ಸಂವಿಧಾನ ಪೀಠಿಕೆಯಲ್ಲಿ ಪದ ಬದಲಾವಣೆ!; ‘ಸರ್ವ ಧರ್ಮ ಸಮಭಾವ’ ಬದಲಿಗೆ ‘ಜಾತ್ಯಾತೀತ’ ಸೇರ್ಪಡೆಗೆ ಒಲವು

ಬೆಂಗಳೂರು; ಭಾರತ ಸಂವಿಧಾನದ ಪೀಠಿಕೆಯ ಕನ್ನಡ ಆವೃತ್ತಿಯಲ್ಲಿ ಈಗಾಗಲೇ ಪ್ರಕಟವಾಗಿರುವ ‘ಸರ್ವ ಧರ್ಮ ಸಮ ಭಾವ’ ಎಂಬ ಪದವನ್ನು ಬದಲಿಸಲು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರು ಹೊರಟಿರುವುದು ಇದೀಗ ಬಹಿರಂಗವಾಗಿದೆ.

 

ಸರ್ವ ಧರ್ಮ ಸಮ ಭಾವ ಎಂಬ ಪದಕ್ಕೆ ಬದಲಾಗಿ ‘ಜಾತ್ಯಾತೀತ’ ಎಂಬ ಪದವನ್ನು ಬಳಸುವ ಉದ್ದೇಶದಿಂದ ಸರ್ವ ಧರ್ಮ ಸಮ ಭಾವ ಎಂಬ ಪದವನ್ನು ಬದಲಿಸಲು ಇಲಾಖೆಯು ಚಿಂತಿಸಿದೆ.

 

ಈ ಕುರಿತು ಖುದ್ದು ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಜಿ ಶ್ರೀಧರ್‍‌ ಅವರಿಗೆ ಟಿಪ್ಪಣಿ ಹಾಕಿದ್ದರು.

 

ಈ ಸಂಬಂಧ ಇಲಾಖೆಯು ತನ್ನ ಅಭಿಪ್ರಾಯವನ್ನು ( ಸಂಖ್ಯೆ; ಸಂ ವ್ಯ ಶಾ ಇ /43/ಪಶಾರ/ 2024) ಫೆಬ್ರುವರಿಯಲ್ಲೇ ತಿಳಿಸಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯವು ವಿಧಾಯಿ ಇಲಾಖೆಯು ಭಾರತ ಸಂವಿಧಾನವನ್ನು ಪ್ರಕಟಿಸಿದೆ. ಇದರ ಕನ್ನಡ ಆವೃತ್ತಿಯಲ್ಲಿ ‘ಸರ್ವಧರ್ಮ ಸಮಭಾವ’ ಎಂಬ ಪದವಿದೆ. ಈ ಪದವನ್ನು ಬದಲಾಯಿಸಿ ಜಾತ್ಯತೀತ ಎಂಬ ಪದವನ್ನು ಸೇರಿಸುವ ಸಂಬಂಧ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಗೆ ಟಿಪ್ಪಣಿ ಹಾಕಿದ್ದರು.

 

ಸಚಿವರು ಬರೆದಿದ್ದ ಈ ಟಿಪ್ಪಣಿಯನ್ನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯು ಪರಿಶೀಲಿಸಿದೆ.

 

ಇಲಾಖೆಯ ಟಿಪ್ಪಣಿಯಲ್ಲೇನಿದೆ?

 

ಸಮಾಜ ಕಲ್ಯಾಣ ಇಲಾಖೆಯು ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಮಂತ್ರಾಲಯ ವಿಧಾಯಿ ಇಲಾಖೆಯು ಪ್ರಕಟಿಸಿರುವ ಸಂವಿಧಾನ ಪೀಠಿಕೆಯ ಕನ್ನಡ ಆವೃತ್ತಿಯಲ್ಲಿ ‘secular’ ಪದಕ್ಕೆ ಸರ್ವಧರ್ಮ ಸಮಭಾವದ ಎಂಬ ಪದದ ಬದಲಾಗಿ ‘ಜಾತ್ಯಾತೀತ’ ಎಂಬ ಪದವನ್ನು ತಿದ್ದುಪಡಿ ಮಾಡುವ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಪರಿಶೀಲಿಸಿದೆ.

 

ಕರ್ನಾಟಕ ರಾಜ್ಯಭಾಷಾ (ವಿಧಾಯಿ) ಆಯೋಗ ಮತ್ತು ಭಾಷಾಂತರ ನಿರ್ದೇಶನಾಲಯವು (ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ) ಪ್ರಕಟಿಸಿರುವ ಕಾನೂನು ಪದಕೋಶದಲ್ಲಿ ‘secular’ ಪದದ ಅರ್ಥವು ಸರ್ವ ಧರ್ಮ ಸಮಭಾವದ ಅಥವಾ ಜಾತ್ಯಾತೀತ ಎಂದು ಭಾಷಾಂತರಿಸಿದೆ.

 

‘ಈ ಹಿನ್ನೆಲೆಯಲ್ಲಿ ಸಚಿವರು ಸೂಚಿಸಿರುವಂತೆ ಭಾರತ ಸಂವಿಧಾನದ ಪೀಠಿಕೆಯ ಕನ್ನಡ ಆವೃತ್ತಿಯಲ್ಲಿ ‘secular’ ಪದದ ಸರ್ವ ಧರ್ಮ ಸಮಭಾವದ ಎಂಬ ಪದದ ಬದಲಾಗಿ ಜಾತ್ಯಾತೀತ ಎಂಬ ಪದವನ್ನು ಪ್ರತ್ಯಾಯೋಜಿಸಿದ್ದಲ್ಲಿ ಯಾವುದೇ ಅರ್ಥ ವ್ಯತ್ಯಾಸವಾಗುವುದಿಲ್ಲ. ತಮ್ಮ ಇಲಾಖೆಯು ಪ್ರಸ್ತಾಪಿಸಿರುವಂತೆ ಸರ್ವ ಧರ್ಮ ಸಮಭಾವದ ಎಂಬ ಪದಗಳ ಬದಲಿಗೆ ಜಾತ್ಯಾತೀತ ಎಂಬ ಪದವನ್ನು ಸಂವಿಧಾನ ಪೀಠಿಕೆಯ ಕನ್ನಡ ಆವೃತ್ತಿಯಲ್ಲಿ ಬಳಸಲು ಇಲಾಖೆಯ ಅಭ್ಯಂತರವಿಲ್ಲ,’ ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿ ಜಿ ಶ್ರೀಧರ್‍‌ ಅವರು ಅಭಿಪ್ರಾಯಿಸಿರುವುದು ಗೊತ್ತಾಗಿದೆ.

 

ಸಮಾಜ ಕಲ್ಯಾಣ ಇಲಾಖೆಯ ಸೂಚನೆಯಂತೆ ಈಗಾಗಲೇ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿಗಳು, ಜಿಲ್ಲಾ, ತಾಲೂಕು ಮತ್ತು ಗ್ರಾಮೀಣ ಹಂತದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಸರ್ವಧರ್ಮ ಸಮಭಾವದ ಎಂಬ ಪದವುಳ್ಳ ಸಂವಿಧಾನ ಪೀಠಿಕೆಯ ಕನ್ನಡ ಆವೃತ್ತಿಯ ಫೋಟೋಗಳನ್ನು ಅಳವಡಿಸಲಾಗಿದೆ.

 

ಈ ಮಧ್ಯೆ ಪುನಃ ಸರ್ವಧರ್ಮ ಸಮಭಾವದ ಎಂಬ ಪದವನ್ನು ಬದಲಾಯಿಸಿ ಜಾತ್ಯಾತೀತ ಎಂಬ ಪದವನ್ನು ಸೇರ್ಪಡೆಗೆ ಇಲಾಖೆಯು ಮತ್ತೊಮ್ಮೆ ಸೂಚಿಸಿದಲ್ಲಿ ಇಲಾಖೆಗಳ ಎಲ್ಲಾ ಕಚೇರಿಗಳಲ್ಲೂ ಸಂವಿಧಾನದ ಕನ್ನಡ ಆವೃತ್ತಿಯ ಫೋಟೋಗಳನ್ನು ಬದಲಾಯಿಸಬೇಕಿದೆ. ಹೀಗಾಗಿ ಇದು ಮತ್ತಷ್ಟು ವೆಚ್ಚಕ್ಕೆ ದಾರಿಮಾಡಿಕೊಟ್ಟಂತಾಗಲಿದೆ.

the fil favicon

SUPPORT THE FILE

Latest News

Related Posts