7 ತಿಂಗಳಲ್ಲಿ 7,399.60 ಕೋಟಿ ರು ಸಾಲ; ಬಿಜೆಪಿ ಅವಧಿಗೆ ಹೋಲಿಸಿದರೆ 2,576.82 ಕೋಟಿ ರು. ಅಧಿಕ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರವು ಏಪ್ರಿಲ್‌-ಅಕ್ಟೋಬರ್‌ (2022)ನಲ್ಲಿ ಪಡೆದಿದ್ದ ಸಾಲಕ್ಕಿಂತಲೂ ಈಗಿನ ಕಾಂಗ್ರೆಸ್‌ ಸರ್ಕಾರವು ಏಳೇ ತಿಂಗಳಿನಲ್ಲಿ  2,576.82 ಕೋಟಿ ರು. ಹೆಚ್ಚು ಸಾಲ ಪಡೆದಿರುವುದು ಇದೀಗ ಬಹಿರಂಗವಾಗಿದೆ.

 

2023-24ನೇ ಸಾಲಿನ ಏಪ್ರಿಲ್‌-ಅಕ್ಟೋಬರ್‌ ಅಂತ್ಯಕ್ಕೆ ಒಟ್ಟಾರೆ 7,399.60 ಕೋಟಿ ರು. ಸಾಲವನ್ನು ಪಡೆದಿದೆ. ಹಿಂದಿನ ಬಿಜೆಪಿ ಸರ್ಕಾರವು 2022ರ ಏಪ್ರಿಲ್‌-ಅಕ್ಟೋಬರ್‌ ಅಂತ್ಯಕ್ಕೆ ಒಟ್ಟಾರೆ 4,822.78 ಕೋಟಿ ರು. ಸಾಲ ಪಡೆದಿತ್ತು. ಹಿಂದಿನ ವರ್ಷಕ್ಕೆ  ಹೋಲಿಸಿದರೆ 2023ರ ಏಪ್ರಿಲ್‌-ಅಕ್ಟೋಬರ್‌ನಲ್ಲಿ 2,576.82 ಕೋಟಿ ರು. ಹೆಚ್ಚು ಸಾಲವನ್ನು ಪಡೆದಂತಾಗಿದೆ. ಸೆಪ್ಟಂಬರ್‍‌ 2023ರ ಅಂತ್ಯಕ್ಕೆ  1,191.10 ಕೋಟಿ ರು ಸಾಲ ಪಡೆದಿದ್ದ ಸರ್ಕಾರವು ಅಕ್ಟೋಬರ್‍‌ ಅಂತ್ಯಕ್ಕೆ 6,208.5 ಕೋಟಿ ರು. ಸಾಲ ಪಡೆದಿದೆ.

 

ರಾಜ್ಯದ ವಿತ್ತೀಯ ಪರಿಸ್ಥಿತಿ ಕುರಿತು ಆರ್ಥಿಕ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಈ ವಿವರಗಳಿವೆ.

 

ಸಾರ್ವಜನಿಕ ಸಾಲವಾಗಿ ಏಪ್ರಿಲ್ನಲ್ಲಿ 262.40 ಕೋಟಿ ರೂ. ಸಾಲ ಮಾಡಿತ್ತು. ಮೇ ತಿಂಗಳಲ್ಲಿ 181.42 ಕೋಟಿ ರೂ. ಸಾಲ ಎತ್ತಿದ್ದರೇ ಜೂನ್ನಲ್ಲಿ 158.47 ಕೋಟಿ ರೂ. ಸಾಲ ಪಡೆದಿತ್ತು. ಜುಲೈನಲ್ಲಿ 40.73 ಕೋಟಿ ರೂ. ಸಾರ್ವಜನಿಕ ಸಾಲ ಮಾಡಿತ್ತು. ಆಗಸ್ಟ್ ತಿಂಗಳಲ್ಲಿ 228.02 ಕೋಟಿ ರೂ. ಸಾಲ ಮಾಡಿದ್ದರೆ, ಸೆಪ್ಟೆಂಬರ್ನಲ್ಲಿ ಸುಮಾರು 235 ಕೋಟಿ ರೂ. ಸಾಲ ಮಾಡಿದೆ ಎಂಬುದು ಆರ್ಥಿಕ ಇಲಾಖೆಯ ಅಂಕಿ ಅಂಶದಿಂದ ತಿಳಿದು ಬಂದಿದೆ.

 

ಏಪ್ರಿಲ್‌ 2023ರಲ್ಲಿ 262.40 ಕೋಟಿ ರು., ಮೇ ತಿಂಗಳಿನಲ್ಲಿ 443.82 ಕೋಟಿ ರು., ಜೂನ್‌ನಲ್ಲಿ 602.29 ಕೋಟಿ ರು., ಜುಲೈನಲ್ಲಿ 643.02 ಕೋಟಿ ರು., ಆಗಸ್ಟ್‌ನಲ್ಲಿ 871.04 ಕೋಟಿ ರು., ಸೆಪ್ಟಂಬರ್‍‌ನಲ್ಲಿ 1,191.10 ಕೋಟಿ ರು. ಮತ್ತು ಅಕ್ಟೋಬರ್‍‌ ಅಂತ್ಯಕ್ಕೆ  7,399.60 ಕೋಟಿ ರು. ಸಾಲ ಪಡೆದಿರುವುದು ಗೊತ್ತಾಗಿದೆ.

 

ಏಪ್ರಿಲ್‌ 2023ರಲ್ಲಿ 262.40 ಕೋಟಿ ರು. ಸಾಲ ಪಡೆದಿದ್ದ ಸರ್ಕಾರವು ಮೇ ನಲ್ಲಿ 443.82 ಕೋಟಿ ರು. ಸಾಲ ಎತ್ತಿದೆ. ಅಂದರೆ ಒಂದೇ ತಿಂಗಳಲ್ಲಿ 181.42 ಕೋಟಿ ರು. ಸಾಲದ ಮೊತ್ತವನ್ನು ಹೆಚ್ಚಿಸಿಕೊಂಡಿದೆ. ಅದೇ ರೀತಿ ಜೂನ್‌ನಲ್ಲಿ 158.82 ಕೋಟಿ ರು., ಜುಲೈನಲ್ಲಿ 40.73 ಕೋಟಿ ರು., ಆಗಸ್ಟ್‌ನಲ್ಲಿ 228.01 ಕೋಟಿ ರು., ಸೆಪ್ಟಂಬರ್‍‌ನಲ್ಲಿ 320.09 ಕೋಟಿ ರು., ಅಕ್ಟೋಬರ್‍‌ನಲ್ಲಿ 6,208.5 ಕೋಟಿ ರು. ಸಾಲ ಪಡೆದಿರುವುದು ತಿಳಿದು ಬಂದಿದೆ.

 

ಸ್ವಂತ ತೆರಿಗೆ ರಾಜಸ್ವವು 2023ರ ಏಪ್ರಿಲ್‌-ಅಕ್ಟೋಬರ್‌ವರೆಗೆ 900,235.10 ಕೋಟಿ ರು. ಇದೆ. 2022-23ರ ಏಪ್ರಿಲ್‌-ಅಕ್ಟೋಬರ್‌ವರೆಗೆ 79,515.82 ಕೋಟಿ ರು. ಸಂಗ್ರಹಿಸಿದೆ. ವಾಣಿಜ್ಯ ತೆರಿಗೆ 52,768.17 ಕೋಟಿ ರು. ಸಂಗ್ರಹಿಸಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದೇ ಅವಧಿಯಲ್ಲಿ 47,053.70 ಕೋಟಿ ರು. ಸಂಗ್ರಹಿಸಿತ್ತು.

 

ಅಬಕಾರಿ ಆದಾಯದಲ್ಲಿ 19,302.25 ಕೋಟಿ ರು. ಸಂಗ್ರಹಿಸಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಏಪ್ರಿಲ್‌-ಅಕ್ಟೋಬರ್‌ನಲ್ಲಿ 17,090.62 ಕೋಟಿ ರು. ಸಂಗ್ರಹಿಸಿತ್ತು. ಮೋಟಾರು ವಾಹನ ತೆರಿಗೆಗೆ ಸಂಬಂಧಿಸಿದಂತೆ 2023ರ ಅಕ್ಟೋಬರ್‌ ಅಂತ್ಯಕ್ಕೆ 6,301.48 ಕೋಟಿ ರು. ಇದ್ದರೇ 2022-23ರ ಏಪ್ರಿಲ್‌-ಅಕ್ಟೋಬರ್‌ ಅಂತ್ಯಕ್ಕೆ 5,373.01 ಕೋಟಿ ರು. ಇತ್ತು.

 

ಮುದ್ರಾಂಕ ಮತ್ತು ನೋಂದಣಿ ತೆರಿಗೆಯಲ್ಲಿ 10,940.06 ಕೋಟಿ ರು. ಇತ್ತ ಇದೆ. 2022ರ 23ರ ಏಪ್ರಿಲ್‌-ಅಕ್ಟೋಬರ್‌ನಲ್ಲಿ 9,558.51 ಕೋಟಿ ರು. ಇತ್ತು.

 

https://the-file.in/2023/09/governance/18974/

 

ಕೇಂದ್ರ ಸರ್ಕಾರದಿಂದ ಸಹಾಯಾನುದಾನಕ್ಕೆ ಸಂಬಂಧಿಸಿದಂತೆ 2023ರ ಏಪ್ರಿಲ್‌ ಅಕ್ಟೋಬರ್‌ ಅವದಿಯಲ್ಲಿ 6,785.08 ಕೋಟಿ ರು. ಇದೆ. 2022-23ರ ಏಪ್ರಿಲ್‌-ಅಕ್ಟೋಬರ್‌ ಅವಧಿಯಲ್ಲಿ 14,872.35 ಕೋಟಿ ರು. ಇತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ 8,087.27 ಕೋಟಿ ರು. ಕಡಿಮೆಯಾಗಿದೆ.

 

ಕೇಂದ್ರ ಸರ್ಕಾರದ ತೆರಿಗೆಗೆ ಸಂಬಂಧಿಸಿದಂತೆ 20234 ಏಪ್ರಿಲ್‌-ಅಕ್ಟೋಬರ್‌ನಲ್ಲಿ 19,270.86 ಕೋಟಿ ರು. ಇದ್ದರೇ 2022-23ರ ಏಪ್ರಿಲ್‌ ಅಕ್ಟೋಬರ್‌ನಲ್ಲಿ 15,844.09 ಕೋಟಿ ರು. ಇತ್ತು.

 

ಈ ಬಾರಿಯ ಹಣಕಾಸು ನಿರ್ವಹಣೆಗಾಗಿ ಕಾಂಗ್ರೆಸ್ ಸರ್ಕಾರ ಸಾಲವನ್ನು ಬಹುವಾಗಿ ನೆಚ್ಚಿಕೊಂಡಿದೆ. ಇದಕ್ಕೆ ಪುಷ್ಠಿ ಎಂಬಂತೆ ಈ ಬಾರಿ ಬಜೆಟ್ ಮಂಡನೆ ವೇಳೆಯಲ್ಲೇ ಹೆಚ್ಚಿನ ಸಾಲದ ಮೊರೆ ಹೋಗುವುದಾಗಿ ಹೇಳಿತ್ತು.

 

ಇದಕ್ಕಾಗಿ 2023-24ರ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹೆಚ್ಚಿನ ಸಾಲದ ಮೊರೆ ಹೋಗಿದ್ದರು. ಜುಲೈನಲ್ಲಿ ಮಂಡಿಸಿದ್ದ ಬಜೆಟ್ನಲ್ಲಿ 2023-24ರ ಸಾಲಿನಲ್ಲಿ ಒಟ್ಟು ಅಂದಾಜು 85,818 ಕೋಟಿ ಸಾಲ ಮಾಡಲು ನಿರ್ಧರಿಸಿತ್ತು.

 

ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದ ಬಜೆಟ್ನಲ್ಲಿ 2023-24ರಲ್ಲಿ ಅಂದಾಜು 77,750 ಕೋಟಿ ಸಾಲ ಮಾಡುವುದಾಗಿ ಹೇಳಿದ್ರು. ಆದರೆ, ಕಾಂಗ್ರೆಸ್ ಸರ್ಕಾರ ಹೊಸ ಬಜೆಟ್ನಲ್ಲಿ ಒಟ್ಟು ಸಾಲದ ಮೊತ್ತವನ್ನು 85,818 ಕೋಟಿ ರೂ.ಗೆ ಏರಿಕೆ ಮಾಡಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts