ಕೋವಿಡ್‌; ಅಪರಿಚಿತ ಮೂಲಗಳದ್ದೇ ಸಿಂಹಪಾಲು, 3 ತಿಂಗಳಲ್ಲೇ ಅತಿ ಹೆಚ್ಚು ದಾಖಲು

ಬೆಂಗಳೂರು; ರಾಜ್ಯದಲ್ಲಿ ನವೆಂಬರ್‌ ಮೂರನೇ ವಾರದ ಹೊತ್ತಿಗೆ ದಾಖಲಾಗಿರುವ ಕೋವಿಡ್‌-19ರ ಎಲ್ಲಾ ಪ್ರಕರಣಗಳಲ್ಲಿನ ಮೂಲಗಳು ಅಪರಿಚಿತ ಮೂಲಗಳಾಗಿವೆ. ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವ ನಡುವೆಯೇ ಅಪರಿಚಿತ ಮೂಲಗಳಿಂದಲೇ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಿಮಿಸಿದೆ.

ಕೋವಿಡ್‌ನ ಹೊಸ ಪ್ರಕರಣಗಳ ಮೂಲವನ್ನು ಬಹಿರಂಗಪಡಿಸುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕದಂತಹ ರಾಜ್ಯಗಳಲ್ಲಿ ಬಹುಪಾಲು ಪ್ರಯಾಣ ಮತ್ತು ಕೋವಿಡ್‌ ದೃಢಪಟ್ಟಿರುವ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಆದರೆ ರಾಜ್ಯದಲ್ಲಿ ನವೆಂಬರ್‌ ಮೂರನೇ ವಾರದ ಹೊತ್ತಿಗೆ ಎಲ್ಲಾ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಅಪರಿಚಿತ ಮೂಲಗಳಾಗಿವೆ ಎಂಬುದು ಕೋವಿಡ್‌ ಅಂಕಿ ಅಂಶದಿಂದ ತಿಳಿದು ಬಂದಿದೆ.

ಅಪರಿಚಿತ ಮೂಲ ಪ್ರಕರಣಗಳಲ್ಲಿ ಏರಿಕೆ

ಆಗಸ್ಟ್‌ 18ರ ಹೊತ್ತಿಗೆ ದಾಖಲಾಗಿದ್ದ ಕೋವಿಡ್‌ ಪ್ರಕರಣಗಳಲ್ಲಿ ಶೇ.42.24ರಷ್ಟು ಪ್ರಕರಣಗಳು ಅಪರಿಚಿತ ಮೂಲಗಳಾಗಿವೆ. ಸೆಪ್ಟಂಬರ್‌ 18 ಹೊತ್ತಿಗೆ ಶೇ.45.71, ಅಕ್ಟೋಬರ್‌ 18ರ ಹೊತ್ತಿಗೆ ಶೇ.57.85 ಮತ್ತು ನವೆಂಬರ್‌ 18ರ ಹೊತ್ತಿಗೆ ಶೇ.59.05ರಷ್ಟು ಪ್ರಕರಣಗಳು ಅಪರಿಚಿತ ಮೂಲಗಳಾಗಿವೆ. ಆಗಸ್ಟ್‌ನಿಂದ ನವೆಂಬರ್‌ವರೆಗೆ ಅಪರಿಚಿತ ಮೂಲಗಳ ಪ್ರಕರಣಗಳು ಏರುಮಮುಖದಲ್ಲಿರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ.

ಅದೇ ರೀತಿ ರಾಜ್ಯದೊಳಗೆ ಪ್ರಯಾಣಿಸಿರುವವರ ಪೈಕಿ ಆಗಸ್ಟ್‌ 18ರ ಹೊತ್ತಿಗೆ ಶೇ.54.06ರಷ್ಟು ಮಂದಿಗೆ ಕೋವಿಡ್‌ ದೃಢಪಟ್ಟಿದೆ. ಸೆಪ್ಟಂಬರ್‌ 18ರ ಹೊತ್ತಿಗೆ ಶೇ.49.53, ಅಕ್ಟೋಬರ್‌ 18ರ ಹೊತ್ತಿಗೆ ಶೇ 30.83 ಮತ್ತು ನವೆಂಬರ್‌ 18ರ ಹೊತ್ತಿಗೆ ಶೇ.30.17ರಷ್ಟಿದೆ. ರಾಜ್ಯದೊಳಗೆ ಪ್ರಯಾಣಿಸಿರುವವರಲ್ಲಿ ಕೋವಿಡ್‌ ದೃಢಪಡುತ್ತಿರುವವರ ಸಂಖ್ಯೆ ಇಳಿಮುಖವಾಗುತ್ತಿರುವುದು ತಿಳಿದು ಬಂದಿದೆ.

ರಾಜ್ಯಗಳ ನಡುವೆ ಕೋವಿಡ್‌ ಹರಡುವುದರಲ್ಲಿ ವ್ಯಾಪಕ ವ್ಯತ್ಯಾಸವಿದೆ. ಹೆಚ್ಚು ಜನ ಸಾಂದ್ರತೆಯಿರುವ ಪ್ರದೇಶಗಳು ಸಹಜವಾಗಿಯೆ ಹೆಚ್ಚಿನ ಪ್ರಕರಣಗಳನ್ನು ಹೊಂದಿವೆ. ಆದರೆ ವಿಭಿನ್ನ ಪರೀಕ್ಷಾ ದರಗಳು ಪ್ರಕರಣಗಳ ಪತ್ತೆಹಚ್ಚುವಿಕೆಯ ಮೇಲೆ ಪರಿಣಾಮ ಬೀರಬಹುದು. ವಯಸ್ಸಾದವರು ಮತ್ತು ಇನ್ನಿತರೆ ರೋಗಗಳಿಂದ ಬಳಲುತ್ತಿರುವವರು ಸಾವನ್ನಪ್ಪುತ್ತಿದ್ದಾರೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

ಜನಸಾಂದ್ರತೆ ಇರುವ ಮುಂಬೈನ ಕೊಳಗೇರಿ ಪ್ರದೇಶಗಳಲ್ಲಿ ಮತ್ತು ಬಳಸಿರುವ ಶೌಚಾಲಯ ಬಳಸುವುದು ಕೂಡ ನಗರ ಪ್ರದೇಶಗಳನ್ನು ಕೋವಿಡ್‌ ಪೀಡಿತವನ್ನಾಗಿಸುತ್ತಿವೆ ಎಂದು ಟಾಟಾ ಇನ್ಸಿಟಿಟ್ಯೂಟ್‌ ಫಾರ್‌ ಫಂಡಮೆಂಟಲ್‌ ರೀಸರ್ಚ್‌ ನಡೆಸಿರುವ ಇತ್ತೀಚಿನ ಸಿರೋ ಸಮೀಕ್ಷೆಯು ಹೊರಗೆಡವಿದ್ದನ್ನು ಸ್ಮರಿಸಬಹುದು.

ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಸೋಂಕಿತ ವ್ಯಕ್ತಿಗಳ ಪೈಕಿ ಶೇ.80ರಷ್ಟು ಪ್ರಕರಣಗಳು ಮಕ್ಕಳು ಮತ್ತು ಯುವ ವಯಸ್ಕರು ಮೂರನೇ ಒಂದು ಭಾಗದಷ್ಟು ಪ್ರಕರಣಗಳು ದಾಖಲಾಗಿವೆ. ಹಾಗೆಯೇ 50ರಿಂದ 64 ವರ್ಷ ವಯಸ್ಸಿನವರು ಸಾವನ್ನಪ್ಪುತ್ತಿದ್ದಾರೆ ಎಂದು ಅಧ್ಯಯನ ವರದಿಯೊಂದು ವಿವರಿಸಿದೆ.

SUPPORT THE FILE

Latest News

Related Posts