ಕೋವಿಡ್‌; ಡೀಸೆಲ್‌ ದರ ಹೆಚ್ಚಳ ನೆಪವಾಗಿರಿಸಿ ಸಾರಿಗೆ ನೌಕರರಿಗೆ ಪರಿಹಾರ ಕಷ್ಟಸಾಧ್ಯವೆಂದ ಸರ್ಕಾರ

ಬೆಂಗಳೂರು; ಡೀಸೆಲ್‌ ದರದಲ್ಲಿ ಹೆಚ್ಚಳಗೊಂಡಿರುವುದನ್ನು ನೆಪವಾಗಿರಿಸಿಕೊಂಡಿರುವ ಸಾರಿಗೆ ಇಲಾಖೆಯು ಕೋವಿಡ್‌ ಸಾಂಕ್ರಾಮಿಕಕ್ಕೆ ತುತ್ತಾಗಿ ಮೃತಪಟ್ಟಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಅವಲಂಬಿತರಿಗೆ ಪರಿಹಾರ ಮೊತ್ತ ವಿತರಿಸುವುದು ಕಷ್ಟಸಾಧ್ಯ ಎಂದು  ಕೈಎತ್ತಿದೆ.

 

ಪರಿಹಾರ ಮೊತ್ತಕ್ಕಾಗಿ ಎದುರು ನೋಡುತ್ತಿದ್ದ ಕೋವಿಡ್‌ ಸಾಂಕ್ರಾಮಿಕಕ್ಕೆ ತುತ್ತಾಗಿದ್ದ ಕೆಎಸ್‌ಆರ್‌ಟಿಸಿ ನಾಲ್ಕು ನಿಗಮಗಳ ನೌಕರರ ಅವಲಂಬಿತರಿಗೆ ಸರ್ಕಾರದ ಈ ನಿರ್ಧಾರದಿಂದ ಆಘಾತವಾದಂತಾಗಿದೆ.
ಈ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಮಂಜುನಾಥ್‌ ಆರ್‌ ಅವರು ಕೇಳಿದ್ದ ಚುಕ್ಕೆಗುರುತಿಲ್ಲದ ಪ್ರಶ್ನೆ(623)ಗೆ ಉತ್ತರಿಸಿರುವ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ಸರ್ಕಾರದ ನಿಲುವನ್ನು ಬಹಿರಂಗಪಡಿಸಿದ್ದಾರೆ.

 

‘ಕೋವಿಡ್‌ 19ರ ಹಿನ್ನೆಲೆಯಲ್ಲಿ ಹಾಗೂ ಡೀಸೆಲ್‌ ದರದ ಹೆಚ್ಚಳದ ಕಾರಣದಿಂದಾಗಿ ನಾಲ್ಕು ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಯು ಗಣನೀಐವಾಗಿ ಕುಂಠಿತವಾಗಿದೆ. ಈ ಪರಿಸ್ಥಿತಿಯಲಲಿ ಕೋವಿಡ್‌ 19ರ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಮೃತಪಟ್ಟ ನೌಕರರ ಅವಲಂಬಿತರಿಗೆ ಪರಿಹಾರ ಮೊತ್ತ ವಿತರಿಸುವುದು ಕಷ್ಟಸಾಧ್ಯವಾಗಿರುತ್ತದೆ,’ ಎಂದು ಲಿಖಿತ ಉತ್ತರ ನೀಡಿದ್ದಾರೆ.

 

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಒಟ್ಟು ನೌಕರರಲ್ಲಿ ಮೊದಲ ಅಲೆಯಲ್ಲಿ 39, ಎರಡನೇ ಅಲೆಯಲ್ಲಿ 71 ಮಂದಿ ಕೋವಿಡ್‌ ಸಾಂಕ್ರಾಮಿಕಕ್ಕೆ ತುತ್ತಾಗಿ ಮರಣ ಹೊಂದಿದ್ದರು. ಆದರೆ ಇದುವರೆಗೆ ಕೇವಲ 4 ಕುಟುಂಬದವರಿಗೆ ಮಾತ್ರ ತಲಾ 30 ಲಕ್ಷ ರು.ಗಳನ್ನು ಮಾತ್ರ ಪರಿಹಾರ ಧನ ನೀಡಿರುವುದು ಉತ್ತರದಿಂದ ತಿಳಿದು ಬಂದಿದೆ.

Your generous support will help us remain independent and work without fear.

Latest News

Related Posts