Wednesday | March 25, 2026 |

ಬ್ರಿಮ್ಸ್‌ ಅವ್ಯವಹಾರ; 12 ವರ್ಷಗಳಾದರೂ ಮುಗಿಯದ ವಿಚಾರಣೆ, ಆರೋಪಿಗಳಿಗೆ ಬಡ್ತಿ

Support THE-FILE

spot_img

ಬೆಂಗಳೂರು; ಬೀದರ್‌ ವೈದ್ಯಕೀಯ ಕಾಲೇಜಿನಲ್ಲಿ ಸಿಬ್ಬಂದಿ ನೇಮಕ ಮತ್ತು ಉಪಕರಣಗಳ ಖರೀದಿಯಲ್ಲಿನ ಕೋಟ್ಯಂತರ ರು ಅವ್ಯವಹಾರ ನಡೆದಿರುವ ಪ್ರಕರಣದ ಕುರಿತು ವಿಚಾರಣೆಯು 12 ವರ್ಷಗಳಿಂದಲೂ ಕುಂಟುತ್ತಾ ಸಾಗಿದೆ. ಈ ಪ್ರಕರಣ ಕುರಿತು 2008 ಮತ್ತು 2014ರಲ್ಲಿ ನೀಡಿದ್ದ ಭರವಸೆಯನ್ನು ಸರ್ಕಾರ ಈಡೇರಿಸದ ಕಾರಣ ಇದನ್ನೂ 11ನೇ ವರದಿಯಲ್ಲಿ ಕಾಯ್ದಿರಿಸಿದೆ. ಅಲ್ಲದೆ  ಅವ್ಯವಹಾರದಲ್ಲಿ ಭಾಗಿ ಆಗಿದ್ದ ಸಿಬ್ಬಂದಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಡ್ತಿಯನ್ನೂ ಕರುಣಿಸಿದೆ.

ಸಿಬ್ಬಂದಿಗಳ ನೇಮಕಾತಿ, ಉಪಕರಣ ಮತ್ತು ಔಷಧಗಳ ಖರೀದಿಯಲ್ಲಿ ಅಕ್ರಮ ಮತ್ತು ಅವ್ಯವಹಾರ ನಡೆದಿರುವ ಸಂಬಂಧ ಡಾ ಎಸ್‌ ಎಲ್ ಹಿರೇಮಠ್‌ ಎಂಬುವರು ದೂರು ನೀಡಿದ್ದರು. ಈ ಕುರಿತು ಬೀದರ್‌ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತನಿಖೆ ನಡೆಸಲಾಗಿತ್ತು. ಡಾ ಬಿ ಒ ಹನುಮಂತಪ್ಪ ಅವರ ವಿರುದ್ಧ ಆರೋಪಗಳೂ ಮೇಲ್ನೋಟಕ್ಕೆ ಸಾಬೀತಾಗಿತ್ತು. 2015 ಮತ್ತು 2017ರಲ್ಲಿ ನೇಮಿಸಿದ್ದ ವಿಚಾರಣಾಧಿಕಾರಿಗಳು ವಿಚಾರಣೆ ಆರಂಭಿಸದೇ ವಿಳಂಬ ಮಾಡಿದ್ದರು ಎಂಬುದು ವರದಿಯಿಂದ ತಿಳಿದು ಬಂದಿದೆ.

2008ರಲ್ಲೇ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧದ ವಿಚಾರಣೆಯು ಸುಮಾರು 12 ವರ್ಷಗಳಿಂದಲೂ ನಡೆಯುತ್ತಲೇ ಬಂದಿದೆ. ಈ ಅವಧಿಯಲ್ಲಿ ಆರೋಪಿತ 8 ಅಧಿಕಾರಿ, ನೌಕರರರಿಂದ ಹೇಳಿಕೆ ಪಡೆಯುವುದರಲ್ಲೇ ಇಲಾಖೆ ಕಾಲಹರಣ ಮಾಡಿರುವುದು ವರದಿಯಿಂದ ಗೊತ್ತಾಗಿದೆ. ಈ ಪ್ರಕರಣದ ಕುರಿತು ವೈದ್ಯಕೀಯ ಶಿಕ್ಷಣ ಹಾಲಿ ಸಚಿವ ಡಾ ಕೆ ಸುಧಾಕರ್‌ ಅವರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗೊತ್ತಾಗಿದೆ.

ಆರೋಪಿತ ಅಧಿಕಾರಿ, ನೌಕರರ ಪೈಕಿ ಕೆಲವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಯೋಜನೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುತ್ತಾರೆ. ಹೀಗಾಗಿ ಆರೋಪಿತರ ವಿರುದ್ಧ ವಿಚಾರಣೆ ನಡೆಸಲು ಇಲಾಖೆಯ ಸಚಿವರ ಸಹಮತಿಗೆ ಕಡತ ಸಲ್ಲಿಸಲಾಗಿದೆ. ಆದರೆ ಈವರೆವಿಗೂ ಸಹಮತ ವ್ಯಕ್ತಪಡಿಸಿಲ್ಲ ಎಂದು ತಿಳಿದು ಬಂದಿದೆ.

‘ಈ ಪ್ರಕರಣದಲ್ಲಿ ಅತಿ ಹೆಚ್ಚಿನ ವಿಳಂಬ ಉಂಟಾಗಿರುವುದರಿಂದ ಆರೋಪಿಗಳು ನಿವೃತ್ತಿ ಹೊಂದಿ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿರುವುದರಿಂದ ತಪ್ಪಿತಸ್ಥರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ,’ ಎಂದು ಸಮಿತಿಯು ಅಭಿಪ್ರಾಯಿಸಿದೆ. ಅಲ್ಲದೆ 6 ತಿಂಗಳ ಕಾಲಮಿತಿಯೊಳಗೆ ತನಿಖೆ ಪೂರ್ಣಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಸಮಿತಿಗೆ ಮಾಹಿತಿ ಒದಗಿಸಬೇಕು ಎಂದು ಸೂಚಿಸಿದೆ.

ಪ್ರಕರಣ ನಡೆದಿರುವ ಬೀದರ್‌ ಜಿಲ್ಲೆಯ ಬ್ರಿಮ್ಸ್‌ ಸಂಸ್ಥೆಗೆ ಭೇಟಿ ಕೊಟ್ಟಿದ್ದ ಭರವಸೆ ಸಮಿತಿಯೇ ಅಚ್ಚರಿಗೊಳಾಗಿತ್ತು. ಅವ್ಯವಹಾರ ಎಸಗಿರುವ ಆರೋಪಿಗಳು ಯಾವ ಇಲಾಖೆಗೆ ಸೇರಿದವರು ಎಂಬ ಬಗ್ಗೆ ಸಮಿತಿಗೆ ಸರಿಯಾದ ಉತ್ತರವನ್ನೇ ನೀಡಿಲ್ಲ. ‘ ಆರೋಪಿಗಳು ಯಾರೆಂದು ಕೇಳಿದರೆ ವೈದ್ಯಕೀಯ ಶಿಕ್ಷಣದವರು ಆರೋಗ್ಯ ಇಲಾಖೆಯ ಸಿಬ್ಬಂದಿ ಎನ್ನುತ್ತಾರೆ, ಆರೋಗ್ಯ ಇಲಾಖೆಯವರು ವೈದ್ಯಕೀಯ ಶಿಕ್ಷಣದವರು ಎನ್ನುತ್ತಾರೆ. ಇಷ್ಟೆಲ್ಲಾ ಅವ್ಯವಹಾರ ಮಾಡಿದ್ದರೂ ಸಿಬ್ಬಂದಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಡ್ತಿ ನೀಡಿದೆ,’ ಎಂಬ ಅಂಶವನ್ನು ಸಮಿತಿಯು ಹೊರಗೆಡವಿದೆ.

ಮತ್ತೊಂದು ಸಂಗತಿ ಎಂದರೆ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ದಾಖಲೆಗಳನ್ನೆಲ್ಲಾ ಬೆಂಕಿ ಹಾಕಿ ಸುಟ್ಟು ಶಾಮೀಲಾಗಿದ್ದಾರೆ. ಹೀಗಾಗಿ ಈ ವಿಷಯದ ಗಂಭೀರತೆ ಅರಿತು 3 ತಿಂಗಳೊಳಗಾಗಿ ವಿಚಾರಣೆ ಮುಗಿಸಿ ಕ್ರಮ ಜರುಗಿಸಬೇಕು ಎಂದೂ ಸಮಿತಿ ಸೂಚಿಸಿದೆ.

Hot this week

ನರೇಗಾ ಕಾಮಗಾರಿಗಳ ಆರಂಭದ ದಿನಾಂಕವೂ ಇಲ್ಲ, ದತ್ತಾಂಶವೂ ಇಲ್ಲ; 1,007.83 ಕೋಟಿ ರು. ವೆಚ್ಚದ ಕಾಮಗಾರಿಗಳು ಅಪೂರ್ಣ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿಗಳ ಪೈಕಿ ಒಂದು ವ‍ರ್ಷಕ್ಕಿಂತಲೂ ಹೆಚ್ಚು...

ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳ ಕುಟುಂಬ ಸದಸ್ಯರ ಉದ್ಯಮ, ಹಣಕಾಸಿನ ವ್ಯವಹಾರ; ಸದನಕ್ಕೆ ಒದಗಿಸಬಹುದೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಖಿಲ ಭಾರತ...

ನರೇಗಾ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಿಯಮ ಉಲ್ಲಂಘನೆ; 86.67 ಕೋಟಿ ರು ಅಕ್ರಮ ಪತ್ತೆ ಹಚ್ಚಿದ ಸಿಎಜಿ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಮಾನವ ಸಂಪನ್ಮೂಲ ಬಳಕೆಗಾಗಿ ಮಾಡಿಕೊಂಡಿದ್ದ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಡೆದಿದ್ದ...

ಮೋಸದ ವಹಿವಾಟು, ಹೆಚ್ಚಿನ ಪಾವತಿ, ಅಕ್ರಮ ವೆಚ್ಚ; ನರೇಗಾದ ಮತ್ತೊಂದು ಮುಖ ಬಯಲು ಮಾಡಿದ ಸಿಎಜಿ

ಬೆಂಗಳೂರು; ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡಿದ್ದ ಕಾಮಗಾರಿಗಳು...

ಗೃಹಜ್ಯೋತಿ; 23,823.06 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ, ಎಸ್ಕಾಂಗಳಿಗೆ 631.75 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

  ಬೆಂಗಳೂರು; ಗೃಹ ಜ್ಯೋತಿ ಯೋಜನೆ ಅನುಷ್ಠಾನಗೊಳಿಸಿರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸರ್ಕಾರವು...

Topics

ವಿನಾಶಕಾರಿ ಭೂ ಕುಸಿತ; ಕೊಡಗು ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರದಲ್ಲಿ ಸಭೆಯೇ ನಡೆದಿಲ್ಲ, ಪುರಾವೆಯೂ ಇಲ್ಲ

ಬೆಂಗಳೂರು; ಕೊಡಗಿನಲ್ಲಿ 2018-19ನೇ ಸಾಲಿನಲ್ಲಿ  ಭಾರೀ ಪ್ರಮಾಣದ ವಿನಾಶಕಾರಿ ಭೂ ಕುಸಿತಗಳಾಗಿದ್ದರೂ ...

ಭೂ ಸ್ವಾಧೀನ, ಪರಿಹಾರದಲ್ಲಿ ಅಕ್ರಮ; ಬಿಸ್ವಾಸ್ ವರದಿ ಮೂಲೆಗುಂಪು, 29.96 ಕೋಟಿ ನಷ್ಟ ಪ್ರಕರಣಕ್ಕೆ ಕ್ಲೀನ್ ಚಿಟ್

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸಾಬೀತಾಗಿದ್ದ  ಬೆಳಗಾವಿ ಜಿಲ್ಲೆ ಹುಕ್ಕೇರಿ...

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

Related Articles

Popular Categories

error: Content is protected !!