಿ ಮಧ್ಯ ಭಾಗದಲ್ಲಿರುವ ಬಂಡೆಕಲ್ಲಿನ ಮೇಲೆ ಅಪರಿಚಿತ ಗಂಡಸು (09/2007), ಬಾಹುಬಲಿ ಬೆಟ್ಟದ ಬಳಿಯ ಗುಡ್ಡದಲ್ಲಿ ಅಪರಿಚಿತ ಗಂಡಸು (11/2007), ಉಜಿರೆ ಗ್ರಾಮದ ಸಂತೆ ಮಾರ್ಕೇಟ್‌ ನಲ್ಲಿ ಕು ಲೀಲಾ (12/2007), ಧರ್ಮಸ್ಥಳ ಶರಾವತಿ ವಸತಿ ಗೃಹದಲ್ಲಿ ಲಕ್ಷ್ಮಣ (80/2007), ಧರ್ಮಸ್ಥಳದ ಅನ್ನಛತ್ರದ ಬಳಿ ಅಪರಿಚಿತ ಗಂಡಸು (85/2007), ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ತುಳಸಿರಾಮ್‌ (86/2007), ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ತುಳಸಿ ರಾಮ್‌ (86/2007), ಧರ್ಮಸ್ಥಳ ಕನ್ಯಾಡಿ-2 ಎಂಬಲ್ಲಿ ಶ್ರೀಮತಿ ರತ್ನಾವತಿ (88/2007), ಧರ್ಮಸ್ಥಳ ಸಾಕೇತ್ ವಸತಿ ಗೃಹದ ಮುಂಭಾಗ ಎಂ ನಾರಾಯಣಪ್ಪ (90/2007) ಶವ ಕಂಡು ಬಂದಿತ್ತು ಎಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದೆ.

 

 

ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದ ಬಳಿ ಅಪರಿಚಿತ ಗಂಡಸು (93/2007) ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ಎಂಬಲ್ಲಿ ಬಿ ಕೆ ರಮೇಶ್‌ (15/2007), ಉಜಿರೆ ಗ್ರಾಮದ ನೀರಾಡಿ ಮನೆ ಎಂಬಲ್ಲಿ ಪೀಟರ್‍‌ (16/2007), ಉಜಿರೆ ಗ್ರಾಮದ ಕಲ್ಲೆಮನೆ ಎಂಬಲ್ಲಿ ಲೀನಾ (20/2007), ನೇತ್ರಾವತಿ ಸ್ನಾನ ಘಟ್ಟದಲ್ಲಿ ಮಂಜುನಾಥ, ಸುರೇಶ್‌ (21/2007),

ಉಜಿರೆ ಗ್ರಾಮದ ಬೆಟ್ಟದ ಗುಡ್ಡೆ ಎಂಬಲ್ಲಿ ಶ್ರೀಮತಿ ಕಮಲ (23/2007), ಧರ್ಮಸ್ಥಳ ಮುಖ್ಯ ದ್ವಾರದ ಬಳಿ ಅಪರಿಚಿತ ಗಂಡಸು (24/2007), ನೇತ್ರಾವತಿ ಹೊಳೆಯಲ್ಲಿ ಅರುಣ್‌ ಕುಮಾರ್‍‌ (25/2007), ಧರ್ಮಸ್ಥಳ ಗ್ರಾಮದ ಪಾಂಗಳ ಎಂಬಲ್ಲಿ ಶಶಿಧರ್‍‌ (27/2007),

 

 

ಧರ್ಮಸ್ಥಳ ಗ್ರಾಮದ ಹರಕೆ ಮಂಡೆಯ ಬಳಿ ಅಪರಿಚಿತ ವ್ಯಕ್ತಿ (29/2007), ಧರ್ಮಸ್ಥಳ ಗ್ರಾಮದ ಮಹೋತ್ಸವದ ಕಟ್ಟಡದ ಬಳಿ ಅಪರಿಚಿತ ವ್ಯಕ್ತಿ (34/2007) ಶವ ಪತ್ತೆಯಾಗಿತ್ತು.

 

2008

 

ಧರ್ಮಸ್ಥಳದ ಶರಾವತಿ ವಸತಿ ಗೃಹದಲ್ಲಿ ಸುಧಾಕರ ಶೆಟ್ಟಿ (27/2008 ), ಉಜಿರೆಯ ವಿದ್ಯಾನಗರ ಎಂಬಲ್ಲಿ ಕುಮಾರಿ ಲತಾ (28/2008), ಧರ್ಮಸ್ಥಳದ ಅಶೋಕ ನಗರ ಎಂಬಲ್ಲಿ ಅಮ್ಮು (29/2008), ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಅಪರಿಚಿತ ಗಂಡಸು ಮತ್ತು ಹೆಂಗಸು (31/2008 ) ಉಜಿರೆಯ ಬಸ್ ನಿಲ್ದಾಣ ಬಳಿ ಅಪರಿಚಿತ ಗಂಡಸು (33/2008), ಧರ್ಮಸ್ಥಳ ಗ್ರಾಮದ ನಡುಗುಡ್ಡೆಯಲ್ಲಿ ಶಾಂತ (34/2008), ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಅಪರಿಚಿತ ಗಂಡಸು (35/2008), ನೇತ್ರಾವತಿ ನದಿಯಲ್ಲಿ ತನಿಯಪ್ಪ ಗೌಡ (36/2008), ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದಲ್ಲಿ ಅಪರಿಚಿತ ಗಂಡಸು (38/2008), ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದಲ್ಲಿ ವೆಂಕಪ್ಪಗೌಡ, ಧರ್ಣಪ್ಪ ಗೌಡ (40/2008), ಧರ್ಮಸ್ಥಳ ಗೊಮ್ಮಟ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಅಪರಿಚಿತ ಗಂಡಸು (01/2008), ಧರ್ಮಸ್ಥಳ ಮಲ್ಲಾರ ಮಾಡಿ ಎಂಬಲ್ಲಿ ಕೃಷ್ಣ (03/2008), ಉಜಿರೆ ಪೇಟೆಯಲ್ಲಿ ಅಪರಿಚಿತ ಗಂಡಸು (04/2008), ಧರ್ಮಸ್ಥಳ ನೇತ್ರಾವತಿ ನದಿ ಬಳಿಯ ಗುಡ್ಡದಲ್ಲಿ ಬಸವರಾಜ್‌ (09//2008) ಮೃತಪಟ್ಟಿದ್ದ ಎಂದು ಪ್ರಕರಣ ದಾಖಲಾಗಿತ್ತು.

 

2009

 

ಉಜಿರೆಯ ಸಿದ್ಧವನದ ಬಳಿ ಕುಮಾರಿ ಆಶಾ (82/2009), ನೇತ್ರಾವತಿ ಸ್ನಾನಘಟ್ಟದ ಬಳಿ ಅಪರಿಚಿತ ಗಂಡಸು (84/2009), ಧರ್ಮಸ್ಥಳ ವೈಶಾಲಿ ವಸತಿ ಗೃಹ ಕೊಠಡಿಯಲ್ಲಿ ಸುರೇಶ್‌ ಹಾವೇರಿ (86/2009 ), ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ತೀರ್ಥಗುಂಡಿ ಎಂಬಲ್ಲಿ ಅಪರಿಚಿತ ಮಹಿಳೆ (91/2009), ಧರ್ಮಸ್ಥಳ ನೇತ್ರಾವತಿ ನದಿ ನೀರಿನಲ್ಲಿ ಅಪರಿಚಿತ ಮಹಿಳೆ (95/2009), ಧರ್ಮಸ್ಥಳ ನೇತ್ರಾವತಿ ನದಿ ನೀರಿನಲ್ಲಿ ಅಪರಿಚಿತ ಗಂಡಸು (96/2009), ಉಜಿರೆಯ ಕುಡೇಕಲ್‌ ಎಂಬಲ್ಲಿ ಕೃಷ್ಣಪ್ಪ (42/2009),

ಧರ್ಮಸ್ಥಳ ನೇತ್ರಾವತಿ ನದಿ ನೀರಿನಲ್ಲಿ ಗೋಪಾಲಕೃಷ್ಣ (44/2009), ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದಲ್ಲಿ ಅಪರಿಚಿತ ಗಂಡಸು (45/2009 ), ಧರ್ಮಸ್ಥಳ ಶರಾವತಿ ವಸತಿ ಗೃಹದಲ್ಲಿ ಶ್ರೀನಿವಾಸ ಅಯ್ಯಂಗಾರ್‍‌ (46/2009), ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದಲ್ಲಿ ಅಪರಿಚಿತ ಗಂಡಸು (47/2009), ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದಲ್ಲಿ ಶಿವಕುಮಾರ್ (50/2009),

 

ಧರ್ಮಸ್ಥಳ ನೇತ್ರಾವತಿ ನದಿ ನೀರಿನಲ್ಲಿ ಅಪರಿಚಿತ ಹುಡುಗಿ (51/2009 ), ಧರ್ಮಸ್ಥಳ ನೇತ್ರಾವತಿ ನದಿ ನೀರಿನಲ್ಲಿ ಮಂಜುನಾಥ ಶೆಟ್ಟಿ (52/2009), ಧರ್ಮಸ್ಥಳ ನೇತ್ರಾವತಿ ನದಿ ನೀರಿನಲ್ಲಿ ಅಪರಿಚಿತ ಗಂಡಸು ( 53/2009) ಉಜಿರೆಯ ಪ್ರತೀತ ಲಾಡ್ಜ್‌ನಲ್ಲಿ ಉಬೇದುಲ್ಲಾ (55/2009) ಎಂಬುವರು ಮೃತಪಟ್ಟಿದ್ದರು.

 

2010

 

ಧರ್ಮಸ್ಥಳ ಹಳೆ ಬಸ್‌ ನಿಲ್ದಾಣದಲ್ಲಿ ಎಂ ಸಿ ಬಸವಯ್ಯ (44/2010), ಉಜಿರೆಯ ಮುಂಡತ್ತೋಡಿ ಮನೆಯಲ್ಲಿ ಬಾಲಕ್ಕ (45/2010), ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದಲ್ಲಿ ಅಪರಿಚಿತ ವ್ಯಕ್ತಿ (46/2010), ಉಜಿರೆಯ ಅರ್ಬಿ ಎಂಬಲ್ಲಿ ಶ್ರೀಧರ ಶೆಟ್ಟಿ (50/2010), ಉಜಿರೆಯ ಟಿ ಬಿ ಕ್ರಾಸ್‌ ಎಂಬಲ್ಲಿ ಶ್ರೀಮತಿ ಗಾಯತ್ರಿ (51/2010), ಧರ್ಮಸ್ಥಳ ಶರಾವತಿ ವಸತಿ ಗೃಹದಲ್ಲಿ ಅಪರಿಚಿತ ಯುವಕ (55/2010), ಧರ್ಮಸ್ಥಳ ಆಮೃತವರ್ಷಿಣಿ ಸಭಾ ಭವನದ ವೇದಿಕೆ ಬಳಿ ಅಪರಿಚಿತ ವ್ಯಕ್ತಿ (57/2010),

ಉಜಿರೆಯ ಕುಂಟಿನಿಬೈಲು ಎಂಬಲ್ಲಿ ರಾಜು (59/2010), ಧರ್ಮಸ್ಥಳ ದೊಂಡೋಲೆ ಹಳೇ ಸೇತುವೆ ಬಳಿ ವೇಣು ವಿ (62/2010), ಉಜಿರೆಯ ದೊಂಪದಪಲೈ ಎಂಬಲ್ಲಿ ಪ್ರದೀಪ್‌ (64/2010), ಧರ್ಮಸ್ಥಳ ನೇತ್ರಾವತಿ ನದಿ ನೀರಿನಲ್ಲಿ ರಾಜಾ ಭಕ್ಷಿ (02/2010) ಧರ್ಮಸ್ಥಳ ನದಿ ನೀರಿನಲ್ಲಿ ಮಂಜುನಾಥ (05/2010), ಧರ್ಮಸ್ಥಳ ಮಾಹಿತಿ ಕಚೇರಿ ಶೌಚಾಲಯದಲ್ಲಿ ಅಪರಿಚಿತ ಗಂಡಸು (07/2010) ಸಾವಿಗೀಡಾಗಿದ್ದರು.

ಧರ್ಮಸ್ಥಳ ಪಾಂಗಳ ಎಂಬಲ್ಲಿ ಮೋಹನ ಗೌಡ (08/2010), ಉಜಿರೆಯ ಕಕ್ಕರಬೆಟ್ಟು ಎಂಬಲ್ಲಿ ಶ್ರೀಮತಿ ವಿದ್ಯಾ (21/2010), ಧರ್ಮಸ್ಥಳ ಮಹೋತ್ಸವ ಮೈದಾನದ ಬಳಿ ಅಪರಿಚಿತ ಗಂಡಸು (23/2010 ), ಧರ್ಮಸ್ಥಳ ಗಾಯತ್ರಿ ವಸತಿ ಗೃಹದಲ್ಲಿ ರಮೇಶ್‌ (25/2010) ಧರ್ಮಸ್ಥಳದ ಮಾಹಿತಿ ಕಚೇರಿ ಬಳಿ ಎನ್‌ ಬಿ ವಿಜಯ್‌ (34/2010), ಉಜಿರೆ ಪಟ್ಟಾಜೆ ಎಂಬಲ್ಲಿ ವೆಂಕಪ್ಪ (35/2010), ಧರ್ಮಸ್ಥಳ ಅನುದಾನಿತ ಪ್ರೌಢಾಲೆ ಮೈದಾನದಲ್ಲಿ ಅಪರಿಚಿತ ಗಂಡಸು (38/2010), ಧರ್ಮಸ್ಥಳ ವೈಶಾಲಿ ವಸತಿ ಗೃಹದಲ್ಲಿ ಸುಬ್ರಹ್ಮಣ್ಯ (42/2010) ಉಜಿರೆ ಪೇಟೆಯ ಕರ್ನಾಟಕ ಬ್ಯಾಂಕ್‌ ರಸ್ತೆಯ ಎದುರು ಅಪರಿಚಿತ ವ್ಯಕ್ತಿ (43/2010) ಮೃತಪಟ್ಟಿದ್ದರು.

 

2011

 

ಧರ್ಮಸ್ಥಳದ ಗಂಗೋತ್ರಿ ವಸತಿ ಗೃಹದಲ್ಲಿ ಶಿವಾಜಿ ಸಾಹುಲ್‌ ರಾಮ್‌ ಪಾಟೀಲ್‌ (58/2011), ಉಜಿರೆ ಗ್ರಾಮದ ಮಾಚಾರು ಬದನಾಜೆಯಲ್ಲಿ ಜಗದೀಶ್‌ ಪೂಜಾರಿ (61/2011), ಧರ್ಮಸ್ಥಳದಲ್ಲಿ ಲತಾ (63/2011), ಧರ್ಮಸ್ಥಳದ ನೇತ್ರಾವತಿ ನದಿ ನೀರಿನಲ್ಲಿ ಅಪರಿಚಿತ ಹೆಂಗಸು (66/2011), ಧರ್ಮಸ್ಥಳದ ಕೆಎಸ್‌ಆರ್‍‌ಟಿಸಿ ಬಸ್‌ ನಿಲ್ದಾಣ ಬಳಿ ದೇವರಾಜ್‌ (68/2011), ಧರ್ಮಸ್ತಳ ಗ್ರಾಮದ ಕಲ್ಲೇರಿ ವಿದೂಷಿ ನಗರ ಎಂಬಲ್ಲಿ ತಿಮ್ಮಯ್ಯ ಭಟ್ಟ (16/2011), ಧರ್ಮಸ್ಥಳ ನೇತ್ರಾವತಿ ನದಿ ಸ್ನಾನಘಟ್ಟದಲ್ಲಿ ಶ್ರೀಮತಿ ಧನಲಕ್ಷ್ಮಿ (19/2011), ಉಜಿರೆಯ ಕಲ್ಲೆ ಎಂಬಲ್ಲಿ ಅಪರಿಚಿತ ಗಂಡಸು (20/2011), ಧರ್ಮಸ್ಥಳ ನೇತ್ರಾವತಿ ನದಿ ನೀರಿನಲ್ಲಿ ಡಿ ಆರ್‍‌ ಪ್ರಶಾಂತ್‌ (23/2011) ಧರ್ಮಸ್ಥಳದ ನೇತ್ರಾವತಿ ಗೆಸ್ಟ್‌ ಹೌಸ್‌ನಲ್ಲಿ ರಾಘವೇಂದ್ರ (24/2011), ಧರ್ಮಸ್ಥಳ ಸ್ನಾನ ಘಟ್ಟದ ಪಕ್ಕದ ಕಾಡಿನಲ್ಲಿ ಅಪರಿಚಿತ ಗಂಡಸು (25/2011)ವಿನ ಶವ ಪತ್ತೆಯಾಗಿತ್ತು.

ನೇತ್ರಾವತಿ ನದಿ ನೀರಿನಲ್ಲಿ ಮಂಜುನಾಥ (31/2011), ಧರ್ಮಸ್ಥಳದ ಕನ್ಯಾಡಿ ಎಂಬಲ್ಲಿ ರಮೇಶ್‌ ಪೂಜಾರಿ (34/2011), ಉಜಿರೆಯ ಸಿದ್ಧವನ ಎಂಬಲ್ಲಿ ಮನೋಜ್‌ ಬಿ ಎನ್‌ (36/2011), ನೇತ್ರಾವತಿ ಸ್ನಾನ ಘಟ್ಟದ ಬಳಿ ಅಪರಿಚಿತ ಗಂಡಸು (37/2011), ಧರ್ಮಸ್ಥಳ ನೇತ್ರಾವತಿ ನದಿ ನೀರಿನಲ್ಲಿ ಚಲುವರಾಜು (39/2011), ಧರ್ಮಸ್ಥಳ ಮೂಡಂಗಲ್ ನಲ್ಲಿ ಅಪರಿಚಿತ ಗಂಡಸು (40/2011), ಧರ್ಮಸ್ಥಳ ನೇತ್ರಾವತಿ ನದಿ ನೀರಿನಲ್ಲಿ ಡಿ ಎನ್‌ ನವೀನ್‌ ಕುಮಾರ್‍‌ (41/2011) ಧರ್ಮಸ್ಥಳ ವೈಶಾಲಿ ವಸತಿ ಗೃಹದ ಶೌಚಾಲಯದಲ್ಲಿ ಅಪರಿಚಿತ ಗಂಡಸು (42/2011) ಧರ್ಮಸ್ಥಳ ರಾಮಮಂದಿರ ಬಳಿ ವಾಸದ ಮನೆಯಲ್ಲಿ ಕುಮಾರಿ ರಚನಾ (43/2011), ಧರ್ಮಸ್ಥಳ ಕೆಎಸ್‌ಆರ್‍‌ಟಿಸಿ ಬಸ್ ನಿಲ್ದಾಣದಲ್ಲಿ ಅಪರಿಚಿತ ಗಂಡಸು (45/2011), ಧರ್ಮಸ್ಥಳ ನೇತ್ರಾವತಿ ಹೊಸ ಸೇತುವೆ ಬಳಿ ಅಪರಿಚಿತ ಹೆಂಗಸು (46/2011), ಉಜಿರೆಯ ಮಾಚಾರು ಕಟ್ಟದ ಬೈಲು ಎಂಬಲ್ಲಿ ಶ್ರೀಧರ ರಾವ್ (48/2011), ಧರ್ಮಸ್ಥಳದ ಕನ್ಯಾಡಿ -2 ಎಂಬಲ್ಲಿ ನಾರಾಯಣಗೌಡ (51/2011), ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದಲ್ಲಿ ಅಪರಿಚಿತ ಹೆಂಗಸಿನ (53/2011) ಶವ ಪತ್ತೆಯಾಗಿತ್ತು.

 

2012

 

ಧರ್ಮಸ್ಥಳದ ಶರಾವತಿ ಲಾಡ್ಜ್‌ನಲ್ಲಿ ರಂಗರಾವ್‌ ಕೌಶಲ್‌ (04/2012), ಧರ್ಮಸ್ಥಳ ಆಶೋಕ ನಗರದಲ್ಲಿ ಕುಮಾರಿ ಹೊನ್ನಮ್ಮ (05/2012), ಉಜಿರೆ ಗ್ರಾಮದ ಪೊಡಂಬು ಮನೆ ಎಂಬಲ್ಲಿ ರಾಘವ ಗೌಡ (11/2012), ಧರ್ಮಸ್ಥಳದ ಸ್ನಾನಘಟ್ಟದ ಬಳಿ ಹನುಮೇಗೌಡ (16/2012), ಉಜಿರೆಯ ಮಾಚಾರು ಗುಂಡ್ಕಂಡ ಮನೆ ಎಂಬಲ್ಲಿ ಹರೀಶ್‌ (17/2012), ಉಜಿರೆ ಗ್ರಾಮದ ಮಾವಂತೂರು ರೆಸಿಡೆನ್ಸಿಯಲ್ಲಿ ಉದಯ (41/2012 ), ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದಲ್ಲಿ ನರೇಂದ್ರಬಾಬು (48/2012),

ಧರ್ಮಸ್ಥಳ ನೇತ್ರಾವತಿ ನದಿ ನೀರಿನಲ್ಲಿ ಪುರುಷೋತ್ತಮ (49/2012), ಧರ್ಮಸ್ಥಳ ನೇತ್ರಾವತಿ ನದಿ ನೀರಿನಲ್ಲಿ ರಮ್ಯಾ (50/2012), ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಶಾಂತಿವನ ಎಂಬಲ್ಲಿ ಅಪರಿಚಿತ ಗಂಡಸು (56/2012), ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದಲ್ಲಿ ಶಶಿಕುಮಾರ್‍‌ (58/2012),

ಉಜಿರೆ ಗ್ರಾಮದ ಹಳೇಪೇಟೆ ಎಂಬಲ್ಲಿ ಕುಮಾರಿ ಶರಣ್ಯ (59/2012), ಉಜಿರೆಯ ಮಳೆ ನೀರು ಹರಿದು ಹೋಗುವ ಚರಂಡಿ ನೀರಿನಲ್ಲಿ ಜಗದೀಶ್‌ ಶೆಟ್ಟಿ( 60/2012), ಉಜಿರೆಯ ಪೆರ್ಲ ಕಾಲೋಣಿಯ ದರ್ಖಾಸ್ತು ಎಂಬಲ್ಲಿ ತನಿಯಪ್ಪ (62/2012) ಧರ್ಮಸ್ಥಳ ನೇತ್ರಾವತಿ ನದಿಯ ಸೇತುವೆ ಬಳಿ ಹನುಮಂತ ನಾಯ್ಕ (63/2012) ಮೃತಪಟ್ಟಿದ್ದ ಎಂದು ಪ್ರಕರಣ ದಾಖಲಾಗಿರುವುದು ಗೊತ್ತಾಗಿದೆ.

 

2013

 

ಧರ್ಮಸ್ಥಳ ನೇತ್ರಾವತಿ ವಸತಿ ಗೃಹದ ಬಳಿ ವಿಜಯಾ (21/2013), ನೇತ್ರಾವತಿ ನದಿ ಪಕ್ಕದ ಬಿಡಾರದಲ್ಲಿ ರವಿ ಪೂಜಾರಿ (ಯುಡಿಆರ್‍‌ 23/2013), ಧರ್ಮಸ್ಥಳ ಮಾರಿಗುಡಿ ಬಳಿ ಹಳೆ ರಸ್ತೆಯ ಬದಿ ಅಪರಿಚಿತ ಗಂಡಸು (24/2013), ಧರ್ಮಸ್ಥಳದ ಅಂಬಲಿ ಅಬಿಔ ಹೊಳೆಯಲ್ಲಿ ರಾಮಣ್ಣ ಮಲೆಕುಡಿಯ (27/2013), ಧರ್ಮಸ್ಥಳ ಪಾಂಗಾಳ ಬರಮೇಲು ಎಂಬಲ್ಲಿ ಸುಂದರ ಗೌಡ (29/2013), ಧರ್ಮಸ್ಥಳ ಮಡಿವಾಳ ಚಡವು ಎಂಬಲ್ಲಿ ಯಲ್ಲಪ್ಪ ಡಿಗೂರ (31/2013), ಧರ್ಮಸ್ಥಳ ಶರಾವತಿ ಲಾಡ್ಜ್‌ನಲ್ಲಿ ಈಶ್ವರಪ್ಪ (33/2013), ಧರ್ಮಸ್ಥಳ ಶರಾವತಿ ವಸತಿ ಗೃಹದಲ್ಲಿ ರಾಕೇಶ್‌ ಎಸ್‌ ಕೋರ್ಮಾರ್‍‌ (36/2013), ಧರ್ಮಸ್ಥಳ ದೇವಸ್ಥಾನದ ಬಳಿ ಬಸಪ್ಪ ಎಸ್‌ ದೇಸಾಯಿ (42/2013) ಸಾವಿಗೀಡಾಗಿದ್ದರು.

 

ಕೊಲೆಯಾದವರು

 

2012ರ ನವೆಂಬರ್‍‌ 27ರಿಂದ 2013ರ ಜೂನ್‌ 25ರ ಮಧ್ಯೆ ಧರ್ಮಸ್ಥಳ ಗ್ರಾಮದಲ್ಲಿ ಆಕಸ್ಮಿಕ ಸಾವು, ಆತ್ಮಹತ್ಯೆ ಮತ್ತು ಅಸಹಜ ಸಾವು ಪ್ರಕರಣಗಳೂ ದಾಖಲಾಗಿವೆ.

 

 

ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ಹೈಸ್ಕೂಲ್‌ ಬಳಿ ಅರುಣ್‌ ಕುಮಾರ್‍‌ (53), ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ವೈಶಾಲಿ ವಸತಿ ಗೃಹದ ಬಳಿ ಶ್ರೀಮತಿ ಸಾಬವ್ವ (53), ಶರಾವತಿ ವಸತಿ ಗೃಹದಲ್ಲಿ ಮಂಜುನಾಥ (26), ನೇತ್ರಾವತಿ ಸ್ನಾನ ಘಟ್ಟದ ಬಳಿ ಜಿ ಎನ್‌ ಗಣೇಶ್‌ ಜಾವಡಗಿ (25),

ನೇತ್ರಾವತಿ ಸ್ನಾನಘಟ್ಟದ ಬಳಿ ಸಂತೋಷ (22), ನೇತ್ರಾವತಿ ನದಿ ನೀರಿನಲ್ಲಿ ಲಕ್ಷ್ಮಿಯಮ್ಮ (45), ಮಡಿವಾಳಚಡುವು ಎಂಬಲ್ಲಿ ಅಪರಿಚಿತ ಗಂಡಸು (40), ನೇತ್ರಾವತಿ ಸ್ನಾನ ಘಟ್ಟದ ಬಳಿ ಅಪರಿಚಿತ ಗಂಡಸಿನ (35) ಶವ ಪತ್ತೆಯಾಗಿತ್ತು.

SUPPORT THE FILE

Latest News

Related Posts