ಬೆಂಗಳೂರು; ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್ ಮತ್ತು ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲಸೋಲ ಮಾಡಿ ಸ್ವಂತಕ್ಕೊಂದು ಮನೆ ನಿರ್ಮಾಣ ಮಾಡಿಕೊಳ್ಳಲು ವಿಶೇಷವಾಗಿ ಮಧ್ಯಮ ವರ್ಗವೂ ಸೇರಿದಂತೆ ಬಹುತೇಕ ಎಲ್ಲಾ ವರ್ಗದವರ ಜನಜೀವನ ಮತ್ತು ಉದ್ಯೋಗವನ್ನು ಕಸಿದುಕೊಂಡ ಪರಿಣಾಮ ಲಕ್ಷಾಂತರ ರುಪಾಯಿಗಳನ್ನು ಮರು ಪಾವತಿಸಲು ಹಣವಿಲ್ಲದಂತಾಗಿದೆ. ಅದೇ ರೀತಿ ಬಹುಮಹಡಿ ವಸತಿ ಸಮುಚ್ಛಯ, ಬಡಾವಣೆ ನಿರ್ಮಾಣ ಮಾಡಿರುವ ಡೆವಲಪರ್‌ಗಳು ಕೂಡ ಬ್ಯಾಂಕ್‌ಗಳಿಗೆ ಸಾಲ ಮರು ಪಾವತಿಸುವಲ್ಲಿ ವಿಫಲವಾಗುತ್ತಿದ್ದಾರೆ. ಇದು ಬ್ಯಾಂಕ್‌ಗಳ ಆರ್ಥಿಕ ವಹಿವಾಟು, ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಬ್ಯಾಂಕ್‌ಗಳಿಂದ ಸಾಲ ಪಡೆದವರು ಮಾಸಿಕ ಕಂತು ಮತ್ತು ಬಡ್ಡಿ ಹಣವನ್ನು ಕಟ್ಟಲಾಗದೇ ಪೇಚಾಡುತ್ತಿದ್ದಾರೆ. ಬಹುತೇಕರು ಅಪೂರ್ಣಗೊಂಡಿರುವ ಮನೆಗಳನ್ನೇ ಬ್ಯಾಂಕ್‌ಗಳಿಗೆ ಹಿಂದಿರುಗಿಸುವ ಮೂಲಕ ಅಸಲು ಮತ್ತು ಬಡ್ಡಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕೋರುತ್ತಿದ್ದಾರೆ. ಹೀಗಾಗಿ ವಸತಿ ಉದ್ದೇಶಕ್ಕೆ ನೀಡಿದ್ದ ಸಾಲವು ವಸೂಲಾಗದ ಆಸ್ತಿಯಾಗಿ ಮಾರ್ಪಟ್ಟಿದೆ. ಇದು ಕೇವಲ ಖಾಸಗಿ ಯೋಜನೆಗಳಿಗಷ್ಟೇ ಅಲ್ಲ ಸರ್ಕಾರದ ವಸತಿ ಯೋಜನೆಗಳ ಫಲಾನುಭವಿಗಳು ಹೆಚ್ಚುವರಿಯಾಗಿ ಬ್ಯಾಂಕ್‌ನಿಂದ ಸಾಲ ಪಡೆದವರೂ ಮಾಸಿಕ ಕಂತುಗಳನ್ನು ಪಾವತಿಸುತ್ತಿಲ್ಲ. ಈ ಸಂಬಂಧ ವಸತಿ ಸಚಿವ ವಿ ಸೋಮಣ್ಣ ಅವರು ಸದ್ಯದಲ್ಲೇ ಸಭೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ.
ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ವಸತಿ ಉದ್ದೇಶಕ್ಕೆ ನೀಡಿದ್ದ ಒಟ್ಟು ಸಾಲದ ಪೈಕಿ 1,682.88 ಕೋಟಿ ಎನ್‌ಪಿಎ ಇದೆ. 2020ರ ಡಿಸೆಂಬರ್ ಮತ್ತು 2021ರ ಮಾರ್ಚ್ 31ರ ಅಂತ್ಯಕ್ಕೆ ಬ್ಯಾಂಕ್‌ಗಳಲ್ಲಿ ಅನುತ್ಪಾದಕ ಆಸ್ತಿ ಪ್ರಮಾಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 5ರಂದು ನಡೆದಿದ್ದ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿವೆ. ಸಮಿತಿ ಸಭೆಯ ನಡವಳಿ ಮತ್ತು ಬ್ಯಾಂಕ್‌ವಾರು ವಿವರಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
2021ರ ಮಾರ್ಚ್ ಅಂತ್ಯಕ್ಕೆ ವಸತಿ ವಲಯದಲ್ಲಿ 1,682.88 ಕೋಟಿ ರು ಇದೆ. ಕಳೆದ ವರ್ಷ ಅಂದರೆ 2020ರ ಡಿಸೆಂಬರ್ ಅಂತ್ಯಕ್ಕೆ 1,208.35 ಕೋಟಿ ರು. ಎನ್‌ಪಿಎ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಕೇವಲ ಮೂರೇ ಮೂರು ತಿಂಗಳಲ್ಲಿ 474.53 ಕೋಟಿ ಎನ್‌ಪಿಎ ಹೆಚ್ಚಳವಾಗಿರುವುದು ಸಮಿತಿ ಸಭೆಯ ನಡವಳಿಯಿಂದ ಗೊತ್ತಾಗಿದೆ.
ರಾಷ್ಟ್ರೀಕೃತ ಬ್ಯಾಂಕ್ ಎನ್‌ಪಿಎ ವಿವರ; ಕೆನರಾ ಬ್ಯಾಂಕ್ – 531.11 ಕೋಟಿ, ಎಸ್‌ಬಿಐ – 100.20 ಕೋಟಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ- 83.32 ಕೋಟಿ, ಬ್ಯಾಂಕ್ ಆಫ್ ಬರೋಡ- 110.17 ಕೋಟಿ, ಬ್ಯಾಂಕ್ ಆಫ್ ಇಂಡಿಯಾ- 51.91 ಕೋಟಿ, ಬ್ಯಾಂಕ್ ಆಫ್ ಮಹಾರಾಷ್ಟ್ರ – 31.80 ಕೋಟಿ, ಇಂಡಿಯನ್ ಬ್ಯಾಂಕ್ – 2.87 ಕೋಟಿ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್- 27.60 ಕೋಟಿ, ಪಂಜಾಬ್ ನ್ಯಾಷನಲ್ ಬ್ಯಾಂಕ್- 22.89 ಕೋಟಿ, ಪಂಜಾಬ್ ಸಿಂಡ್ ಬ್ಯಾಂಕ್- 1.13 ಕೋಟಿ, ಯುಕೋ ಬ್ಯಾಂಕ್ – 98.02 ಕೋಟಿ ರು ಎನ್‌ಪಿಎ ಇರುವುದು ತಿಳಿದು ಬಂದಿದೆ.
ಖಾಸಗಿ ಬ್ಯಾಂಕ್‌ಗಳ ವಿವರ; ಐಡಿಬಿಐ- 5.72 ಕೋಟಿ, ಕರ್ನಾಟಕ ಬ್ಯಾಂಕ್- 52.54 ಕೋಟಿ, ಕ್ಯಾಥರಿಕ್ ಸಿರಿಯನ್ ಬ್ಯಾಂಕ್- 7.05 ಕೋಟಿ, ಸಿಟಿ ಯೂನಿಯನ್ ಬ್ಯಾಂಕ್- 0.75 ಕೋಟಿ, ಧನಲಕ್ಷ್ಮಿ ಬ್ಯಾಂಕ್- 13.63 ಕೋಟಿ, ಫೆಡರಲ್ ಬ್ಯಾಂಕ್ – 8.16 ಕೋಟಿ, ಜೆ ಅಂಡ್ ಕೆ ಬ್ಯಾಂಕ್ – 1.69 ಕೋಟಿ, ಕರೂರ್ ವೈಶ್ಯ ಬ್ಯಾಂಕ್ – 27.53 ಕೋಟಿ, ಲಕ್ಷ್ಮಿ ವಿಲಾಸ್ ಬ್ಯಾಂಕ್ – 99.83 ಕೋಟಿ, ರತ್ನಾಕರ್ ಬ್ಯಾಂಕ್ – 0.35 ಕೋಟಿ, ಸೌತ್ ಇಂಡಿಯನ್ ಬ್ಯಾಂಕ್ – 1.79 ಕೋಟಿ , ತಮಿಳುನಾಡು ಮರ್ಕಂಟೈಲ್ – 0.37 ಕೋಟಿ, ಎಚ್‌ಡಿಎಫ್‌ಸಿ ಬ್ಯಾಂಕ್ – 0.72 ಕೋಟಿ, ಆಕ್ಸಿಸ್ ಬ್ಯಾಂಕ್ – 1.93 ಕೋಟಿ, ಯೆಸ್ ಬ್ಯಾಂಕ್ – 12.97 ಕೋಟಿ, ಬಂಧನ್ ಬ್ಯಾಂಕ್ – 7.09 ಕೋಟಿ, ಡಿಸಿಬಿ ಬ್ಯಾಂಕ್ – 3.69 ಕೋಟಿ, ಐಡಿಎಫ್‌ಸಿ – 187.09 ಕೋಟಿ, ಕರ್ನಾಟಕ ಗ್ರಾಮೀಣ ಬ್ಯಾಂಕ್- 105.78 ಕೋಟಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ – 42.10 ಕೋಟಿ ರು ಎನ್‌ಪಿಎ ಇದೆ.
ಖಾಸಗಿ ಹಣಕಾಸು ಸಂಸ್ಥೆಗಳ ಎನ್‌ಪಿಎ ; ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ – 1.24 ಕೋಟಿ, ಉಜ್ಜೀವನ್ ಸ್ಮಾಲ್ ಫೈನಾನ್ಸ್ – 1.90 ಕೋಟಿ, ಇಎಸ್‌ಎಎಫ್ ಸ್ಮಾಲ್ ಫೈನಾನ್ಸ್ – 0.01 ಕೋಟಿ ರು. ಎನ್‌ಪಿಎ ಇರುವುದು ಗೊತ್ತಾಗಿದೆ.
ಕೋವಿಡ್ ಸಾಂಕ್ರಾಮಿಕವು ವಸತಿ ವಲಯಲ್ಲಿ ಸವಾಲಿನ ಸನ್ನಿವೇಶ ಎದುರಾಗಿದೆ. ಆಸ್ತಿ ಖರೀದಿ ಮಾತಿರಲಿ, ಈಗಾಗಲೇ ಅಪಾರ್ಟ್‌ಮೆಂಟ್ ಖರೀದಿಸಿರುವ ಬಹುತೇಕರು ಮಾಸಿಕ ಕಂತು ಕಟ್ಟಲು ಏದುಸಿರು ಬಿಡುತ್ತಿದ್ದಾರೆ. ಆರ್‌ಬಿಐ ಹಲವಾರು ದರ ಕಡಿತಗಳನ್ನು ಘೋಷಿಸಿ ರೆಪೊ ದರವನ್ನು ಶೇ 4 ಕ್ಕೆ ಇಳಿಸಿದ್ದರೂ ಖರೀದಿದಾರರ ಮನೋಭಾವದ ಮೇಲಿನ ಯಾವುದೇ ಸಕಾರಾತ್ಮಕ ಪರಿಣಾಮವು ಕಂಡು ಬಂದಿಲ್ಲ. ಮಧ್ಯಮದಿಂದ ದೀರ್ಘಾವಧಿಯವರೆಗೆ ಮಾತ್ರ ಕಂಡುಬರುತ್ತದೆ. ಉದ್ಯೋಗ ಕಸಿತ ಅಥವಾ ಉದ್ಯೋಗ ನಷ್ಟದಿಂದಾಗಿಯೇ ಅಲ್ಪಾವಧಿಯಲ್ಲಿ ಇಎಂಐಗಳನ್ನು ಪಾವತಿಸಲು ಹೆಣಗಾಡುತ್ತಿದ್ದಾರೆ.
ಹೌಸಿಂಗ್ ಡಾಟ್ ಕಾಮ್ ನರೆಕೊ ಸಹಯೋಗದೊಂದಿಗೆ ನಡೆಸಿದ ಸಮೀಕ್ಷೆಯಲ್ಲಿ, ಶೇ. 53 ರಷ್ಟು ಜನರು ಆಸ್ತಿಯನ್ನು ಖರೀದಿಸಲು ತಮ್ಮ ಯೋಜನೆಯನ್ನು ಆರು ತಿಂಗಳವರೆಗೆ ಮುಂದೂಡಿದ್ದಾರೆ. ಆರು ತಿಂಗಳ ನಂತರ ಮಾರುಕಟ್ಟೆಗೆ ಮರಳಲು ಯೋಜಿಸಿದ್ದಾರೆ ಎಂದು ಸಮೀಕ್ಷೆ ತಂಡದೆದರು ಹೇಳಿದ್ದಾರೆ.
ಕೋವಿಡ್‌ಗೂ ಮುನ್ನ ಮನೆ ನಿರ್ಮಾಣ ಶುರು ಮಾಡಿರುವವರು, ಅಪಾರ್ಟ್‌ಮೆಂಟ್ ಖರೀದಿಸಿರುವವರ ಬಹುತೇಕರ ಮಾಸಿಕ ವೇತನಕ್ಕೆ ಕತ್ತರಿ ಬಿದ್ದಿದೆ. ಇನ್ನು ಕೆಲವರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಸಾಲದ ಕಂತುಗಳನ್ನು ಮರು ಪಾವತಿಸಿಕೊಳ್ಳಲು ಬ್ಯಾಂಕ್‌ಗಳು ನೀಡಿರುವ ನೋಟೀಸ್‌ಗೆ ಉತ್ತರಿಸಲಾರದೇ ಸಾಲದ ಹಣಕ್ಕೆ ನಿರ್ಮಾಣ ಹಂತದಲ್ಲಿರುವ ಮನೆ ಮತ್ತು ಖರೀದಿಸಿರುವ ಅಪಾರ್ಟ್‌ಮೆಂಟ್‌ಗಳನ್ನೇ ಹಿಂದಿರುಗಿಸಿ ಮಾರಾಟದಿಂದ ಬಂದ ಹಣವನ್ನು ಹೊಂದಾಣಿಕೆ ಮಾಡಿಕೊಳ್ಳಲು ಬ್ಯಾಂಕ್‌ಗಳ ಮುಂದೆ ಅಲವತ್ತುಕೊಂಡಿದ್ದಾರೆ.