ಲಾಕ್‌ಡೌನ್‌ ಇದ್ದರೂ ಪ್ರಕರಣಗಳ ಸಂಖ್ಯೆ 5 ಪಟ್ಟು ಹೆಚ್ಚಳ; ಆರೋಗ್ಯ ವ್ಯವಸ್ಥೆ ಬುಡಮೇಲು?

ಬೆಂಗಳೂರು; ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ರಾಜ್ಯದಲ್ಲಿ 175 ರ ಗಡಿ ದಾಟಿದ್ದರೆ, ದೇಶದ ಹಲವು ರಾಜ್ಯಗಳಲ್ಲಿಯೂ ಸೋಂಕಿತರ ಸಂಖ್ಯೆ ದುಪ್ಪಟ್ಟುಗೊಳ್ಳುತ್ತಿರುವುದು ಆತಂಕವನ್ನು  ಮತ್ತಷ್ಟು ಹೆಚ್ಚಿಸುತ್ತಲೇ  ಇದೆ.   

ಬೆಂಗಳೂರು ನಗರ ಸೇರಿದಂತೆ  ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಮಾಜಿಕ ಅಥವಾ ಶಾರೀರಕ ಅಂತರ ಕಾಯ್ದುಕೊಳ್ಳದಿರುವುದೇ ಇದಕ್ಕೆಲ್ಲ  ಮೂಲ ಕಾರಣ ಎಂದು ವ್ಯಕ್ತವಾಗುತ್ತಿದ್ದ ಅಭಿಪ್ರಾಯಗಳನ್ನು ಇದೀಗ ಲ್ಯಾನ್ಸೆಟ್‌ ವೈಜ್ಞಾನಿಕ ಪತ್ರಿಕೆ ಪ್ರಕಟಿಸಿರುವ ಅಧ್ಯಯನ ವರದಿಯೂ ಮುನ್ನೆಡೆಸಿದೆ. 

ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸೋಂಕಿತರ  ಸಂಖ್ಯೆಯನ್ನು ಕನಿಷ್ಠಮಟ್ಟಕ್ಕಿಳಿಸುವುದು ಅಸಾಧ್ಯ ಎಂಬ ಅಂಶವನ್ನು ಹೊರಗೆಡವಿರುವ ಲ್ಯಾನ್ಸೆಟ್‌ ವೈಜ್ಞಾನಿಕ ಪತ್ರಿಕೆ ಪ್ರಕಟಿಸಿರುವ ಅಧ್ಯಯನ ವರದಿಯೂ ತೀವ್ರ ಕಳವಳ ವ್ಯಕ್ತಪಡಿಸಿದೆ.  

ಕೋವಿಡ್‌  19ರ ಹರಡುವಿಕೆ  ಮೇಲೆ ಶಾರೀರಕ ಅಂತರ  ಹೇಗೆ ಪ್ರಭಾವ ಬೀರಿದೆ  ಎಂಬುದರ ಕುರಿತು ಅಧ್ಯಯನ ವರದಿ ಪ್ರಕಟಿಸಿರುವ  ಲ್ಯಾನ್ಸೆಟ್‌ ಪತ್ರಿಕೆ ಹಲವು ಅಂಶಗಳನ್ನು ಹೊರಗೆಡವಿದೆ. ಸಾಮಾಜಿಕ ಅಥವಾ ಶಾರೀರಕ ಅಂತರ  ಕಾಯ್ದುಕೊಳ್ಳುವ ನಿರ್ಬಂಧವನ್ನು ತೆಗೆದುಹಾಕಿದರೆ ಪ್ರಕರಣಗಳ  ಸಂಖ್ಯೆ ಹೆಚ್ಚುವುದಲ್ಲದೆ,  ಮತ್ತೊಂದು ಸಂಕಷ್ಟದ ಮಜಲಿಗೆ ಕೊಂಡೊಯ್ಯಬಹುದು ಎಂದೂ ಎಚ್ಚರಿಸಿದೆ. 

ರಾಜ್ಯದಲ್ಲೆಡೆ ಈಗಾಗಲೇ ನಿಷೇದಾಜ್ಞೆಯನ್ನು ಜಾರಿಗೊಳಿಸಿದ್ದರೂ ಅನಾವಶ್ಯಕವಾಗಿ ರಸ್ತೆಗಿಳಿದಿರುವ ಸಾರ್ವಜನಿಕರು, ಪ್ರಕರಣಗಳ  ಸಂಖ್ಯೆ ಹೆಚ್ಚಳಕ್ಕೆ  ದಾರಿಮಾಡಿಕೊಡುತ್ತಿದ್ದಾರೆ.  ಈ ಬೆಳವಣಿಗೆ ನಡುವೆಯೇ  ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಸಾರ್ವಜನಿಕ ಪ್ರಕಟಣೆಯನ್ನೂ ಹೊರಡಿಸಿರುವ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ  ಅವರು ಅಂತರ ಕಾಯ್ದುಕೊಳ್ಳದಿರುವುದು ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ.    

‘ನಿಷೇದಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದರೂ ಸಾರ್ವಜನಿಕರು ವಾಹನಗಳೊಂದಿಗೆ ರಸ್ತೆಯಲ್ಲಿ ತಿರುಗಾಡುತ್ತಿದ್ದಾರೆ. ಸಾಮಾಜಿಕ  ಅಂತರವನ್ನು ಕಾಯ್ದುಕೊಳ್ಳದೇ ಇರುವುದು  ಕಂಡು ಬಂದಿರುತ್ತದೆ. ಇದು ತುಂಬಾ ಕಳವಳಕಾರಿಯಾದ ವಿಷಯವಾಗಿರುತ್ತದೆ,’ ಎಂದು  ಸಾರ್ವಜನಿಕ ಪ್ರಕಟಣೆಯಲ್ಲಿ ವಿವರಿಸಿದ್ದಾರೆ. 

ಕೋವಿಡ್‌-19ರ ಕೇಂದ್ರ ಬಿಂದುವಾಗಿರುವ ಚೀನಾದ ವುಹಾನ್‌ನಲ್ಲಿ ಸಾಮಾಜಿಕ/ಶಾರೀರಕ ಅಂತರ ಹೇರಿದ ನಂತರ ಕಂಡುಕೊಂಡ ಫಲಿತಾಂಶಗಳನ್ನು ಪ್ರಕಟಿಸಿರುವ ಲ್ಯಾನ್ಸೆಟ್‌  ಪತ್ರಿಕೆ, ಸೋಂಕಿತರ ಸಂಖ್ಯೆ ಹಂತಹಂತವಾಗಿ ಹೇಗೆ ಶೂನ್ಯಕ್ಕಿಳಿಯಿತು ಎಂಬುದನ್ನೂ ವಿವರಿಸಿದೆ. 

ವುಹಾನ್‌ನಲ್ಲಿ 2020ರ ಜನವರಿ 23ರಿಂದ 9 ವಾರಗಳ ಕಾಲ ಸಂಪೂರ್ಣವಾಗಿ ಸ್ವಯಂ ಪ್ರತ್ಯೇಕತೆಯನ್ನು ವಿಧಿಸಲಾಗಿತ್ತು. ಮಾರ್ಚ್‌ 18,2020ರ ಹೊತ್ತಿಗೆ ಕ್ರಮೇಣ ಸೋಂಕಿತರ ಸಂಖ್ಯೆಯಷ್ಟೇ ಅಲ್ಲದೆ, ಹೊಸ ಸೋಂಕುಗಳನ್ನು ಕನಿಷ್ಠ ಮಟ್ಟಕ್ಕಿಳಿಸಿತ್ತು.  2020ರ ಮಾರ್ಚ್‌ 23ರಿಂದ ಸಾಮಾಜಿಕ/ಶಾರೀರಕ ಅಂತರ  ನಿರ್ಬಂಧ ಸಡಿಲಿಸಿದ ನಂತರ ಕ್ರಮೇಣ  ಮೊದಲಿನ ಸ್ಥಿತಿಯತ್ತ ಸಾಗಲಾರಂಭಿಸಿತ್ತು ಎಂದು  ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ. 

ವುಹಾನ್‌ನಲ್ಲಿ ಅಧ್ಯಯನ ನಡೆಸಿದ ನಂತರ ಹೊರಬಂದ  ಫಲಿತಾಂಶದ ಪ್ರಕಾರ 2020 ರ ಮಧ್ಯದಲ್ಲಿ ದೈಹಿಕ ಅಂತರವು ಯೋಜಿತ ಸರಾಸರಿ ಸಂಖ್ಯೆಯ ಸೋಂಕುಗಳನ್ನು ಶೇ. 92% ಕ್ಕಿಂತಲೂ ಕಡಿಮೆಗೊಳಿಸಿತ್ತು. ಅಲ್ಲದೆ 2020 ರ ಅಂತ್ಯದ ವೇಳೆಗೆ ಶೇ. 24 ರಷ್ಟು ಕಡಿಮೆಯಾಗಿತ್ತು  ಎಂದು ಅಧ್ಯಯನ ಹೇಳಿದೆ. 

ಇದರರ್ಥ, ನಿರ್ಬಂಧಗಳನ್ನು ವಿಧಿಸದಿದ್ದಲ್ಲಿ  2020ರ ಮಧ್ಯದಲ್ಲಿ ಶೇ. 92ರಷ್ಟು ಮತ್ತು  ಮಾರ್ಚ್‌ ಕೊನೆಯಲ್ಲಿ ಶೇ.24ಕ್ಕಿಳಿಯುತ್ತಿರಲಿಲ್ಲ. ಈ ಫಲಿತಾಂಶವನ್ನೇ ಮಾದರಿಯನ್ನಾಗಿಸಿಕೊಂಡಿರುವ ವುಹಾನ್‌, ಸಾಮಾಜಿಕ/ಶಾರೀರಕ ಅಂತರವನ್ನು 2020ರ  ಏಪ್ರಿಲ್‌ ಅಂತ್ಯದವರೆಗೂ ಮುಂದುವರೆಸಬೇಕು ಅಧ್ಯಯನ ಶಿಫಾರಸ್ಸು ಮಾಡಿದೆ. ಇದು ಸಾಧ್ಯವಾಗಿದ್ದೇ ಆದಲ್ಲಿ ಆರೋಗ್ಯ ವ್ಯವಸ್ಥೆ ಬುಡಮೇಲಾಗದಂತೆ  ತಡೆಯಬಲ್ಲದು ಎಂದೂ ಅಧ್ಯಯನ ವರದಿ ವಿವರಿಸಿದೆ. 

ಆದರೆ ಭಾರತದ ಪರಿಸ್ಥಿತಿ ಇನ್ನೂ ಚೇತರಿಸಿಕೊಂಡಿಲ್ಲ.  ಭಾರತವು ಏಪ್ರಿಲ್ 14, 2020 ರವರೆಗೆ ಮೂರು ವಾರಗಳ ಲಾಕ್‌ಡೌನ್‌ ಘೋಷಿಸಿದೆ. 2020ರ  ಮಾರ್ಚ್‌ 25 ಮತ್ತು ಏಪ್ರಿಲ್‌  5ರ  ನಡುವೆ ಪ್ರಕರಣಗಳ ಸಂಖ್ಯೆಯಲ್ಲಿ 5 ಪಟ್ಟು ಹೆಚ್ಚಾಗಿದೆ. ಈ ಸಂಖ್ಯೆ 606 ರಿಂದ 4,742ಕ್ಕೇರಿರುವುದು ಆರೋಗ್ಯ ಇಲಾಖೆಯ ದತ್ತಾಂಶಗಳಿಂದ ತಿಳಿದು ಬಂದಿದೆ. 

ಹೀಗಾಗಿ ಈ ಹಂತದಲ್ಲಿ ಸಾಮಾಜಿಕ/ಶಾರೀರಕ ಅಂತರವನ್ನು ತೆಗೆದುಹಾಕಿದರೆ ಅಥವಾ ಶಾಲೆಗಳನ್ನು ಪುನರಾರಂಭಿಸಿದರೆ ಪ್ರಕರಣಗಳ ಸಂಖ್ಯೆ ದಿಢೀರ್‌ ಏರಿಕೆಯಾಗಲಿದೆ ಎಂದೂ ಎಚ್ಚರಿಸುತ್ತಾರೆ ದೇಶದ ಪ್ರಮುಖ ವೈದ್ಯ ವಿಜ್ಞಾನಿ ಗಗನ್‌ದೀಪ್‌ ಕಾಂಗ್‌.

the fil favicon

SUPPORT THE FILE

Latest News

Related Posts