ಕಲ್ಲಿದ್ದಲು ಹರಾಜು; ಪಶ್ಚಿಮ ಬಂಗಾಳಕ್ಕೆ ನಿರ್ಬಂಧ, ಕಾರ್ಪೋರೇಟ್‌ ಕಂಪನಿಗಳಿಗೆ ಲಾಭ

ನವದೆಹಲಿ: ಕಲ್ಲಿದ್ದಲು ಹರಾಜಿಗೆ ಸಂಬಂಧಿಸಿದಂತೆ ಕರೆದಿದ್ದ ಟೆಂಡರ್‍‌ನಲ್ಲಿ ಭಾಗವಹಿಸಿದ್ದ ಪಶ್ಚಿಮ ಬಂಗಾಳದ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಕೇಂದ್ರ ಸರ್ಕಾರವು ಅನರ್ಹಗೊಳಿಸಿತ್ತು. ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ  ನ್ಯಾಯಬದ್ಧ ಹರಾಜು ಪ್ರಕ್ರಿಯೆಯನ್ನೂ ಕೇಂದ್ರ ಸರ್ಕಾರವು ಉಲ್ಲಂಘಿಸಿತ್ತು. ಅಲ್ಲದೇ ಈ ಪ್ರಕ್ರಿಯೆಯಲ್ಲಿ ಆರ್‍‌ ಪಿ ಗೋಯಂಕಾ ಕಂಪನಿಯು ಸಂಚು ರೂಪಿಸಿತ್ತು  ಎಂಬ ಸಂಗತಿಯನ್ನು ದಿ ರಿಪೋರ್ಟರ್ಸ್‌ ಕಲೆಕ್ಟಿವ್‌ ತನಿಖಾ ತಂಡವು ಬಹಿರಂಗಗೊಳಿಸಿದೆ.

 

ಈ ಕುರಿತು ರಿಪೋರ್ಟರ್ಸ್‌ ಕಲೆಕ್ಟಿವ್‌ ತನಿಖಾ ತಂಡವು  ದಾಖಲೆ ಸಹಿತ ಪ್ರಕಟಿಸಿರುವ  ವಿಸ್ತೃತ ವರದಿಯನ್ನು ‘ದಿ ಫೈಲ್‌’ ಕೂಡ ಪ್ರಕಟಿಸುತ್ತಿದೆ.

 

ಕೇಂದ್ರ ಸರ್ಕಾರದ ಕಲ್ಲಿದ್ದಲು ಸಚಿವಾಲಯವು  ಪಶ್ಚಿಮ ಬಂಗಾಳದ ಸರಿಸಟೋಳಿ ನಿಕ್ಷೇಪದಲ್ಲಿದ್ದ ಕಲ್ಲಿದ್ದಲನ್ನು ಹರಾಜು ಪ್ರಕ್ರಿಯೆ ನಡೆಸಿತ್ತು. ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಪಶ್ಚಿಮ ಬಂಗಾಳದ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಕೇಂದ್ರ ಕಲ್ಲಿದ್ದಲು ಸಚಿವಾಲಯವು ಅನರ್ಹಗೊಳಿಸಿತ್ತು.

 

ಇದೇ ವೇಳೆ ಆರ್‍‌ ಪಿ ಗೋಯಂಕಾ ಸೇರಿದಂತೆ ಇನ್ನಿತರೆ  ಖಾಸಗಿ ಕಂಪನಿಗಳು ಹರಾಜಿನಲ್ಲಿ  ಅರ್ಹತೆ ಪಡೆದುಕೊಂಡಿದ್ದವು. ಈ ಅಂಶವನ್ನು ಸಿಎಜಿ ಕೂಡ ತನ್ನ ವರದಿಯಲ್ಲಿ ದಾಖಲಿಸಿದೆ  ಎಂಬುದನ್ನು ರಿಪೋರ್ಟರ್ಸ್‌ ಕಲೆಕ್ಟಿವ್‌ ತನಿಖಾ ತಂಡವು ದಾಖಲೆ ಸಹಿತ ಬಹಿರಂಗಗೊಳಿಸಿದೆ.

 

ಕೇಂದ್ರ ಸರ್ಕಾರ ಅನಧಿಕೃತವಾಗಿ 83  ದಶಲಕ್ಷ ಟನ್ ಸರಿಸಟೊಳಿ ಕಲ್ಲಿದ್ದಲು ನಿಕ್ಷೇಪದ ಹರಾಜಿನಿಂದ 2015ರಲ್ಲಿ ಮೊದಲ ಹರಾಜಿನಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಕಂಪನಿಗಳನ್ನು ಅನರ್ಹತೆಗೊಳಿಸಿತ್ತು. ಈ ಸಂಬಂಧ ದಾಖಲೆಗಳು ರಿಪೋರ್ಟ್ಸ್ ಕಲೆಕ್ಟಿವ್ ಬಳಿ ಇದೆ.

 

ಕೇಂದ್ರ ಸರ್ಕಾರದ ಈ ಕ್ರಮದಿಂದ ಖಾಸಗಿ ಕಂಪನಿಗಳು ಅಕ್ರಮವಾಗಿ ಕಲ್ಲಿದ್ದಲು ನಿಕ್ಷೇಪದ ಹರಾಜಿನಲ್ಲಿ ಅರ್ಹತೆ ಪಡೆದುಕೊಂಡಿರುವುದು  ಬೆಳಕಿಗೆ ಬಂದಿದೆ. ಆದರೆ  ಪಶ್ಚಿಮ ಬಂಗಾಳ ಸರ್ಕಾರಿ ಸ್ವಾಮ್ಯದ ಕಂಪನಿಗಳೂ ಸಹ  ನಿಕ್ಷೇಪ ಪಡೆಯಲು ಅರ್ಹವಾಗಿತ್ತು ಮತ್ತು  ಹರಾಜಿನಲ್ಲಿ ರಿಗ್ ಮಾಡಲಾಗಿದೆ ಎಂದು ಸಿಎಜಿ ಹೇಳಿದೆ.

 

ಪಶ್ಚಿಮ ಬಂಗಾಳ ಸರ್ಕಾರ ಇತರೆ ವಿರೋಧ ಪಕ್ಷಗಳು ಇರುವ ಸರ್ಕಾರಗಳ ಜೊತೆಗೂಡಿ ಪ್ರಧಾನಿ ನರಂದ್ರ ಮೋದಿಯನ್ನು ಟೀಕಿಸಿವೆ. ಆರ್ಥಿಕವಾಗಿ ನಮ್ಮನ್ನು ಕಿವುಚುತ್ತಿದೆ.  ರಾಜ್ಯಗಳು ಸಂಪನ್ಮೂಲಗಳನ್ನು ಹೊಂದುವುದು ಮೋದಿಯ ವಿವೇಚನೆಗೆ ಬಿಟ್ಟ ವಿಷಯ ಎಂಬುದನ್ನು ಈ ಸಾಕ್ಷಿಗಳು ಸಾಬೀತುಪಡಿಸುತ್ತದೆ. ಜೊತೆಗೆ ಸುಪ್ರೀಂ ಕೋರ್ಟ್ ಹೇಳಿರುವ ನ್ಯಾಯಬದ್ಧ ಹರಾಜು ಪ್ರಕ್ರಿಯೆಯನ್ನು ಇದು ಉಲ್ಲಂಘಿಸಿದೆ.

 

ಹರಾಜಿನಲ್ಲಿ ಗೋಲ್‌ಮಾಲ್

 

2014ರ ಆಗಸ್ಟ್‌ನಲ್ಲಿ  ಸುಪ್ರೀಂ ಕೋರ್ಟ್ ಮರು ಹರಾಜು ನಡೆಯುವಂತೆ ನಿರ್ದೇಶಿಸಿತ್ತು. 1993ರಿಂದ ಸಿಮೆಂಟ್, ಉಕ್ಕು ಮತ್ತು ವಿದ್ಯುತ್ ಕಂಪನಿಗಳಿಗೆ ನಿಕ್ಷೇಪಗಳನ್ನು ಹಂಚಿಕೆ ಮಾಡಿರುವುದು ಇಚ್ಚಾನುಸಾರ ಹಂಚಿಕೆ ಮಾಡಿದ್ದು  ಅದು ಅಕ್ರಮವಾಗಿದೆ.

 

ಕೇಂದ್ರ ಸರ್ಕಾರ ಮತ್ತು ಅದರ ಅಧಿಕಾರಶಾಹಿ ಖಾಸಗಿ ಮತ್ತು ಸರ್ಕಾರಿ ಕಂಪನಿಗಳಿಗೆ ನ್ಯಾಯಬದ್ಧ ಬೆಲೆ ಇಲ್ಲದೆ ಹಂಚಿಕೆ ಮಾಡಿದೆ. ರಾಷ್ಟ್ರೀಯ ಸಂಪತ್ತನ್ನು ನ್ಯಾಯಬದ್ಧವಾಗಿ ಹಂಚಿಕೆ ಮಾಡಿಲ್ಲ. ಇದರ ಜೊತೆಗೆ ಗಣಿ  ಕಂಪನಿಗಳಿಗೆ ಪರವಾನಗಿ ರದ್ದುಗೊಳಿಸಿ ನ್ಯಾಯಾಲಯ ದಂಡ ವಿಧಿಸಿತ್ತು. ಪ್ರತಿ ಟನ್‌ಗೆ ಕಲ್ಲಿದ್ದಲಿಗೆ ರೂ.295 ಹೆಚ್ಚುವರಿ ಲೆವಿಯಾಗಿ ವಸೂಲಿ ಮಾಡಬೇಕು ಎಂದು ಹೇಳಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ತಪ್ಪಾಗಿರುವುದನ್ನು ಸರಿಪಡಿಸುವುದಾಗಿ ಭರವಸೆ ನೀಡಿತ್ತು.

 

ಎರಡು ತಿಂಗಳ ನಂತರ ಮೊದಲ ನಿಷೇದಾಜ್ಞೆಯನ್ನು ತಂದಿತು. ಇದು ಕಲ್ಲಿದ್ದಲು ನಿಕ್ಷೇಪ ವಿಶೇಷ ಪ್ರಾವಿಷನ್ಸ್ ನಿಷೇಧಾಜ್ಞೆ ಕಾಯ್ದೆ ಆಗಿತ್ತು.  ನಿಕ್ಷೇಪಗಳನ್ನು ಹಂಚಿಕೆ ಮಾಡಲು ಎರಡು ಅವಕಾಶಗಳನ್ನು ಮಾಡಿತ್ತು. ಅವೆಂದರೆ ಕೆಲವು ನಿಕ್ಷೇಪಗಳನ್ನು ಹರಾಜಿಗೆ ಬಿಡುವುದು ಇನ್ನು ಕೆಲವು ನಿಕ್ಷೇಪಗಳನ್ನು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಹಂಚಿಕೆ ಮಾಡುವುದು. ಯಾವ ನಿಕ್ಷೇಪವನ್ನು ಹರಾಜು ಮಾಡುವುದು ಮತ್ತು ಯಾವ ನಿಕ್ಷೇಪವನ್ನು ಹಂಚಿಕೆ ಮಾಡುವುದು ಎಂಬುದು ಸರ್ಕಾರದ ನಿಧಾರಕ್ಕೆ ಬಿಟ್ಟಿದ್ದು ಎಂದು ಹೇಳಲಾಗಿತ್ತು.

 

ನಿಷೇಧಾಜ್ಞೆ ಹೀಗೆ ಹೇಳಿದೆ. ಈ ಹಿಂದೆ ಹರಾಜಿನಲ್ಲಿ ನಿಕ್ಷೇಪಗಳನ್ನು ಪಡೆದ ಕಂಪನಿಗಳು ಹೊಸದಾಗಿ ಬಿಡ್ ಸಲ್ಲಿಸುವುದು. ಯಾವುದೇ ನಿಕ್ಷೇಪಕ್ಕೆ ಬಿಡ್ ಸಲ್ಲಿಸುವ ಮುನ್ನ ಅಂತಹ ಕಂಪನಿ ಸುಪ್ರೀಂ ಕೋರ್ಟ್ ಆದೇಶದಂತೆ ಹೆಚ್ಚುವರಿ ಲೆವಿಯನ್ನು ಪಾವತಿಸಬೇಕು.  ಸರ್ಕಾರಿ ಸ್ವಾಮ್ಯದ ಕಂಪನಿಗಳು ಅಂದರೆ 1993-2011ರ ನಡುವೆ ಪಡೆದ ನಿಕ್ಷೇಪಗಳನ್ನು ಗಣಿಗಾರಿಕೆ ಮಾಡಲು ಖಾಸಗಿ ಕಂಪನಿಗಳಿಗೆ ಗುತ್ತಿಗೆ  ನೀಡಿವೆ. ಅಂತಹ ಪ್ರಕರಣದಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿ ಲೆವಿ ಪಾವತಿಸಬೇಕೆ,  ಇಲ್ಲವೇ, ಗುತ್ತಿಗೆಯಲ್ಲಿ ನಿಕ್ಷೇಪ ಪಡೆದ ಖಾಸಗಿ ಕಂಪನಿ ಪಾವತಿಸಬೇಕೇ ಎಂಬ ಬಗ್ಗೆ   ಇಲ್ಲಿ ಗೊಂದಲವಿದೆ.

ಹರಾಜು ಪ್ರಕ್ರಿಯೆ ನಿಯಮ ಬದಲಾವಣೆ; ಕಲ್ಲಿದ್ದಲು ಗಣಿ ದೋಚಲು ಅನುವು ಮಾಡಿದ ಕೇಂದ್ರ

ನಿಷೇಧಾಜ್ಞೆಯಲ್ಲಿ  ಇದನ್ನು ಸ್ಪಷ್ಟಪಡಿಸಿಲ್ಲ. ಸರ್ಕಾರ ಸಹ ಇದನ್ನು ಕೂಡಲೇ  ಅರಿತುಕೊಳ್ಳಲಿಲ್ಲ. ಮತ್ತು ನಿಷೇಧಾಜ್ಞೆ ಕುರಿತು ಒಂದು ತಿಂಗಳೊಳಗೆ ಆಂತರಿಕ ಚರ್ಚೆಗಳು ಆರಂಭಗೊಂಡವು. ಭಾರತದ ಅಟಾರ್ನಿ ಜನರಲ್ ಮುಕುಲ್ ರೋಹ್ತಗಿ ಅವರನ್ನು ಸಂಪರ್ಕಿಸಲಾಯಿತು. ಅವರ ಸಲಹೆ ಹೀಗಿತ್ತು. ನಿಕ್ಷೇಪಗಳನ್ನು ಯಾರಿಗೆ ಗುತ್ತಿಗೆ  ಕೊಟ್ಟಿರುತ್ತೇವೆಯೋ ಅವರು ಲೆವಿ ಪಾವತಿಸಬೇಕೆಂದು ಸಲಹೆ ನೀಡಿದರು. ಮೂಲತಃ ಯಾವ ಕಂಪನಿಗೆ ಹಂಚಿಕೆ ಮಾಡಿರುತ್ತೇವೆಯೋ ಅವರಲ್ಲ ಎಂದು ಹೇಳಿದರು.

 

2014ರ ಡಿಸೆಂಬರ್ 26 ರಂದು ಎರಡನೇ ನಿಷೇಧಾಜ್ಞೆಯನ್ನು ಹೊರಡಿಸಲಾಗಿದೆ. ಅದರಂತೆ ಮರುದಿನ ಟೆಂಡರ್ ದಾಖಲೆಗಳನ್ನು ಬಿಡುಗಡೆ ಮಾಡಿದರು. ಇದರಲ್ಲಿ ಹರಾಜಿಗೆ ಇಟ್ಟಿದ್ದ ನಿಕ್ಷೇಪಗಳೂ ಇದ್ದವು.

 

ಪಶ್ಚಿಮ ಬಂಗಾಳ ಮೂಲದ ನಿಕ್ಷೇಪಗಳಿಗೆ ಟೆಂಡರ್ ಸಲ್ಲಿಸಿರುವ ಕಂಪನಿಗಳಲ್ಲಿಇ ವೆಸ್ಟ್ ಬೆಂಗಾಲ್ ಪವರ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್  ಸಹ ಒಂದು. ಅವುಗಳಲ್ಲಿ ಸರಿಸಟೋಲಿ ನಿಕ್ಷೇಪವೂ ಸೇರಿದೆ. ಈ ನಿಕ್ಷೇಪ 83  ದಶಲಕ್ಷ ಟನ್ ಕಲ್ಲಿದ್ದಲನ್ನು ಹೊಂದಿದೆ ಮತ್ತು ಈ ಹಿಂದೆ ಇದನ್ನು ಆರ್‌ಪಿ ಗೋಯಂಕಾ ಗ್ರೂಪ್ ಹೊಂದಿರುವ ಕಲ್ಕತ್ತ ವಿದ್ಯುತ್‌ ಸರಬರಾಜು ನಿಗಮಕ್ಕೆ  ಹಂಚಿಕೆ ಮಾಡಲಾಗಿತ್ತು.

 

ಈ ವಾಣಿಜ್ಯ ಗುಂಪು 4 ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯಾಗಿದೆ. ಮತ್ತು ವಿದ್ಯುತ್, ಐಟಿ, ಶಿಕ್ಷಣ, ರಿಟೇಲ್ ಮತ್ತು ಮೀಡಿಯಾದಲ್ಲಿ ಕಾರ್ಯಾಚರಣೆ ಹೊಂದಿದೆ. ಪಶ್ಚಿಮ ಬಂಗಾಳ ಪವರ್ ಡೆವಲಪ್‌ಮೆಂಟ್ ಕಾರ್ಪೊರೇಷನ್,  ಟ್ರಾನ್ಸ್ ದಾಮೋದರ್ ಬ್ಲಾಕ್‌ನಲ್ಲಿ 48.4 ದಶಲಕ್ಷ್ ಟನ್‌ ಕಲ್ಲಿದ್ದಲು ನಿಕ್ಷೇಪ ಪಡೆಯಲು ಪ್ರಯತ್ನಿಸಿತ್ತು.

 

 

ಆದರೆ ಕೇಂದ್ರ ಕಲ್ಲಿದ್ದಲು ಸಚಿವಾಲಯ ಪಶ್ಚಿಮ ಬಂಗಾಳ ಪವರ್ ಕಾರ್ಪೊರೇಷನ್ 2015 ಫೆಬ್ರವರಿ 26ರಂದು ಅನರ್ಹಗೊಳಿಸಿತ್ತು. ವಿಶೇಷವೆಂದರೇ  ಈ ಪವರ್ ಕಾರ್ಪೊರೇಷನ್‌ಗೆ ಮೊದಲೇ ನಿಕ್ಷೇಪ ಹಂಚಿಕ ಮಾಡಲಾಗಿತ್ತು. ಆದರೆ ನಿಗದಿತ ಅವಧಿಯೊಳಗೆ ಲೆವಿಯನ್ನು ಪಾವತಿಸಿಲ್ಲ ಎಂಬ ಕಾರಣ ನೀಡಿ ಅನರ್ಹಗೊಳಿಸಲಾಗಿದೆ.

 

ಪಶ್ಚಿಮ ಬಂಗಾಳ ವಿದ್ಯುತ್‌ ನಿಗಮ 204 ಗುತ್ತಿಗೆ ನಿಕ್ಷೇಪಗಳ ಪೈಕಿ 5 ನಿಕ್ಷೇಪಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಈ ಹಂಚಿಕೆಯೂ ಅಕ್ರಮವಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.  ನಿಜ ಏನೆಂದರೆ ಈ ಹಿಂದಿನ ಸರ್ಕಾರ ಇದ್ದಾಗ ಐದು ಗಣಿಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಈ ಎಲ್ಲ ಐದು ನಿಕ್ಷೇಪಗಳನ್ನು  ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿತ್ತು.  ಅಟಾರ್ನಿ ಜನರಲ್ ಸಲಹೆ ಮತ್ತು ನಂತರದಲ್ಲಿ ಹೊರಡಿಸಿದ ಸುಗ್ರೀವಾಜ್ಞೆಯಿಂದಾಗಿ ಇಎಂಟಿಎ ಕೋಲ್ ಲಿಮಿಟೆಡ್ ಕಂಪನಿ ಹೆಚ್ಚುವರಿ ಲೆವಿ ಪಾವತಿಸಬೇಕಾಗಿದೆ ಹೊರತು ಪಶ್ಚಿಮ ಬಂಗಾಳದ ಕಾರ್ಪೊರೇಷನ್ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

 

ಕೇಂದ್ರ ಕಲ್ಲಿದ್ದಲು ಸಚಿವಾಲಯದ ನಿರ್ಧಾರ ಇತ್ತೀಚೆಗೆ ಅನುಷ್ಠಾನಕ್ಕೆ ತಂದ ಕೋಲ್ ಮೈನ್ ವಿಶೇಷ ಪ್ರಾವಿಷನ್ಸ್‌,  ಎರಡನೇ ಸುಗ್ರೀವಾಜ್ಞೆಯಂತೆ ತದ್ವಿರುದ್ಧವಾಗಿ ಇರಲಿದೆ. ನಿರ್ಧಾರದ ವಿಶ್ವಾಸಾರ್ಹತೆಯನ್ನು ತಳ್ಳಿಹಾಕಿದ ಕಲ್ಲದ್ದಲು ಸಚಿವಾಲಯ ಕಾರ್ಪೊರೇಷನ್‌ಗೆ ಅರು ನಿಕ್ಷೇಪಗಳನ್ನು ಹಂಚಿಕೆ ಮಾಡಿತು. ಅದೇ ಸುತ್ತಿನ ಹರಾಜು ಪ್ರಕ್ರಿಯೆಯಲ್ಲಿ ನೇರ ಹಂಚಿಕೆ ಹಾದಿಯಲ್ಲಿ ಇದನ್ನು ಹಂಚಿಕೆ ಮಾಡಿತು. ಕಲ್ಲಿದ್ದಲು ಸಚಿವಾಲಯದ ತರ್ಕದಂತೆ ಈ ಯಾವುದೇ ಹಂಚಿಕೆಗೆ ಕಾರ್ಪೊರೇಷನ್ ಅರ್ಹವಾಗಿರಲಿಲ್ಲ.

 

ಕಲ್ಲಿದ್ದಲು ಸಚಿವಾಲಯದ ನಿರ್ಧಾರ ಏನೆಂದರೆ ಪಶ್ಚಿಮ ಬಂಗಾಳದ ಪವರ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಪ್ರಮುಖ ಹರಾಜು ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಬಾರದು ಎಂಬುದಾಗಿದೆ. ಇಲ್ಲಿ ಹರಾಜಿನಲ್ಲಿ ನಿಕ್ಷೇಪಗಳನ್ನು ಪಡೆದುಕೊಂಡ ಆರ್‌ಪಿ ಗೋಯಂಕಾ ಗ್ರೂಪ್ ಕಂಪನಿ ನ್ಯಾಯಾಲಯದ ಆದೇಶದಂತೆ ಮತ್ತೆ ಗಣಿ ನಿಕ್ಷೇಪವನ್ನು ಪಡೆಯಲಿದೆ.

 

 

ಸಿಎಜಿ ಆಡಿಟ್‌ನಲ್ಲಿ ಮೂಡಿದ  ಭ್ರಷ್ಟಾಚಾರದ ವಾಸನೆ

 

 

2016ರಲ್ಲಿ ಸಂಸತ್ತಿನಲ್ಲಿ ಸಲ್ಲಿಸಿದ ವರದಿ ಅನುಸಾರ ಸಿಎಜಿ ಹಲವಾರು ಆತಂಕಗಳಲ್ಲಿ ವ್ಯಕ್ತಪಡಿಸಿದೆ. ಸರಿಸಟೊಲಿ ಕಲ್ಲಿದ್ದಲು ಗಣಿ ನಿಕ್ಷೇಪದ ಹರಾಜಿನಲ್ಲಿ ಆರ್‌ಪಿ ಗೋಯಂಕಾ ಕಂಪನಿ ಕಂಪನಿಗಳು ಸಂಚು ರೂಪಿಸಿವೆ ಎಂಬುದನ್ನು ಸಾಕ್ಷಾಧಾರಗಳು  ತೋರಿಸುತ್ತಿವೆ ಎಂದು ಸಿಎಜಿ ಹೇಳಿತು. ಸಿಎಜಿ ಶಿಷ್ಟಾಚಾರದ ಅನುಸಾರ ಇದನ್ನು “ರಿಗ್ಗಿಂಗ್” ಎನ್ನಲಾಗುತ್ತದೆ. ಆದರೆ ಆಡಿಟರ್ ಯಾರ ಹೆಸರನ್ನೂ ಪ್ರಸ್ತಾಪಿಸದೆ ಈ ಕುರಿತ ಕಾರ್ಯಾಚರಣೆ ವಿಧಾನವನ್ನು ಮುಂದಿಡಲು ಪ್ರಯತ್ನಿಸುತ್ತದೆ ಎಂದು ಹೇಳಿದೆ.

 

ಪ್ರಕರಣದ ತನಿಖೆಯಲ್ಲಿ ಬರುವ ಯಾವುದೇ ಹೆಸರುಗಳನ್ನು ಮತ್ತು ನಿಕ್ಷೇಪಗಳ ಹೆಸರುಗಳನ್ನು ಪ್ರಸ್ತಾಪಿಸುವುದಿಲ್ಲ. ಹರಾಜು ಪ್ರಕ್ರಿಯೆಯಲ್ಲಿ ಐವರ ಪೈಕಿ ಮೂವರು ಹಣಕಾಸು ವ್ಯವಹಾರದಲ್ಲಿ ಒಂದಾಗಿ ಒಂದೇ ಕಂಪನಿಗೆ ನೆರವಾಗುವಂತೆ ತಂತ್ರ ರೂಪಿಸಿದ್ದಾರೆ. ಒಬ್ಬರು ಒಂದೇ ಇಂಟರ್‌ನೆಟ್ ಮತ್ತು ಒಂದೇ ವಿಳಾಸ ಪ್ರೋಟೋಕಾಲ್ ಮೂಲಕ ಬಿಡ್ ಮಾಡಿದ್ದಾರೆ. ಇದು ಬಿಡ್ ಗೌಪ್ಯತೆಯನ್ನು ಉಲ್ಲಂಘಿಸಿದೆ.

 

2016ರ ವರದಿಯಲ್ಲಿ ಸಿಎಜಿ ಹೆಸರುಗಳನ್ನು ಬಚ್ಚಿಟ್ಟರೂ 2023ರಲ್ಲಿ ರಿಪೋಟರ‍್ಸ್ ಕಲೆಕ್ಟಿವ್ ಆಡಿಟ್ ದಾಖಲೆಗಳನ್ನು ಪಡೆದುಕೊಂಡಿತು.

 

ಸಿಎಜಿ ಪ್ರಸ್ತಾಪ ಮಾಡಿದ್ದ ಅಧ್ಯಯನ ವರದಿ ಪ್ರಕಾರ ಕಲ್ಲಿದ್ದಲು ನಿಕ್ಷೇಪ ಬಂಗಾಳ ಮೂಲದ ಸರಿಸಟೋಲಿ ನಿಕ್ಷೇಪವಾಗಿದ್ದು ಜೊತೆಗೂಡಿ ಸಂಚು ರೂಪಿಸಿದ್ದ ಕಂಪನಿಗಳ ಆರ್‌ಪಿ ಗೋಯಂಕಾ ಗುಂಪಿಗೆ ಸೇರಿದ್ದಾಗಿವೆ. ಪಶ್ಚಿಮ  ಬಂಗಾಳ ಸರ್ಕಾರ ಬಿಡ್ ಸಲ್ಲಿಸಲು ಅರ್ಹವಾಗಿದೆ ಎಂದು 2016ರಲ್ಲಿ ಕೇಂದ್ರ ಸರ್ಕಾರ ಆಂತರಿಕವಾಗಿ ಒಪ್ಪಿಕೊಂಡಿತು.

 

ಸಿಎಜಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಪಶ್ಚಿಮ ಬಂಗಾಳ ಪವರ್‍‌ ಕಾರ್ಪೋರೇಷನ್‌  ಮೊದಲೇ ನಿಕ್ಷೇಪವನ್ನು ಪಡೆದುಕೊಂಡಿರುವ ಕಂಪನಿಯಾಗಿದ್ದಲ್ಲಿ ಇಎಂಟಿಎ ಕಂಪನಿಗೆ ಮೈನಿಂಗ್‌ಗೆ ಅವಕಾಶ ಕೊಡುವುದು. ಹೀಗಾಗಿ ಪಶ್ಚಿಮ ಬಂಗಾಳ ಪವರ್‍‌ ಕಾರ್ಪೋರೇಷನ್‌, ಋಣಬಾಧೆ ಪಾವತಿ ಮಾಡುವಂತಿಲ್ಲ. ಅದರಿಂದ ಪಶ್ಚಿಮ ಬಂಗಾಳ ಪವರ್‍‌ ಕಾರ್ಪೋರೇಷನ್‌ಗೆ  ತಾಂತ್ರಿಕವಾಗಿ ಗಣಿ ನಿಕ್ಷೇಪ ಹಂಚಿಕೆಗೆ ಅರ್ಹವಾಗಲಿದೆ. ನಂತರ ಕೇಂದ್ರ ಸರ್ಕಾರ ಹೇಗೆ ಪಶ್ಚಿಮ ಬಂಗಾಳ ಸರ್ಕಾರವನ್ನು ಬಿಡ್ ಮಾಡುವ ಅದರ ಹಕ್ಕನ್ನು ಕಿತ್ತುಕೊಳ್ಳುತ್ತದೆ.

 

ಪಶ್ಚಿಮ ಬಂಗಾಳದ ಹಕ್ಕನ್ನು ಅನಧಿಕೃತವಾಗಿ ತಡೆಹಿಡಿದರೂ ನಿಕ್ಷೇಪಗಳ ಹರಾಜು ಪ್ರಕ್ರಿಯೆ ಸ್ಪರ್ಧಾತ್ಮವಾಗಿ ಇರಬೇಕಷ್ಟೆ. ಸರಿಸಟೊಲಿ ನಿಕ್ಷೇಪಕ್ಕೆ ಸಂಬಂಧಿಸಿದಂತೆ  ಐವರು ಬಿಡ್ಡರ್‌ಗಳಿದ್ದು ತಾಂತ್ರಿಕವಾಗಿ ಅವರೆಲ್ಲರೂ ಅರ್ಹರು. ಐಪಿಒ (ಆರಂಭಿಕ ಸಾರ್ವಜನಿಕ ವಿತರಣೆ). ಈ ಐವರು ಬಿಡ್ಡರ್‌ಗಳು ಇ-ಆಕ್ಷನ್‌ನಲ್ಲಿ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ. ಈ ನಿಕ್ಷೇಪಕ್ಕೆ 167 ಬಿಡ್‌ ಸಲ್ಲಿಕೆಯಾಗಿದ್ದವು.

 

ಪಶ್ಚಿಮ ಬಂಗಾಳ ಪವರ್‍‌ ಕಾರ್ಪೋರೇಷನ್‌ನ್ನು  ಅನರ್ಹಗೊಳಿಸಿದರೂ ಈ ಪ್ರಕ್ರಿಯೆಯಲ್ಲಿ ಸಾಕಷ್ಟು ಪೈಪೋಟಿ ಇದೆ ಎಂದು ಸಿಎಜಿ ಹೇಳಿದೆ. ಆದರೆ  ಸಿಎಜಿ ವರದಿಯು  ಕಲ್ಲಿದ್ದಲು ಸಚಿವಾಲಯವನ್ನು ದೂಷಿಸಿಲ್ಲ. ಈಗಲೂ ಆರ್‌ಪಿ ಗೋಯಂಕಾ ಗ್ರೂಪ್ ಸರಿಸಟೋಲಿ ಕಲ್ಲಿದ್ದಲು ಬ್ಲಾಕ್ ಮೇಲಿನ ಹಿಡಿತವನ್ನು ಹೊಂದಿದೆ. ರಿಪೋಟರ‍್ಸ್ ಕಲೆಕ್ಟಿವ್ ಕಲ್ಲಿದ್ದಲು ಸಚಿವಾಯಕ್ಕೆ ಹಲವು ಬಾರಿ ಕಳಿಸಿದ ಪ್ರಶ್ನೆಗಳಿಗೆ ಉತ್ತರಿಸಿಲ್ಲ.

 

ಅನುವಾದ; ಜಿ ಆರ್‍‌ ಮುರಳಿಕೃಷ್ಣ

SUPPORT THE FILE

Latest News

Related Posts