ಎಐಸಿಟಿಇ ಅಧಿಸೂಚನೆ ಅಳವಡಿಸಿಕೊಳ್ಳದ ರಾಜ್ಯ ಸರ್ಕಾರ; ಡಿಪ್ಲೋಮಾ ಉಪನ್ಯಾಸಕರ ವೇತನಕ್ಕೂ ಕೊಕ್ಕೆ

ಬೆಂಗಳೂರು; ರಾಜ್ಯ ಸರ್ಕಾರ ಈವರೆವಿಗೂ ಎಐಸಿಟಿಇ ಅಧಿಸೂಚನೆಗಳನ್ನು ಅಳವಡಿಸಿಕೊಳ್ಳದ ಕಾರಣ ರಾಜ್ಯದ ಡಿಪ್ಲೋಮಾ ಕಾಲೇಜಿನ ಉಪನ್ಯಾಸಕರು 6, 7 ನೇ ವೇತನ ಶ್ರೇಣಿ ಮತ್ತು ಬಡ್ತಿಯಲ್ಲಿ ವಂಚಿತರಾಗಿದ್ದಾರೆ. ಹಿಂದಿನ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟ ಸರ್ಕಾರ ಡಿಪ್ಲೋಮಾ ಕಾಲೇಜಿನ ಉಪನ್ಯಾಸಕರ ವೇತನ ತಾರತಮ್ಯ ಸರಿಪಡಿಸಲು ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ ಎಂಬುದು ದಾಖಲೆಯಿಂದ  ತಿಳಿದು ಬಂದಿದೆ. 

ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಆರ್‌ಟಿಐ ಅಡಿ ದಾಖಲೆಗಳು ಲಭ್ಯವಾಗಿವೆ. ದಾಖಲೆಗಳ ಪ್ರಕಾರ ವೇತನ ಶ್ರೇಣಿಯಲ್ಲಾಗಿರುವ ವಂಚನೆಯನ್ನು ಸರಿಪಡಿಸಲು ಡಿಪ್ಲೋಮಾ ಕಾಲೇಜಿನ ಉಪನ್ಯಾಸಕರು ಸರ್ಕಾರದ ಮೆಟ್ಟಿಲೇರಿದ್ದರೂ ಪ್ರಕರಣವನ್ನು ಈವರೆವಿಗೂ ಇತ್ಯರ್ಥಗೊಳಿಸದಿರುವುದು ಬೆಳಕಿಗೆ ಬಂದಿದೆ.

ಸರ್ಕಾರಿ ಮತ್ತು ಅನುದಾನಿತ ಡಿಪ್ಲೋಮಾ ಕಾಲೇಜು ಉಪನ್ಯಾಸಕರಿಗೆ 2011ರ ಏಪ್ರಿಲ್ 1ರಿಂದ ಜಾರಿಯಾಗುವಂತೆ 6ನೇ ಎಐಸಿಟಿಇ ವೇತನ ಶ್ರೇಣಿ ಮತ್ತು ಬಡ್ತಿಯನ್ನು ವಿಸ್ತರಿಸಿತ್ತು.

ಈ ನಡುವೆ 2012ರ ನವೆಂಬರ್ 8 ಮತ್ತು 2016ರ ಜನವರಿ 4ರ ಎಐಸಿಟಿಇ ಅಧಿಸೂಚನೆಗಳನ್ನು ಹೊರಡಿಸಿ ಉಪನ್ಯಾಸಕರ ಬಡ್ತಿಗೆ ಸಂಬಂಧಿಸಿದಂತೆ ಎಪಿಐ/ಪಿಬಿಎಎಸ್ ಆಧರಿತ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಆದರೆ ಈ ಯಾವ ಮಾರ್ಗಸೂಚಿಗಳನ್ನು ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಸರ್ಕಾರ ಇದನ್ನು ಜಾರಿಗೊಳಿಸಿರಲಿಲ್ಲ. ಸರ್ಕಾರದ ಹೊಣೆಗೇಡಿತನದಿಂದಾಗಿ ಡಿಪ್ಲೋಮಾ ಕಾಲೇಜಿನ ನೂರಾರು ಉಪನ್ಯಾಸಕರು ವೇತನ ಶ್ರೇಣಿ ಮತ್ತು ಬಡ್ತಿಯಿಂದ ವಂಚಿತರಾಗಿದ್ದಾರೆ.

ಅಲ್ಲದೆ 2016ರ ಜನವರಿ 4ರಂದು ಎ ಐ ಸಿ ಟಿ ಇ ಈ ಸಂಬಂಧ ಭಾರತೀಯ ಗೆಜೆಟ್‍ನಲ್ಲಿ ಪ್ರಕಟಿಸಿದ್ದ ಅಧಿಸೂಚನೆ ಪ್ರಕಾರ ಸರ್ಕಾರಿ, ಅನುದಾನಿತ ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜು ಬೋಧಕ ವೃಂದವರಿಗೆ ಎ ಪಿ ಐ ಆಧರಿತ ಹೊಸ ಸಿಎಎಸ್ ನಿಯಮಗಳನ್ನು ರೂಪಿಸಿತ್ತು. 

ಅಲ್ಲದೆ 2015ರ ನವೆಂಬರ್ 7ರವರಗೆ ಅನುಷ್ಠಾನಗೊಳಿಸುವುದರಿಂದ ವಿನಾಯಿತಿ ನೀಡಲಾಗಿತ್ತು ಆದರೆ ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಈವರೆವಿಗೂ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಮತ್ತು ಪ್ರಕರಣವನ್ನು ಇನ್ನೂ ಇತ್ಯರ್ಥಗೊಳಿಸಿಲ್ಲ ಎಂಬುದು ದಾಖಲೆಯಿಂದ ತಿಳಿದು ಬಂದಿದೆ. 

SUPPORT THE FILE

Latest News

Related Posts