ಕಡಿಮೆ ತೆರಿಗೆ ; ಮೈತ್ರಿ ಸರ್ಕಾರದಲ್ಲಿ ಬೊಕ್ಕಸಕ್ಕೆ 1,502 ಕೋಟಿ ವರಮಾನ ನಷ್ಟ

ಬೆಂಗಳೂರು; ಮಾರಾಟಗಳ ಮೇಲಿನ ತೆರಿಗೆ, ರಾಜ್ಯ ಅಬಕಾರಿ, ಮೌಲ್ಯವರ್ಧಿತ ತೆರಿಗೆ, ಮುದ್ರಾಂಕಗಳು, ನೋಂದಣಿ ಶುಲ್ಕ, ಭೂ ಕಂದಾಯ ಸೇರಿದಂತೆ ಇನ್ನಿತರೆ ಪ್ರಕರಣಗಳಲ್ಲಿ ಹಿಂದಿನ ಸರ್ಕಾರದಲ್ಲಿ 1,502.73 ಕೋಟಿ ಮೊತ್ತದಷ್ಟು ವರಮಾನ ನಷ್ಟವಾಗಿತ್ತು.

ಆರ್ಥಿಕ ಮತ್ತು ರಾಜಸ್ವ ವಲಯಗಳಿಗೆ ಸಂಬಂಧಿಸಿದಂತೆ ಮಾರ್ಚ್‌ 2019 ಅಂತ್ಯಕ್ಕೆ ಸಿಎಜಿ ನೀಡಿರುವ ವರದಿಯು 2018-19ನೇ ಸಾಲಿನ ಆರ್ಥಿಕ ಅಶಿಸ್ತನ್ನು ತೆರೆದಿಟ್ಟಿದೆ.

2018-19ನೇ ಸಾಲಿನಲ್ಲಿ 32,466 ವರ್ತಕರಿಗೆ ಕಡಿಮೆ ತೆರಿಗೆಯನ್ನು ವಿಧಿಸಲಾಗಿತ್ತು. ನಮೂನೆ 240ರ ಪ್ರಕಾರ ಕಡಿಮೆ ತೆರಿಗೆ ಪಾವತಿಯಾಗಿತ್ತಲ್ಲದೆ, ಮದ್ಯದ ಮೇಲಿನ ಮಾರಾಟ ತೆರಿಗೆಯನ್ನೂ ವಿಧಿಸಿರಲಿಲ್ಲ. ಹಾಗೆಯೇ ಕಾಮಗಾರಿಗಳ ಗುತ್ತಿಗೆ ಸ್ವೀಕೃತಿ ಮೇಲೂ ತೆರಿಗೆ ವಿಧಿಸಿರಲಿಲ್ಲ/ಕಡಿಮೆ ತೆರಿಗೆ ವಿಧಿಸಿರುವುದು ಸೇರಿದಂತೆ ಒಟ್ಟು 6,109 ಪ್ರಕರಣಗಳಲ್ಲಿ 207.20 ಕೋಟಿ ಒಳಗೊಂಡಿತ್ತು.

ಈ ಪೈಕಿ ಮಾರಾಟಗಳ ಮೇಲಿನ ತೆರಿಗೆಯನ್ನು ಘೋಷಿಸಿಕೊಳ್ಳದ ಪ್ರಕರಣದಲ್ಲಿ 17.24 ಕೋಟಿ, ಮೌವತೆ 240ರ ಪ್ರಕಾರ ತೆರಿಗೆ ಪಾವತಿಸದಿದ್ದದ್ದು/ಕಡಿಮೆ ಪ್ರಮಾಣದಲ್ಲಿ ಪಾವತಿಸಿದ್ದದ್ದು 17.34 ಕೋಟಿ, ತೆರಿಗೆಯನ್ನು ಪಾವತಿಸದಿದ್ದದ್ದು 32.63 ಕೋಟಿ, ಮದ್ಯ ಮಾರಾಟದ ಮೇಲೆ ತೆರಿಗೆ ವಿಧಿಸದಿದ್ದು 28.48 ಕೋಟಿ, ದಂಡಗಳನ್ನು ವಿಧಿಸದಿದ್ದದ್ದು 42.97 ಕೋಟಿ, ಬಡ್ಡಿಯನ್ನು ವಿಧಿಸದಿದ್ದದ್ದು/ಕಡಿಮೆ ಪ್ರಮಾಣದಲ್ಲಿ ವಿಧಿಸದಿದ್ದದ್ದು 3.43 ಕೋಟಿ, ಖರೀದಿಗಳ ಮೇಲಿನ ತೆರಿಗೆ ಜಮೆಯನ್ನು ತಪ್ಪಾಗಿ/ಅಧಿಕ ಪ್ರಮಾಣದಲ್ಲಿ ಅನುಮತಿಸಿದ್ದು 20.38 ಕೋಟಿ, ತೆರಿಗೆ ಜಮೆಯನ್ನು ಅಧಿಕ ಪ್ರಮಾಣದಲ್ಲಿ ಮುಂದಿನ ತೆರಿಗೆ ಅವಧಿಗೆ ತೆಗೆದುಕೊಂಡು ಹೋಗಿದಿದ್ದದ್ದು 10.11 ಕೋಟಿ, ಇತರೆ ನಿಯಮಬಾಹಿರತೆಗಳು 20.82 ಕೋಟಿಯೂ ಒಳಗೊಂಡಿದೆ.

2 ಪಟ್ಟು ಅನರ್ಹ ಆರ್ಥಿಕ ಲಾಭ

ಜೂನ್‌ 2017ರ ಅವಧಿಯಲ್ಲಿ 381 ವರ್ತಕರು ಮರುಪಾವತಿಗೆ ಕೋರಿಕೆ ಸಲ್ಲಿಸಿದ್ದರು. ಕೋರಿಕೆ ಅಡಿಯಲ್ಲಿದ್ದ 31.13 ಕೋಟಿ ಮೊತ್ತವನ್ನು ಮಧ್ಯಂತರ/ಪರಿವರ್ತನಾ ಕಾಲದ ತೆರಿಗೆ ಜಮೆಯನ್ನಾಗಿ ತೆಗೆದುಕೊಂಡಿದ್ದರು. ಇದು ಈ ಇಂದಿನ ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಅಧಿನಿಯಮದ ಅಡಿಯಲ್ಲಿ ಮರು ಪಾವತಿಗಾಗಿ ಅರ್ಜಿ ಸಲ್ಲಿಸಿದಲ್ಲಿ ವರ್ತಕರಿಗೆ ಅನರ್ಹವಾದಂತಹ ಎರಡು ಪಟ್ಟು ಅರ್ಥಿಕ ಲಾಭ ಮಾಡಿಕೊಡುವ ಸಂಭಾವ್ಯ ಅಪಾಯವನ್ನೂ ಒಳಗೊಂಡಿದೆ ಎಂದು ಸಿಎಜಿ ವರದಿ ವಿವರಿಸಿದೆ.

15.36 ಕೋಟಿ ಮೊತ್ತದಷ್ಟು ಮಧ್ಯಂತರ/ಪರಿವರ್ತನಾ ಕಾಲದ ತೆರಿಗೆ ಜಮೆ ಕೋರಿದ್ದ 80 ವರ್ತಕರು 2017ರ ಜನವರಿ 1ರಿಂದ ಜೂನ್‌ 30ರವರೆಗೆ ಎಲ್ಲಾ ತೆರಿಗೆ ಅವಧಿಗಳಿಗೆ ಸಲ್ಲಿಕೆಯನ್ನೇ ಸಲ್ಲಿಸಿರಲಿಲ್ಲ. ಅಲ್ಲದೆ ರಾಜ್ಯ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ಮಧ್ಯಂತರ/ಪರಿವರ್ತನಾ ಕಾಲದ ತೆರಿಗೆ ಜಮೆ ಕೋರಿಕೆಗೆ ಅವರು ಅರ್ಹರಾಗಿರಲಿಲ್ಲ ಎಂದೂ ಸಿಎಜಿ ವರದಿ ತಿಳಿಸಿದೆ.

ಹಾಗೆಯೇ ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಸಲ್ಲಿಕೆಗೆ ಸಂಬಂಧಿಸಿದಂತೆ 438 ವರ್ತಕರು ಮುಂದಿನ ತೆರಿಗೆ ಅವಧಿಗೆ ಮುಂದಕ್ಕೆ ತೆಗೆದುಕೊಂಡು ಹೋಗಲು 27.68 ಕೋಟಿ ಮೊತ್ತ ಲಭ್ಯವಿತ್ತು. ಆದರೆ ತೆರಿಗೆ ಜಮೆಗೆ ಪ್ರತಿಯಾಗಿ 54.52 ಕೋಟಿ ಮೊತ್ತದಷ್ಟು ರಾಜ್ಯ ಸಕರು ಮ್ತು ಸೇವೆಗಳ ಮೇಲಿನ ತೆರಿಗೆ ಮಧ್ಯಂತರ/ಪರಿವರ್ತನಾ ಕಾಲದ ತೆರಿಗೆ ಜಮೆ ಕೋರಿದ್ದರು. ಇದು 26.84 ಕೋಟಿ ಮೊತ್ತದಷ್ಟು ತೆರಿಗೆ ಜಮೆಯನ್ನು ಅಧಿಕ ಪ್ರಮಾಣದಲ್ಲಿ ಕೋರಿಕೆಗೆ ಪರಿಣಿಮಿಸಿತು ಎಂದು ವರದಿ ವಿವರಿಸಿದೆ.

the fil favicon

SUPPORT THE FILE

Latest News

Related Posts