ಕಾಮೆಡ್‌ ಕೆ 2023; ಪಟ್ಟಭದ್ರ ಹಿತಾಸಕ್ತಿಗಳಿಂದ ಸೀಟ್‌ ಬ್ಲಾಕಿಂಗ್‌ ಆರೋಪ, ಕೈಕಟ್ಟಿ ಕುಳಿತ ಸರ್ಕಾರ

ಬೆಂಗಳೂರು; ಕಾಮೆಡ್‌ ಕೆ ಮೂಲಕ ಉತ್ತಮ ಕಾಲೇಜು ಮತ್ತು ತಮ್ಮ ಆಯ್ಕೆಯ ಕೋರ್ಸ್‌ಗಳು ದೊರಕಬಹುದು ಎಂದು ಕಾತುರದಿಂದ ಕಾಯುತ್ತಿದ್ದ ವಿದ್ಯಾರ್ಥಿಗಳ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ತಮ್ಮ ಆಯ್ಕೆಯ ಕೋರ್ಸ್‌ಗಳು ದೊರಕದ ಕಾರಣ ಕಾಮೆಡ್ ಕೆ ಮೂಲಕ ಪ್ರವೇಶಕ್ಕೆ ನಿರೀಕ್ಷಿಸಿದ್ದ ಸಾವಿರಾರು ವಿದ್ಯಾರ್ಥಿಗಳೂ ಇದೀಗ ಅತಂತ್ರರಾಗಿದ್ದಾರೆ.

 

ಅಲ್ಲದೇ ಕಾಮೆಡ್‌ ಕೆ ಈ ಬಾರಿಯ ಮೂರನೇ ಸುತ್ತಿನ ಕಟ್‌ ಅಫ್‌ ನ್ನು ಕಳೆದ ವರ್ಷದ ಮೂರನೇ ಸುತ್ತಿನ ಕಟ್‌ ಆಫ್‌ಗೆ ಹೋಲಿಸಿದರೆ ವಿದ್ಯಾರ್ಥಿಗಳಿಗೆ ಅನ್ಯಾಯವಾದಂತಾಗಿದೆ ಎಂದು ಹಲವು ಪೋಷಕರು ಆರೋಪಿಸಿದ್ಧಾರೆ.

 

ಈ ಕುರಿತು ‘ದಿ ಫೈಲ್‌’ ಗೆ ಪ್ರತಿಕ್ರಿಯೆ ನೀಡಿರುವ ಪೋಷಕರೊಬ್ಬರು ಕಾಮೆಡ್ ಕೆ ಯಲ್ಲಿ ಕೂಡ ಸೀಟ್ ಬ್ಲಾಕ್ ಮಾಡಲಾಗಿದೆ ಎಂದು ಆಪಾದಿಸಿದ್ದಾರೆ.

 

ಕಾಮೆಡ್‌ ಕೆ ಮತ್ತು ಕೆಇಎನಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಕೈ ಚಳಕ ತೋರಿಸುತ್ತಿದ್ದರೂ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್‍‌ ಅವರು ಇದುವರೆಗೂ ಈ ಬಗ್ಗೆ ಗಮನಹರಿಸಿಲ್ಲ ಎಂದು ತಿಳಿದು ಬಂದಿದೆ.

 

ಪ್ರತಿಯೊಂದು ಕಾಲೇಜಿನಲ್ಲೂ ಕಳೆದ ವರ್ಷದ ಕಟ್ ಆಫ್ ಗಿಂತ ಈ ಬಾರಿ ಕಟ್ ಆಫ್ ಶೇ.50 ರಷ್ಟು ಕಡಿಮೆ ಆಗಿದೆ. ಉದಾಹರಣೆಗೆ ಎಸ್‌ಜೆಬಿಐಐಟಿ ಕಾಲೇಜಿನಲ್ಲಿ ಕಳೆದ ವರ್ಷ ಕಂಪ್ಯೂಟರ್ ಸೈನ್ಸ್ 52000 + ರಾಂಕ್ ಇದ್ದರೇ ಈ ಬಾರಿ ಇದು ಕೇವಲ 27,000 + ಅಗಿದೆ. ಇದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪ್ರವೇಶ ನೀರಿಕ್ಷಿಸುತ್ತಿರುವ ವಿದ್ಯಾರ್ಥಿಗಳು ಕಾಮೆಡ್ ಕೆ ಯಲ್ಲಿ ಕೂಡ ಸೀಟ್ ಬ್ಲಾಕ್ ಮಾಡಿರುವುದಕ್ಕೆ ಇದೊಂದು ನಿದರ್ಶನ ಎಂದು ವಿವರಿಸುತ್ತಾರೆ ಪೋಷಕರೊಬ್ಬರು.

 

2023ನೇ ಸಾಲಿನ ಪ್ರವೇಶ ಪ್ರಕ್ರಿಯೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ತಾಂತ್ರಿಕ ಹಾಗೂ ಆಡಳಿತ್ಮಾತಕ ತೊದರೆಯಿಂದಾಗಿ ಮೊದಲ ಸುತ್ತು ಪ್ರವೇಶದ ಫಲಿತಾಂಶವನ್ನು ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ಪ್ರಕಟಿಸಿತ್ತು . ಈಗ ಎರಡೆನೇ ಸುತ್ತಿನ ಪ್ರವೇಶಕ್ಕೆ ಸಿದ್ಧತೆ ನಡೆಸಿದೆ.

 

ಈ ಮಧ್ಯೆ ಕಾಮೆಡ್ ಕೆ ಆಗಸ್ಟ್ 25ರಂದು ಮೂರನೇ ಸುತ್ತಿನ ಪ್ರವೇಶ ವನ್ನು ಪ್ರಕಟಿಸಿ, ಇನ್ನು ಮುಂದೆ ಮತ್ತಾವ ಸುತ್ತು ಇಲ್ಲ ಎಂದು ಹೇಳಿದೆ. ಹಾಗೆಯೇ ಮೂರನೇ ಸುತ್ತಿನಲ್ಲಿ ಖಾಲಿ ಉಳಿಯುವ ಸೀಟುಗಳನ್ನು ಆಯಾಯ ಸಂಸ್ಥೆಗಳಿಗೆ ಆಡಳಿತ ಮಂಡಳಿ ಕೋಟಾ ಮೂಲಕ ಭರ್ತಿ ಮಾಡಲು ವಾಪಸು ನೀಡುವುದಾಗಿ ಘೋಷಿಸಿದೆ.

 

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ 2ನೇ ಸುತ್ತಿನ ಸುತ್ತಿನ ಪ್ರವೇಶ ಪ್ರಕಟಿಸದ ನಂತರ ಕಾಮೆಡ್ ಕೆ ಯಲ್ಲಿ ಬಹಳಷ್ಟು ಸೀಟುಗಳು ಖಾಲಿಯಾಗುವ ಸಾಧ್ಯತೆಗಳೇ ಹೆಚ್ಚಿವೆ ಎನ್ನಲಾಗುತ್ತಿದೆ.

 

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಉತ್ತಮ ಕಾಲೇಜು ಸಿಗದೇ ಕಾಮೆಡ್ ಕೆ ಮೂಲಕ ಉತ್ತಮ ಕಾಲೇಜು/ಕೋರ್ಸ್ ನೀರಿಕ್ಷೆ ಮಾಡುತ್ತಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ಘೋರ ಅನ್ಯಾಯವಾಗಿದೆ ಎಂದೂ ಪೋಷಕರೊಬ್ಬರು ಆಪಾದಿಸುತ್ತಾರೆ.

 

 

ಕಳೆದ ವರ್ಷಗಳಲ್ಲಿ ಕಾಮೆಡ್ ಕೆ ಮೂರನೇ ಸುತ್ತಿನ ಪ್ರವೇಶವನ್ನು ನವೆಂಬರ್ ತಿಂಗಳಲ್ಲಿ ನಡೆಸಿತ್ತು. ಆದರೆ ಈ ವರ್ಷ ಅತ್ಯವಸರದಿಂದ ಮೂರನೇ ಸುತ್ತನ್ನು ಆರಂಭಿಸಿದೆ. ಈ ಅವಸರದ ಹಿಂದೆ ಪಟ್ಟಭದ್ರರ ಹಿತಾಸಕ್ತಿ ಅಡಗಿದೆ ಎಂದು ಅನುಮಾನಿಸುತ್ತಾರೆ ವಿದ್ಯಾರ್ಥಿಗಳು.

 

 

ಕೆಇಎ ನ 2ನೇ ಸುತ್ತಿನ ಫಲಿತಾಂಶ ಪ್ರಕಟವಾದ ನಂತರ ಕಾಮೆಡ್ ಕೆ ಮತ್ತೊಂದು ಸುತ್ತು ಪ್ರವೇಶ ಪ್ರಕ್ರಿಯೆ ಆರಂಭಿಸಬೇಕು. ಈಗಾಗಲೇ ಕಾಮೆಡ್ ಕೆ ಮೂರನೇ ಸುತ್ತಿನಲ್ಲಿ ಭಾಗವಹಿಸಿ, ಇನ್ನೂ ಉತ್ತಮ ಕಾಲೇಜು/ಕೋರ್ಸ್‌ಗೆ ಕಾಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿ ಕೊಡಲು ಕಾಮೆಡ್ ಕೆ ಮೇಲೆ ಒತ್ತಡ ಹೇರಬೇಕು ಎನ್ನುತ್ತಾರೆ ಪೋಷಕರು.

the fil favicon

SUPPORT THE FILE

Latest News

Related Posts