ಹಣ ವರ್ಗಾವಣೆ, ಸಾಗಣೆ; ಡಿಕೆಶಿ ಸೂಚನೆಯಂತೆಯೇ ಬೇನಾಮಿ ವ್ಯವಹಾರಗಳ ನಿರ್ವಹಣೆ

ಬೆಂಗಳೂರು; ಮೊದಲನೇ ಆರೋಪಿ ಡಿ ಕೆ ಶಿವಕುಮಾರ್‍‌ ಅವರ ಎಲ್ಲಾ ಬೇನಾಮಿ ವ್ಯವಹಾರಗಳನ್ನು ನಾಲ್ಕನೇ ಆರೋಪಿಯು ನಿರ್ವಹಿಸುತ್ತಿದ್ದರು ಮತ್ತು ಸಹಕರಿಸುತ್ತಿದ್ದರು. ಎಲ್ಲವೂ ಮೊದಲನೇ ಆರೋಪಿ ಡಿ ಕೆ ಶಿವಕುಮಾರ್ ಸೂಚನೆಯಂತೆಯೇ ನಡೆಯುತ್ತಿತ್ತು ಎಂಬುದನ್ನು ಆದಾಯ ತೆರಿಗೆ ಇಲಾಖೆಯು ವಿಚಾರಣೆ ವೇಳೆ ಪತ್ತೆ ಹಚ್ಚಿದೆ.

 

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಡಿ ಕೆ ಶಿವಕುಮಾರ್‍‌ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್‍‌ ದಾಖಲಿಸಿರುವ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಯ ಉಪ ನಿರ್ದೇಶಕರು ನ್ಯಾಯಾಲಯಕ್ಕೆ ಸಲ್ಲಿಸಿರುವ ಸಂಪೂರ್ಣ ವಿವರಗಳು ಮುನ್ನೆಲೆಗೆ ಬಂದಿವೆ.

 

ಈ ಸಂಬಂಧ ‘ದಿ ಫೈಲ್‌’ ಸಮಗ್ರ ಕಡತವನ್ನು ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

‘ಹಣ ವರ್ಗಾವಣೆ ಮತ್ತು ಸಾಗಣೆಗೆ ಸಂಬಂಧಿಸಿದಂತೆ ವಿವರಿಸಿದ ನಾಲ್ಕನೇ ಅರೋಪಿ,  ಶೈಲೇಂದ್ರ ಎನ್ನುವವರು ನನ್ನನ್ನು ಭೇಟಿ ಮಾಡಿ ಮೂರು ಕಂತುಗಳಲ್ಲಿ ಹಣ ನೀಡಿದರು ಎಂದು ತಿಳಿಸಿದ್ದಾರೆ. ಇದು ಆರೋಪಿ-1ರ ಸೂಚನೆಗೆ ಅನುಸಾರ ನಡೆಯಿತು. ಇದೇ ಸಂದರ್ಭದಲ್ಲಿ ಜಗದೀಶ್‌ ಚಂದ್‌ ಎನ್ನುವವರು ಹೇಳಿಕೆ ನೀಡಿದ್ದು ಈ ನಗದನ್ನು ಆರೋಪಿ-4 ಮತ್ತು ಅರೋಪಿ-5 ವ್ಯವಹರಿಸುತ್ತಿದ್ದರು ಎಂದು ಹೇಳಿದ್ದಾರೆ,’ ಎಂದು ವಿವರಿಸಲಾಗಿದೆ.

 

ನಾಲ್ಕನೇ ಆರೋಪಿಯು ಸರ್ಕಾರಿ ನೌಕರ. ಅಷ್ಟೊಂದು ಹಣವನ್ನು ತನ್ನದೇ ಮೂಲಗಳಿಂದ ಗಳಿಸಲು ಸಾಧ್ಯವಿಲ್ಲ. ಈ ಬಂಗಲೆಗಳಲ್ಲಿ ವಶಕ್ಕೆ ಪಡೆದ ಹಣ ಖಚಿತವಾಗಿ ಮೊದಲನೇ ಆರೋಪಿಗೆ ಸೇರಿದ್ದಾಗಿದೆ. ನಾಲ್ಕನೇ ಆರೋಪಿಯು ಮೊದಲೇ ಆರೋಪಿಯ ಎಲ್ಲಾ ಬೇನಾಮಿ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು. ಇನ್ನೂ ಹಲವು ಬೇನಾಮಿ ವ್ಯವಹಾರಕ್ಕೆ ಸಹಕರಿಸುತ್ತಿದ್ದರು. ಐದನೇ ಆರೋಪಿಯು ಈ ಎಲ್ಲಾ ವಹಿವಾಟಿನ ವಿವರಗಳನ್ನು ದಾಖಲಿಸುತ್ತಿದ್ದ ಎಂದು ವಿವರಿಸಿರುವುದು ಗೊತ್ತಾಗಿದೆ.

 

‘ಈ ಮೇಲಿನ ಸಾಕ್ಷಿಗಳು ಮತ್ತು ಚರ್ಚೆಗಳನ್ನು ಗಮನಿಸಿದಾಗ ಸ್ಪಷ್ಟವಾಗುವುದೇನೆಂದರೆ ಭೌತಿಕವಾಗಿ ಲಭ್ಯವಾದ ಹಣ ಆರೋಪಿ-1ಕ್ಕೆ ಸೇರಿದೆ ಎಂಬುದು. ಇದೇ ಸಂದರ್ಭದಲ್ಲಿ ಆರೋಪಿ-3ರ ಬಂಗಲೆಯಲ್ಲಿ ತಪಾಸಣೆ ಮುಂದುವರೆದಿತ್ತು. ನವ ದೆಹಲಿಯಲ್ಲಿ ನಾನು ಯಾವುದೇ ಕಚೇರಿ ಅಥವಾ ಬಿಸಿನೆಸ್‌ ಹೊಂದಿಲ್ಲ ಎಂದು ಮೂರನೇ ಆರೋಪಿಯು ಹೇಳಿದ್ದಾರೆ. ಈ ಅಪಾರ್ಟ್‌ಮೆಂಟನ್ನು ಆರೋಪಿ-1 ಉಪಯೋಗಿಸುತ್ತಿದ್ದಾರೆ ಎಂದು ಹೇಳಿದ್ದಾರೆ,’ ಎಂದು ವಿವರಿಸಿದ್ದಾರೆ.

 

ವಿಶೇಷವೆಂದರೇ ಬಂಗಲೆಗಳಲ್ಲಿ ಸಿಕ್ಕಿದ್ದ ನಗದು ತಮಗೆ ಸೇರಿದ್ದಲ್ಲ ಎಂದು ಮೂರನೇ ಆರೋಪಿ ಹೇಳಿಕೆ ನೀಡಿದ್ದರು. ಮೂರನೇ ಆರೋಪಿಯ ಹೇಳಿಕೆಗಳನ್ನು ಗಮನಿಸಿದರೇ ಮೊದಲನೇ ಆರೋಪಿಯ ಅನಧಿಕೃತ ನಗದು ವರ್ಗಾವಣೆಗಳನ್ನು ನೋಡಬಹುದು. ಅಲ್ಲದೇ ಮೊದಲನೇ ಆರೋಪಿಯ ಹೇಳಿಕೆಗಳನ್ನು ಗಮನಿಸಿದರೆ ಬಂಗಲೆಯ ಕೊಠಡಿಯೊಂದನ್ನು ಮೊದಲನೇ ಆರೋಪಿಯು ಬಳಕೆ ಮಾಡುತ್ತಿದ್ದರು ಮತ್ತು ಅದರಲ್ಲಿ ನಗದನ್ನು ಬಚ್ಚಿಟ್ಟಿದ್ದರು ಎಂಬುದು ಗೊತ್ತಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆಯು ತನ್ನ ವಿವರಣೆಯಲ್ಲಿ ದಾಖಲಿಸಿದೆ

 

‘ಈ ವಿವರಗಳನ್ನು ವಿಶ್ಲೇಷನಾತ್ಮಕವಾಗಿ ಗಮನಿಸಿದಾಗ ಮೂರನೇ ಆರೋಪಿ-3 ವ್ಯವಸ್ಥಿತವಾಗಿ ಬೆಂಬಲ ನೀಡಿರುವುದು ಕಂಡುಬರಲಿದೆ. ತೆರಿಗೆ ವಂಚನೆ ಮಾಡುವ ಉದ್ದೇಶದಿಂದ ಹೀಗೆ ಮಾಡಲಾಗಿದೆ. ಜೊತೆಗೆ ಆರೋಪಿ-1 ದಂಡದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಲಾಗಿದೆ. ಆರೋಪಿ-1ರನ್ನು ರಕ್ಷಿಸುವುದಕ್ಕಾಗಿಯೂ ಹೀಗೆ ಮಾಡಲಾಗಿದೆ ಎಂಬುದು ಮೇಲಿನ ವಿವರಗಳನ್ನು ಗಮನಿಸಿದಾಗ ಅರಿವಿಗೆ ಬರಲಿದೆ,’ ಎಂದು ವಿವರಿಸಿದೆ.

 

ತಪಾಸಣೆ ವೇಳೆ ಮತ್ತು ವಶಕ್ಕೆ ಪಡೆದ ನಗದು ಮೊದಲನೇ ಆರೋಪಿಗೆ ಸೇರಿದೆ. ವಶಕ್ಕೆ ಪಡೆದ ನಗದು ಲೆಕ್ಕಕ್ಕೆ ಸಿಗದಿರುವುದು ಮತ್ತು ಮೊದಲನೇ ಆರೋಪಿಯು ತೆರಿಗೆ ವ್ಯಾಪ್ತಿಗೆ ಸಲ್ಲಿಸದಿರುವುದು, ಮೂರನೇ ಆರೋಪಿ ಮತ್ತು ಮೊದಲನೇ ಆರೋಪಿಯು ನಗದಿನ ಮೂಲವು ಯಾವುದು ಎಂದು ಹೇಳಲು ವಿಫಲವಾಗಿದ್ದಾರೆ ಎಂದು ವಿವರಿಸಿದ್ದಾರೆ.

 

‘ಈ ಸತ್ಯಗಳು ಮತ್ತು ಮೇಲ್ಕಂಡ ಸಾಕ್ಷಿಗಳನ್ನು ಗಮನಿಸಿದರೆ ಮೊದಲನೇ ಆರೋಪಿಯನ್ನು ಆದಾಯ ತೆರಿಗೆ ಇಲಾಖೆ ಕಾಯ್ದೆಯ ಸೆಕ್ಷನ್‌ 276ಸಿ ಮತ್ತು 277 ಕಾನೂನು ಕ್ರಮ ಜರುಗಿಸಬಹುದಾಗಿದೆ,’ ಶಿಫಾರಸ್ಸು ಮಾಡಿದ್ದಾರೆ.

ಶಿಕ್ಷಣ, ಟ್ರಸ್ಟ್‌, ರಿಯಲ್‌ ಎಸ್ಟೇಟ್‌ ವಹಿವಾಟು; ಕಳಂಕಿತ ಹಣವನ್ನು ಕಳಂಕ ರಹಿತವಾಗಿಸಲು ಹೂಡಿಕೆ

ಮೊದಲ ಆರೋಪಿಗೆ ಸೇರಿದ ಮನೆಗಳ ಮೇಲೆ ದಾಳಿ ನಡೆಸಿದ ವೇಳೆಯಲ್ಲಿ ದಾಖಲೆಗಳ ಮೇಲೆ ಪ್ರಮಾಣ ಸ್ವೀಕರಿಸಲಾಗಿತ್ತು. ನಾಲ್ಕನೇ ಆರೋಪಿಯೊಂದಿಗೆ ನಿಮ್ಮ ಸಂಬಂಧದ ಕುರಿತು ಪ್ರಶ್ನಿಸಿದ್ದ ವೇಳೆಯಲ್ಲಿ ನಾಲ್ಕನೇ ಆರೋಪಿಯೊಂದಿಗೆ ಹೊಂದಿರುವ ಎಲ್ಲ ಹಣಕಾಸು ಸಂಬಂಧಗಳನ್ನು ಹೇಳಿದ್ದರು.

 

ಬಿ-2 ಸಫ್ದರ್‍‌ಜಂಗ್‌ ಎನ್‌ಕ್ಷೇವ್‌ ಮನೆ ರೂ.41,03,600 ಲಕ್ಷ, ಬಿ-4 ಸಫ್ದರ್‍‌ಜಂಗ್‌ ಎನ್‌ಕ್ಲೇವ್‌ ಮನೆ 1,37,36,500 ಕೋಟಿ, ಬಿ-5 ಸಫ್ದರ್‍‌ಜಂಗ್‌ ಎನ್‌ಕ್ಲೇವ್‌ ಮನೆ 6,68,84,100 ಕೋಟಿ, ಆರೋಪಿ-4ರ ಮನೆಯಲ್ಲಿ 12,44,900 ಲಕ್ಷ ರೂ., ಜೋವಿನ್‌ ಜೋಸೆಫ್‌ ಅವರ ಮನೆಯಲ್ಲಿ 23,38,000 ಲಕ್ಷ ರು.ಗಳನ್ನು ವಶಕ್ಕೆ ಪಡೆದಿತ್ತು.

the fil favicon

SUPPORT THE FILE

Latest News

Related Posts