ಮೂರನೇ ಅಲೆ ಆತಂಕ; ಕೋವಿಡ್‌ ಆಸ್ಪತ್ರೆಗಳ ಸಂಖ್ಯೆಯಲ್ಲಿ ಶೇ.6ರಷ್ಟು ಇಳಿಕೆ!

ಬೆಂಗಳೂರು; ಕೋವಿಡ್‌ 2ನೇ ಅಲೆ ದೇಶದಾದ್ಯಂತ ಕೋಲಾಹಲ ಎಬ್ಬಿಸಿದ್ದರೂ ಆರೋಗ್ಯ ಮೂಲ ಸೌಕರ್ಯಯಗಳು, ಆರೋಗ್ಯ ಕೇಂದ್ರ ಮತ್ತು ಕೋವಿಡ್‌ ಆಸ್ಪತ್ರೆಗಳ ಸ್ಥಾಪನೆ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿಲ್ಲ. 2020ರ ಡಿಸೆಂಬರ್ ಮತ್ತು ಏಪ್ರಿಲ್‌ 2021ರ ಮಧ್ಯೆ ಕೋವಿಡ್‌ ಆಸ್ಪತ್ರೆಗಳ ಸಂಖ್ಯೆಯಲ್ಲಿ ಶೇ.6ರಷ್ಟು ಇಳಿಕೆಯಾಗಿರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ. 2020 ಮತ್ತು 2021ರ ಮಧ್ಯೆ ಸಾಕಷ್ಟು ಕಾಲಾವಕಾಶಗಳಿದ್ದರೂ ಕೋವಿಡ್‌ 2ನೇ ಅಲೆಯನ್ನು ಎದುರಿಸಲು ಸಜ್ಜುಗೊಳ್ಳುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

2020ರ ಮಾರ್ಚ್‌ನಲ್ಲಿ ಆರಂಭವಾಗಿದ್ದ ಕೋವಿಡ್‌ ನ ಮೊದಲ ಅಲೆಯು ಸೆಪ್ಟಂಬರ್‌ನಲ್ಲಿ ಉತ್ತುಂಗಕ್ಕೇರಿತ್ತು. ಈ ಅವಧಿಯಲ್ಲಿಯೂ ಕೋವಿಡ್‌ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳ ವಿಸ್ತರಣೆ ವೇಗವು ಕಡಿಮೆಯಾಗಿತ್ತು. ವಿಶೇಷವಾಗಿ ಕೋವಿಡ್‌ಗೆಂದೇ ಮೀಸಲಾದ ಆಸ್ಪತ್ರೆಗಳ ಸಂಖ್ಯೆಯಲ್ಲಿಯೂ ಇಳಿಕೆಯಾಗಿತ್ತು.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ 2020ರ ಡಿಸೆಂಬರ್‌ನಲ್ಲಿದ್ದ 4,300 ಕೋವಿಡ್‌ ಆಸ್ಪತ್ರೆಗಳಿದ್ದವು. 2021ರ ಏಪ್ರಿಲ್‌ ಹೊತ್ತಿಗೆ ಇದರ ಸಂಖ್ಯೆ 4,043ಕ್ಕೆ ಇಳಿದಿದೆ. ಅದೇ ರೀತಿ ಕೋವಿಡ್‌ಗೆಂದೇ ಮೀಸಲಾದ ಆರೈಕೆ ಕೇಂದ್ರಗಳ ಸಂಖ್ಯೆಯಲ್ಲಿ ಶೇ.5ರಷ್ಟು ಏರಿಕೆಯಾಗಿದೆ. ಡಿಸೆಂಬರ್‌ 2020ರಲ್ಲಿ 8,857 ಕೇಂದ್ರಗಳಿದ್ದರೆ 2021ರ ಏಪ್ರಿಲ್‌ನಲ್ಲಿ 9,313ಕ್ಕೆ ಏರಿವೆ. ಆದರೆ ಕೋವಿಡ್‌ ಆರೈಕೆ ಕೇಂದ್ರಗಳು ತೀವ್ರತರವಾದ ಪ್ರಕರಣಗಳನ್ನು ಎದುರಿಸುವಷ್ಟು ಸಜ್ಜುಗೊಂಡಿಲ್ಲ ಎಂದು ಆರೋಗ್ಯ ಮೂಲಗಳು ತಿಳಿಸಿವೆ.

ಇನ್ನು, 2020ರ ಮೇ ತಿಂಗಳಲ್ಲಿ 115,134 ಮಿಲಿಯನ್ ಆಮ್ಲಜನಕ ಸೌಲಭ್ಯ ಹಾಸಿಗೆಗಳಿದ್ದವು. 2021ರ ಏಪ್ರಿಲ್‌ 9ರ ಅಂತ್ಯಕ್ಕೆ ದೇಶದಲ್ಲಿ ಈ ಸಂಖ್ಯೆ 255,168 ಕ್ಕೇರಿವೆ. ಆದರೂ 2020ರ ಡಿಸೆಂಬರ್‌ರಿಂದ ಏಪ್ರಿಲ್ 2021ರ ಅಂತ್ಯಕ್ಕೆ ಹೋಲಿಸಿದರೆ ಶೇ.6ರಷ್ಟು ಕಡಿಮೆ ಎಂದು ಆರೋಗ್ಯ ಇಲಾಖೆಯ ದತ್ತಾಂಶಗಳೇ ತೋರಿಸುತ್ತಿವೆ.

ಹಾಗೆಯೇ ಕೇಂದ್ರ ಸರ್ಕಾರವು 102,400 ಆಮ್ಲಜನಕ ಸಿಲಿಂಡರ್‌ಗಳು ಮತ್ತು ಸುಮಾರು 39,000 ವೆಂಟಿಲೇಟರ್‌ಗಳು ಸೇರಿದಂತೆ ವೈದ್ಯಕೀಯ ಉಪಕರಣಗಳನ್ನು ಖರೀದಿಸಿತ್ತು. ಜನವರಿ 24 ರೊಳಗೆ ರಾಜ್ಯಗಳಿಗೆ ವಿತರಿಸಿತ್ತು. ಆದರೂ ಆರೋಗ್ಯ ಸೇವೆಗಳು ಮತ್ತು ಮೂಲಸೌಕರ್ಯಗಳನ್ನು ವಿಸ್ತರಿಸುವ ಜವಾಬ್ದಾರಿ ಇರುವುದು ರಾಜ್ಯ ಸರ್ಕಾರಗಳ ಮೇಲೆಯೇ. ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕೋವಿಡ್‌ 2ನೇ ಅಲೆ ಅಪ್ಪಳಿಸುವ ಹೊತ್ತಿಗೆ ರಾಜ್ಯ ಸರ್ಕಾರಗಳು 35,269 ವೆಂಟಿಲೇಟರ್‌ಗಳನ್ನು ಅಳವಡಿಸಿದ್ದವು.

ಕೇಂದ್ರ ಸರ್ಕಾರವು ಮಾರ್ಚ್ 24, 2020 ಮತ್ತು ಮಾರ್ಚ್ 3, 2021 ರ ನಡುವೆ 38,867 ಹಂಚಿಕೆ ಮಾಡಿತ್ತು. ಇದು ಒಟ್ಟಾರೆ ಶೇ. 91ರಷ್ಟು ಎಂಬುದನ್ನು ಅಂಕಿ ಅಂಶಗಳು ತೋರಿಸುತ್ತವೆ. ಹಂಚಿಕೆಯಾಗಿದ್ದ ವೆಂಟಿಲೇಟರ್‌ಗಳ ಪೈಕಿ ಕರ್ನಾಟಕದಲ್ಲಿ ಶೇ 61ರಷ್ಟಿವೆ. ಇನ್ನುಳಿದಂತೆ ಅಸ್ಸಾಂನಲ್ಲಿ ಶೇ 100, ಗೋವಾದಲ್ಲಿ ಶೇ.80, ಒಡಿಶಾದಲ್ಲಿ ಶೇ.75, ಪಂಜಾಬ್‌ನಲ್ಲಿ ಶೇ.62, ಮಧ್ಯಪ್ರದೇಶದಲ್ಲಿ ಶೇ.57, ಅರುಣಾಚಲ ಪ್ರದೇಶದಲ್ಲಿ ಶೇ.56ರಷ್ಟು ವೆಂಟಿಲೇಟರ್‌ಗಳನ್ನು ಅಳವಡಿಸಿವೆ ಎಂದು ಆರೋಗ್ಯ ಇಲಾಖೆಯ ದತ್ತಾಂಶಗಳಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts