ಸಂಸ್ಕೃತ ಕಾಲೇಜಿಗೆ ತುಳು ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ; ಪೂರ್ಣಪ್ರಜ್ಞ ವಿದ್ಯಾಪೀಠ ಪತ್ರ

ಬೆಂಗಳೂರು; ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ಬೆಂಗಳೂರಿನ ಪೂರ್ಣ ಪ್ರಜ್ಞ ವಿದ್ಯಾಪೀಠ ವೇದಾಂತ ಗುರುಕುಲಂ ಸಂಸ್ಕೃತ ಕಾಲೇಜಿಗೆ ತುಳು ಭಾಷಾ ಅಲ್ಪಸಂಖ್ಯಾತ ಸಂಸ್ಥೆಯೆಂದು ಪರಿಗಣಿಸಿ ಮಾನ್ಯತೆ, ಸ್ಥಾನಮಾನ ನೀಡಬೇಕು ಎಂದು ಕಾಲೇಜಿನ ಪ್ರಾಂಶುಪಾಲರು ಕಾಲೇಜು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ.

 

ಸಾಂವಿಧಾನಿಕ ಮಾನ್ಯತೆ ಇಲ್ಲದೆ, ಸರಕಾರದ ಪ್ರೋತ್ಸಾಹವಿಲ್ಲದೆ, ಅಲ್ಪಸಂಖ್ಯಾತರ ಭಾಷೆಯಾಗಿ ಉಳಿದು ತುಳು ಭಾಷೆ ನಲುಗಿದೆ. ತುಳು ಭಾಷೆಗೆ ಎರಡನೆ ಅಧಿಕೃತ ಭಾಷೆಯ ಸ್ಥಾನಮಾನ ನೀಡಬೇಕು ಎಂದು ತುಳು ಭಾಷಿಕರು ಒತ್ತಾಯ ಮಾಡುತ್ತಿರುವವ ನಡುವೆಯೇ ಪೂರ್ಣ ಪ್ರಜ್ಞ ವಿದ್ಯಾಪೀಠದ ಸಂಸ್ಕೃತ ಕಾಲೇಜು ಪ್ರಾಂಶುಪಾಲರು ಬರೆದಿರುವ ಈ ಪತ್ರವು ಮುನ್ನೆಲೆಗೆ ಬಂದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಂಸ್ಕೃತ ವಿಷಯವನ್ನ ಬೋಧಿಸುತ್ತಿರುವ ಈ ಕಾಲೇಜಿಗೆ ತುಳು ಭಾಷಾ ಅಲ್ಪಸಂಖ್ಯಾತರ ಸ್ಥಾನಮಾನ ಕೋರಿರುವುದು ಸಹ ಉನ್ನತ ಶಿಕ್ಷಣ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

 

ಪೂರ್ಣ ಪ್ರಜ್ಞ ವಿದ್ಯಾಪೀಠದ ವೇದಾಂತ ಗುರುಕುಲಂ ಸಂಸ್ಕೃತ ವಿಷಯವನ್ನು ಬೋಧಿಸುತ್ತಿದೆ. ಈ ಕಾಲೇಜನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಟ್ರಸ್ಟಿಯಾಗಿರುವ ಪೇಜವಾರ ಅದೋಕ್ಷಜ ಟ್ರಸ್ಟ್‌ ಮುನ್ನೆಡೆಸುತ್ತಿದೆ. ಅಲ್ಲದೇ ಈ ಕಾಲೇಜಿಗೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಮಾನ್ಯತೆ ನೀಡಿದೆ. ಸಂಸ್ಕೃತದ ವಿವಿಧ ವಿಷಯಗಳಲ್ಲಿ ಬಿಎ ಮತ್ತು ಎಂ ಎ ಕೋರ್ಸ್‌ಗಳನ್ನು ನಡೆಸುತ್ತಿದೆ.

 

ಈ ಕಾಲೇಜಿಗೆ ತುಳು ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯನ್ನಾಗಿ ಚಾಲ್ತಿಯಲ್ಲಿರುವ ಕಾಯ್ದೆ, ನಿಯಮಗಳ ಅಡಿಯಲ್ಲಿ ಪರಿಗಣಿಸಿ ಮಾನ್ಯತೆ ನೀಡಬೇಕು ಎಂದು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

ತುಳು ಭಾಷೆಯನ್ನು ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ರಚಿಸಿದ್ದ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್‌ ಆಳ್ವ ನೇತೃತ್ವದ ತಂಡವು ಈಗಾಗಲೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

 

ಮೋಹನ್ ಆಳ್ವ ವರದಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಭಿಪ್ರಾಯ ಪಡೆಯುವಂತೆ ಈಗಾಗಲೇ ಸರ್ಕಾರವು ಸೂಚಿಸಿದೆ. ಸುಮಾರು ಒಂದು ಕೋಟಿ ಜನ ತುಳು ಭಾಷಿಕರಿದ್ದಾರೆ. 1994ರಲ್ಲಿ ವೀರಪ್ಪ ಮೊಯ್ಲಿ ತುಳು ಅಕಾಡೆಮಿ ಆರಂಭಿಸಿದ್ದರು. 2007ರಲ್ಲಿ ಕೇರಳ ಸರಕಾರ ತುಳು ಅಕಾಡೆಮಿ ಆರಂಭಿಸಿತು. ಅಮೆರಿಕದ ವಿಶ್ವವಿದ್ಯಾಲಯದಲ್ಲಿ 133 ಜಾಗತಿಕ ಭಾಷೆಗಳ ಪೈಕಿ 17 ಭಾರತೀಯ ಭಾಷೆಗಳಿವೆ. ಅದರಲ್ಲಿ ತುಳು ಭಾಷೆ ಇದೆ ಎಂದು ವಿಧಾನ ಮಂಡಲದ ಅಧಿವೇಶನದಲ್ಲಿ ಅಶೋಕ್‌ ಕುಮಾರ್‍‌ ರೈ ಅವರು ವಿವರಿಸಿದ್ದರು.

 

ಭಾಷಾ ಅಲ್ಪಸಂಖ್ಯಾತ ಸ್ಥಾನಮಾನದ ಬಗ್ಗೆ ಸಂವಿಧಾನದಲ್ಲೇನಿದೆ?

 

ಆರ್ಟಿಕಲ್ 30 (1) ಪ್ರಕಾರ ಎಲ್ಲಾ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ಅವರ ಸ್ವಂತ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕು ಮತ್ತು ‘ನಿರ್ವಹಣೆಯ ಹಕ್ಕು’ ಭರವಸೆ ನೀಡಿದೆ. ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಎರಡು ವಿಧದ ಅಲ್ಪಸಂಖ್ಯಾತರ ಮೇಲೆ ಈ ಷರತ್ತಿನ ಮೂಲಕ ಹಕ್ಕನ್ನು ಒದಗಿಸಲಾಗಿದೆ.

 

ಅಲ್ಪಸಂಖ್ಯಾತರಿಗೆ ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು ಹಕ್ಕು. “ಸ್ಥಾಪಿಸು” ಎಂಬ ಪದವು ಅಸ್ತಿತ್ವಕ್ಕೆ ತರುವ ಹಕ್ಕನ್ನು ಸೂಚಿಸುತ್ತದೆ, ಆದರೆ ಸಂಸ್ಥೆಯನ್ನು ನಿರ್ವಹಿಸುವ ಹಕ್ಕು ಎಂದರೆ ಸಂಸ್ಥೆಯ ವ್ಯವಹಾರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮತ್ತು ನಡೆಸುವ ಹಕ್ಕು. ಆಡಳಿತವು ಸಂಸ್ಥೆಯ ನಿರ್ವಹಣೆ ಮತ್ತು ವ್ಯವಹಾರಗಳನ್ನು ಸೂಚಿಸುತ್ತದೆ.

 

ನಿರ್ವಹಣೆಯು ನಿಯಂತ್ರಣ ಮತ್ತು ನಿರ್ಬಂಧಗಳಿಂದ ಮುಕ್ತವಾಗಿರಬೇಕು ಆದ್ದರಿಂದ ಅವರ ಸಮುದಾಯದ ಸಂಸ್ಥಾಪಕರು ತಮ್ಮ ಅಭಿಪ್ರಾಯಗಳು ಮತ್ತು ಸಾಮಾನ್ಯವಾಗಿ ಸಮುದಾಯದ ಆಸಕ್ತಿಯನ್ನು ಹೇಗೆ ತಲುಪಿಸಲಾಗುತ್ತದೆ ಎಂಬುದರ ಕುರಿತು ಆಲೋಚನೆಗಳು ಮತ್ತು ಆಲೋಚನೆಗಳಿಗೆ ಅನುಗುಣವಾಗಿ ಸಂಸ್ಥೆಯನ್ನು ರೂಪಿಸಬಹುದು.

 

ಹೀಗಾಗಿ, ಅಲ್ಪಸಂಖ್ಯಾತ ಸಮುದಾಯವು ಅಂತಹ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಆಯ್ಕೆಯನ್ನು ನೀಡುತ್ತದೆ ಏಕೆಂದರೆ ಅದು ಅವರ ಧರ್ಮ, ಭಾಷೆ ಅಥವಾ ಸಂಸ್ಕೃತಿಯನ್ನು ರಕ್ಷಿಸುವ ಉದ್ದೇಶ ಮತ್ತು ಅವರ ಸ್ವಂತ ಭಾಷೆಯಲ್ಲಿ ತಮ್ಮ ಮಕ್ಕಳಿಗೆ ಸಾಮಾನ್ಯ ಶಿಕ್ಷಣವನ್ನು ನೀಡುವ ಉದ್ದೇಶವನ್ನು ಹೊಂದಿದೆ. .

 

ಆರ್ಟಿಕಲ್ 30 (2)  ಪ್ರಕಾರ   ಯಾವುದೇ ಶಿಕ್ಷಣ ಸಂಸ್ಥೆಗೆ ಸಹಾಯವನ್ನು ನೀಡುವ ವಿಷಯದಲ್ಲಿ ತಾರತಮ್ಯ ಮಾಡದಂತೆ ರಾಜ್ಯವನ್ನು ನಿರ್ಬಂಧಿಸುತ್ತದೆ. ಅದು ಧಾರ್ಮಿಕ ಅಲ್ಪಸಂಖ್ಯಾತರು ಅಥವಾ ಭಾಷಾ ಅಲ್ಪಸಂಖ್ಯಾತರಿಂದ ನಿರ್ವಹಿಸಲ್ಪಡುತ್ತದೆ. ಭಾಷಾ ಅಲ್ಪಸಂಖ್ಯಾತರ ವರ್ಗ ಅಥವಾ ಮಾತೃಭಾಷೆ ಅಥವಾ ಮಾತೃಭಾಷೆ ಬಹುಸಂಖ್ಯಾತ ಗುಂಪುಗಳಿಗಿಂತ ಭಿನ್ನವಾಗಿರುವ ಜನರ ಗುಂಪನ್ನು ಭಾಷಾ ಅಲ್ಪಸಂಖ್ಯಾತರು ಎಂದು ಕರೆಯಲಾಗುತ್ತದೆ. ಭಾರತದ ಸಂವಿಧಾನವು ಈ ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿಯನ್ನು ರಕ್ಷಿಸುತ್ತದೆ ಎಂದು ಉಲ್ಲೇಖಿಸಿದೆ.

 

ಭಾರತೀಯ ಸಂವಿಧಾನದ 350-ಎ ಪರಿಚ್ಛೇದವು ಭಾಷಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಕ್ಕಳಿಗೆ ಶಿಕ್ಷಣದ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಬೋಧನೆಗಾಗಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುವ ಜವಾಬ್ದಾರಿಯನ್ನು ರಾಜ್ಯಗಳ ಮೇಲೆ ಹೇರುತ್ತದೆ ಎಂದು ವಿವರಿಸಿದೆ.

 

ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ (NCLM) ಮೂವತ್ತೆಂಟನೇ ಕಡತದ ಪ್ರಕಾರ, “ಪ್ರತಿಯೊಂದು ರಾಜ್ಯದಲ್ಲಿಯೂ ಆ ರಾಜ್ಯದ ಬಹುಪಾಲು ನಿವಾಸಿಗಳು ಮಾತನಾಡುವ ಒಂದು ಭಾಷೆ ಇದೆ, ಈಗ ಆ ಬಹುಸಂಖ್ಯಾತ ಭಾಷೆಯನ್ನು ಸಂವಹನ ಮಾಡದ ಎಲ್ಲಾ ನಿವಾಸಿಗಳು ಭಾಷಾ ಅಲ್ಪಸಂಖ್ಯಾತರಿಗೆ ಸೇರಿದೆ”. ಎಂದು ಹೇಳಿದೆ.

SUPPORT THE FILE

Latest News

Related Posts