ದೇಶದಲ್ಲಿ ಅಪೌಷ್ಠಿಕ ಪ್ರಮಾಣದ ಅಂಕಿ ಅಂಶಗಳೇ ಇಲ್ಲ; ಕೃಷಿ ನೀತಿಯಲ್ಲಿ ಪೋಷಕಾಂಶಗಳು ಆದ್ಯತೆಯಲ್ಲವೇ?

ಬೆಂಗಳೂರು: ಜಾಗತಿಕ 2023 ರ ವರದಿ ಅನುಸಾರ ಕೇಂದ್ರ ಸರ್ಕಾರ 2004-06 ಮತ್ತು 2020-22ರ ನಡುವೆ ಅಪೌಷ್ಠಿಕ ಪ್ರಮಾಣವನ್ನು ಶೇ. 21.4ರಿಂದ ಶೇ.16.6ಕ್ಕೆ ಇಳಿಸಿದೆ. ಹಾಗಿದ್ದರೂ ಸರ್ಕಾರದಲ್ಲಿ ಈ ಸಂಬಂಧ ಯಾವುದೇ ಅಂಕಿಅಂಶಗಳಿಲ್ಲ. ಪೌಷ್ಠಿಕತೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ಇದನ್ನು “ಹಿಡನ್ ಹಂಗರ್” ಎಂದು ಕರೆದಿದ್ದಾರೆ. ಇಲ್ಲಿ ಅಧಿಕಾರದಲ್ಲಿ ಇರುವವರು ಸಾಕಷ್ಟು ಪ್ರಮಾಣದಲ್ಲಿ ಕ್ಯಾಲೋರಿಗಳನ್ನು ಸೇವಿಸುತ್ತಿದ್ದಾರೆ. ಆದರೆ ಅಗತ್ಯ ಇರುವವರಿಗೆ ಸಿಗುತ್ತಿಲ್ಲ.

 

ಈ ಸೂಕ್ಷ್ಮ ಪೌಷ್ಠಿಕಾಂಶಗಳ ಕೊರತೆಯಿಂದ ಹಲವು ರೀತಿಯ ಕಾಯಿಲೆಗಳಿಗೆ ತುತ್ತಾಗಲಿದ್ದಾರೆ. ಇದರ ಜೊತೆಗೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಮೇಲೂ ಪರಿಣಾಮ ಬೀರಲಿದೆ. ಇದನ್ನು ತಡೆಯಲು ಜೈವಿಕ ಬಲವರ್ಧನೆ ಒಂದು ದಾರಿಯಾಗಿದೆ. ಆದರೆ ಅಸ್ತಿತ್ವದಲ್ಲಿರುವ ಸಂಪನ್ಮೂಲಗಳು ಸಹ ಮಣ್ಣಿನ ಹಾನಿ ತಡೆಗಟ್ಟಲು ಈಗಿರುವ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಇಂಟರ್‌ನ್ಯಾಷನಲ್ ಕ್ರಾಪ್ಸ್ ರೀಸರ್ಚ್ ಇನ್ಸಿಟಿಟ್ಯೂಟ್‌ನ  ವಿಜ್ಞಾನಿ ಮತ್ತು ಕೃಷಿ ವಿಜ್ಞಾನದ ರಾಷ್ಟ್ರೀಯ ಅಕಾಡೆಮಿಯ ಫೆಲೋ ಶಲಂದರ್ ಕುಮಾರ್ ಹೇಳಿದ್ದಾರೆ.

 

ಈಗಿನ ಮತ್ತು ಭವಿಷ್ಯದಲ್ಲಿ ಆಹಾರಕ್ಕೆ ಎದುರಾಗುವ ಸವಾಲುಗಳ ಕುರಿತು ಇಂಡಿಯಾ ಸ್ಪೆಂಡ್ ಜಾಲತಾಣವು ವಿಜ್ಞಾನಿ ಶಲಂದರ್ ಕುಮಾರ್ ಜೊತೆಗೆ ಮಾತುಕತೆ ನಡೆಸಿದೆ. ಅದರ ಆಯ್ದ ಭಾಗ ಇಲ್ಲಿ ಕೊಡಲಾಗಿದೆ.

 

ಹಸಿರು ಕ್ರಾಂತಿಗೆ ಕೃತಜ್ಞತೆಗಳು, ಇದರಿಂದ ಜನ ಸಾಕಷ್ಟು ಕ್ಯಾಲೋರಿಗಳನ್ನು ಸೇವಿಸಿದರು. ಆದರೆ ಈಗಲೂ ಜನ ಅಗತ್ಯ ಪ್ರಮಾಣದ ಪ್ರೋಟೀನ್, ವಿಟಮಿನ್ ಮತ್ತಿತರವನ್ನು ಸೇವಿಸುತ್ತಿಲ್ಲ. ಭಾರತದ ಕೃಷಿ ನೀತಿಯಲ್ಲಿ ಪೋಷಕಾಂಶಗಳು ಒಂದು ಆದ್ಯತೆಯಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

 

ಇಲ್ಲಿನ ಸತ್ಯ ಏನೆಂದರೆ ಒಂದು ದೇಶವಾಗಿ ನಾವು ಆಹಾರ ಭದ್ರತೆಯನ್ನು ಹೊಂದಿದ್ದೇವೆಯೇ? ಅಪಾರ ಜನಸಂಖ್ಯೆಗೆ ಈಗಿನ ಪೌಷ್ಠಿಕಾಂಶಗಳು ಲಭ್ಯವಾಗುತ್ತಿಲ್ಲ ಎಂಬುದನ್ನು ಅಂಕಿಅಂಶಗಳು ಹೇಳುತ್ತಿವೆ. ನಾನು ಇದನ್ನು ಕೇವಲ ಕೃಷಿ ನೀತಿಗೆ ಮಾತ್ರ ಅನ್ವಯಿಸುತ್ತಿಲ್ಲ. ಮೊದಲಿಗೆ ಇದು ಎಲ್ಲರಿಗೂ ಅನ್ವಯಿಸುತ್ತೆ. ನಂತರ ಆಹಾರ ನೀತಿಯಾಗಿದ್ದು ಇದು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಒಳಗೊಂಡಿದೆ. ನಂತರ ಅದರ ನೀತಿ ಅಥವಾ ಆಹಾರವನ್ನು ಪಡೆದುಕೊಳ್ಳಲು ಸರ್ಕಾರದ ನೀತಿಗಳು, ಇದು ಗೋಧಿ ಮತ್ತು ಅಕ್ಕಿಯ ದರಗಳನ್ನು ಖಾತರಿಪಡಿಸುತ್ತದೆ. ಆದರೆ ಇತರೆ ಸರಕುಗಳಿಗೆ ಅಲ್ಲ.

 

60 ಮತ್ತು 70ರ ದಶಕಗಳಲ್ಲಿ ನಮ್ಮ ಉತ್ಪಾದಕತೆಯನ್ನು ಹೆಚ್ಚಿಸಿಕೊಂಡೆವು. ಆಗ ನಾವು ಆಹಾರ ಭದ್ರತೆಗಾಗಿ ವಿದೇಶಿ ಆಮದನ್ನು ಅವಲಂಬಿಸಿದ್ದೆವು. ಆಗ ಸರ್ಜಾರ ಕೃಷಿ ಕ್ಷೇತ್ರದಲ್ಲಿ ಸಂಶೋಧನೆ, ಅಭಿವೃದ್ಧಿ ಅದರಲ್ಲೂ ವಿಶೇಷವಾಗಿ ವಿವಿಧ ತಳಿಗಳ ಪರಿಚಯ, ನೀರಾವರಿ ಮೂಲ ಸೌಕರ್ಯ, ರಸಗೊಬ್ಬರ ಮತ್ತಿತರ ಕ್ಷೇತ್ರದಲ್ಲಿ ಭಾರಿ ಹೂಡಿಕೆ ಮಾಡಲಾಯಿತು. ನ್ಯಾಯ ಬೆಲೆ ಅಂಗಡಿಗಳಿಗೆ ಸರಬರಾಜು ಮಾಡಲು ಕನಿಷ್ಠ ಬೆಂಬಲ ಬೆಲೆಯನ್ನು ನೀಡಲಾಗಿತ್ತು. ಈಗಲೂ ಸರ್ಕಾರ ಸರ್ಕಾರ 80 ಕೋಟಿ ಜನಸಂಖ್ಯೆಗೆ ಉಚಿತ ಆಹಾರ ಧಾನ್ಯಗಳನ್ನು ಸರಬರಾಜು ಮಾಡುತ್ತಿದೆ.

 

ಸರ್ಕಾರ ಗೋಧಿ ಮತ್ತು ಅಕ್ಕಿಯನ್ನು ರೈತರಿಂದ ಸಂಗ್ರಹಿಸಲಿದ್ದು ಅದನ್ನೇ ಜನರಿಗೆ ವಿತರಿಸಲಿದೆ. ರಾಜ್ಯ ಆಹಾರ ಭದ್ರತೆ ಮತ್ತು ಪೌಷ್ಠಿಕಾಂಶ 2023ರ ಜಾಗತಿಕ ವರದಿ ಅನುಸಾರ ಕೇಂದ್ರ ಸರ್ಕಾರ ಅಪೌಷ್ಠಿಕತೆಯಿಂದ ಕೂಡಿರುವ ಜನಸಂಖ್ಯೆ ಪ್ರಮಾಣವನ್ನೇ 2004-06 ಮತ್ತು 2020-22 ರ ನಡುವೆ ಶೇ. 21.4ರಿಂದ ಶೇ.16.6 ಕ್ಕೆ ಇಳಿಸಿತು. ಹಾಗಿದ್ದರೂ ಭಾರತದಲ್ಲಿ ಈ ಕುರಿತ ಅಂಕಿಅಂಶಗಳೇ ಇಲ್ಲ. ಪೌಷ್ಠಿಕಾಂಶ ಕುರಿತ ಕ್ಷೇತ್ರದಲ್ಲಿ ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವವರು ಇದನ್ನು “ಬಚ್ಚಿಟ್ಟ ಹಸಿವು” ಎಂದು ಕರೆದಿದ್ದಾರೆ. ದೇಶದಲ್ಲಿ ಕ್ಯಾಲೋರಿಗಳನ್ನು ಸೇವಿಸುತ್ತಿದ್ದಾರೆ ಆದರೆ ಅಗತ್ಯ ಪ್ರಮಾಣದ ಸೂಕ್ಷ್ಮ ಪೋಷಕಾಂಶಗಳನ್ನು  ಸೇವಿಸುತ್ತಿಲ್ಲ.

 

ಸೂಕ್ಷ್ಮ ಪೌಷ್ಠಿಕಾಂಶಗಳ ಕೊರತೆಯು ವ್ಯಕ್ತಿಯನ್ನು ಭೌತಿಕ ಮತ್ತು ಮಾನಸಿಕ ರೋಗವಲ್ಲದೆ ಆಲಕ್ಷಿತ ಟ್ರಾಪಿಕಲ್ ಕಾಯಿಲೆಗಳಿಗೆ ಈಡುಮಾಡುತ್ತದೆ. ಈ ಕಾಯಿಲೆಯಿಂದ ಗುಣ ಮಾಡಲು ಜೈವಿಕ ಬಲವರ್ಧನೆ ಒಂದು ಪದ್ಧತಿಯಾಗಿದೆ. ಮಣ್ಣಿನ ಸಾರವನ್ನು ಉತ್ತಮಪಡಿಸಲು ಮತ್ತು ಕುಸಿಯುತ್ತಿರುವ ವೈವಿದ್ಯತೆಯನ್ನು ಸರಿಪಡಿಸಲು ಅಸ್ತಿತ್ವದಲ್ಲಿರುವ ಸಂಪನ್ಮೂಲಗಳನ್ನು ಬಳಕೆ ಮಾಡಬಹುದಾಗಿದೆ ಎಂದು ಶಲಂದರ್ ಕುಮಾರ್ ಹೇಳಿದ್ದಾರೆ.

 

ಒಂದು ದೇಶವಾಗಿ ನಾವು ಆಹಾರ ಭದ್ರತೆಯನ್ನು ಹೊಂದಿದ್ದೇವೆ ಎಂಬುದು ನಿಜ. ಹಾಗಿದ್ದರೂ ಈಗಿರುವ ಪೌಷ್ಠಿಕಾಂಶಗಳು ಅಪಾರ ಪ್ರಮಾಣದ ಜನಸಂಖ್ಯೆಗೆ ತಲುಪುತ್ತಿಲ್ಲ. ನಾನು ಕೃಷಿ ನೀತಿಗೆ ಮಾತ್ರ ಇದನ್ನು ಸಂಬಂಧಿಸುತ್ತಿಲ್ಲ. ಇದು ಮೊದಲಿಗೆ ಎಲ್ಲರಿಗೂ ಸಂಬಂಧಿಸಿದ್ದಾಗಿದೆ. ಇದು ಆಹಾರ ನೀತಿಗೂ ಸಂಬಂಧಿಸಿದ್ದಾಗಿದೆ. ಏಕೆಂದರೆ ಇದು ಸಾರ್ವಜನಿಕ ವಿತರಣಾ ವ್ಯವಸ್ಥೆಯೊಂದಿದೆ ಸಂಪರ್ಕ ಹೊಂದಿದೆ. ನಂತರ ಆಹಾರ ಸಂಗ್ರಹಣೆ ಮಾಡುವುದಕ್ಕೆ ಸಂಬಂಧಿಸಿದಂತ ಸರ್ಕಾರದ ದರ ನೀತಿ. ಇದು ಅಕ್ಕಿ ಮತ್ತು ಗೋಧಿ ಖರೀದಿಸುವುದಕ್ಕೆ ಸಂಬಂಧಿಸಿದೆ. ಆದರೆ ಇತರ ಉತ್ಪನ್ನಗಳಿಗಲ್ಲ.

 

ಅರವತ್ತು ಮತ್ತು ಎಪ್ಪತ್ತರ ದಶಕದಲ್ಲಿ ಖಂಡಿತವಾಗಿಯೂ ನಮ್ಮ ಉತ್ಪಾದನೆಯನ್ನು ಹೆಚ್ಚಿಸಿದೆವು. ಅಲ್ಲಿವರೆಗೆ ಆಹಾರ ಭದ್ರತೆಗಾಗಿ ನಾವು ಆಮದಿನ ಮೇಲೆ ಅವಲಂಬಿತವಾಗಿದ್ದೆವು. ಆಗ ಸರ್ಕಾರ ಸಮಗ್ರ ನೀತಿಯನ್ನು ರೂಪಿಸಿತು. ಹೂಡಿಕೆ, ಕೃಷಿ ನೀತಿ, ತಳಿಗಳ ಅಭಿವೃದ್ಧಿಗೆ ಬೆಂಬಲ ನೀಡಿತು. ನೀರಾವರಿ, ಮೂಲಸೌಕರ್ಯ, ಕೃಷಿ ಸಂಶೋಧನೆ, ರಸಗೊಬ್ಬರ ಮತ್ತಿತರವನ್ನು ಕೈಗೊಂಡಿತು.

 

ಸರಬರಾಜು ಅಂದರೆ ಪಿಡಿಎಸ್ ವ್ಯವಸ್ಥೆಗೆ ಖರೀದಿಸುವ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಿತು. ಈ ಸದ್ಯಕ್ಕೆ ಸರ್ಕಾರ ಆಹಾರ ಧಾನ್ಯಗಳನ್ನು 80 ಕೋಟಿ ಜನಸಂಖ್ಯೆಗೆ ಉಚಿತವಾಗಿ ಅಥವಾ ಅತ್ಯಂತ ಕಡಿಮೆ ದರದಲ್ಲಿ ವಿತರಿಸುತ್ತಿದೆ.

 

ಸರ್ಕಾರ ತಾನು ಸಂಗ್ರಹಿಸುವ ಅಂದರೆ ಗೋಧಿ ಮತ್ತು ಅಕ್ಕಿಯನ್ನು ವಿತರಿಸುತ್ತಿದೆ. ಅಕ್ಕಿ ಮತ್ತು ಗೋಧಿ ಇತರೆ ಉತ್ಪನ್ನಗಳಿಗೆ ನೆರವು ನೀಡುವುದರಿಂದ ವೈವಿದ್ಯತೆಯ ಆಹಾರವನ್ನು ನೀಡಬಹುದಾಗಿದೆ. 1990 ರ ದಶಕದಲ್ಲಿ ವ್ಯಕ್ತಿಯೊಬ್ಬರ ಬೇಳೆ  ಸೇವನೆ ತಲಾ ಒಂದು ವರ್ಷಕ್ಕೆ 9 ಕೆಜಿ ಇತ್ತು. ಈಗದು ವರ್ಷಕ್ಕೆ 2.5 ಕೆಜಿಗೆ ಇಳಿದಿದೆ. ಪಿಡಿಎಸ್ ಕಾರ್ಯಕ್ಷಮತೆ ಉತ್ತಮಗೊಂಡಿದ್ದರಿಂದ ಆಹಾರ ಸೇವನೆ ವಿಧಾನದಲ್ಲಿ ಬದಲಾವಣೆ ಕಂಡು ಬಂದಿತು.

 

ಅಕ್ಕಿ ಮತ್ತು ಗೋಧಿ ಸೇವನೆ ಹೆಚ್ಚಾಯಿತು. ಆಹಾರ ಸೇವನೆ ಕಾಯ್ದೆ ಜಾರಿಗೆ ಬಂದಿದ್ದರಿಂದ ಪಿಡಿಎಸ್‌ನಲ್ಲಿ ಆಹಾರ ವಿತರಣೆ ಹೆಚ್ಚಾಯಿತು. ಕೋವಿಡ್-19ರ ಅವಧಿಯಲ್ಲಿ ಹೆಚ್ಚಿನ ಜನಸಂಖ್ಯೆ ಪಿಡಿಎಸ್ ವ್ಯಾಪ್ತಿಗೆ ಬಂದರು. ಪಿಡಿಎಸ್‌ನಲ್ಲಿ ಅಕ್ಕಿ ಮತ್ತು ಗೋಧಿ ಕೆ.ಜಿ 2 ರೂ.ಗೆ ವಿತರಣೆಯಾದ ನಂತರ ಯಾರು ತಾನೆ ಮಿಲ್ಲೆಟ್ಸ್ ಮತ್ತು ಬೇಳೆ  ಖರೀದಿಸುತ್ತಾರೆ? ಬೇಳೆ ದರ ಕೆ.ಜಿಗೆ ಕನಿಷ್ಠ ೩೫ರಿಂದ 40 ರೂ.ಗಳಷ್ಟು ದುಬಾರಿಯಾಗಲಿದೆ ಯಾರು ತಾನೆ ಖರೀದಿಸುತ್ತಾರೆ. ಇದು ಆಹಾರ ಸೇವನೆಯಲ್ಲಿ ಕಡಿಮೆಯಾಯಿತು ಮತ್ತು ಮಿಲ್ಲೆಟ್ಸ್‌ಗೆ ಬೇಡಿಕೆ ಕುಸಿಯಿತು.

 

ಇದಕ್ಕೂ ಮುಂದೆ ಸಾರ್ವಜನಿಕ ಸಂಗ್ರಹಣೆ ಅನುಪಸ್ಥಿತಿಯಲ್ಲಿ ಮಾರುಕಟ್ಟೆ ದರದಲ್ಲಿ ರೈತರಿಗೆ ಬೇಳೆ ಮತ್ತು ಮಿಲ್ಲಟ್ಸ್ ಎಟಕುವುದಿಲ್ಲ. ಹೀಗಾಗಿ ವರ್ಷಗಳು ಕಳೆದಂತೆ ಮಿಲ್ಲೆಟ್ಸ್‌ಗೆ ಹೋಲಿಸಿದರೆ ಬೇಳೆ  ಉತ್ಪಾದಿಸುವ ಭೂಮಿ ಕಡಿಮೆಯಾಗಲಿದೆ. ಇಲ್ಲಿ ಮಿಲ್ಲೆಟ್ಸ್‌ಗೆ ಪರ್ಯಾಯ ಬೆಳೆ ಲಭ್ಯವಾಗದಿರುವುದರಿಂದ ಮಿಲ್ಲೆಟ್ ಅಪಾಯ ಪ್ರಮಾಣದಲ್ಲಿ ಬೆಳೆಯಲಾಯಿತು. ಅತಿ ಹೆಚ್ಚಾಗಿ ಪಶ್ಚಿಮ ರಾಜಸ್ಥಾನದ ಬರಪೀಡಿತ ಪ್ರದೇಶದಲ್ಲಿ ಬೆಳೆಯಲಾಯಿತು.

 

ಅನುವಾದ; ಜಿ ಆರ್‍‌ ಮುರುಳಿಕೃಷ್ಣ

the fil favicon

SUPPORT THE FILE

Latest News

Related Posts