ಬದಲಿ ನಿವೇಶನ; ಅರ್ಜಿದಾರ, ಪುತ್ರ ಮೂಕಪ್ರೇಕ್ಷಕರಲ್ಲ, ಎ ಸಿ ಕೊಠಡಿಯಲ್ಲೇ ತಯಾರಾಗಿತ್ತೇ ತಪಾಸಣೆ ವರದಿ?

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ 14 ಬದಲಿ ನಿವೇಶನಗಳನ್ನು ನೀಡುವ ಸಂಬಂಧ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿದ್ದ ಸಭೆಯಲ್ಲಿ ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಅವರ ಪುತ್ರ ಹಾಗೂ ಶಾಸಕ ಯತೀಂದ್ರ ಅವರು ಮೂಕ ಪ್ರೇಕ್ಷಕರಾಗಿದ್ದರು ಎಂಬುದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಬದಲಿ ನಿವೇಶನ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೊಳಪಡಿಸಲು ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಎತ್ತಿ ಹಿಡಿದಿರುವ ರಾಜ್ಯ ಉಚ್ಛ ನ್ಯಾಯಾಲಯವು ನೀಡಿರುವ ತೀರ್ಪಿನಲ್ಲಿ ಈ ಅಂಶವನ್ನು ಉಲ್ಲೇಖಿಸಿದೆ.

 

ಅದೇ ರೀತಿ ತಹಶೀಲ್ದಾರ್‍‌ ಮತ್ತು ಜಿಲ್ಲಾಧಿಕಾರಿಗಳು ನೀಡಿದ್ದ ತಪಾಸಣೆ ವರದಿಯು ನಿಗೂಢವಾಗಿದೆ ಎಂದೂ ತನ್ನ ತೀರ್ಪಿನಲ್ಲಿ ಹೇಳಿದೆ.

 

ಬದಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ 2021ರ ಮಾರ್ಚ್‌ 20ರಂದು ನಡೆದಿದ್ದ ಸಾಮಾನ್ಯ ಸಭೆಯಲ್ಲಿ ವಿಧಾನಸಭೆ ಸದಸ್ಯರೂ ಮತ್ತು ಸಿದ್ದರಾಮಯ್ಯ ಅವರ ಪುತ್ರನೂ ಆಗಿರುವ ಡಾ ಯತೀಂದ್ರ ಅವರು ಹಾಜರಾಗಿದ್ದರು. ಇದೇ ಸಭೆಯಲ್ಲಿಯೇ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ಬದಲಿ ನಿವೇಶನಗಳು ಹಂಚಿಕೆಗೆ ಅನುಮೋದನೆ ನೀಡಲಾಗಿತ್ತು.

 

 

 

ಈ ಸಂಗತಿಯನ್ನು ಅವಲೋಕಿಸಿರುವ ನ್ಯಾಯಾಲಯವು  ‘ಅರ್ಜಿದಾರರ ಮಗ ಸಭೆಯ ಚರ್ಚೆಯಲ್ಲಿ ಮೂಕ ಪ್ರೇಕ್ಷಕರಾಗಿದ್ದರು ಮತ್ತು ಒಂದು ಮಾತನ್ನೂ ಹೇಳಲಿಲ್ಲ. ಹೇಳುವುದಾದರೆ ಇದೊಂದು ಅಸಂಬದ್ಧವಾಗಿದೆ. ಮಾಜಿ ಮುಖ್ಯಮಂತ್ರಿಯ ಮಗ ಮತ್ತು ಈಗಿನ ವಿರೋಧ ಪಕ್ಷದ ನಾಯಕ, ಕಾನೂನು ರೂಪಿಸುವವರು ಚರ್ಚೆಯಲ್ಲಿ ಮೂಕ ಪ್ರೇಕ್ಷಕನಾಗಿರುತ್ತಾನೆ ಎಂಬುದನ್ನು ಸಮರ್ಥಿಸಲು ಸಾಧ್ಯವಿಲ್ಲ. ಅದೇನೇ ಇದ್ದರೂ ಫಲಾನುಭವಿ ಅವರ ತಾಯಿ, ಅರ್ಜಿದಾರರ ಪತ್ನಿಯೇ ಆಗಿದ್ದಾರೆ.  ಮತ್ತು ಅರ್ಜಿದಾರರ ಪತ್ನಿಯಿಂದ ರಿಲಿಕ್ವಿಶ್‌ಮೆಂಟ್ ಡೀಡ್ ಅನ್ನು ಕಾರ್ಯಗತಗೊಳಿಸಲಾಗಿತ್ತು,’ ಎಂದು ತೀರ್ಪಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ನ್ಯಾಯಾಲಯವು ತನ್ನ ಅವಲೋಕನವನ್ನು ಮತ್ತಷ್ಟು ವಿಸ್ತರಿಸಿದೆ.

 

‘ಮೇಲ್ಕಂಡ ಈ ಎಲ್ಲಾ ಆರೋಪಗಳು, ನ್ಯಾಯಾಲಯದ ದೃಷ್ಟಿಕೋನದಲ್ಲಿ ಕನಿಷ್ಠ ತನಿಖೆಯ ಅಗತ್ಯವಿರುತ್ತದೆ. ಏಕೆಂದರೆ ಅರ್ಜಿದಾರರು ಅಧಿಕಾರದ ಸ್ಥಾನದಲ್ಲಿಲ್ಲದಿದ್ದರೆ, ವ್ಯವಹಾರಗಳ ಚುಕ್ಕಾಣಿ, ಇಷ್ಟು ಪ್ರಮಾಣದಲ್ಲಿ ಪ್ರಯೋಜನವಾಗುವುದಿಲ್ಲ. ಕಾಲಕಾಲಕ್ಕೆ ನಿಯಮವನ್ನು ಸಡಿಲಗೊಳಿಸಿ ತ್ವರಿತಗತಿಯಲ್ಲಿ ಸಿಗುವ ಈ ಪ್ರಯೋಜನಗಳನ್ನು ಸಾಮಾನ್ಯ ಮನುಷ್ಯನು ಪಡೆಯುವುದು ಕೇಳರಿಯದ ಸಂಗತಿ.

 

ಆದ್ದರಿಂದ, ಅರ್ಜಿದಾರನು ತನ್ನ ಸಹಿಯನ್ನು ಹಾಕದೆ ಇರಬಹುದು, ಅಥವಾ ಶಿಫಾರಸ್ಸು ಮಾಡಿಲ್ಲ ಎಂದರೂ ಫಲಾನುಭವಿಯು ಅಪರಿಚಿತರಲ್ಲ. ಇದರ ಫಲಾನುಭವಿಯೂ ಅರ್ಜಿದಾರರ ಪತ್ನಿ ಆಗಿದ್ದಾರೆ.

 

 

ತನಗೆ 62 ಕೋಟಿ ರು ನೀಡಿದರೇ ಆಸ್ತಿಯನ್ನು ಮುಡಾಕ್ಕೆ ವಾಪಸ್‌ ನೀಡಲಾಗುವುದು ಎಂದು ಅರ್ಜಿದಾರರೇ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ,’ ಎಂದು ಹೇಳಿದೆ.

 

ಅದೇ ರೀತಿ ತಹಶೀಲ್ದಾರ್‍‌ ಮತ್ತು ಜಿಲ್ಲಾಧಿಕಾರಿಗಳು ನೀಡಿರುವ ಸ್ಥಳ ತಪಾಸಣೆ ವರದಿಯ ಕುರಿತೂ ಅವಲೋಕಿಸಿದೆ.

 

ಸಿಎಂ ಪತ್ನಿಗೆ ಬದಲಿ ನಿವೇಶನ; ತಹಶೀಲ್ದಾರ್‍‌ ವರದಿಯಲ್ಲಿ ಉಲ್ಲೇಖವಾಗದ ಉದ್ಯಾನ, ರಸ್ತೆ ವಿವರ

‘ಈ ಜಮೀನಿನಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿಲ್ಲ, ಮರಗಳು ಬೆಳೆದಿಲ್ಲ, ಕಟ್ಟಡಗಳು ತಲೆ ಎತ್ತಿಲ್ಲ ಮತ್ತು ಭೂ ಸ್ವಾಧೀನದಿಂದ ಕೈಬಿಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ವರದಿಯಲ್ಲಿ ನಿರೂಪಣೆ ಮಾಡಿದ್ದಾರೆ.

 

 

ಆಗ ಕೃಷಿ ಭೂಮಿಯ ಅಸ್ತಿತ್ವವೇ ಸಂದೇಹವಿದ್ದುದರಿಂದ ಅವರು ಏನನ್ನು ಪರಿಶೀಲಿಸಿದರು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು,’ ಎಂದು ಉಲ್ಲೇಖಿಸಿದ್ದಾರೆ.

 

ಸಿಎಂ ಪತ್ನಿಗೆ ಬದಲಿ ನಿವೇಶನ ಪ್ರಕರಣ; ಮೂಲ ಜಮೀನಿನ ಸ್ಥಳದಲ್ಲಿದ್ದ ರಸ್ತೆಯನ್ನೇ ಮುಚ್ಚಿಟ್ಟರೇ ಜಿಲ್ಲಾಧಿಕಾರಿ?

 

ಕೃಷಿಯಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿರುವ ಪರಿಶೀಲಿಸಿರುವುದೇ ಒಂದು ನಿಗೂಢವಾಗಿದೆ. ವಾಸ್ತವಿಕವಾಗಿ ಸ್ಥಳ ಪರಿಶೀಲನೆ ನಡೆದಿದೆಯೇ ಅಥವಾ ಹವಾನಿಯಂತ್ರಿತ ಚೇಂಬರ್‌ಗಳಲ್ಲಿ ಕುಳಿತು ವರದಿಯನ್ನು ಬರೆಯಲಾಗಿದೆಯೇ ಎಂಬ ಬಗ್ಗೆ ವಿಚಾರಣೆ ನಡೆಸಬೇಕು ಎಂದೂ ತೀರ್ಪಿನಲ್ಲಿ ಹೇಳಲಾಗಿದೆ.

 

 

ಅದೇ ರೀತಿ 60-40, 50;50ರ ಅನುಪಾತದ ಬಗ್ಗೆಯೂ ನ್ಯಾಯಾಲಯವು ಅವಲೋಕಿಸಿದೆ.

 

60;40ರ ಅನುಪಾತದ ಬದಲಿಗೆ 50;50 ರ ಅನುಪಾತದಲ್ಲಿ ಬದಲಿ ನಿವೇಶನ ಹಂಚಿಕೆ ಪ್ರಕ್ರಿಯೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಮೊದಲ ಅವಧಿಯಲ್ಲೇ ನಡೆದಿತ್ತು.

60;40 ರ ಬದಲಿಗೆ 50;50 ಅನುಪಾತದಲ್ಲಿ ಬದಲಿ ನಿವೇಶನ; ಸಿದ್ದರಾಮಯ್ಯರ ಮೊದಲ ಅವಧಿಯಲ್ಲೇ ಚಮತ್ಕಾರ!

ಈ ಎಲ್ಲಾ ಅಂಶಗಳ ಕುರಿತು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಅವಲೋಕಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts