Saturday | March 21, 2026 |

ಗೇಣಿದಾರ ರೈತರ ಹಕ್ಕು; ಭೂ ಮಾಲೀಕರ ಭೀತಿಗೆ ಪಾಳು ಬಿದ್ದ 21 ಲಕ್ಷ ಹೆಕ್ಟೇರ್‍‌ ಕೃಷಿ ಭೂಮಿ

Support THE-FILE

spot_img

ಬೆಂಗಳೂರು; ಗೇಣಿದಾರ ರೈತರು ಕೃಷಿ ಭೂಮಿ ಮೇಲೆ ಹಕ್ಕುಗಳನ್ನು ಪಡೆಯಲಿದ್ದಾರೆ ಎಂಬ ಕಾರಣವನ್ನು ಮುಂದಿರಿಸಿರುವ ಭೂ ಮಾಲೀಕರು ಭಯಭೀತರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 21 ಲಕ್ಷ ಹೆಕ್ಟೇರ್‍‌ ಕೃಷಿ ಭೂಮಿಯನ್ನು ಪಾಳು ಬೀಳಿಸಿದ್ದಾರೆ. ಇಂತಹ ಪಾಳು ಭೂಮಿಯಿಂದ ವರ್ಷಕ್ಕೆ ಸುಮಾರು 8,000 ಕೋಟಿಯಷ್ಟು ಬೆಳೆ ನಷ್ಟವಾಗಿದೆ ಎಂದು ಕರ್ನಾಟಕ ಆಡಳಿತ ಸುಧಾರಣೆ ಆಯೋಗ-2ರ 7ನೇ ವರದಿ ಅಭಿಪ್ರಾಯಪಟ್ಟಿದೆ.

 

ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‍‌ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣೆ ಆಯೋಗವು ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961, ಭೂ ಗುತ್ತಿಗೆ ನಿಬಂಧನೆಗಳ ಕುರಿತು ವಿಶ್ಲೇಷಿಸಿದೆ. ಅಲ್ಲದೇ ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 49ಕ್ಕೆ ತಿದ್ದುಪಡಿ ತರಲು ಶಿಫಾರಸ್ಸು ಮಾಡಿದೆ.

 

ಅದೇ ರೀತಿ ರಾಜ್ಯದಲ್ಲಿ ಹೊಸದಾಗಿ ಕರ್ನಾಟಕ ಬೆಳೆ ಉತ್ಪಾದನೆ ಮತ್ತು ಭೂ ಪುನಶ್ಚೇತನ ಮಸೂದೆಯ ಕರಡನ್ನು ವರದಿಯಲ್ಲಿ ಪ್ರಸ್ತಾಪಿಸಿದೆ. ಹಾಗೆಯೇ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ತಾಲೂಕುಗಳನ್ನು ಹೊರತುಪಡಿಸಿ ಎಲ್ಲಾ ತಾಲೂಕುಗಳಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 49ಕ್ಕೆ ತಿದ್ದುಪಡಿ ತರಲು ಜಾರಿ ಮಾಡಬಹುದು ಎಂದೂ ಸಲಹೆ ನೀಡಿದೆ.

 

‘ಷೇರುದಾರರು ಅಥವಾ ಗೇಣಿದಾರ ರೈತರು ಕೃಷಿ ಭೂಮಿ ಮೇಲೆ ಹಕ್ಕುಗಳನ್ನು ಪಡೆಯುವ ಕಾರಣದಿಂದಾಗಿ ಭೂ ಮಾಲೀಕರು ಭಯಭೀತರಾಗಿದ್ದು ಕರ್ನಾಟಕದಲ್ಲಿ ಇಚ್ಛಾಪೂರ್ವಕ ಗುತ್ತಿಗೆದಾರರಿಗೆ ಗುತ್ತಿಗೆ ನೀಡುವ ಬದಲು ದೊಡ್ಡ ಪ್ರಮಾಣದ ಭೂಮಿಯನ್ನು ಪಾಳು ಬಿಟ್ಟಿದ್ದಾರೆ,’ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಕರ್ನಾಟಕವು ಪ್ರಸ್ತುತ 21 ಲಕ್ಷ ಹೆಕ್ಟೇರ್‍‌ ಪಾಳು ಭೂಮಿಯನ್ನು ಹೊಂದಿದೆ. ಇದು ಒಟ್ಟು ಉಳುಮೆ ಮಾಡಬಹುದಾದ ಭೂಮಿ ಸುಮಾರು ಶೇ.16ರಷ್ಟಿದೆ. ಶುಷ್ಕತೆ, ಅಂತರ್ಜಲ, ಸವಕಳಿ, ಮಣ್ಣಿನ ಫಲವತ್ತತೆಯ ಕೊರತೆ, ಕಾರ್ಮಿಕ ಸಮಸ್ಯೆಗಳು, ಭೂ ಉತ್ಪಾದಕತೆಯ ಕೊರತೆ ಮತ್ತು ಕೃಷಿಯಿಂದ ಕಡಿಮೆ ನಿವ್ವಳ ಆದಾಯ, ವಲಸೆ, ನಗರೀಕರಣ, ಭೂ ಹಿಡುವಳಿಗಳ ವಿಘಟನೆ ಇತ್ಯಾದಿಗಳು ಇದಕ್ಕೆ ಕಾರಣವಾಗಿವೆ ಎಂದು ಉಲ್ಲೇಖಿಸಿದೆ.

 

‘ಅಂತಹ ಪಾಳು ಭೂಮಿಯಿಂದ ಬೆಳೆ ನಷ್ಟದ ಅಂದಾಜು ಒಟ್ಟು ಮೌಲ್ಯವು ವರ್ಷಕ್ಕೆ ಸುಮಾರು 8,000 ಕೋಟಿ ರು.. . ರಾಜ್ಯದ ಒಟ್ಟು ಪಾಳು ಭೂಮಿಯಲ್ಲಿ ಸುಮಾರು ಶೇ.48ರಷ್ಟು ಎಸ್‌ಸಿ ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತ ವರ್ಗಗಳು, ಸಣ್ಣ ಮತ್ತು ಅತಿ ಸಣ್ಣ ರೈತರು ಭೂ ಮಾಲೀಕರು ಇದ್ದಾರೆ. ಇದು ವಿಶೇಷವಾಗಿ ಸಮಾಜದ ದುರ್ಬಲ ವರ್ಗಗಳಲ್ಲಿ ಭೂ ಬಳಕೆ ಬದಲಾವಣೆಯನ್ನೂ ಸೂಚಿಸುತ್ತದೆ,’ ಎಂದು ವರದಿಯು ವಿವರಿಸಿದೆ.

 

ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಪ್ರಕಾರ ಅಸ್ತಿತ್ವದಲ್ಲಿರುವ ಭೂ ಗುತ್ತಿಗೆ ನಿಬಂಧನೆಗಳು ಕೃಷಿ ಭೂಮಿಯನ್ನು ಕೃಷಿ ಉದ್ದೇಶಗಳಿಗಾಗಿ ಗುತ್ತಿಗೆಗೆ ನೀಡುವುದನ್ನು ನಿರ್ಬಂಧಿಸುತ್ತದೆ. ಭೂ ಮಾಲೀಕನು ರಕ್ಷಣಾ ಸಿಬ್ಬಂದಿ, ನಾವಿಕ ಅಥವಾ ಅಂತಹ ಕೃಷಿ ಭೂಮಿ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಂತಹ ಜಿಲ್ಲೆಗಳಲ್ಲಿದ್ದರೆ ಅದನ್ನು ಹೊರತುಪಡಿಸಿ ಈ ಕಾಯ್ದೆಯ ಮುಖ್ಯ ಉದ್ದೇಶವೆಂದರೆ ಹಿಡುವಳಿದಾರರಿಗೆ ಒಕ್ಕಲೆಬ್ಬಿಸುವುದರ ವಿರುದ್ಧ ಭದ್ರತೆ ಒದಗಿಸುವುದು ಮತ್ತು ಭೂ ಮಾಲೀಕರು ತಮ್ಮ ಹಿಡುವಳಿದಾರರು ದೀರ್ಘಕಾಲದಿಂದ ಕೃಷಿ ಮಾಡುತ್ತಿದ್ದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ತಡೆಯತ್ತದೆ ಎಂದು ವರದಿ ವಿವರಿಸಿದೆ.

 

‘ಹೀಗಾಗಿ ಕರ್ನಾಟಕದಲ್ಲಿ ಪ್ರಸ್ತುತ ಕಾನೂನು ನಿಬಂಧನೆಗಳ ಪ್ರಕಾರ ಕೃಷಿ ಭೂಮಿಯು ಗೇಣಿದಾರರ ಕೃಷಿಯು ಹೆಚ್ಚಾಗಿ ಕಾನೂನುಬಾಹಿರವಾಗಿದೆ. ಈ ಕಾಯ್ದೆಯನ್ನು ಹಿಡುವಳಿಯನ್ನು ರದ್ದುಗೊಳಿಸಲು, ಹೆಚ್ಚಿನ ಗುತ್ತಿಗೆಗಳನ್ನು ನಿಷೇಧಿಸಲು ಆಗ ಅಸ್ತಿತ್ವದಲ್ಲಿದ್ದ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ನ್ಯಾಯಯುತ ಬಾಡಿಗೆ ನಿಗದಿಪಡಿಸಲು ಮತ್ತು ಭೂ ಹಿಡುವಳಿಗಳ ಮೇಲೆ ಮಿತಿ ವಿಧಿಸಲು ವಿನ್ಯಾಸಗೊಳಿಸಲಾಗಿದೆ. ಇದರಿಂದ ಹೆಚ್ಚುವರಿ ಭೂಮಿಯನ್ನು ಬಡ ಕೃಷಿಕರು ಮತ್ತು ಅಗತ್ಯವಿರುವ ಭೂ ರಹಿತ ಕೃಷಿ ಕಾರ್ಮಿಕರಿಗೆ ಮರು ಹಂಚಿಕೆ ಮಾಡುವುದಾಗಿತ್ತು,’ ಎಂದು ವರದಿಯು ಅಭಿಪ್ರಾಯಿಸಿದೆ.

 

ನಿರ್ಬಂಧಿತ ಭೂ ಗುತ್ತಿಗೆ ನಿಬಂಧನೆಯು ಯಾವುದೇ ಅವಧಿಯ ಭದ್ರತೆ ಇಲ್ಲದೇ ಅನೌಪಚಾರಿಕ ಮತ್ತು ಗುಪ್ತ ಹಿಡುವಳಿಗಳ ಸೃಷ್ಟಿಗೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಕಾಯ್ದೆಯ ಅನಪೇಕ್ಷಿತ ಪರಿಣಾಮವವಾಗಿದೆ. ಇದು ಕೃಷಿ ಕ್ಷೇತ್ರದಲ್ಲಿ ಹೂಡಿಕೆಗೆ ಅಡ್ಡಿಯಾಗಿದೆ ಮತ್ತು ಇದರಿಂದಾಗಿ ಕೃಷಿ ಉತ್ಪಾದಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

‘ಭೂ ಗುತ್ತಿಗೆಯನ್ನು ಕಾನೂನುಬದ್ಧಗೊಳಿಸುವುದರಿಂದ ಅಂತಹ ಅಸಂಗತತೆಗಳನ್ನು ಸರಿಪಡಿಸಬಹುದು. ಹೆಚ್ಚುತ್ತಿರುವ ಆದಾಯದ ಮಟ್ಟದೊಂದಿಗೆ ಕೃಷಿ ಭೂಮಿಯ ಬೆಲೆಗಳು ಏರುತ್ತಿವೆ. ಮತ್ತು ಅದರಿಂದ ಭೂ ರಹಿತ ಕೃಷಿ ಕಾರ್ಮಿಕರು, ಸಣ್ಣ ಮತ್ತು ಅತಿ ಸಣ್ಣ ರೈತರು ಹೊಸ ಭೂಮಿಯನ್ನು ಖರೀದಿಸಲು ಸಾಧ್ಯವಿಲ್ಲ. ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿನ ಪುರಾವೆಗಳಿಂದ ಭೂ ಗುತ್ತಿಗೆ ಮಾರುಕಟ್ಟೆಗೆ ಬಡ ಜನರಿಗೆ ಪ್ರವೇಶವನ್ನು ಖಚಿತಪಡಿಸಿಕೊಳ್ಳುವುದು ರೈತರ ಆದಾಯವನ್ನು ಹೆಚ್ಚಿಸಲು ಕೈಗೊಂಡ ಬದಲಾವಣೆ ಎಂದು ಸಾಬೀತಪಡಿಸುತ್ತದೆ,’ಎಂದು ವಿಶ್ಲೇಷಿಸಿದೆ.

 

ಅನೌಪಚಾರಿಕ ಗೇಣಿದಾರ ರೈತರು ಔಪಚಾರಿಕ ಸಾಲ ಮಾರ್ಗಗಳಿಂದ ಬೆಳೆಸಾಲ, ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಇನ್‌ಪುಟ್‌ ಸಬ್ಸಿಡಿಗಳು, ಪಿಎಂ ಕಿಸಾನ್‌ ನಂತಹ ಪ್ರಯೋಜನಗಳು, ರಸಗೊಬ್ಬರ ಸಬ್ಸಿಡಿಗಳು, ಬೆಳೆ ವಿಮೆ, ಎಂಎಸ್‌ಪಿ ಸಂಗ್ರಹಣೆ ಮತ್ತು ಇತರೆ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ವರದಿ ಹೇಳಿದೆ.

 

ಯೋಜನೆಯ ಪ್ರಯೋಜನೆಗಳು ಮತ್ತು ಸಂಗ್ರಹಣೆಗಳನ್ನು ಕಾನೂನುಬದ್ಧ ಭೂ ಮಾಲೀಕರು ಸ್ವಾಧೀನಪಡಿಸಿಕೊಳ್ಳುತ್ತಾರೆ. ಇದು ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಗೇಣಿದಾರರಿಗೆ ಅಂತಹ ಪ್ರಯೋಜನಗಳನ್ನು ನಿರಾಕರಿಸುತ್ತದೆ ಎಂದು ವಿವರಿಸಿದೆ.

 

ಈ ಕಾನೂನು ಭೂಮಾಲೀಕರು ಒಪ್ಪಂದಕ್ಕೆ ಒಳಪಟ್ಟು ಪಾಳು ಭೂಮಿಯನ್ನು ಬಳಸಿಕೊಳ್ಳಲು ಮತ್ತು ಅನೌಪಚಾರಿಕ ಹಿಡುವಳಿ ವ್ಯವಸ್ಥೆಗಳನ್ನು ಔಪಚಾರಿಕಗೊಳಿಸಲು ನೆರವಾಗಲಿದೆ ಎಂದು ಹೇಳಿರುವ ವರದಿಯು ಹೆಚ್ಚಿನ ಸಾಮಾಜಿಕ ಭದ್ರತೆ, ಬಲವಂತದ ಒಕ್ಕಲೆಬ್ಬಿಸುವಿಕೆಯ ವಿರುದ್ಧ ಅಧಿಕಾರವಾಧಿಯ ಭದ್ರತೆ, ಬಾಡಿಗೆ ನಿಗದಿ ಮತ್ತು ಪಾವತಿಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆ, ಬೆಳೆಸಾಲಗಳ ಲಭ್ಯತೆ, ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ನೆರವು ಸಿಗಲಿದೆ ಎಂದು ಆಶಿಸಿದೆ.

 

ಅಲ್ಲದೇ ರಸಗೊಬ್ಬರ ಮತ್ತು ವಿದ್ಯುತ್‌ ಸಬ್ಸಿಡಿಗಳು, ಯೋಜನೆಯ ಪ್ರಯೋಜನಗಳು , ಬೆಳೆ ವಿಮೆ, ಎಂಎಸ್‌ಪಿ ಸಂಗ್ರಹಣೆ, ಸಮಯೋಚಿತ ಮತ್ತು ಪರಿಣಾಮಕಾರಿ ವಿವಾದ, ಕುಂದುಕೊರತೆ ಪರಿಹಾರದ ಜತೆಗೆ ತಂತ್ರಜ್ಞಾನ ಮತ್ತು ಇತರ ಪ್ರಯೋಜನಗಳನ್ನು ಒದಗಿಸುತ್ತದೆ ಎಂದು ಉಲ್ಲೇಖಿಸಿದೆ.

 

ಕೆಲವು ರಾಜ್ಯಗಳು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಭೂ ಗುತ್ತಿಗೆ ಕಾನೂನುಗಳನ್ನು ಜಾರಿಗೆ ತಂದಿವೆ. ವಿವಿಧ ರಾಜ್ಯಗಳಲ್ಲಿನ ಅಂತಹ ಮಸೂದೆಗಳು ಕಾಯ್ದೆಗಳ ನಿಬಂಧನೆಗಳ ಅಧ್ಯಯನದ ಆಧಾರದ ಮೇಲೆ ಕರ್ನಾಟಕ ಬೆಳೆ ಉತ್ಪಾದನೆ ಮತ್ತು ಭೂ ಪುನಶ್ಚೇತನ ಮಸೂದೆಯ ಕರಡನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

 

ಕರ್ನಾಟಕದಲ್ಲಿ ಪಾಳುಬಿದ್ದ ಕೃಷಿ ಭೂಮಿಯನ್ನು ಪುನಶ್ಚೇತನಗೊಳಿಸುವ ಮೂಲಕ ಅದರ ಉತ್ಪಾದಕ ಬಳಕೆಗೆ ಅನುಕೂಲವಾಗುವಂತೆ ಮತ್ತು ಆಹಾರ ಭದ್ರತೆ ಮತ್ತು ಕೃಷಿ ಆದಾಯವನ್ನು ಹೆಚ್ಚಿಸಲು ಕೃಷಿ ಭೂಮಿಯ ಬೆಳೆ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ವರದಿಯಲ್ಲಿ ಪ್ರಸ್ತಾಪಿಸಲಾದ ಕರಡು ಮಸೂದೆಯನ್ನು ಕಂದಾಯ ಇಲಾಖೆ ಪರಿಗಣಿಸಲು ಶಿಫಾರಸ್ಸು ಮಾಡಲಾಗಿದೆ.

 

ಕಂದಾಯ ನಿರೀಕ್ಷಕರು ಅನುಮೋದಿಸಿದ ವಿವಾದಾತೀತ ಮ್ಯುಟೇಷನ್‌ಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುಕೂಲವಾಗುವಂತೆ ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 49ಕ್ಕೆ ತಿದ್ದುಪಡಿ ತರು ಕಂದಾಯ ಇಲಾಖೆಯು ಪರಿಗಣಿಸಬಹುದು. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ತಾಲೂಕುಗಳನ್ನು ಹೊರತುಪಡಿಸಿ ಎಲ್ಲಾ ತಾಲೂಕುಗಳಲ್ಲಿ ಇದನ್ನು ಜಾರಿ ಮಾಡಬಹುದು. ಈ ಅಧಿಕಾರವನ್ನು ತಹಶೀಲ್ದಾರ್‍‌ಗೆ ವಹಿಸಿದರೆ ಮ್ಯುಟೇಷನ್ ಮೇಲ್ಮನವಿಗಳ ತ್ವರಿತ ವಿಲೇವಾರಿ ಆಗುತ್ತದೆ ಎಂದು ಅಭಿಪ್ರಾಯಿಸಿದೆ.

Hot this week

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

ಚೆಮನೂರು ಬ್ಲಾಕ್‌ನಲ್ಲಿ ಗಣಿಗಾರಿಕೆ; ಅದಾನಿ ಸಮೂಹದ ಎಸಿಸಿಗೆ ಲೆಟರ್ ಆಫ್ ಇಂಟೆಂಟ್‌ ಕೊಡಲು ಗಣಿ ಇಲಾಖೆ ಉತ್ಸುಕ!

ಬೆಂಗಳೂರು; ಭವಿಷ್ಯದ ಸರ್ಕಾರಿ ಟೆಂಡರ್, ಹರಾಜು ಮತ್ತು ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ...

ರೋಹಿತ್ ವೇಮುಲ ಕಾಯ್ದೆ; ವ್ಯಾಖ್ಯಾನಗಳು ಅಸ್ಪಷ್ಟ, ಕಾನೂನು ಬಲವಿಲ್ಲ, ವಿಧೇಯಕವೇ ಅಪೂರ್ಣ

ಬೆಂಗಳೂರು; ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಯ ಎದುರಿಸಬಾರದು...

ಗ್ರಾಮಠಾಣ ಜಮೀನು ಅದಲು-ಬದಲು; ಆರ್ಥಿಕ ಇಲಾಖೆ ಆಕ್ಷೇಪ ಬದಿಗೊತ್ತಿ ಎಂ ಆರ್ ಸೀತಾರಾಂ ಕುಟುಂಬದ ಬೆನ್ನಿಗೆ ನಿಂತ ಸರ್ಕಾರ

ಬೆಂಗಳೂರು; ಸರ್ಕಾರಿ ಭೂಮಿಗೆ ರಸ್ತೆಯ ಸಂಪರ್ಕ ಹೊಂದಿಲ್ಲದಿರುವ, ರಸ್ತೆ ಸಂಪರ್ಕ ಕಲ್ಪಿಸದೇ...

Topics

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

ಚೆಮನೂರು ಬ್ಲಾಕ್‌ನಲ್ಲಿ ಗಣಿಗಾರಿಕೆ; ಅದಾನಿ ಸಮೂಹದ ಎಸಿಸಿಗೆ ಲೆಟರ್ ಆಫ್ ಇಂಟೆಂಟ್‌ ಕೊಡಲು ಗಣಿ ಇಲಾಖೆ ಉತ್ಸುಕ!

ಬೆಂಗಳೂರು; ಭವಿಷ್ಯದ ಸರ್ಕಾರಿ ಟೆಂಡರ್, ಹರಾಜು ಮತ್ತು ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ...

ರೋಹಿತ್ ವೇಮುಲ ಕಾಯ್ದೆ; ವ್ಯಾಖ್ಯಾನಗಳು ಅಸ್ಪಷ್ಟ, ಕಾನೂನು ಬಲವಿಲ್ಲ, ವಿಧೇಯಕವೇ ಅಪೂರ್ಣ

ಬೆಂಗಳೂರು; ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಯ ಎದುರಿಸಬಾರದು...

ಗ್ರಾಮಠಾಣ ಜಮೀನು ಅದಲು-ಬದಲು; ಆರ್ಥಿಕ ಇಲಾಖೆ ಆಕ್ಷೇಪ ಬದಿಗೊತ್ತಿ ಎಂ ಆರ್ ಸೀತಾರಾಂ ಕುಟುಂಬದ ಬೆನ್ನಿಗೆ ನಿಂತ ಸರ್ಕಾರ

ಬೆಂಗಳೂರು; ಸರ್ಕಾರಿ ಭೂಮಿಗೆ ರಸ್ತೆಯ ಸಂಪರ್ಕ ಹೊಂದಿಲ್ಲದಿರುವ, ರಸ್ತೆ ಸಂಪರ್ಕ ಕಲ್ಪಿಸದೇ...

ಅದಾನಿ ಎಸಿಸಿ ಲಿಮಿಟೆಡ್‌ನಿಂದ ಅಕ್ರಮ ಗಣಿಗಾರಿಕೆ; ನಿರ್ದೇಶಕರು, ಅಧಿಕಾರಿಗಳ ವಿರುದ್ಧ ಲೋಕಾ ತನಿಖೆಗೆ ಶಿಫಾರಸ್ಸು, ಕಡತಕ್ಕೆ ಧೂಳು

ಬೆಂಗಳೂರು;  ಕಲ್ಬುರ್ಗಿಯ ವಾಡಿಯಲ್ಲಿ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಪ್ರೈವೈಟ್ ಲಿಮಿಟೆಡ್...

1,260 ಕೋಟಿ ಮೊತ್ತದ ಹಗರಣ; 3 ವರ್ಷವಾದರೂ ಕಾಣದ ತಾರ್ಕಿಕ ಅಂತ್ಯ, ತೆವಳಿದ ಲೋಕಾ ತನಿಖೆ

ಬೆಂಗಳೂರು;  1,260 ಕೋಟಿ ರು ಮೊತ್ತದಲ್ಲಿ  108 ಆರೋಗ್ಯ ಕವಚ ಆಂಬ್ಯುಲೆನ್ಸ್‌ಗಳನ್ನು...

ಶೈಕ್ಷಣಿಕ ಸಂಯೋಜಕ ಹುದ್ದೆ; 88.06 ಕೋಟಿ ಹೊರೆ, ಅರ್ಹ 1,500 ಅತಿಥಿ ಉಪನ್ಯಾಸಕರ ಹುದ್ದೆ ಕಿತ್ತುಕೊಂಡಿತೇ?

ಬೆಂಗಳೂರು; ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ದ  ನಿಗದಿತ ವಿದ್ಯಾರ್ಹತೆ ಹೊಂದದ...

Related Articles

Popular Categories

error: Content is protected !!