2.46 ಲಕ್ಷ ಕೋಟಿಯಲ್ಲಿ ಶೇ.45ರಷ್ಟು ವೆಚ್ಚ; ಕೋಟಿ ಕೋಟಿ ಕೊಟ್ಟರೂ ಹಾಗೇ ಇಟ್ಟರು

ಬೆಂಗಳೂರು; 2021-22ನೇ ಸಾಲಿನ ಆರ್ಥಿಕ ವರ್ಷ ಕೊನೆಗೊಳ್ಳಲು ಇನ್ನೂ ಮೂರು ತಿಂಗಳಿದ್ದರೂ ಆಯವಯ್ಯದಲ್ಲಿ ನಿಗದಿಪಡಿಸಿ ಮೀಸಲಿರಿಸಿದ್ದ ಒಟ್ಟು ಅನುದಾನವನ್ನು ಖರ್ಚು ಮಾಡುವಲ್ಲಿ ಬಹುತೇಕ ಇಲಾಖೆಗಳು ಹಿಂದೆ ಬಿದ್ದಿವೆ. ಆಯವ್ಯಯದಲ್ಲಿ ಘೋಷಿಸಿದ್ದ ವಿವಿಧ ಜನಪ್ರಿಯ ಯೋಜನೆಗಳು ಮತ್ತು ಚಾಲ್ತಿಯಲ್ಲಿರುವ ಯೋಜನೆಗಳ ಮುಂದುವರಿಕೆಗೆ ಇಲಾಖೆಗಳಿಗೆ ಸಾವಿರಾರು ಕೋಟಿ ರು.ಗಳನ್ನು ಮೀಸಲಿರಿಸಿದ್ದರೂ ವೆಚ್ಚ ಮಾಡುವುದರಲ್ಲಿ ಬಹುತೇಕ ಇಲಾಖೆಗಳು ಶೇ.50ರ ಗಡಿಯನ್ನೂ ದಾಟಿಲ್ಲ.

ಯಶವಂತರಾಯಗೌಡ ಪಾಟೀಲ್‌ ಗೌಡ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯನ್ನು ಬಹಿರಂಗಗೊಳಿಸಿದ್ದಾರೆ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿಯೇ ಹಲವು ಯೋಜನೆಗಳು ಅನುಷ್ಠಾನದಲ್ಲಿ ಮುಗ್ಗುರಿಸಿ ಬಿದ್ದಿವೆ. ಹೀಗಾಗಿಯೇ ವರ್ಷ ಕಳೆದರೂ ಯೋಜನೆಗಳ ಲಾಭವು ಫಲಾನುಭವಿಗಳಿಗೆ ದೊರಕುತ್ತಿಲ್ಲ.

2021-22ನೇ ಸಾಲಿನ ಆಯವ್ಯಯದಲ್ಲಿ ಒಟ್ಟು 46 ಆಡಳಿತ ಇಲಾಖೆಗಳಿಗೆ ಒದಗಿಸಿದ್ದ 2,46,206.92 ಕೋಟಿ ರು.ನಲ್ಲಿ ಅಕ್ಟೋಬರ್‌ ಅಂತ್ಯಕ್ಕೆ 1,11,456.19 ಕೋಟಿ ರು. ವೆಚ್ಚವಾಗಿದೆ. ಖರ್ಚು ಮಾಡಲು ಇನ್ನೂ 1,34,750.73 ಕೋಟಿ ರು. ಉಳಿಸಿಕೊಂಡಿದೆ. ಇದು ಆಯವಯ್ಯದಲ್ಲಿ ಒದಗಿಸಿದ್ದ ಒಟ್ಟು ಅನುದಾನದ ಪೈಕಿ ಶೇ.45ರಷ್ಟು ಮಾತ್ರ ವೆಚ್ಚ ಮಾಡಲಾಗಿದೆ ಎಂಬುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ವೆಚ್ಚ ಮಾಡುವುದರಲ್ಲಿ ಹಿಂದೆ ಬಿದ್ದಿರುವುದಕ್ಕೆ ಯಾವುದೇ ಕಾರಣಗಳನ್ನು ನೀಡಿಲ್ಲ. ಕೋವಿಡ್‌ ಎರಡನೇ ಅಲೆ ವೇಳೆಯಲ್ಲಿ 2 ತಿಂಗಳ ಕಾಲ ಲಾಕ್‌ಡೌನ್‌ ಘೋಷಿಸಿದ್ದರಿಂದಾಗಿ ವೆಚ್ಚ ಮಾಡುವುದರಲ್ಲಿ ಹಿಂದೆ ಬಿದ್ದಿದೆ ಎಂದು ಹೇಳಲಾಗುತ್ತಿದೆಯಾದರೂ ಲಾಕ್‌ಡೌನ್‌ ತೆರವುಗೊಂಡ 5 ತಿಂಗಳ ನಂತರವೂ ನಿಗದಿಪಡಿಸಿದ್ದ ಅನುದಾನವನ್ನು ಖರ್ಚು ಮಾಡುವುದರಲ್ಲಿ ಅಧಿಕಾರಿಗಳು ಹಿಂದುಳಿದಿದ್ದಾರೆ. ಇಲಾಖಾ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿಯನ್ನು ಮುಖ್ಯ ಕಾರ್ಯದರ್ಶಿಗಳು ಪ್ರತಿ ತಿಂಗಳೂ ಪರಾಮರ್ಶಿಸಿದರೂ ವೆಚ್ಚದಲ್ಲಿ ಮಾತ್ರ ಏರಿಕೆ ಕಾಣುತ್ತಿಲ್ಲ.

ಮತೀಯ ಮತ್ತು ಧಾರ್ಮಿಕ ವಿಚಾರಗಳಿಗೇ ಹೆಚ್ಚು ಮಹತ್ವ ನೀಡುತ್ತಿರುವ ಸಚಿವ ಕೆ ಎಸ್‌ ಈಶ್ವರಪ್ಪ ಅವರು ನಿಭಾಯಿಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ ಶೇ. 43ರಷ್ಟು ಮಾತ್ರ ವೆಚ್ಚವಾಗಿದೆ. ಅದೇ ರೀತಿ ವಸತಿಹೀನರಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ವಾಗ್ವಾದಕ್ಕಿಳಿದು ಸವಾಲು ಎಸೆದಿರುವ ಸಚಿವ ಸೋಮಣ್ಣ ಅವರು ನಿಭಾಯಿಸುವ ವಸತಿ ಇಲಾಖೆಯಲ್ಲಿ ಅಕ್ಟೋಬರ್‌ ಅಂತ್ಯಕ್ಕೆ ಕೇವಲ ಶೇ. 24ರಷ್ಟು ಮಾತ್ರ ವೆಚ್ಚವಾಗಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಶೇ.38ರಷ್ಟು ಮಾತ್ರ ವೆಚ್ಚ ಮಾಡಿದ್ದರೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ಶೇ.44, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಶೇ.51, ಪರಿಶಿಷ್ಟ ಜಾತಿಗಳ ಕಲ್ಯಾಣ ಇಲಾಖೆಯು ಶೇ.54ರಷ್ಟು ಮಾತ್ರ ವೆಚ್ಚ ಮಾಡಿದೆ.

10 ಇಲಾಖೆಗಳು ಶೇ.35ಕ್ಕಿಂತ ಕಡಿಮೆ ವೆಚ್ಚ ಮಾಡಿವೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು 2,373.54 ಕೋಟಿ ರು ಅನುದಾನ ಒದಗಿಸಿತ್ತು. ಆದರೆ ಈ ಇಲಾಖೆಯು 2,597.54 ಕೋಟಿ ರು. ವೆಚ್ಚ ಮಾಡುವ ಮೂಲಕ ಒಟ್ಟು ಅನುದಾನಕ್ಕಿಂತ ಶೇ.109ರಷ್ಟು ವೆಚ್ಚ ಮಾಡಿ ಮೊದಲ ಸ್ಥಾನದಲ್ಲಿದೆ.

ಶೇ.35ಕ್ಕಿಂತ ಕಡಿಮೆ ವೆಚ್ಚ ಮಾಡಿರುವ ಇಲಾಖೆಗಳಿವು

ಋಣ ಮೇಲುಸ್ತುವಾರಿಗೆ ನೀಡಿದ್ದ 43,725.64 ಕೋಟಿಯಲ್ಲಿ 14,428.12 ಕೋಟಿ (ಶೇ.33) ವೆಚ್ಚವಾಗಿದೆ. ಕೃಷಿ ಇಲಾಖೆಗೆ ಒದಗಿಸಿದ್ದ 5,728.49 ಕೋಟಿ ರು. ಅನುದಾನದಲ್ಲಿ 1,276.02 ಕೋಟಿ (ಶೇ.22) ಖರ್ಚಾಗಿದೆ. ಇದು ಒಟ್ಟು ಅನುದಾನದ ಪೈಕಿ . ತೋಟಗಾರಿಕೆ ಇಲಾಖೆಯ 1,112.52 ಕೋಟಿ ರು.ನಲ್ಲಿ 300.33 ಕೋಟಿ (ಶೇ.27) ವೆಚ್ಚವಾಗಿದೆ. ಇ-ಆಡಳಿತಕ್ಕೆ 107.46 ಕೋಟಿ ರು. ಒದಗಿಸಿದ್ದು ಇದರಲ್ಲಿ 31.90 ಕೋಟಿ (ಶೇ.30) ಖರ್ಚು ಮಾಡಿದೆ. ಪ್ರವಾಸೋದ್ಯಮಕ್ಕೆ ಒದಗಿಸಿದ್ದ 258.60 ಕೋಟಿಯಲ್ಲಿ 48.46 ಕೋಟಿ (ಶೇ.19) ವೆಚ್ಚ ಮಾಡಿದೆ.

ಅದೇ ರೀತಿ ವಸತಿ ಇಲಾಖೆಗೆ ನೀಡಿದ್ದ 2,982.06 ಕೋಟಿಯಲ್ಲಿ 709.97 ಕೋಟಿ (ಶೇ. 24) ವೆಚ್ಚವಾಗಿದೆ. ಕೈ ಮಗ್ಗ ಜವಳಿ ಇಲಾಖೆಯಲ್ಲಿ 400.95 ಕೋಟಿ ರು ಪೈಕಿ 106.35 ಕೋಟಿ ಶೇ(.27) ವೆಚ್ಚವಾಗಿದ್ದರೆ ಸಣ್ಣ ಕೈಗಾರಿಕೆಗೆ ಒದಗಿಸಿದ್ದ 547.24 ಕೋಟಿ ರು.ನಲ್ಲಿ 119.94 ಕೋಟಿ (ಶೇ.22 )ವೆಚ್ಚ ಮಾಡಲಾಗಿದೆ. ಗಣಿ ಇಲಾಖೆಗೆ 98.63 ಕೋಟಿಯಲ್ಲಿ 27.37 ಕೋಟಿ (ಶೇ.28), ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಿದ್ದ 210.21 ಕೋಟಿಯಲ್ಲಿ 62.33 ಕೋಟಿ (ಶೇ.30), ಯೋಜನೆ ಸಾಂಖ್ಯಿಕ ವಿಜ್ಞಾನ ತಂತ್ರಜ್ಞಾನ- 2,367.56 ಕೋಟಿಯಲ್ಲಿ 757.56 ಕೋಟಿ (ಶೇ.32) ವೆಚ್ಚವಾಗಿದೆ.

ಶೇ.35ರಿಂದ ರಿಂದ 60ರಷ್ಟು ವೆಚ್ಚ

ರೇಷ್ಮೆ ಇಲಾಖೆಗೆ ನೀಡಿದ್ದ 386.41 ಕೋಟಿ ಯಲ್ಲಿ 191.49 ಕೋಟಿ (ಶೇ.50)ರಷ್ಟು ಖರ್ಚು ಮಾಡಲಾಗಿದೆ. ಪಶು ಸಂಗೋಪನೆ ಇಲಾಖೆಗೆ ಒದಗಿಸಿದ್ದ 2,408.27 ಕೋಟಿಯಲ್ಲಿ 1,604.88 ಕೋಟಿ (ಶೇ.67) 263.66 ಕೋಟಿ ಪಡೆದುಕೊಂಡಿದ್ದ ಮೀನುಗಾರಿಕೆ ಇಲಾಖೆಯು 155.59 ಕೋಟಿ (ಶೇ.59) ಆರ್ಥಿಕ ಇಲಾಖೆಯು 25,572.66 ಕೋಟಿ ಯಲ್ಲಿ 11,063.98 ಕೋಟಿ (ಶೇ.40) ಖರ್ಚು ಮಾಡಿದೆ.

ಅದೇ ರೀತಿ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು 900.98 ಕೋಟಿಯಲ್ಲಿ 428.35 (ಶೇ. 48) ಕೋಟಿ, ಒಳಾಡಳಿತ ಇಲಾಖೆಯು 8,077.03 ಕೋಟಿಯಲ್ಲಿ 4,160.11 ಕೋಟಿ (ಶೇ.52) ವೆಚ್ಚ ಮಾಡಿದೆ. ಸಾರಿಗೆ ಇಲಾಖೆಯು 1,954,30 ಕೋಟಿಯಲ್ಲಿ 1,054.73 ಕೋಟಿ (ಶೇ.54) ವೆಚ್ಚ ಮಾಡಿದ್ದರೆ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಇಲಾಖೆಯು 15,914.82 ಕೋಟಿ ರು.ನಲ್ಲಿ 6,857.49 ಕೋಟಿ (ಶೇ. 43) ಬಳಕೆ ಮಾಡಿದೆ.

ಅರಣ್ಯ ಇಲಾಖೆಯು 1,818.69 ಕೋಟಿ ರು.ನಲ್ಲಿ 794.01 ಕೋಟಿ (ಶೇ.44), ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿ 10.32 ಕೋಟಿ ಪೈಕಿ 4.70 ಕೋಟಿ (ಶೇ.46), ಸಹಕಾರ ಇಲಾಖೆಯು 1,604.02 ಕೋಟಿಯಲ್ಲಿ 724.50 ಕೋಟಿ (ಶೇ.45), ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕೆ ನೀಡಿದ್ದ 3,710.48 ಕೋಟಿ ರು. ಪೈಕಿ 2,015.16 ಕೋಟಿ (ಶೇ.54), ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು 1,395.79 ಕೋಟಿ ರು.ನಲ್ಲಿ 620.25 ಕೋಟಿ (ಶೇ.44), ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2,244.26 ಕೋಟಿ ರು.ನಲ್ಲಿ 1,151.50 ಕೋಟಿ (ಶೇ.51) ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನೀಡಿದ್ದ 1,335.63 ಕೋಟಿ ರು.ನಲ್ಲಿ 511.85 ಕೋಟಿ (ಶೇ 38) ಖರ್ಚಾಗಿದೆ.

ಹಾಗೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಒದಗಿಸಿದ್ದ 4,506.78 ಕೋಟಿ ರು. ನಲ್ಲಿ 2,206.64 ಕೋಟಿ (ಶೇ.49) ವೆಚ್ಚ ಮಾಡಲಾಗಿದೆ. ವಾರ್ತೆ- 227.75 ಕೋಟಿ ಯಲ್ಲಿ 89.18 ಕೋಟಿ (ಶೇ.39), ಕಂದಾಯ ಇಲಾಖೆಯಲ್ಲಿ 11,258.46 ಕೋಟಿ ರು. ಪೈಕಿ 5,821.11 ಕೋಟಿ (ಶೇ.52) ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನಕ್ಕೆ ನೀಡಿದ್ದ 78.84 ಕೋಟಿಯಲ್ಲಿ 38.99 ಕೋಟಿ (ಶೇ.49), ಉನ್ನತ ಶಿಕ್ಷಣಕ್ಕೆ ಒದಗಿಸಿದ್ದ 4,501.88 ಕೋಟಿ ರು.ನಲ್ಲಿ 2,288.65 ಕೋಟಿ ( ಶೇ.51), ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಇಲಾಖೆಯು 24,273.07 ಕೋಟಿ ರು.ನಲ್ಲಿ 16,505.30 ಕೋಟಿ (ಶೇ.68) ವೆಚ್ಚ ಮಾಡಲಾಗಿದೆ.

ಭಾರೀ ಮತ್ತು ಮಧ್ಯಮ ಕೈಗಾರಿಕೆಗೆ ಮೀಸಲಿರಿಸಿದ್ದ 1,138.32 ಕೋಟಿಯಲ್ಲಿ 482.34 ಕೋಟಿ (ಶೇ.42), ನಗರಾಭಿವೃದ್ಧಿ ಇಲಾಖೆಗೆ 14,237.60 ಕೋಟಿ ರು.ನಲ್ಲಿ 7,730.01 ಕೋಟಿ (ಶೇ.54) ಲೋಕೋಪಯೋಗಿ ಇಲಾಖೆಯಲ್ಲಿ 9,081.85 ಕೋಟಿ ರು. ಪೈಕಿ 3,893.27 ಕೋಟಿ (ಶೇ.43) ಭಾರೀ ನೀರಾವರಿಗೆ ನೀಡಿದ್ದ 17,063.09 ಕೋಟಿ ರು.ನಲ್ಲಿ 6,038.33 ಕೋಟಿ (ಶೇ.35), ಸಣ್ಣ ನೀರಾವರಿ ಕೊಡಲಾಗಿದ್ದ 2,261.25 ಕೋಟಿ ರು.ನಲ್ಲಿ 1,202.99 ಕೋಟಿ (ಶೇ.53) ರು. ವೆಚ್ಚವಾಗಿದೆ.

ವೈದ್ಯಕೀಯ ಶಿಕ್ಷಣಕ್ಕೆ 3,685.69 ಕೋಟಿ ರು.ನಲ್ಲಿ 1,576.48 ಕೋಟಿ (ಶೇ.43), ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ನೀಡಿದ್ದ 8,126.98 ಕೋಟಿ ರು.ನಲ್ಲಿ 4,272.46 ಕೋಟಿ (ಶೇ.53) ಕಾರ್ಮಿಕ ಇಲಾಖೆಗೆ ಹಂಚಿಕೆಯಾಗಿದ್ದ 706.97 ಕೋಟಿ ರು.ನಲ್ಲಿ 291.01 ಕೋಟಿ (ಶೇ. 41) , ಕೌಶಲ್ಯ ಅಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ಒದಗಿಸಿದ್ದ 1,087.70 ಕೋಟಿ ರು.ನಲ್ಲಿ 667.05 ಕೋಟಿ (ಶೇ.61), ಇಂಧನ ಇಲಾಖೆಗೆ ಒದಗಿಸಿದ್ದ 12,655.42 ಕೋಟಿ ರು.ನಲ್ಲಿ 5,195.51 ಕೋಟಿ (ಶೇ.41), ಕಾನೂನು ಇಲಾಖೆಗೆ 1,459.53 ಕೋಟಿಯಲ್ಲಿ 797.37 ಕೋಟಿ (ಶೇ 55), ಸಂಸದೀಯ ವ್ಯವಹಾರಗಳ ಇಲಾಖೆಯಲ್ಲಿ 283.02. ಕೋಟಿ ರು.ನಲ್ಲಿ 194.19 ಕೋಟಿ (ಶೇ.69) ರು. ಖರ್ಚಾಗಿದೆ.

ಆರ್ಥಿಕ ಇಲಾಖೆಯು ಹೊರಡಿಸುವ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ ಆದೇಶದನ್ವಯವ ವಿವಿಧ ಇಲಾಖೆಗಳಿಗೆ ಆಯವಯ್ಯದಲ್ಲಿ ಮೀಸಲಿರಿಸಲಾದ ಅನುದಾನವನ್ನು ತ್ರೈಮಾಸಿಕ ಗಳಲ್ಲಿ ವಿವಿಧ ಇಲಾಖೆಗಳ ಯೋಜನೆಗಳಿಗೆ ಹಾಗೂ ಇಲಾಖೆಗಳಡಿ ಬರುವ ನಿಗಮ ಮಂಡಳಿಗಳಕಾರ್ಯಕ್ರಮಗಳನ್ನುಅನುಷ್ಠಾನಗೊಳಿಸುವ ಉದ್ದೇಶಗಳಿಗಾಗಿ ಅನುದಾನವನ್ನು ಬಿಡುಗಡೆಗೊಳಿಸಲಾಗುತ್ತದೆ.

ಆಡಳಿತ ಇಲಾಖೆಗಳು ಮತ್ತು ನಿಗಮ, ಮಂಡಳಿಗಳು ರೂಪಿಸಿಕೊಂಡಿರುವ ಕ್ರಿಯಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮಾರ್ಚ್‌ 31ರವರೆಗೆ ಕಾಲಾವಕಾಶ ಇರುತ್ತದೆ.

the fil favicon

SUPPORT THE FILE

Latest News

Related Posts