ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆ; ರಾಜ್ಯದಲ್ಲಿ 413, ಕೋಲಾರದಲ್ಲಿ 65 ಪ್ರಕರಣ ದಾಖಲು

ಬೆಂಗಳೂರು: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿದವರ ವಿರುದ್ಧ 413 ಪ್ರಕರಣಗಳು ದಾಖಲಾಗಿವೆ. 30 ಜಿಲ್ಲೆಗಳ ಪೈಕಿ ಕೋಲಾರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಡಾ ವೈ ಎ ನಾರಾಯಣಸ್ವಾಮಿ ಅವರು ವಿಧಾನಪರಿಷತ್‌ನಲ್ಲಿ 2021ರ ಸೆ.21ರಂದು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಪಶು ಸಂಗೋಪನ ಸಚಿವ ಪ್ರಭು ಚವ್ಹಾಣ್‌ ಅವರು ರಾಜ್ಯದಲ್ಲಿ ದಾಖಲಾಗಿರುವ ಪ್ರಕರಣಗಳ ಅಂಕಿ ಅಂಶಗಳನ್ನು ಒದಗಿಸಿದ್ದಾರೆ.

‘ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಸಮರ್ಪಕವಾಗಿ ಜಾರಿಗೊಂಡಿದೆ ಎಂದು ಉತ್ತರಿಸಿರುವ ಪ್ರಭು ಚವ್ಹಾಣ್‌ ಅವರು ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಪೊಲೀಸ್‌ ಇಲಾಖೆಮತ್ತು ಪಶುವೈದ್ಯ ಇಲಾಖೆಯವರು ವ್ಯಾಪಕವಾದ ಭ್ರಷ್ಟಾಚಾರ ನಡೆಸಿರುವುದು ಸರ್ಕಾರದ ಗಮನಕ್ಕೆ ಬಂದಿಲ್ಲ ಎಂದು ಮಾಹಿತಿ ಒದಗಿಸಿದ್ದಾರೆ.

ವಿಜಯಪುರ, ರಾಮನಗರ, ತುಮಕೂರು, ದಾವಣಗೆರೆ, ಧಾರವಾಡ, ರಾಯಚೂರು, ಯಾದಗಿರಿ, ಬೀದರ್‌ನಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಉತ್ತರ ಕನ್ನಡ (ಕಾರವಾರ)ದಲ್ಲಿ 2020ರಲ್ಲಿ 54 ಮತ್ತು 2021ರಲ್ಲಿ 41 ಪ್ರಕರಣಗಳು ದಾಖಲಾಗಿರುವುದು ಸಚಿವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ದಾಖಲಾದ ಪ್ರಕರಣಗಳ ವಿವರ (ಜಿಲ್ಲಾವಾರು)

ದಕ್ಷಿಣ ಕನ್ನಡ- 40

ಚಿಕ್ಕಮಗಳೂರು- 32

ಬೆಂಗಳೂರು ನಗರ – 12

ಹಾಸನ – 43

ಚಿಕ್ಕಬಳ್ಳಾಪುರ – 5

ಬೆಂಗಳೂರು ಗ್ರಾಮಾಂತರ – 8

ಕೋಲಾರ – 65

ಚಿತ್ರದುರ್ಗ – 12

ಶಿವಮೊಗ್ಗ – 6

ಮೈಸೂರು – 1

ಮಂಡ್ಯ – 14

ಚಾಮರಾಜನಗರ – 8

ಉಡುಪಿ – 17

ಕೊಡಗು – 18

ಬೆಳಗಾವಿ – 6

ಹಾವೇರಿ – 6

ಗದಗ – 1

ಬಾಗಲಕೋಟೆ – 1

ಕಲ್ಬುರ್ಗಿ – 16

ಬಳ್ಳಾರಿ – 3

ಕೊಪ್ಪಳ – 4

ಗೋಹತ್ಯೆ ನಿಷೇಧ ವಿಧೇಯಕಕ್ಕೆ ವಿಧಾನಸಭೆಯಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ತೀವ್ರ ಪ್ರತಿರೋಧದ ನಡುವೆಯೂ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕೃತವಾಗಿತ್ತು. ವಿಧಾನಪರಿಷತ್‌ನಲ್ಲಿಯೂ ತೀವ್ರ ವಿರೋಧ ವ್ಯಕ್ತವಾಗಿತ್ತಲ್ಲದೆ ಗದ್ದಲಕ್ಕೂ ಕಾರಣವಾಗಿತ್ತು.

ಗೋ ಹತ್ಯೆ ನಿಷೇಧ ಕಾಯ್ದೆಯಲ್ಲಿ ಜೈಲು ಶಿಕ್ಷೆ, ದಂಡದ ಪ್ರಮಾಣವನ್ನು ಗಣನೀಯವಾಗಿ ಏರಿಕೆ‌ ಮಾಡಿ ಕಠಿಣ ಅಂಶಗಳನ್ನು ಸೇರಿಸಲಾಗಿದೆ. ನೂತನ ತಿದ್ದುಪಡಿ ಗೋಹತ್ಯೆ ನಿಷೇಧ ಕಾಯ್ದೆ ಅನ್ವಯ ಸಬ್ ಇನ್ಸ್ ಪೆಕ್ಟರ್ ಮೇಲಿನ ಅಧಿಕಾರಿ ಗೋಹತ್ಯೆ ನಡೆಯುವ ಅಥವಾ ಅಂತಹ ಉದ್ದೇಶಕ್ಕೆ ಜಾನುವಾರುಗಳ ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದರೆ, ಅಂತಹ ಪ್ರದೇಶವನ್ನು ಸೀಜ್ ಮಾಡಿ, ಜಾನುವಾರುಗಳನ್ನು ವಶಪಡಿಸಿಕೊಳ್ಳಲು ಅಧಿಕಾರವಿದೆ.

ಹಸು, ಕರು, ದನ, ಎಮ್ಮೆಗಳ ಹತ್ಯೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. 13 ವರ್ಷದ ಒಳಗಿನ ಕೋಣಗಳನ್ನು ಹತ್ಯೆ ಮಾಡುವಂತಿಲ್ಲ. ಮೊದಲ ಸಲ ಗೋಹತ್ಯೆ ಮಾಡಿದರೆ 3 ರಿಂದ 7 ವರ್ಷಕ್ಕೆ ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ 50 ಸಾವಿರದಿಂದ 5 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಿದೆ.

ಗೋಹತ್ಯೆ ಪುನರಾವರ್ತನೆಯಾದರೆ 1 ಲಕ್ಷದಿಂದ 10 ಲಕ್ಷ ರೂ. ದಂಡದ ಜೊತೆಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇನ್ನು ಗೋಹತ್ಯೆ ಮಾಡುವವರಿಗೆ ನಿರ್ಧಿಷ್ಟ ಅವಧಿವರೆಗೆ ಜಾಮೀನು ನೀಡುವಂತಿಲ್ಲ. ಹೊಸ ಬಿಲ್​ನಲ್ಲಿ ಜಾನುವಾರುಗಳ ವಧೆ ಮಾಡುವುದು ಅಥವಾ ವಧೆ ಮಾಡಲು ಸಹಕರಿಸುವುದು ಅಪರಾಧವಾಗಿದೆ. ಹತ್ಯೆ ಮಾಡುವ ಉದ್ದೇಶದಿಂದ ಜಾನುವಾರುಗಳ ಸಾಗಾಟ ಮತ್ತು ಸಾಗಾಟಕ್ಕೆ ಸಹಕಾರ ನೀಡುವುದು ಅಪರಾಧ ಎಂದು ಮಸೂದೆಯಲ್ಲಿ ವಿವರಿಸಲಾಗಿದೆ.

ಕೃಷಿ ಹಾಗೂ ಪಶು ಸಂಗೋಪನೆ ಉದ್ದೇಶದಿಂದ ಜಾನುವಾರುಗಳ ಸಾಗಾಟಕ್ಕೆ ಮಾತ್ರ ಅನುಮತಿ ಇದೆಯೇ ವಿನಃ ಜಾನುವಾರುಗಳ ಹತ್ಯೆ ಉದ್ದೇಶದಿಂದ ರಾಜ್ಯ ಮತ್ತು ಅಂತರ್ ರಾಜ್ಯದಲ್ಲಿ ಸಾಗಾಟ ಮಾಡುವಂತಿಲ್ಲ ಸೇರಿದಂತೆ ಹಲವು ಕಠಿಣ ನಿಯಮಗಳನ್ನು ವಿಧೇಯಕದಲ್ಲಿ ಸೇರಿಸಲಾಗಿದೆ.

ಕೃಷಿ ಮತ್ತು ಪಶು ಸಂಗೋಪನೆ ಉದ್ದೇಶದಿಂದ ಅಂತರ್ ರಾಜ್ಯ ಸಾಗಾಟ ಮಾಡಲು ಸಂಬಂಧಿಸಿದ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಕೃಷಿ ಚಟುವಟಿಕೆಗೆ ಗೋವು ಸಾಗಾಣಿಕೆಗೆ ಅನುಮತಿ ಮತ್ತು ನಿರ್ಧಿಷ್ಟ ಶುಲ್ಕ ನಿಗದಿ ಮಾಡಲಾಗುವುದು.

ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಮಾರಾಟ ಮಾಡುವುದು, ಖರೀದಿ ಮಾಡುವುದು ಅಥವಾ ಖರೀದಿ ಮಾಡುವಂತೆ ಪ್ರೇರೇಪಿಸುವುದು ನಿರ್ಬಂಧಖಾಯಿಲೆ ಇದೆ ಎಂದು ಪಶು ವೈದ್ಯಾಧಿಕಾರಿ ದೃಢೀಕರಿಸಿದರೆ ಮಾತ್ರ ಅದನ್ನು ಹತ್ಯೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಯಾರಿಗಾದರೂ ಹಸು ಸಾಕಲು ಸಾಧ್ಯವಿಲ್ಲವಾದರೆ, ಅಂತಹ ಜಾನುವಾರುಗಳನ್ನು ಪೋಷಿಸಲು ಗೋಶಾಲೆ ತೆರೆಯಲು ನಿರ್ಧಾರಪ್ರಕರಣಗಳ ತ್ವರಿತ ವಿಲೇವಾರಿಗೆ ವಿಶೇಷ ನ್ಯಾಯಾಲಯ ಸ್ಥಾಪನೆಗೋ ಹತ್ಯೆ ತಡೆಯಲು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಅಧಿಕಾರ ನೀಡಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts