ಇನಾಂ ದತ್ತಾತ್ರೇಯ ಪೀಠದ ಸರ್ಕಾರಿ ಜಮೀನು ಮಾರಾಟ; ಗಣಿ ಸಚಿವರ ಪತ್ರ ಆಧರಿಸಿ ವರದಿಗೆ ನಿರ್ದೇಶನ

ಬೆಂಗಳೂರು; ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಪೀಠದ ಗ್ರಾಮದ 7 ಸರ್ವೆ ನಂಬರ್‍‌ಗಳಲ್ಲಿನ  ಒಟ್ಟು 28.19 ಎಕರೆ ವಿಸ್ತೀರ್ಣದ ಜಮೀನಿನ ದಾಖಲೆಗಳಲ್ಲಿ ನಮೂದಾಗಿರುವ ‘ಸರ್ಕಾರಿ’ ಎಂಬುದನ್ನು  ತೆಗೆದು ಮಾರಾಟ ಮಾಡಲು ಅನುಮತಿ ನೀಡಲು ಕ್ರಮಕೈಗೊಳ್ಳಬೇಕು ಎಂದು ಗಣಿ, ಭೂ ವಿಜ್ಞಾನ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

 

ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಪೀಠದ ಗ್ರಾಮದಲ್ಲಿನ 1,861 ಎಕರೆ 31 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿ ಅಕ್ರಮವಾಗಿ ಖಾತೆ ಮಾಡಿರುವ ಈಗಾಗಲೇ ತನಿಖಾ ವರದಿ ಸಲ್ಲಿಕೆಯಾಗಿದೆ. ಇದರ ಬೆನ್ನಲ್ಲೇ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

 

ಈ ಪತ್ರವನ್ನಾಧರಿಸಿ ವಿವರವಾದ ವರದಿಯನ್ನು ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯು 2024ರ ಮಾರ್ಚ್‌ 16ರಂದು ಪತ್ರ ಬರೆದಿದೆ. ಈ ಪತ್ರಗಳು ಮತ್ತು ಜಮೀನಿಗೆ ಸಂಬಂಧಿಸಿದ ಆರ್‍‌ಟಿಸಿ ಪಹಣಿ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಪ್ರಕರಣದ ವಿವರ

 

ಚಿಕ್ಕಮಗಳೂರು ತಾಲೂಕಿನ ಜಗರಾ ಹೋಬಳಿಯ ಇನಾಂ ದತ್ತಾತ್ರೇಯ ಪೀಠದ ಗ್ರಾಮದ ಸರ್ವೆ ನಂಬರ್‍‌ 61/1, 61/2, 61/3, 65, 66, 105, 108 ಸರ್ವೆ ನಂಬರ್‍‌ಗಳಲ್ಲಿ ಒಟ್ಟಾರೆ 28.19 ಎಕರೆ ವಿಸ್ತೀರ್ಣ ಜಮೀನು ಸರ್ಕಾರಿ ಜಮೀನು ಎಂದು ಆರ್‍‌ಟಿಸಿ ಪಹಣಿ ದಾಖಲೆಗಳಲ್ಲಿ ನಮೂದಾಗಿದೆ.

 

ಸರ್ವೆ ನಂಬರ್‍‌ 61/1 ರಲ್ಲಿ 4.29, ಎಕರೆ

 

 

61/2ರಲ್ಲಿ 2.17 ಎಕರೆ

 

 

ಸರ್ವೇ ನಂಬರ್‍‌ 61/3ರಲ್ಲಿ 3.04 ಎಕರೆ

 

 

ಸರ್ವೆ ನಂಬರ್‍‌ 65ರಲ್ಲಿ 6.00 ಎಕರೆ

 

 

ಸರ್ವೆ ನಂಬರ್‍‌ 66ರಲ್ಲಿ 3.34 ಎಕರೆ

 

 

ಸರ್ವೆ ನಂಬರ್ 105ರಲ್ಲಿ 5.06 ಎಕರೆ

 

 

ಸರ್ವೆ ನಂಬರ್‍‌ 108ರಲ್ಲಿ 4.29

 

 

ಈ ಸರ್ವೆ ನಂಬರ್‍‌ಗಳಲ್ಲಿ ಒಟ್ಟಾರೆ 28.19 ಎಕರೆ ವಿಸ್ತೀರ್ಣವಿರುವುದು ಆರ್‍‌ಟಿಸಿ ದಾಖಲೆಗಳಿಂದ ಗೊತ್ತಾಗಿದೆ.

 

ಈ ಜಮೀನುಗಳ ದಾಖಲೆಗಳಲ್ಲಿ ಈಗಲೂ ಸರ್ಕಾರಿ ಎಂದೇ ನಮೂದಾಗಿದೆ. ಆದರೆ ಈ ಜಮೀನುಗಳನ್ನು ಸೊಕ್ಕಲಿಂಗಂ ಎಂಬುವರು 1994ರ ಜನವರಿ 27ರಂದು ಖರೀದಿಸಿದ್ದರು. 1994ರಿಂದಲೂ ಈಗಿನವರೆಗೂ ಈ ಜಮೀನುಗಳು ಸೊಕ್ಕಲಿಂಗಂ ಎಂಬುವರು ಹಕ್ಕುದಾರರಾಗಿದ್ದಾರೆ ಎಂಬುದು ಪಹಣಿಯಿಂದ ತಿಳಿದು ಬಂದಿದೆ.

 

ಈ ಜಮೀನುಗಳನ್ನು ಸೊಕ್ಕಲಿಂಗಂ ಮಾರಾಟ ಮಾಡುವ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರಿಗೆ ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನಾಧರಿಸಿ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರು 2023ರ ಅಕ್ಟೋಬರ್‍‌ 10ರಂದು ಸಚಿವ ಕೃಷ್ಣಬೈರೇಗೌಡ ಅವರಿಗೆ ಪತ್ರವೊಂದನ್ನು ಬರೆದಿದ್ದರು.

 

ಸೊಕ್ಕಲಿಂಗಂ ಪತ್ರದಲ್ಲೇನಿದೆ?

 

ಚಿಕ್ಕಮಗಳೂರು ತಾಲೂಕು ಜಗರಾ ಹೋಬಳಿಯ ಇನಾಂ ದತ್ತಾತ್ರೇಯ ಪೀಠ ಗ್ರಾಮದ ಸರ್ವೆ ನಂಬರ್‍‌ 61/1, 61/2, 61/3, 65, 66, 105, 108ರಲ್ಲಿನ ಜಮೀನುಗಳಲ್ಲಿ ಕಾಫಿ ಪ್ಲಾಂಟೇಷನ್‌ಗಳಾಗಿವೆ. ಈ ಜಮೀನುಗಳು ಸರ್ಕಾರಿ ಭೂಮಿಯಾಗಿದ್ದು 1986ರ ಜನವರಿ 30ರಂದು ಭೂ ನ್ಯಾಯಾಧೀಕರಣದ ಅಧ್ಯಕ್ಷರ ಆದೇಶದ ಪ್ರಕಾರ ಈ ಸರ್ವೇ ನಂಬರ್‍‌ಗಳು ಸರ್ಕಾರಿ ಜಮೀನುಗಳೆಂದು ನಮೂದಿಸಿ ಆದೇಶ ಮಾಡಿರುತ್ತಾರೆ.

 

1994ರ ಜನವರಿ 27ರಂದು ಈ ಜಮೀನುಗಳನ್ನು ಸೊಕ್ಕಲಿಂಗಂ ಅವರು ಖರೀದಿಗೆ ಪಡೆದಿದ್ದು ಸದರಿ ದಿನಾಂಕದಿಂದ ಇಲ್ಲಿಯವರೆಗೂ ಸಂಪೂರ್ಣ ಹಕ್ಕುದಾರರು, ಅನುಭವದಾರರು ಮತ್ತು ಸ್ವಾಧೀನವುಳ್ಳ ಮಾಲೀಕನಾಗಿರುತ್ತೇನೆ. ನನಗೆ ಗೃಹ ಕೃತ್ಯದ ಖರ್ಚಿಗಾಗಿ ಸಾಲ ತೀರುವಳಿ ಮಾಡುವ ಉದ್ದೇಶವಿರುವುದರಿಂದ ಮತ್ತು ಹಣದ ಅವಶ್ಯಕತೆ ಇರುವುದರಿಂದ ಈ ಜಮೀನುಗಳನ್ನು ಸಚಿನ್‌ ಆಚಾರ್ಯ ಎಂಬುವರಿಗೆ ಮಾರಾಟ ಆಡಲು ಅನುಮತಿ ಕೊಡಿಸಿಕೊಡಬೇಕು ಎಂದು ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ ಅವರಿಗೆ ಕೋರಿದ್ದರು.

 

ಈ ಪತ್ರವನ್ನು ಆಧರಿಸಿ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಮೇಲೆಯೇ ಸಚಿವ ಕೃಷ್ಣ ಬೈರೇಗೌಡ ಅವರು ಚರ್ಚಿಸಿ ಎಂದು ಸೂಚಿಸಿರುವುದು ಪತ್ರದಿಂದ ಗೊತ್ತಾಗಿದೆ.

 

ಅಧಿಕಾರಿಗಳು ಸಚಿವರೊಂದಿಗೆ ಚರ್ಚಿಸಿದ್ದಾರೆ. ಈ ಕುರಿತು ನಿಯಮಾನುಸಾರ ಪರಿಶೀಲಿಸಿ ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಕಂದಾಯ ಇಅಲಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ 2024ರ ಮಾರ್ಚ್‌ 16ರಂದೇ ಪತ್ರ ಬರೆದಿರುವುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts