ನಿವೃತ್ತ ಡಿಜಿಪಿ ನೀಲಮಣಿ, ಐಪಿಎಸ್‌ ಕಿಶೋರ್‌ ಚಂದ್ರ ವಿರುದ್ಧ ಲಂಚದ ಆರೋಪ;ರೇರಾದಲ್ಲೂ ಭ್ರಷ್ಟಾಚಾರ?

ಬೆಂಗಳೂರು; ರಾಜ್ಯದಲ್ಲಿ ಭೂಮಿಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸುವ ಉದ್ದೇಶಕ್ಕೆ ಸ್ಥಾಪನೆಯಾಗಿರುವ ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ರೇರಾ)ವು ಖಾಸಗಿ ಬಿಲ್ಡರ್‌ಗಳ ಪರ ನಿಂತಿದೆ ಎಂಬ ಬಲವಾದ ಆರೋಪಗಳ ನಡುವೆಯೇ ರೇರಾದ ಹಾಲಿ ಅಧ್ಯಕ್ಷ ಹಾಗೂ ನಿವೃತ್ತ ಐಪಿಎಸ್‌ ಅಧಿಕಾರಿ ಕಿಶೋರ್‌ ಚಂದ್ರ ಮತ್ತು ರೇರಾದ ಸದಸ್ಯರೂ ಆಗಿರುವ ನಿವೃತ್ತ ಡಿಜಿಪಿ ನೀಲಮಣಿ ಎನ್‌ ರಾಜು ಅವರ ವಿರುದ್ಧ ಲಂಚದ ಆರೋಪ ಕೇಳಿ ಬಂದಿದೆ.

 

ಸೋಭಾ ಸಿಟಿ ವಿರುದ್ಧ ನೀಡಿದ್ದ ದೂರನ್ನಾಧರಿಸಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಬೆಂಗಳೂರಿನ ಜಯನಗರದಲ್ಲಿರುವ ಮೈಂಡ್‌ ಗ್ರೂಪ್‌ ಸಲ್ಯೂಷನ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ದೀಪಾ ಮೂರ್ತಿ ಎಂಬುವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ-ಮೈಲ್‌ ಮೂಲಕ 2022ರ ಜನವರಿ 19ರಂದು ಸಲ್ಲಿಸಿದ್ದ ದೂರರ್ಜಿ ಮೇಲೆ ಯಾವುದೇ ಕ್ರಮ ವಹಿಸಿಲ್ಲ.

 

ಇದೇ ದೂರಿನಲ್ಲಿಯೇ ರೇರಾ ಅಧ್ಯಕ್ಷ ನಿವೃತ್ತ ಐಪಿಎಸ್‌ ಅಧಿಕಾರಿ ಕಿಶೋರ್‌ ಚಂದ್ರ ಮತ್ತು ಪ್ರಾಧಿಕಾರದ ಸದಸ್ಯರಾದ ನಿವೃತ್ತ ಡಿಜಿಪಿ ನೀಲಮಣಿ ಎನ್‌ ರಾಜು ಅವರ ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ದೀಪಾ ಮೂರ್ತಿ ಎಂಬುವರು ಈ-ಮೈಲ್‌ ಮೂಲಕ ಸಲ್ಲಿಸಿದ್ದ ದೂರು (ದೂರಿನ ಸಂಖ್ಯೆ 7132) ‘ದಿ ಫೈಲ್‌’ಗೆ ಲಭ್ಯವಾಗಿದೆ. ಗೌಪ್ಯತೆ ಕಾರಣಕ್ಕಾಗಿ ದೂರಿನ ಪ್ರತಿಯನ್ನು ಈ ವರದಿಯಲ್ಲಿ ಮುದ್ರಿಸುತ್ತಿಲ್ಲ. ದೂರಿನ ಅಂಶಗಳನ್ನಷ್ಟೇ ವರದಿ ಮಾಡಲಾಗಿದೆ.

 

ದೂರಿನಲ್ಲೇನಿದೆ?

 

Dear sir

 

I Want to file complaint against mr Kishore Chandra and Ms Neelmani Raju. I was called for a hearing for my case today. They Spoke to me rudely right from the begining asking me why i did this or why I did that wihout even trying to understand my complaint. My house (cost 1.06 crores) in Sobha City had structural and construction defects and I had filed a complaint in both RERA and Consumer Court. Are they both there to resolve my case or defend the accused. i have been seeking justice for the last 4 years for the mental and emotional agorny I had my tenant have gone through with the roof falling, kitchen wall cracking, balcony wall cracking and this is what we get from your officers.

 

Sir, I am very upset and disappointed with the way my case was dealt. The only Conclusion I can make is that Sobha has bribed them and i will nerver get justice from RERA.

 

I want to register a formal complaint against bothe the officers for not listening to my grievances and rather accusing or questioning basis all kinds of things. I walked out in 2-3 miniutes because they had no interest in getting me resloutions .

 

Mrs. Neelmani in particular, comments the following

 

1. Don’t get hyper
2. Go to PMO or President or Wherever but you will not get anything because we are the people
Am i not allowed to write to PM for justice which is so delayed. I need an answer for my complaint against these 2 officers and case against Sobha ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿರುವ ದೂರಿನಲ್ಲಿ ವಿವರಿಸಿದ್ದಾರೆ.

 

(‘ನಾನು ಸಲ್ಲಿಸಿದ್ದ ದೂರಿನ ಕುರಿತು ಇಂದು ವಿಚಾರಣೆ ನಡೆಯಿತು. ನೀಲಮಣಿ ರಾಜು ಅವರು ನನ್ನೊಂದಿಗೆ ಕಟುವಾಗಿ ಮಾತನಾಡಿದರು. ನಾನು ಸೋಭಾ ಸಿಟಿಯಲ್ಲಿ 1.06 ಕೋಟಿ ರು. ವೆಚ್ಚದಲ್ಲಿ ಖರೀದಿಸಿರುವ ಕಟ್ಟಡದಲ್ಲಿ ಬಿರುಕುಗಳು ಕಾಣಿಸಿವೆ. ಈ ಕುರಿತು ರೇರಾ ಮತ್ತು ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೇನೆ. ಆದರೆ ನಾಲ್ಕು ವರ್ಷಗಳಿಂದಲೂ ನನಗೆ ನ್ಯಾಯ ದೊರಕಿಲ್ಲ. ಅಡುಗೆಮನೆ ಗೋಡೆ, ಬಾಲ್ಕನಿಯಲ್ಲಿ ಗೋಡೆ ಬಿರುಕು ಬಿಟ್ಟಿದೆ. ನನ್ನ ದೂರನ್ನು ಆಲಿಸದ ರೇರಾದ ಕಿಶೋರ್‌ ಚಂದ್ರ ಮತ್ತು ನೀಲಮಣಿ ರಾಜು ಅವರಿಗೆ ಸೋಭಾ ಸಿಟಿ ಲಂಚ ನೀಡಿದೆ. ಹೀಗಾಗಿ ರೇರಾದಿಂದ ನನಗೆಂದಿಗೂ ನ್ಯಾಯ ಸಿಗುವುದಿಲ್ಲ. ಹೀಗಾಗಿ ಔಪಚಾರಿಕವಾಗಿ ಈ ಇಬ್ಬರ ವಿರುದ್ಧ ದೂರು ದಾಖಲಿಸಿದ್ದೇನೆ. ನನ್ನ ದೂರನ್ನು ಆಲಿಸದ ಇವರು ಆರೋಪಿತರನ್ನು ಪ್ರಶ್ನಿಸುತ್ತಿಲ್ಲ)

 

ಅಲ್ಲದೆ ‘ Go to PMO or President or wherever but you will not get anything because we are the people ಎಂದು ನೀಲಮಣಿ ರಾಜು ಅವರು ಹೇಳಿದ್ದಾರೆ. ಆದರೆ ನಾನು ಪ್ರಧಾನಮಂತ್ರಿ ಕಚೇರಿಗೆ ದೂರು ನೀಡುವುದಿಲ್ಲ. ಏಕೆಂದರೆ ಅದು ಮತ್ತಷ್ಟು ವಿಳಂಬವಾಗುತ್ತದೆ. ಹೀಗಾಗಿ ಇಬ್ಬರು ಅಧಿಕಾರಿಗಳು ಮತ್ತು ಸೋಭಾ ವಿರುದ್ಧ ಸಲ್ಲಿಸಿರುವ ದೂರಿಗೆ ಉತ್ತರಬೇಕಿದೆ,’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿರುವ ದೂರಿನಲ್ಲಿ ಕೋರಿದ್ದಾರೆ.

 

ಈ ದೂರಿನ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ದೀಪಾ ಮೂರ್ತಿ ಎಂಬುವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ 2022ರ ಜನವರಿ 29ರಂದು ಮತ್ತೊಮ್ಮೆ ಈ ಮೈಲ್‌ ಮೂಲಕ ದೂರು ದಾಖಲಿಸಿದ್ದರು. ‘Respected Sir, it is 10 days and I have not got any reply. kindly help,’ ಎಂದು ದೂರಿನಲ್ಲಿ ಕೋರಿದ್ದರು.

 

ಈ ಸಂಬಂಧ ಮುಖ್ಯಮಂತ್ರಿಗಳ ಸಚಿವಾಲಯವು ರೇರಾಕ್ಕೆ ದೂರನ್ನು ರವಾನಿಸಿ ಕೈತೊಳೆದುಕೊಂಡಿತ್ತು. ಹೀಗಾಗಿ 2022ರ ಮಾರ್ಚ್‌ 2 ಮತ್ತು 4ರಂದು ಡಿಪಿಎಆರ್‌ನ ಪ್ರಧಾನ ಕಾರ್ಯದರ್ಶಿ ಮತ್ತು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಈ-ಮೈಲ್‌ ಮೂಲಕ ದೂರು ದಾಖಲಿಸಿರುವುದು ತಿಳಿದು ಬಂದಿದೆ. ‘I Still have no reply from anyone. Can I know what is happening. still no reply. what am i supposed to do ಎಂದು ದೂರಿನಲ್ಲಿ ಪ್ರಶ್ನಿಸಿರುವುದು ದೂರಿನಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts