371 ಜೆ ಅನುಷ್ಟಾನ ನಂತರ ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳಿಗೆ 5 ವರ್ಷಗಳಲ್ಲಿ ಸಿಕ್ಕಿದ್ದು 271.46 ಕೋಟಿಯಷ್ಟೇ

photo credit;bangaloremirror

ಬೆಂಗಳೂರು; ಬೀದರ್‌ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳು 371-ಜೆ ಅಡಿ ಸೇರಿದ ಮೇಲೆ ಕೈಗಾರಿಕೆ ನೀತಿ, ಕೃಷಿ ನೀತಿ, ವಿಶೇಷ ಅಭಿವೃದ್ಧಿ ಯೋಜನೆ, ಕೈಗಾರಿಕೆ ವಿಕಾಸ, ಕ್ಲಿಷ್ಟಕರ ಮೂಲಭೂತ ಸೌಕರ್ಯ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕಳೆದ 5 ವರ್ಷಗಳಲ್ಲಿ ಒಟ್ಟಾರೆ ಕೇವಲ 27146.79 ಲಕ್ಷ ರು.ಗಳಷ್ಟು ಮಾತ್ರ ಅನುದಾನ ನೀಡಿರುವುದು ಇದೀಗ ಬಹಿರಂಗವಾಗಿದೆ.

 

ಕೈಗಾರಿಕಾ ವಿಕಾಸ ಯೋಜನೆಯಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರವು (2013-14ರಿಂದ 2017-18)ರವರೆಗೆ ಬೀದರ್‌, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಯಲ್ಲಿ ಬಿಡಿಗಾಸನ್ನೂ ನೀಡಿಲ್ಲ ಎಂಬುದು ಗೊತ್ತಾಗಿದೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಅಪರ ನಿರ್ದೇಶಕರು ಈ ಸಂಬಂಧ ಅಂಕಿ ಅಂಶಗಳನ್ನು ಇಲಾಖೆಯ ಯೋಜನೆ ವಿಭಾಗದ ಜಂಟಿ ನಿರ್ದೇಶಕರಿಗೆ ಒದಗಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕೈಗಾರಿಕೆ ನೀತಿ ಮತ್ತು ಕೃಷಿ ನೀತಿ ಅಡಿಯಲ್ಲಿ 2017-18ರಿಂದ 2021-22ರವರೆಗೆ ಬೀದರ್‌ ಜಿಲ್ಲೆಗೆ 3,405.20 ಲಕ್ಷ ರು., ಕಲಬುರಗಿ ಜಿಲ್ಲೆಗೆ 4,302.56 ಲಕ್ಷ ರು., ರಾಯಚೂರು ಜಿಲ್ಲೆಗೆ 7,983.31 ಲಕ್ಷ ರು., ಯಾದಗಿರಿ ಜಿಲ್ಲೆಗೆ 1,100.89 ಲಕ್ಷ ರು, ಕೊಪ್ಪಳ ಜಿಲ್ಲೆಗೆ 2,707.21 ಲಕ್ಷ ರು., ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗೆ 4.,026.99 ಲಕ್ಷ ರು. ಅನುದಾನ ಒದಗಿಸಿರುವುದು ತಿಳಿದು ಬಂದಿದೆ.

 

ಕೈಗಾರಿಕೆ, ಕೃಷಿ ನೀತಿಗೆ ಜಿಲ್ಲಾವಾರು ವರ್ಷವಾರು ಅನುದಾನ ವಿವರ

 

2017-18ರಲ್ಲಿ ಬೀದರ್‌ ಜಿಲ್ಲೆಗೆ 215.23 ಲಕ್ಷ, 2018-19ರಲ್ಲಿ 669.43 ಲಕ್ಷ, 2019-20ರಲ್ಲಿ 887.24 ಲಕ್ಷ, 2020-21ರಲ್ಲಿ 601.57 ಲಕ್ಷ, 2021-22ರಲ್ಲಿ 1031.73 ಲಕ್ಷ ರು., ಕಲಬುರಗಿ ಜಿಲ್ಲೆಗೆ 2017-18ರಲ್ಲಿ 1,313.94 ಲಕ್ಷ ರು., 2018-19ರಲ್ಲಿ 518.89 ಲಕ್ಷ, 2019-20ರಲ್ಲಿ 820.92 ಲಕ್ಷ, 2020-21ರಲ್ಲಿ 440.30 ಲಕ್ಷ, 2021-22ರಲ್ಲಿ 1,208.51 ಲಕ್ಷ ರು., , ರಾಯಚೂರು ಜಿಲ್ಲೆಗೆ 2017-18ರಲ್ಲಿ 1,954.64 ಲಕ್ಷ, 2018-19ರಲ್ಲಿ 518.89 ಲಕ್ಷ ರು., 2019-20ರಲ್ಲಿ 662.99 ಲಕ್ಷ, 2020-21ರಲ್ಲಿ 2807.30 ಲಕ್ಷ, 2021-22ರಲ್ಲಿ 2039.49 ಲಕ್ಷ ರು., ಯಾದಗಿರಿ ಜಿಲ್ಲೆಗೆ 2017-18ರಲ್ಲಿ 80.51 ಲಕ್ಷ, 2018-19ರಲ್ಲಿ 143.20 ಲಕ್ಷ, 2019-20ರಲ್ಲಿ 238.47 ಲಕ್ಷ, 2020-21ರಲ್ಲಿ 210.15 ಲಕ್ಷ, 2021-22ರಲ್ಲಿ 428.56 ಲಕ್ಷ ರು., ಕೊಪ್ಪಳ ಜಿಲ್ಲೆಗೆ 2017-18ರಲ್ಲಿ 73.36 ಲಕ್ಷ, 2018-19ರಲ್ಲಿ 574.57 ಲಕ್ಷ, 2019-20ರಲ್ಲಿ 465.66 ಲಕ್ಷ, 2020-21ರಲ್ಲಿ 710.39 ಲಕ್ಷ, 2021-22ರಲ್ಲಿ 883.23 ಲಕ್ಷ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗೆ 2017-18ರಲ್ಲಿ 317.44 ಲಕ್ಷ, 2018-19ರಲ್ಲಿ 339.68 ಲಕ್ಷ, 2019-20ರಲ್ಲಿ 325.66 ಲಕ್ಷ, 2020-21ರಲ್ಲಿ 1479.52 ಲಕ್ಷ, 2021-22ರಲ್ಲಿ 1564.69 ಲಕ್ಷ ರು. ಅನುದಾನ ಒದಗಿಸಿದೆ.

 

ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ರಾಯಚೂರು ಜಿಲ್ಲೆಗೆ 2010-11ರಿಂದ 2017-18ರವರೆಗೆ ಬಿಡಿಗಾಸೂ ನೀಡಿಲ್ಲ. ಉಳಿದಂತೆ ಯಾದಗಿರಿ ಜಿಲ್ಲೆಗೆ 2014-15ರಲ್ಲಿ 37.25 ಲಕ್ಷ ರು ಮಾತ್ರ ನೀಡಿ ಆ ನಂತರದ ವರ್ಷಗಳಲ್ಲಿ ನಯಾಪೈಸೆಯನ್ನೂ ಒದಗಿಸಿಲ್ಲ. ಕೊಪ್ಪಳ ಜಿಲ್ಲೆಗೆ 2010-11ರಿಂದ 2015-16ರವರೆಗೆ ಬಿಡಿಗಾಸಿನಷ್ಟೂ ಅನುದಾನ ದೊರೆತಿಲ್ಲ. ಆದರೆ 2016-17ರಲ್ಲಿ 178.35 ಲಕ್ಷ ರು. 2017-18ರಲ್ಲಿ 340.5 ಲಕ್ಷ ರು. ಮಾತ್ರ ಅನುದಾನ ದೊರೆತಿದೆ. ಬೀದರ್‌ ಜಿಲ್ಲೆಗೆ ಒಟ್ಟು 2010-11ರಿಂದ 2015-16ರವರೆಗೆ ಒಟ್ಟು 1,496.69 ಲಕ್ಷ ರು. ಅನುದಾನ ದೊರೆತಿದೆಯಾದರೂ 2016-17 ಮತ್ತು 2017-18ನೇ ಸಾಲಿನಲ್ಲಿ ಯಾವುದೇ ಅನುದಾನ ಹಂಚಿಕೆಯಾಗದಿರುವುದು ಗೊತ್ತಾಗಿದೆ.

 

ಕ್ಲಿಷ್ಟಕರ ಮೂಲಭೂತ ಸೌಕರ್ಯ ಯೋಜನೆ ವಿಭಾಗದಲ್ಲಿ ಕೊಪ್ಪಳ ಜಿಲ್ಲೆಗೆ 2016-17, 2017-18, 2019-20, 2020-21ನೇ ಸಾಲಿನಲ್ಲಿ ಅನುದಾನ ಹಂಚಿಕೆಯಾಗಿಲ್ಲ. 2018-19ರಲ್ಲಿ 566.13 ಲಕ್ಷ ರು. ಮಾತ್ರ ದೊರೆತಿದೆ. ಬೀದರ್‌ ಜಿಲ್ಲೆಗೆ 2016-17, 2017-18ರಲ್ಲಿ ಅನುದಾನ ಲಭ್ಯವಾಗಿರಲಿಲ್ಲ. ಆ ನಂತರ 2018-19, 2019-20, 2020-21ರಲ್ಲಿ ಒಟ್ಟು 277.50 ಲಕ್ಷ ರು. ಅನುದಾನ ದೊರೆತಿದೆ. ಅದರಲ್ಲೂ 2019-20 ಮತ್ತು 2020-21ರಲ್ಲಿ ಅನುದಾನದ ಪ್ರಮಾಣದಲ್ಲಿ ಇಳಿಕೆಯಾಗಿರುವುದು ತಿಳಿದು ಬಂದಿದೆ.

 

ಕಲ್ಬುರ್ಗಿ ಜಿಲ್ಲೆಯಲ್ಲಿ ಇದೇ ವಿಭಾಗದಲ್ಲಿ 2016-17 ಮತ್ತು 2017-28ರಲ್ಲಿ ಯಾವುದೇ ಅನುದಾನ ನೀಡಿಲ್ಲ. 2018-19ರಿಂದ 2020-21ರವರೆಗೆ ಒಟ್ಟು 822.75 ಲಕ್ಷ ರು. ಅನುದಾನ ಹಂಚಿಕೆಯಾಗಿದೆಯಾದರೂ ಈ ಮೂರೂ ವರ್ಷಗಳಲ್ಲಿ ಸತತವಾಗಿ ಅನುದಾನದ ಪ್ರಮಾಣ ಕಡಿಮೆಯಾಗಿರುವುದು ಗೊತ್ತಾಗಿದೆ.

 

ಹಾಗೆಯೇ ಬೀದರ್‌ ಜಿಲ್ಲೆಯಲ್ಲಿ 2014-15ರಿಂದ 2021-22ರವರೆಗೆ ಒಟ್ಟು 3015970.00 ಲಕ್ಷ ರು. ಹೂಡಿಕೆಯಾಗಿದ್ದು, 236 ಘಟಕಗಳು ಆರಂಭವಾಗಿವೆ. ಅದೇ ರೀತಿ ರಾಯಚೂರು ಜಿಲ್ಲೆಯಲ್ಲಿ 9,837 ಘಟಕಗಳು ಆರಂಭವಾಗಿದ್ದು ಇವುಗಳಲ್ಲಿ 147893.00 ಲಕ್ಷ ರು. ಹೂಡಿಕೆಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 136 ಘಟಕಗಳು ಆರಂಭವಾಗಿದ್ದರೆ 8961.00 ಲಕ್ಷ ರು. ಹೂಡಿಕೆಯಾಗಿದೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ 168 ಘಟಕಗಳು ಆರಂಭವಾಗಿದ್ದು ಇವುಗಳಲ್ಲಿ 3208.32 ಲಕ್ಷ ರು.ಹೂಡಿಕೆಯಾಗಿದೆ.

 

ಕಲ್ಬುರ್ಗಿ ಜಿಲ್ಲೆಯಲ್ಲಿ 319 ಕೈಗಾರಿಕೆಗಳು ಸ್ಥಾಪನೆಯಾಗಿದ್ದು 7,309.106 ಕೋಟಿ ರು. ಬಂಡವಾಳ ಹೂಡಿಕೆಯಾಗಿದೆ. ಕೊಪ್ಪಳಜಿಲ್ಲೆಯಲ್ಲಿ 443 ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿದ್ದು 360.38 ಕೋಟಿ ರು.ಹೂಡಿಕೆಯಾಗಿದೆ. ಈ ಪೈಕಿ 01 ಬೃಹತ್‌ ಕೈಗಾರಿಕೆ ಸ್ಥಾಪನೆಯಾಗಿದ್ದರೇ ಇದರಲ್ಲಿ 750.00 ಕೋಟಿ ರು. ಹೂಡಿಕೆಯಾಗಿದೆ. 02 ಮಧ್ಯ ಮತ್ತು ಕೈಗಾರಿಕೆ ಸ್ಥಾಪನೆಯಾಗಿದ್ದು ಇದರಲ್ಲಿ 64.61 ಕೋಟಿ ರು. ಬಂಡವಾಳ ಹೂಡಿಕೆಯಾಗಿರುವುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts