ಪಿಎಸ್‌ಐ ಹಗರಣ; ನಿಗಮದ ಅಧ್ಯಕ್ಷ ರಾಘವೇಂದ್ರಶೆಟ್ಟಿ ಆಪ್ತ ಕಾರ್ಯದರ್ಶಿ ದಾಖಲೆ ಬಹಿರಂಗ

ಬೆಂಗಳೂರು; ಪಿಎಸ್‌ಐ ಹಗರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪದಡಿಯಲ್ಲಿ ಸಿಐಡಿ ಪೊಲೀಸರ ವಶದಲ್ಲಿರುವ ಶ್ರೀಕಾಂತ ಚೌರಿ ಎಂಬಾತನಿಗೆ ಯಾವುದೇ ಹುದ್ದೆಯನ್ನೂ ನೀಡಿರಲಿಲ್ಲ ಎಂದು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಡಾ ಬೇಳೂರು ರಾಘವೇಂದ್ರ ಶೆಟ್ಟಿ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಆಪ್ತ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ದಾಖಲೆ ಬಹಿರಂಗವಾಗಿದೆ.

 

ಬಾಗಲಕೋಟೆಯಲ್ಲಿ ಮೇ 14ರಂದು ಮದುವೆಯಾಗಿದ್ದ ಶ್ರೀಕಾಂತ ಚೌರಿಯು ಮದುವೆ ಮುಗಿಸಿ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆಯಲ್ಲಿಯೇ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದರು. ಈತ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ ಬೇಳೂರು ರಾಘವೇಂದ್ರ ಶೆಟ್ಟಿ ಅವರಿಗೆ ಕಳೆದ ಒಂದು ವರ್ಷದಿಂದಲೂ ಆಪ್ತ ಕಾರ್ಯದರ್ಶಿ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರೂ ಇದನ್ನು ನಿರಾಕರಿಸಿದ್ದ ಅಧ್ಯಕ್ಷ ಶೆಟ್ಟಿ ಅವರು ಪಿಎ ಎಂದು ಕೆಲಸ ಮಾಡಿದ್ದಾನೆಯೇ ಹೊರತು ಅಪ್ತ ಕಾರ್ಯದರ್ಶಿ ಎಂಬ ಹುದ್ದೆಯನ್ನೇ ನೀಡಿಲ್ಲ ಎಂದು ದಾರಿತಪ್ಪಿಸಿದ್ದರು.

 

ಆದರೀಗ ‘ದಿ ಫೈಲ್‌’ಗೆ ಲಭ್ಯವಾಗಿರುವ ದಾಖಲೆ ಪ್ರಕಾರ ನಿಗಮದ ಅಧ್ಯಕ್ಷರ ಆಪ್ತ ಶಾಖೆಯಲ್ಲಿನ ಸಿಬ್ಬಂದಿ ವಿವರಗಳ ಪಟ್ಟಿಯಲ್ಲಿ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಎಂಬ ಹುದ್ದೆಯಲ್ಲಿ ಶ್ರೀಕಾಂತ ಚೌರಿಯ ಹೆಸರು ಇದೆ. ಇವರಲ್ಲದೆ ಪ್ರಸನ್ನ ಆರ್‌ (ಆಪ್ತ ಸಹಾಯಕ), ನಿರಂಜನಕುಮಾರ್‌ ಸಿಎಸ್‌ (ದಲಾಯತ್‌) ಹರೀಶ್‌ ಆರ್‌ (ವಾಹನ ಚಾಲಕ) ಅವರ ಹೆಸರೂ ಇದೇ ಪಟ್ಟಿಯಲ್ಲಿದೆ.

 

‘ನಮ್ಮ ಜತೆ ಮೂರರಿಂದ ನಾಲ್ಕು ತಿಂಗಳು ಪಿಎ ಅಂತ ಕೆಲಸ ಮಾಡಿದ್ದಾನೆ. ಆಪ್ತ ಕಾರ್ಯದರ್ಶಿ ಪೋಸ್ಟೇ ಕೊಟ್ಟೇ ಇಲ್ಲ. ಆತನ ಆಕ್ಟಿವಿಟಿ ನಮಗೆ ಸರಿ ಕಾಣಲಿಲ್ಲ. ಆತ ಹಣ ಪಡೆದು ಅಧಿಕಾರಿಗಳ ಟ್ರಾನ್ಸಫರ್‌ ಕೆಲಸ ಮಾಡ್ತಿದಾನೆ ಅಂತ ಎಂದು ಕೆಲವರು ಮಾಹಿತಿ ನಿಡಿದ್ದರು. ಎರಡು ತಿಂಗಳ ಹೀಂದೆ ಆತನನ್ನು ಕೆಲಸದಿಂದ ತೆಗೆದುಕಹಾಕಿದ್ದೇವೆ. ಪಿಎ ಆಗಿವಿಜಿಟಿಂಗ್‌ ಕಾರ್ಡ್‌ ಮಾಡಿಸಬಾರದು. ಆದರೆ ಆತ ವಿಜಿಟಿಂಗ್‌ ಕಾರ್ಡ್‌ ಕೂಡ ಮಾಡಿಸಿದ್ದ,’ ಎಂದು ಡಾ ಬೇಳೂರು ರಾಘವೇಂದ್ರ ಶೆಟ್ಟಿ ಅವರು ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.

 

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಾಬಾಗಿ ಗ್ರಾಮದಲ್ಲಿ ಚೌರಿಯನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದರು. ಧಾರವಾಡದ ಇನ್ಸ್ಪೈರ್ ಇಂಡಿಯಾದ ಐಎಎಸ್ ಮತ್ತು ಕೆಎಎಸ್ ಕೋಚಿಂಗ್ ಸೆಂಟರ್ ಮಾಜಿ ನಿರ್ದೇಶಕನಾಗಿದ್ದ ಎನ್ನಲಾಗಿದೆ.

Your generous support will help us remain independent and work without fear.

Latest News

Related Posts